
ದೇವೇಗೌಡರಿಗಿದೆ ರೈತರ ಜೀವನ ಹಸನುಗೊಳಿಸಿದ ಕೀರ್ತಿ
ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಬಾಕಿ ಇರುವ ಅಧಿಕಾರದ ಅವಧಿ ಯಲ್ಲಿ ಪ್ರಯತ್ನಿಸಲಾಗುವುದು
Team Udayavani, Apr 25, 2022, 5:57 PM IST

ಮಾನ್ವಿ: ರೈತರ ಜಮೀನುಗಳಿಗೆ ಕಾಲುವೆ ಮೂಲಕ ನೀರು ಕಲ್ಪಿಸುವಲ್ಲಿ ಪ್ರಮುಖ ಪಾತ್ರವಹಿಸುವ ನೀರಾವರಿ ಇಲಾಖೆಗೆ ಅಧಿಕಾರಿಗಳ ಹಾಗೂ ಗ್ಯಾಂಗ್ ಮ್ಯಾನ್ ಗಳ ಕೊರತೆ ಇರುವುದರಿಂದ ಅನಧಿಕೃತ ನೀರಾವರಿಯನ್ನು ತಡೆಯುವಲ್ಲಿ ವಿಫಲ ಆಗಿರುವುದರಿಂದ ಕೆಳಭಾಗದ ರೈತರ ಜಮೀನುಗಳಿಗೆ ನೀರು ದೊರೆಯದೇ ಕೃಷಿ ಕ್ಷೇತ್ರ ಹಿನ್ನಡೆ ಆಗಿದೆ ಎಂದು ಶಾಸಕ ರಾಜಾ ವೆಂಕಟಪ್ಪನಾಯಕ ತಿಳಿಸಿದರು.
ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಜನತಾ ಜಲಧಾರೆ ಮೂರನೇ ದಿನದ ರಥಯಾತ್ರೆಯಲ್ಲಿ ಮಾತನಾಡಿ, ಕೇವಲ ನಾಲ್ಕು ವರ್ಷದಲ್ಲಿ ತಾಲೂಕಿನ ಸಂಪೂರ್ಣವಾದ ಅಭಿವೃದ್ದಿಗೆ ಶ್ರಮಿಸಿದ್ದೇನೆ ಪಟ್ಟಣದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಶೀಘ್ರದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುವುದು.ರಾಜ್ಯ ಸರಕಾರಕ್ಕೆ ರೈತರ ಮೇಲೆ ಕಾಳಜಿ ಇಲ್ಲ. ಆದ್ದರಿಂದ 2023ರ ಚುನಾವಣೆಯಲ್ಲಿ ರೈತರು ವಿರೋಧ ಪಕ್ಷಗಳಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಪೋತ್ನಾಳ ಹಾಗೂ ಕಲ್ಲೂರು ಗ್ರಾಮಕ್ಕೆ ಬಸ್ ನಿಲ್ದಾಣಕ್ಕೆ 2 ಕೋಟಿ ಮಂಜೂರಾಗಿದೆ. ಪಟ್ಟಣದಲ್ಲಿ ಎಲ್ ಇಡಿ ಬೀದಿ ದೀಪಗಳ ವ್ಯವಸ್ಥೆ, ತಾಲೂಕಿನಲ್ಲಿ ಕೋಮುಸೌಹಾರ್ದತೆ ಮೂಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಈ ಭಾಗದ ರೈತರಿಗೆ ಎರಡು ಬೆಳೆಗೆ ನೀರು ಕೊಟ್ಟಿದೇವೆ. ಈ ಭಾಗದಲ್ಲಿನ ಅನೇಕ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಬಾಕಿ ಇರುವ ಅಧಿಕಾರದ ಅವಧಿ ಯಲ್ಲಿ ಪ್ರಯತ್ನಿಸಲಾಗುವುದು. ಐಸಿಸಿ ಸಭೆಯಲ್ಲಿ ಹೋರಾಟ ಮಾಡುವ
ಮೂಲಕ ಕೆಳಭಾಗದ ರೈತರಿಗೆ ನೀರು ತಲುಪುವಂತೆ ಮಾಡಿದ್ದೇನೆ. ರೈತರ ಋಣ ತೀರಿಸಿದ್ದೇನೆ. ಮುಂದಿನ ಚುನಾವಣೆಯಲ್ಲಿಯೂ ಮತದಾರರು ಪಕ್ಷವನ್ನು ಆಶೀರ್ವದಿಸಲಿದ್ದಾರೆ ಎಂದು ಹೇಳಿದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರವರು ಅಂದು ಮುಖ್ಯಮಂತ್ರಿಗಳಾಗಿದ್ದಾಗ ಜಿಲ್ಲೆಯಲ್ಲಿ ಕೃಷ್ಣ ನದಿ ಹಾಗೂ ತುಂಗಭದ್ರ ನದಿಗಳನ್ನು ಬಳಸಿಕೊಂಡು ಅನೇಕ ನೀರಾವರಿ ಯೋಜನೆಗಳನ್ನು ತರುವ ಮೂಲಕ ರೈತರ ಜೀವನವನ್ನು ಹಸನು ಮಾಡುವ ಸಂಕಲ್ಪ ಮಾಡಿದ್ದರು. ಅವರ ಕನಸಿನ ಕೂಸು ಜನತಾ ಜಲಧಾರೆ ಕಾರ್ಯಕ್ರಮವಾಗಿದೆ ಎಂದರು. ತಾಲೂಕು ಜೆಡಿಎಸ್ ಅಧ್ಯಕ್ಷ ಟಿ.ಮಲ್ಲಿಕಾರ್ಜುನ ಬಲ್ಲಟಗಿ, ರಾಜ್ಯ ಜೆಡಿಎಸ್ ಯುವ ಘಟಕದ ಉಪಾಧ್ಯಕ್ಷರಾದ ರಾಜಾ ರಾಮಚಂದ್ರ ನಾಯಕ, ಜಿಲ್ಲಾ ಹಿಂದುಳಿದ ಜೆಡಿಎಸ್ ಅಧ್ಯಕ್ಷ ಜಂಬುನಾಥ ಯಾದವ, ಪುರಸಭೆ ಸದಸ್ಯರಾದ ಶರಣಪ್ಪ ಮೆದಾ, ಬಸಮ್ಮ, ವನಿತಾ, ಹನುಮಂತಪ್ಪ ಭೋವಿ, ಖಲೀಲ ಖುರೇಷಿ, ನಾಗರಾಜ ಭೋಗವತಿ, ಪಿ.ರವಿಕುಮಾರ್, ಸಂತೋಷ ಹೂಗಾರ, ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾದ ವಿಜಯಲಕ್ಷ್ಮೀ, ಮಹಿಳಾ ಘಟಕದ ಉಪಾಧ್ಯಕ್ಷೆ ನೀಲಮ್ಮ, ಸೇರಿದಂತೆ ನೂರಾರು ಪಕ್ಷದ ಕಾರ್ಯಕರ್ತರು ಇದ್ದರು. ತಾಲೂಕಿನ ನೀರಮಾನ್ವಿ,
ಕಲ್ಲೂರು ಗ್ರಾಮಗಳಲ್ಲಿ ಜನತಾ ಜಲಧಾರೆ ರಥಯಾತ್ರೆ ನಡೆಯಿತು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Karnataka; ನಾಡಿನ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಸರ್ಕಾರ ಬದ್ದ: ಸಿದ್ದರಾಮಯ್ಯ

Medical College : ವೈದ್ಯಕೀಯ ಕಾಲೇಜು ವೆಚ್ಚದ ತನಿಖೆ ಏನಾಯಿತು?

Vijayapura; ಭ್ರೂಣ ಹತ್ಯೆ ಅಕ್ಷಮ್ಯ ಅಪರಾಧ: ಸಚಿವ ಎಂ.ಬಿ.ಪಾಟೀಲ

State government: ಮೊಟ್ಟೆಗೆ ಸರ್ಕಾರ ನೀಡುವ ಹಣ ಸಾಲುತ್ತಿಲ್ಲ

Surat: ಕೆಮಿಕಲ್ ಫ್ಯಾಕ್ಟರಿಯಲ್ಲಿ ಅಗ್ನಿ ದುರಂತ: ಸುಟ್ಟು ಕರಕಲಾದ 7 ಕಾರ್ಮಿಕರ ಶವ ಪತ್ತೆ