ಸೈಕಲ್‌ ಬಳಕೆ ದೇಹಕ್ಕೂ-ದೇಶಕ್ಕೂ ಒಳ್ಳೆಯದು; ಆರ್‌.ಮಹಾಜನ್‌

ದಿನ ನಿತ್ಯದ ವ್ಯಾಯಾಮ ಮಾಡುವ ಬದಲು ಸೈಕಲ್‌ ತುಳಿದರೆ ಅದೇ ದೊಡ್ಡ ವ್ಯಾಯಾಮವಾಗುತ್ತದೆ.

Team Udayavani, Apr 18, 2022, 6:22 PM IST

ಸೈಕಲ್‌ ಬಳಕೆ ದೇಹಕ್ಕೂ-ದೇಶಕ್ಕೂ ಒಳ್ಳೆಯದು; ಆರ್‌.ಮಹಾಜನ್‌

ರಾಯಚೂರು: ಪೆಟ್ರೋಲ್‌ ಬಳಕೆಗೆ ಕಡಿವಾಣ ಹಾಕುವ ಮೂಲಕ ಜೀವ ಸಂಕುಲದ ಆರೋಗ್ಯದ ಜತೆಗೆ ಪರಿಸರ ಸಂರಕ್ಷಣೆಯೂ ಸಾಧ್ಯವಾಗಲಿದೆ. ನಮ್ಮ ಇಂದಿನ ಆದ್ಯತೆ ಪೆಟ್ರೋಲ್‌ ಮಿತ ಬಳಕೆ ಆಗಿರಲಿ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಆರ್‌.ಮಹಾಜನ್‌ ತಿಳಿಸಿದರು.

ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ತ ನಗರದ ಸ್ಟೇಶನ್‌ ರಸ್ತೆಯ ಸತ್ಯಂ ಪೆಟ್ರೋಲಿಯಂನಿಂದ ಹಮ್ಮಿಕೊಂಡಿದ್ದ ಆರೋಗ್ಯ ಮತ್ತು ಪರಿಸರ ಸಂರಕ್ಷಣೆಗಾಗಿ ಸೈಕಲ್‌ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ವಾಯು ಮಾಲಿನ್ಯಕ್ಕೆ ಪೆಟ್ರೋಲ್‌ ಬಳಕೆ ಪ್ರಮುಖ ಕಾರಣವಾಗಿದೆ.

ಅನಗತ್ಯ ಕೆಲಸಗಳಿಗೆ ವಾಹನಗಳ ಬಳಕೆ ಹೆಚ್ಚುತ್ತಿದ್ದು, ಅದರ ನೇರ ಪರಿಣಾಮ ವಾತಾವರಣದ ಮೇಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಸೈಕಲ್‌ ಬಳಕೆಯಿಂದ ನಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು. ದಿನ ನಿತ್ಯದ ವ್ಯಾಯಾಮ ಮಾಡುವ ಬದಲು ಸೈಕಲ್‌ ತುಳಿದರೆ ಅದೇ ದೊಡ್ಡ ವ್ಯಾಯಾಮವಾಗುತ್ತದೆ.

ಅನಗತ್ಯವಾಗಿ ಬೈಕ್‌ ಓಡಾಟ ನಿಲ್ಲಿಸಿ ಹತ್ತಿರ ಪ್ರದೇಶ ಒಡಾಡಲು ಸೈಕಲ್‌ ಬಳಸುವುದು ದೇಹಕ್ಕೂ ಒಳ್ಳೆಯದು ದೇಶಕ್ಕೂ ಒಳ್ಳೆಯದು. ಅ ಧಿಕಾರಿಗಳು ಕಚೇರಿ ಹತ್ತಿರ ಮನೆ ಮಾಡಿಕೊಂಡರೆ ಸೈಕಲ್‌ ಬಳಕೆ ಮಾಡಬಹುದು. ಈ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆ ಹಾಗೂ ಪೆಟ್ರೋಲಿಯಂ ಮಿತ ಬಳಕೆ ಮಾಡಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ ಎಂದರು.

ತಹಶೀಲ್ದಾರ್‌ ಡಾ| ಹಂಪಣ್ಣ ಸಜ್ಜನ್‌ ಮಾತನಾಡಿ, ನಮ್ಮ ಜೀವನಶೈಲಿ ಆಧುನಿಕತೆಗೆ ಒಗ್ಗಿಕೊಂಡಿದೆ. ತಂತ್ರಜ್ಞಾನ ಬದಲಾದಂತೆ ಅದಕ್ಕೆ ನಾವು ಹೊಂದಿಕೊಳ್ಳುತ್ತಲೆ ಸಾಗುತ್ತಿದ್ದೇವೆ. ಆದರೆ, ಇಂಥ ಜೀವನ ಶೈಲಿ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಶರವೇಗದ ಅಭಿವೃದ್ಧಿಯಿಂದ ಕೆಲಸದ ಒತ್ತಡ ಹೆಚ್ಚಾಗಿದೆ. ಗುರಿ ತಲುಪುವ ಧಾವಂತದಲ್ಲಿ ಸಾಕಷ್ಟು ಶ್ರಮ ವಹಿಸುತ್ತಿದ್ದೇವೆ. ನಾವು ಬೈಕ್‌ ಮತ್ತು ಇನ್ನಿತರ ವಾಹನಗಳ ಮೇಲೆ ಓಡಾಟ ಕಡಿಮೆ ಮಾಡಬೇಕಿದೆ ಎಂದರು.

ಭಾರತ ಪೆಟ್ರೋಲಿಯಂನ ಕಲ್ಬುರ್ಗಿಯ ವಿಭಾಗಿಯ ಮುಖ್ಯಸ್ಥ ವೆಂಕಟರಮಣ, ಗ್ರೀನ್‌ ರಾಯಚೂರು ಸಂಸ್ಥೆಯ ಅಧ್ಯಕ್ಷೆ ಸರಸ್ವತಿ ಕಿಲೆಕಿಲೆ, ಸತ್ಯಂ ಪೆಟ್ರೋಲ್‌ ಬಂಕ್‌ನ ಮಾಲೀಕ ಗೋಪಾಲ್‌ದಾಸ್‌, ನೀಲಕಂಠ ಬೇವಿನ್‌ ಸೇರಿದಂತೆ ವಿದ್ಯಾರ್ಥಿಗಳು ವಿವಿಧ ಸಂಘಟನೆಯ ಪದಾಧಿಕಾರಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಟಾಪ್ ನ್ಯೂಸ್

ಹಿಪ್ಪರಗಿಯಲ್ಲಿ ಬಿರುಗಾಳಿಗೆ ಗೋಡೆ ಕುಸಿದು ಮಹಿಳೆ ಸಾವು

ಹಿಪ್ಪರಗಿಯಲ್ಲಿ ಬಿರುಗಾಳಿಗೆ ಗೋಡೆ ಕುಸಿದು ಮಹಿಳೆ ಸಾವು

ಹುಣಸೂರು: ಬಿರುಗಾಳಿಗೆ ಧರೆಗುರುಳಿದ ವಿದ್ಯುತ್ ಕಂಬಗಳು… ಸಿಡಿಲಿಗೆ 3 ಜಾನುವಾರು ಬಲಿ

ಹುಣಸೂರು: ಬಿರುಗಾಳಿಗೆ ಧರೆಗುರುಳಿದ ವಿದ್ಯುತ್ ಕಂಬಗಳು… ಸಿಡಿಲಿಗೆ 3 ಜಾನುವಾರು ಬಲಿ

ರಾಮನಗರದಲ್ಲಿ ಸಿಡಿಲು ಸಹಿತ ವರುಣನ ಅಬ್ಬರ… 4ಮೇಕೆ ಸಾವು, ಮೂವರಿಗೆ ಗಾಯ

ರಾಮನಗರದಲ್ಲಿ ವರುಣನ ಅಬ್ಬರ… ಸಿಡಿಲು ಬಡಿದು 4ಮೇಕೆ ಸಾವು, ಮೂರು ಕುರಿಗಾಹಿಗಳಿಗೆ ಗಾಯ

chChamarajanagar; ಜೋಡಿ ರಸ್ತೆ ದುರವಸ್ಥೆ; ದ್ವಿಚಕ್ರ ವಾಹನ ಸವಾರರ ಪರದಾಟ

Chamarajanagar; ಜೋಡಿ ರಸ್ತೆ ದುರವಸ್ಥೆ; ದ್ವಿಚಕ್ರ ವಾಹನ ಸವಾರರ ಪರದಾಟ

Bhatkal: ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಆದೇಶ ನೀಡುವಂತೆ ಮನವಿ

Bhatkal: ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಆದೇಶ ನೀಡುವಂತೆ ಮನವಿ

DHONI JADEJA IPL FINAL

IPL: ಧೋನಿಯ ಬಗ್ಗೆ ಜಡೇಜಾ ಟ್ವೀಟ್‌… ʻಮಾಹಿ ಭಾಯಿ…ನಿಮಗಾಗಿ..ʼ- ಏನಿದು?

ಏರ್ ಇಂಡಿಯಾ ಸಿಬ್ಬಂದಿ ಮೇಲೆ ಪ್ರಯಾಣಿಕನಿಂದ ಹಲ್ಲೆ…

New Delhi: ಏರ್ ಇಂಡಿಯಾ ಸಿಬ್ಬಂದಿ ಮೇಲೆ ಪ್ರಯಾಣಿಕನಿಂದ ಹಲ್ಲೆ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lingasugur: ಸೌಕರ್ಯಗಳಿಲ್ಲದ ಲಿಂಗಸುಗೂರು ಬಸ್‌ ನಿಲ್ದಾಣ

Lingasugur: ಸೌಕರ್ಯಗಳಿಲ್ಲದ ಲಿಂಗಸುಗೂರು ಬಸ್‌ ನಿಲ್ದಾಣ

MLA- MLC ಅಲ್ಲದಿದ್ದರೂ ಸಚಿವ ಸ್ಥಾನ: ಪಕ್ಷನಿಷ್ಠೆಯಿಂದ ಬೋಸರಾಜ್ ಗೆ ಮಂತ್ರಿ ಭಾಗ್ಯ

MLA- MLC ಅಲ್ಲದಿದ್ದರೂ ಸಚಿವ ಸ್ಥಾನ: ಪಕ್ಷನಿಷ್ಠೆಯಿಂದ ಬೋಸರಾಜ್ ಗೆ ಮಂತ್ರಿ ಭಾಗ್ಯ

Sick after drinking contaminated water

ಕಲುಷಿತ ನೀರು ಕುಡಿದು ಅಸ್ವಸ್ಥ: ಮಗು ಸಾವು

drowned

Sirwar ಕೆರೆಯಲ್ಲಿ‌ ಬಿದ್ದು ಮೂವರ ಮೃತ್ಯು

Karnataka Polls ಮಸ್ಕಿ: ಬಿಜೆಪಿ ಧ್ವಜವಿರುವ ಕಾರು ನಿಲ್ಲಿಸಿದ್ದಕ್ಕೆ ಗಲಾಟೆ

Karnataka Polls ಮಸ್ಕಿ: ಬಿಜೆಪಿ ಧ್ವಜವಿರುವ ಕಾರು ನಿಲ್ಲಿಸಿದ್ದಕ್ಕೆ ಗಲಾಟೆ

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ

asಅರಂಬೂರು: ಲಾರಿಯಲ್ಲಿ ಬೆಂಕಿ ಅವಘಡ

ಅರಂಬೂರು: ಗುಜರಿ ತುಂಬಿದ್ದ ಲಾರಿಯಲ್ಲಿ ಬೆಂಕಿ ಅವಘಡ