Udayavni Special

ಭತ್ತಕ್ಕೆ ಕ್ರಿಮಿನಾಶಕ ಸಿಂಪಡಣೆಗೆ ಡ್ರೋಣ್‌ ಬಳಕೆ!

ಈ ಮೊದಲು ಕ್ರಿಮಿನಾಶಕ ಸಿಂಪರಣೆ ಮಾಡಿದರೂ 12 ಎಕರೆ ಮೀರುವುದು ಕಷ್ಟವಾಗಿತ್ತು.

Team Udayavani, Sep 29, 2021, 5:37 PM IST

ಭತ್ತಕ್ಕೆ ಕ್ರಿಮಿನಾಶಕ ಸಿಂಪಡಣೆಗೆ ಡ್ರೋಣ್‌ ಬಳಕೆ!

ಸಿಂಧನೂರು: ಕ್ರಿಮಿನಾಶಕ ಸಿಂಪರಣೆ ಮಾಡಲು ಪಂಪ್‌, ಕೂಲಿ ಆಳು ಬೇಕೆಂದು ಕಾಯಲೇ ಬೇಕಿಲ್ಲ. ಒಂದು ಡ್ರೋಣ್‌ ಬಳಕೆ ಮಾಡಿಕೊಂಡರೆ ಸಾಕು, ಐದೇ ನಿಮಿಷದಲ್ಲಿ ಒಂದು ಎಕರೆ ಜಮೀನಿಗೆ ಕ್ರಿಮಿನಾಶಕ ಸಿಂಪಡಣೆಯಾಗಿರುತ್ತದೆ! ತುಂಗಭದ್ರಾ ಅಚ್ಚುಕಟ್ಟು ಭಾಗದಲ್ಲಿ ಡ್ರೋಣ್‌ ಮೂಲಕ ಭತ್ತದ ಗದ್ದೆಗಳಿಗೆ ಕ್ರಿಮಿನಾಶಕ ಸಿಂಪರಣೆ ಮಾಡಿಸುವ ಹೊಸ ಪ್ರಯೋಗ ಯಶಸ್ಸಿನತ್ತ ಸಾಗಿದೆ. ಜಮೀನಿನ ಜಿಪಿಎಸ್‌ ಮಾಡುವ ಮೂಲಕ ಮೊಬೈಲ್‌ ಯಂತ್ರದೊಂದಿಗೆ ಡ್ರೋಣ್‌ ಗೆ ಚಾಲನೆ ನೀಡಲಾಗುತ್ತದೆ.

ಗಿಡಮರ ಹಾಗೂ ಯಾವುದೇ ವಿದ್ಯುತ್‌ ಕಂಬಗಳ ಅಡಚಣೆ ಇಲ್ಲವಾದರೆ, ಡ್ರೋಣ್‌ ಕೆಲಸ ಶರವೇಗದಲ್ಲಿ ಸಾಗುತ್ತದೆ. 11 ಲೀ. ಟ್ಯಾಂಕರ್‌ ಒಳಗೊಂಡ ಈ ಡ್ರೋಣ್‌ ಪ್ರತಿ ಎಕರೆಗೊಮ್ಮೆ ಮಾತ್ರ ಭತ್ತದ ಗದ್ದೆಯ ಬದುವಿಗೆ ತರಿಸಿ, ಕ್ರಿಮಿನಾಶಕ ತುಂಬಿಸಬೇಕಾಗುತ್ತದೆ.

ಗನ್‌ ಪಂಪ್‌ ಹಾಗೂ ಇತರ ಯಂತ್ರಗಳನ್ನು ಬಳಸಿಕೊಂಡು ಕ್ರಿಮಿನಾಶಕ್ಕೆ ಸಿಂಪಡಣೆ ಮಾಡುವುದಕ್ಕೂ ಡ್ರೋಣ್‌ ಬಳಸುವುದಕ್ಕೂ ವ್ಯತ್ಯಾಸವಿದೆ. 15 ಎಕರೆ ಜಮೀನಿಗೆ ಬಳಕೆಯಾಗುವ ಕ್ರಿಮಿನಾಶಕವನ್ನು 10 ಎಕರೆಗೆ ಸೀಮಿತಗೊಳ್ಳುವಂತೆ ಡ್ರೋಣ್‌ ಸಿಂಪಡಿಸುತ್ತದೆ. ಪ್ರತಿ ಎಕರೆಗೆ 5ರಿಂದ 6 ನಿಮಿಷದಲ್ಲೇ ಮುಗಿಯುವುದರಿಂದ ಯಾವುದೇ ನಷ್ಟವಿಲ್ಲ ಎನ್ನುತ್ತಾರೆ ರೈತರು. ಪ್ರತಿ ಎಕರೆಗೆ ಡ್ರೋಣ್‌ ಬಳಸಲು 550 ರೂ. ಬಾಡಿಗೆಯನ್ನು ರೈತರು ಭರಿಸಬೇಕಿದೆ.

ದಿನಕ್ಕೆ 30 ಎಕರೆಗೂ ಹೆಚ್ಚು ಸಿಂಪರಣೆ:
ಮುಂಜಾನೆಯಿಂದ ಸಂಜೆ ವೇಳೆಗೆ ಗನ್‌ ಪಂಪ್‌ ಬಳಸಿ ಈ ಮೊದಲು ಕ್ರಿಮಿನಾಶಕ ಸಿಂಪರಣೆ ಮಾಡಿದರೂ 12 ಎಕರೆ ಮೀರುವುದು ಕಷ್ಟವಾಗಿತ್ತು. ಇದೀಗ ಡ್ರೋನ್‌ ನ ಮೂಲಕ ಒಂದೇ ದಿನದಲ್ಲಿ 30 ಎಕರೆಗೂ ಹೆಚ್ಚು ಜಮೀನಿಗೆ ಕ್ರಿಮಿನಾಶಕ ಸಿಂಪರಣೆ ಮಾಡುವ ಅವಕಾಶ ಒದಗಿದೆ. ಕ್ರಿಮಿನಾಶಕ ಗಾಳಿಯಲ್ಲಿ ಹಾರುವ ಬದಲು ಡ್ರೋಣ್‌ ಬಳಸಿದಾಗ ನೇರವಾಗಿ ಗದ್ದೆಯೊಳಕ್ಕೆ ಹೋಗುತ್ತದೆಂಬ ನಂಬಿಕೆಯೂ ಕೂಡ ಈ ಪದ್ಧತಿಯತ್ತ ರೈತರು ಆಕರ್ಷಿತಗೊಳ್ಳಲು
ಕಾರಣವಾಗಿದೆ.

ರೈತರಲ್ಲಿ ಹೆಚ್ಚಿದ ಕುತೂಹಲ: ಪ್ರತಿ ಗನ್‌ ಪಂಪ್‌ ಹಾಗೂ ಮೋಟರ್‌ ಚಾಲಿತ ಯಂತ್ರ ಬಳಸಿ ಭತ್ತದ ಗದ್ದೆಗೆ ಕ್ರಿಮಿನಾಶಕ ಸಿಂಪಡಿಸುತ್ತಿದ್ದ ರೈತರಿಗೆ ಡ್ರೋಣ್‌ ಬಳಕೆ ಕುತೂಹಲದ ಕೇಂದ್ರವಾಗಿದೆ. ಪ್ರತಿ 15 ಎಕರೆ ಲೆಕ್ಕದಲ್ಲಿ ಬಳಕೆಯಾಗುವ ಕ್ರಿಮಿನಾಶಕವನ್ನು 5 ಎಕರೆಯಷ್ಟು ಕಡಿಮೆ ಮಾಡುತ್ತದೆಂಬ ಮಾಹಿತಿ ಕುತೂಹಲಕ್ಕೆ ಕಾರಣವಾಗಿದೆ. ಸಹಜವಾಗಿಯೇ ರೈತರು ಡ್ರೋಣ್‌ನತ್ತ ಒಲವು ತೋರುತ್ತಿದ್ದು, ಶ್ರೀಪುರಂ ಜಂಕ್ಷನ್‌ನಲ್ಲಿ ಈಗಾಗಲೇ ಭತ್ತದ ಗದ್ದೆಗೆ ಈ
ಮೂಲಕ ಕ್ರಿಮಿನಾಶಕ ಸಿಂಪಡಿಸಲಾಗಿದೆ. ಮಾಹಿತಿ ಪಡೆದ ರೈತರು ಡ್ರೋಣ್‌ ಬಾಡಿಗೆ ಪಡೆಯಲು ಮುಗಿಬೀಳಲಾರಂಭಿಸಿದ್ದಾರೆ.

ತಮಿಳುನಾಡಿನಲ್ಲಿ ಡ್ರೋಣ್‌ ಬಳಸುವ ಮಾಹಿತಿ ಗೊತ್ತಿತ್ತು. ಮೆಣಸಿನಕಾಯಿಗೂ ಬಳ್ಳಾರಿ ಜಿಲ್ಲೆಯಲ್ಲಿ ಈ ಯಂತ್ರ ಬಳಸಿದ್ದನ್ನು ನೋಡಿದ ಮೇಲೆ ಅವರನ್ನು ಸಂಪರ್ಕಿಸಿ, ಭತ್ತದ ಗದ್ದೆಗೂ ಕ್ರಿಮಿನಾಶಕ ಸಿಂಪಡಿಸಲಾಗುತ್ತಿದೆ.

ಕೆ.ಸತ್ಯನಾರಾಯಣ ಕರಟೂರಿ, ರೈತ, ಶ್ರೀಪುರಂ ಜಂಕ್ಷನ್‌, ಸಿಂಧನೂರು ತಾಲೂಕು

ಯಮನಪ್ಪ ಪವಾರ

ಟಾಪ್ ನ್ಯೂಸ್

bangla

ದೇಗುಲಗಳ ಮೇಲೆ ದಾಳಿ, ಹತ್ಯೆ ಖಂಡಿಸಿ ಬಾಂಗ್ಲಾ ಹಿಂದೂಗಳಿಂದ ದೇಶವ್ಯಾಪಿ ನಿರಶನ

ದೇಶದ ಸಂಸ್ಕೃತಿ, ಇತಿಹಾಸ ಯುವ ಬರಹಗಾರರಿಗೆ ಆವಿಷ್ಕಾರ : ಚಂದ್ರಶೇಖರ ಕಂಬಾರ

ದೇಶದ ಸಂಸ್ಕೃತಿ, ಇತಿಹಾಸ ಯುವ ಬರಹಗಾರರಿಗೆ ಆವಿಷ್ಕಾರ : ಚಂದ್ರಶೇಖರ ಕಂಬಾರ

ವಿಶ್ವ ಅಂಚೆ ದಿನಾಚರಣೆ : ರಾಜ್ಯಪಾಲರಿಂದ ಡಾಕ್‌ ಸೇವಾ ಪ್ರಶಸ್ತಿ ಪ್ರದಾನ

ವಿಶ್ವ ಅಂಚೆ ದಿನಾಚರಣೆ : ರಾಜ್ಯಪಾಲರಿಂದ ಡಾಕ್‌ ಸೇವಾ ಪ್ರಶಸ್ತಿ ಪ್ರದಾನ

ಒಂದು ಡೋಸ್‌ ಪಡೆದವರಿಗೆ ಸ್ಥಳೀಯ ರೈಲು  ಮತ್ತು ಮಾಲ್‌ಗ‌ಳಲ್ಲಿ ಪ್ರವೇಶ ಸಾಧ್ಯತೆ

ಒಂದು ಡೋಸ್‌ ಪಡೆದವರಿಗೆ ಸ್ಥಳೀಯ ರೈಲು  ಮತ್ತು ಮಾಲ್‌ಗ‌ಳಲ್ಲಿ ಪ್ರವೇಶ ಸಾಧ್ಯತೆ

Untitled-1

ಸಹೋದರಿಯನ್ನು ಕರೆದೊಯ್ಯುತ್ತಿದ್ದ ಉದ್ಯೋಗಿ ಕೊಲೆ; ಆಟೋ ಚಾಲಕ ಸೇರಿ ನಾಲ್ಪರ ಬಂಧನ

ಡ್ರಗ್ಸ್‌ ಪ್ರಕರಣವನ್ನು ಇಲಾಖೆ ಗಂಭಿರವಾಗಿ ಪರಿಗಣಿಸುತ್ತಿದೆ: ಡಿಜಿಪಿ ಪ್ರವೀಣ್‌ ಸೂದ್‌

ಡ್ರಗ್ಸ್‌ ಪ್ರಕರಣವನ್ನು ಇಲಾಖೆ ಗಂಭಿರವಾಗಿ ಪರಿಗಣಿಸುತ್ತಿದೆ: ಡಿಜಿಪಿ ಪ್ರವೀಣ್‌ ಸೂದ್‌

gfgfdg

ಹುಬ್ಬಳ್ಳಿ: ಸಾರಿಗೆ ಸಂಸ್ಥೆ ನಮ್ಮ ಕಾರ್ಗೋಗೆ ಉತ್ತಮ ಸ್ಪಂದನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

asdcCS

ಶಾಸಕ ಪಾಟೀಲ್‌ ಅಹಂಕಾರ ಬಿಟ್ಟು ಕ್ಷಮೆಯಾಚಿಸಲಿ

17

ಅರಕೇರಾ ತಾಲೂಕು ಕೇಂದ್ರ ಕೈ ಬಿಡಲು ಒತ್ತಾಯ

16

ಕೋವಿಡ್‌ ಭತ್ಯೆ ಬಾಕಿ ವಿತರಣೆಗೆ ಆಗ್ರಹ

15

18ಕ್ಕೆ ಸದಾಶಿವ ಆಯೋಗ ವರದಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ

13

ಕರಿಯಪ್ಪನವರ ಸಮಾಜಸೇವೆ ಶ್ಲಾಘನೀಯ

MUST WATCH

udayavani youtube

ಅರರೆ… ಬಾಳೆ ಕಾಯಿ ಶ್ಯಾವಿಗೆ.. ರುಚಿ ಬಾಯಿಗೆ, ಉತ್ತಮ ಆರೋಗ್ಯಕ್ಕೆ

udayavani youtube

ದಾಂಡೇಲಿ : ಜನಮನ ಸೂರೆಗೊಂಡ ದನಗರ ಗೌಳಿ ನೃತ್ಯ

udayavani youtube

ಭತ್ತದ ಕೃಷಿ ಭರಪೂರ ಲಾಭ ತಂದು ಕೊಡುತ್ತಾ ?

udayavani youtube

ಸಮಾಜ ಮೆಚ್ಚುವಂತೆ ಬಾಳುವೆ: ಆರ್ಯನ್‌ ಖಾನ್ |UDAYAVANI NEWS BULLETIN|17/10/2021

udayavani youtube

ಅರಕಲಗೂಡು: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರ ದಾಳಿ

ಹೊಸ ಸೇರ್ಪಡೆ

ಐಪಿಎಲ್‌ ಇಲೆವೆನ್‌: ಕೆ.ಎಲ್‌. ರಾಹುಲ್‌ ಕೀಪರ್‌

ಐಪಿಎಲ್‌ ಇಲೆವೆನ್‌: ಕೆ.ಎಲ್‌. ರಾಹುಲ್‌ ಕೀಪರ್‌

bangla

ದೇಗುಲಗಳ ಮೇಲೆ ದಾಳಿ, ಹತ್ಯೆ ಖಂಡಿಸಿ ಬಾಂಗ್ಲಾ ಹಿಂದೂಗಳಿಂದ ದೇಶವ್ಯಾಪಿ ನಿರಶನ

ಮನೆಯ ನಾಲ್ವರನ್ನು ವಿಷವಿಕ್ಕಿ ಕೊಂದ ಬಾಲಕಿ!

ಮನೆಯ ನಾಲ್ವರನ್ನು ವಿಷವಿಕ್ಕಿ ಕೊಂದ ಬಾಲಕಿ!

ದೇಶದ ಸಂಸ್ಕೃತಿ, ಇತಿಹಾಸ ಯುವ ಬರಹಗಾರರಿಗೆ ಆವಿಷ್ಕಾರ : ಚಂದ್ರಶೇಖರ ಕಂಬಾರ

ದೇಶದ ಸಂಸ್ಕೃತಿ, ಇತಿಹಾಸ ಯುವ ಬರಹಗಾರರಿಗೆ ಆವಿಷ್ಕಾರ : ಚಂದ್ರಶೇಖರ ಕಂಬಾರ

ವಿಶ್ವ ಅಂಚೆ ದಿನಾಚರಣೆ : ರಾಜ್ಯಪಾಲರಿಂದ ಡಾಕ್‌ ಸೇವಾ ಪ್ರಶಸ್ತಿ ಪ್ರದಾನ

ವಿಶ್ವ ಅಂಚೆ ದಿನಾಚರಣೆ : ರಾಜ್ಯಪಾಲರಿಂದ ಡಾಕ್‌ ಸೇವಾ ಪ್ರಶಸ್ತಿ ಪ್ರದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.