Mysore : ದಿ. ಧ್ರುವನಾರಾಯಣ್ ಪತ್ನಿ ವಿಧಿವಶ
Team Udayavani, Apr 7, 2023, 10:29 AM IST
ಮೈಸೂರು: ಇತ್ತೀಚೆಗಷ್ಟೇ ನಿಧನರಾದ ಮಾಜಿ ಸಂಸದ, ಕಾಂಗ್ರೆಸ್ ನಾಯಕ ಆರ್. ಧ್ರುವನಾರಾಯಣ್ ಅವರ ಪತ್ನಿ, ನಂಜನಗೂಡು ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಅವರ ತಾಯಿ ವೀಣಾ ಧ್ರುವನಾರಾಯಣ್ (50 ವ) ಶುಕ್ರವಾರ ಬೆಳಗ್ಗೆ ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ವೀಣಾ ಧ್ರುವನಾರಾಯಣ್ ಅವರು ಶುಕ್ರವಾರ ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಮಾರ್ಚ್ 11 ರಂದು ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಹೃದಯಾಘಾತದಿಂದ ನಿಧನರಾಗಿದ್ದರು.
ಮೃತರು ಪುತ್ರರಾದ ದರ್ಶನ್ ಮತ್ತು ಧೀರನ್ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.