Udayavni Special

ವಿಷ್ಣು ಸ್ಮಾರಕ: ಅಭಿಮಾನಿಗಳಿಗೆ ರೈತ ಮಹಿಳೆ ತರಾಟೆ

Team Udayavani, Dec 4, 2018, 6:00 AM IST

c-35.jpg

ಮೈಸೂರು: ದಿ.ವಿಷ್ಣುವರ್ಧನ್‌ ಸ್ಮಾರಕ ನಿರ್ಮಾಣ ಸಂಬಂಧ ಸರ್ಕಾರ ಮೈಸೂರು ತಾಲೂಕಿನ ಹಾಲಾಳು ಗ್ರಾಮದಲ್ಲಿ ಗುರುತಿಸಿರುವ ಜಾಗದಲ್ಲಿ ಸೋಮವಾರ ಪೂಜೆ ಸಲ್ಲಿಸಲು ತೆರಳಿದ್ದ ವಿಷ್ಣು ಸೇನಾ ಸಮಿತಿಯ ಪದಾಧಿಕಾರಿಗಳನ್ನು ರೈತ
ಮಹಿಳೆ ತರಾಟೆಗೆ ತೆಗೆದುಕೊಂಡಿದ್ದಾಳೆ. ಪ್ರಕರಣ ಇನ್ನೂ ನ್ಯಾಯಾಲಯದಲ್ಲಿರು ವುದರಿಂದ ಸ್ಮಾರಕ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಂಡಿಲ್ಲ. ಈ ನಡುವೆ ವಿಷ್ಣು ಸೇನಾ ಸಮಿತಿ ಪದಾಧಿಕಾರಿಗಳು ಇಲ್ಲಿಗೆ ತೆರಳಿ ವಿಷ್ಣುವರ್ಧನ್‌ ಭಾವಚಿತ್ರವುಳ್ಳ ಬ್ಯಾನರ್‌ ಕಟ್ಟಿ ಪೂಜೆ ಸಲ್ಲಿಸಿ, ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ಮಾಡಲು ಮುಂದಾದಾಗ ಜಮೀನಿನಲ್ಲಿದ್ದ ರೈತ ಮಹಿಳೆ ಜಯಮ್ಮ ಇವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ವಿಷ್ಣುವರ್ಧನ್‌ಗೆ ಸ್ಮಾರಕ ನಿರ್ಮಿಸಲು ತಮ್ಮ ತಕರಾರಿಲ್ಲ. ಆದರೆ, ತಮ್ಮ ಜೀವನಕ್ಕೆ ಈ ಜಮೀನೇ ಆಧಾರ. ಬದುಕಿಗೆ ದಾರಿ ಮಾಡಿಕೊಟ್ಟು, ಇಲ್ಲಿ ಏನಾದರೂ ಮಾಡಿಕೊಳ್ಳಿ ಎಂದು ಆಗ್ರಹಿಸಿದರು. ಇದಕ್ಕೆ ಸಮಜಾಯಿಷಿ ನೀಡಿದ ಸಮಿತಿಯ ಪದಾಧಿಕಾರಿಗಳು, ಸರ್ಕಾರ ರೈತರಿಗೆ ತೊಂದರೆ ಕೊಡುವುದಿಲ್ಲ. ತಮಗೆ ದೊರಕಬೇಕಾದ ಪರಿಹಾರ ಇಲ್ಲವೇ ಬದಲಿ ಜಾಗವನ್ನು ಸರ್ಕಾರ ನೀಡಲಿದೆ. ಸರ್ಕಾರ ನಿಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮುಂದಾಗದಿದ್ದಲ್ಲಿ ವಿಷ್ಣು ಅಭಿಮಾನಿಗಳೇ ದೇಣಿಗೆ ಸಂಗ್ರಹಿಸಿ, ಆ ಹಣದಲ್ಲಿ ಜಾಗ ಖರೀದಿಸಿ ಸ್ಮಾರಕ ನಿರ್ಮಿಸುವುದಾಗಿ ತಿಳಿಸಿದರು.

ಎಚ್‌.ಡಿ.ಕೋಟೆ ರಸ್ತೆಯಲ್ಲಿರುವ ಮೈಸೂರು ತಾಲೂಕು ಹಾಲಾಳು ಗ್ರಾಮದ ಸರ್ವೇ ನಂಬರ್‌ 8ರಲ್ಲಿನ 5 ಎಕರೆ ಜಾಗವನ್ನು ರಾಜ್ಯ ಸರ್ಕಾರ, ಡಾ.ವಿಷ್ಣುವರ್ಧನ್‌ ಸ್ಮಾರಕ ಭವನ ನಿರ್ಮಾಣಕ್ಕೆ ಗುರುತಿಸಿತ್ತು. ಆದರೆ, ಆ ಜಾಗದಲ್ಲಿ ಸಾಗುವಳಿ ಮಾಡುತ್ತಿದ್ದ ರೈತರು, ತಮಗೆ ಜೀವನಾಧಾರಕ್ಕೆ ಇರುವ ತುಂಡುಭೂಮಿಯನ್ನು ಬಿಟ್ಟುಕೊಡಲು ಸಾಧ್ಯವಿಲ್ಲ. ಒಂದು ವೇಳೆ, ಈ ಜಾಗವನ್ನು ಬಿಟ್ಟು ಕೊಡಲೇ ಬೇಕು ಎಂದಾದಲ್ಲಿ ಜಿಲ್ಲಾಡಳಿತ ತಮಗೆ ಬದಲಿ ವ್ಯವಸ್ಥೆ ಮಾಡಿಕೊಡಲಿ ಎಂದು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು. ಆದರೆ, ಜಿಲ್ಲಾಡಳಿತ ರೈತರ ವಾದವನ್ನು ತಳ್ಳಿ ಹಾಕಿ ಸ್ಮಾರಕ ನಿರ್ಮಾಣಕ್ಕೆ ಗುರುತಿಸಲಾಗಿರುವ ಜಮೀನು ಗೋಮಾಳ ಆಗಿರುವುದರಿಂದ ರೈತರಿಗೆ ಈ ಜಮೀನಿನ ಮೇಲೆ ಯಾವುದೇ ಅಧಿಕಾರವಿಲ್ಲ ಎಂದು ಸ್ಮಾರಕ ನಿರ್ಮಾಣಕ್ಕೆ ಮುಂದಾಗಿತ್ತು. ಅದರಂತೆ ಸ್ಮಾರಕ ನಿರ್ಮಾಣಕ್ಕೆ ಶಂಕುಸ್ಥಾಪನೆ ದಿನಾಂಕ ನಿಗದಿಯಾಗಿತ್ತು. ಆದರೆ, ಅಂದು ತಮಿಳುನಾಡು ಮುಖ್ಯ ಮಂತ್ರಿ ಜಯಲಲಿತಾ ನಿಧನದ ಹಿನ್ನೆಲೆಯಲ್ಲಿ ಶೋಕಾಚರಣೆ ಘೋಷಣೆಯಾದ್ದರಿಂದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಂಕುಸ್ಥಾಪನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿಲ್ಲ. ಆದರೆ, ಕಾರ್ಯಕ್ರಮದ ಸಿದ್ಧತೆ ಆಗಿದ್ದರಿಂದ ವಿಷ್ಣುವರ್ಧನ್‌ ಪತ್ನಿ ಭಾರತಿಯವರೇ ಭೂಮಿ
ಪೂಜೆ ನೆರವೇರಿಸಿದ್ದರು. 

ಟಾಪ್ ನ್ಯೂಸ್

ಕನ್ನಡದಲ್ಲೂ ಬರೆಯಿರಿ ಐಬಿಪಿಎಸ್‌ ಪರೀಕ್ಷೆ !

ಕನ್ನಡದಲ್ಲೂ ಬರೆಯಿರಿ ಐಬಿಪಿಎಸ್‌ ಪರೀಕ್ಷೆ !

ಸಾವರ್ಕರ್‌ ದೇಶಭಕ್ತಿಯನ್ನು ಪ್ರಶ್ನಿಸಲಾಗದು: ಅಮಿತ್‌ ಶಾ

ಸಾವರ್ಕರ್‌ ದೇಶಭಕ್ತಿಯನ್ನು ಪ್ರಶ್ನಿಸಲಾಗದು: ಅಮಿತ್‌ ಶಾ

BSYರಂಗೇರಿದ ಉಪಚುನಾವಣೆ ಕಣ; ಇಂದಿನಿಂದ ಘಟಾನುಘಟಿ ನಾಯಕರ “ರಂಗ’ಪ್ರವೇಶ

ರಂಗೇರಿದ ಉಪಚುನಾವಣೆ ಕಣ; ಇಂದಿನಿಂದ ಘಟಾನುಘಟಿ ನಾಯಕರ “ರಂಗ’ಪ್ರವೇಶ

ಶಿಕ್ಷಕ ಸಣ್ಣ ತಿಮ್ಮಯ್ಯರ ದೊಡ್ಡತನ- ಶಿಕ್ಷಣ ಸಚಿವರ “ಪ್ರೌಢ’ ಸರಳತನ

ಶಿಕ್ಷಕ ಸಣ್ಣ ತಿಮ್ಮಯ್ಯರ ದೊಡ್ಡತನ- ಶಿಕ್ಷಣ ಸಚಿವರ “ಪ್ರೌಢ’ ಸರಳತನ

Championd

ಸೂಪರ್‌ ಚೆನ್ನೈಗೆ 4ನೇ ಐಪಿಎಲ್‌ ಕಿರೀಟ

“ಸರ್ದಾರ್‌ ಪಟೇಲ್‌ರ ಹಾದಿಯಲ್ಲೇ ನಡೆಯಿರಿ’

“ಸರ್ದಾರ್‌ ಪಟೇಲ್‌ರ ಹಾದಿಯಲ್ಲೇ ನಡೆಯಿರಿ’

ಜೆಇಇ- ಅಡ್ವಾನ್ಸ್ಡ್ ಫ‌ಲಿತಾಂಶ ಪ್ರಕಟ: ಮೃದುಲ್‌ ಟಾಪರ್‌

ಜೆಇಇ- ಅಡ್ವಾನ್ಸ್ಡ್ ಫ‌ಲಿತಾಂಶ ಪ್ರಕಟ: ಮೃದುಲ್‌ ಟಾಪರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BSYರಂಗೇರಿದ ಉಪಚುನಾವಣೆ ಕಣ; ಇಂದಿನಿಂದ ಘಟಾನುಘಟಿ ನಾಯಕರ “ರಂಗ’ಪ್ರವೇಶ

ರಂಗೇರಿದ ಉಪಚುನಾವಣೆ ಕಣ; ಇಂದಿನಿಂದ ಘಟಾನುಘಟಿ ನಾಯಕರ “ರಂಗ’ಪ್ರವೇಶ

ಹಾನಗಲ್‌ನಲ್ಲಿ ಕಾಂಗ್ರೆಸ್‌ಗೆ ಜಯ: ಸಲೀಂ ಆಹಮದ್‌ ವಿಶ್ವಾಸ

ಹಾನಗಲ್‌ನಲ್ಲಿ ಕಾಂಗ್ರೆಸ್‌ಗೆ ಜಯ: ಸಲೀಂ ಆಹಮದ್‌ ವಿಶ್ವಾಸ

ಸಿದ್ದರಾಮಯ್ಯರನ್ನು ಭೇಟಿಯಾದ ಬಿಜೆಪಿ ಶಾಸಕ ಕುಮಾರ್‌ ಬಂಗಾರಪ್ಪ

ಸಿದ್ದರಾಮಯ್ಯರನ್ನು ಭೇಟಿಯಾದ ಬಿಜೆಪಿ ಶಾಸಕ ಕುಮಾರ್‌ ಬಂಗಾರಪ್ಪ

ತ್ರಿಶೂಲ ದೇವರ ಮನೆಯಲ್ಲಿಟ್ಟು ಪೂಜೆ ಮಾಡಲಿ: ರಾಮಲಿಂಗಾರೆಡ್ಡಿ

ತ್ರಿಶೂಲ ದೇವರ ಮನೆಯಲ್ಲಿಟ್ಟು ಪೂಜೆ ಮಾಡಲಿ: ರಾಮಲಿಂಗಾರೆಡ್ಡಿ

kodag

ಅಡಿಕೆ ಫಸಲಿನ ಮೇಲಿನ ಆಸೆ : ಇಬ್ಬರ ಕೊಲೆ, ಓರ್ವನ ಆತ್ಮಹತ್ಯೆಯಲ್ಲಿ ಅಂತ್ಯ

MUST WATCH

udayavani youtube

ಯಾರಿಗೆ ಒಲಿಯುತ್ತೆ IPL ಟ್ರೋಫಿ|UDAYAVANI NEWS BULLETIN|15/10/2021

udayavani youtube

ನವರಾತ್ರಿ ಸಂಭ್ರಮ: ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ಭಕ್ತರ ದಂಡು

udayavani youtube

ಅಂಬಾರಿ ಹೊರುವ ಅಭಿಮನ್ಯುಗೆ ಮತ್ತು ದಸರಾ ಗಜಪಡೆಗೆ ಬಣ್ಣದ ಅಲಂಕಾರ..

udayavani youtube

ಇದೇ ದಸರಾ ಇತಿಹಾಸದಲ್ಲೇ ಮೊದಲ ಬಾರಿಗೆ ಅಂಬಾರಿ‌ಉತ್ಸವ ಮೂರ್ತಿ ಮೆರವಣಿಗೆ…

udayavani youtube

ಮೈಸೂರು ದಸರಾ: ಅಭಿಮನ್ಯು ಕಂಡರೆ ಕಾಡಾನೆಗೆ ಮೈನಡುಕ!

ಹೊಸ ಸೇರ್ಪಡೆ

ಕನ್ನಡದಲ್ಲೂ ಬರೆಯಿರಿ ಐಬಿಪಿಎಸ್‌ ಪರೀಕ್ಷೆ !

ಕನ್ನಡದಲ್ಲೂ ಬರೆಯಿರಿ ಐಬಿಪಿಎಸ್‌ ಪರೀಕ್ಷೆ !

ಸಾವರ್ಕರ್‌ ದೇಶಭಕ್ತಿಯನ್ನು ಪ್ರಶ್ನಿಸಲಾಗದು: ಅಮಿತ್‌ ಶಾ

ಸಾವರ್ಕರ್‌ ದೇಶಭಕ್ತಿಯನ್ನು ಪ್ರಶ್ನಿಸಲಾಗದು: ಅಮಿತ್‌ ಶಾ

BSYರಂಗೇರಿದ ಉಪಚುನಾವಣೆ ಕಣ; ಇಂದಿನಿಂದ ಘಟಾನುಘಟಿ ನಾಯಕರ “ರಂಗ’ಪ್ರವೇಶ

ರಂಗೇರಿದ ಉಪಚುನಾವಣೆ ಕಣ; ಇಂದಿನಿಂದ ಘಟಾನುಘಟಿ ನಾಯಕರ “ರಂಗ’ಪ್ರವೇಶ

ಜಡ್ಕಲ್‌ನಲ್ಲಿ ಇಂದು ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ

ಜಡ್ಕಲ್‌ನಲ್ಲಿ ಇಂದು ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ

Uber Cup badminton:

ಉಬೆರ್‌ ಕಪ್‌ ಬ್ಯಾಡ್ಮಿಂಟನ್‌ : ಕ್ವಾರ್ಟರ್‌ ಫೈನಲ್‌ನಲ್ಲಿ ಎಡವಿದ ಭಾರತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.