
ಲಿಂಗಸೂಗುರು: ಕೊಡಲಿಯಿಂದ ಪತ್ನಿ ಕೊಲೆಗೈದು ಮಕ್ಕಳೊಂದಿಗೆ ಠಾಣೆಗೆ ಬಂದು ಶರಣಾದ ಪತಿ!
Team Udayavani, Aug 17, 2022, 1:16 PM IST

ಲಿಂಗಸೂಗುರು: ಪತ್ನಿ ಶೀಲ ಶಂಕಿಸಿ ಹೆಂಡತಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈದ ಪತಿ ಇಬ್ಬರು ಮಕ್ಕಳೊಂದಿಗೆ ಠಾಣೆಗೆ ಬಂದು ಶರಣಾದ ಘಟನೆ ತಾಲೂಕಿನ ಗುಡದನಾಳ ಗ್ರಾಮದಲ್ಲಿ ನಡೆದಿದೆ.
ಇಂದು ಬೆಳಗ್ಗೆ ( ಬುಧವಾರ) 7-30 ಗಂಟೆಯ ಸುಮಾರಿಗೆ ಗುಡದನಾಳ ಗ್ರಾಮದ ಜೆಟ್ಟೆಪ್ಪ ತನ್ನ ಹೆಂಡತಿ ರೇಣುಕಾಳನ್ನು (26 ) ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾನೆ.
ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಸಂಬುಡ ಗ್ರಾಮದ ರೇಣುಕಾಳ ಮದುವೆ 6-7 ವರ್ಷಗಳ ಹಿಂದೆ ನಡೆದಿತ್ತು. ಅದೇ ಗ್ರಾಮದ ಬೇರೆ ವ್ಯಕ್ತಿಯ ಜತೆ ಹೆಂಡತಿ ಪೋನ್ ನಲ್ಲಿ ಮಾತಾಡುತ್ತಿದ್ದಾಳೆ ಎಂದು ಗಂಡ ಶಂಕಿಸುತ್ತಿದ್ದ. ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯಾಗುತ್ತಿತ್ತು. ಮಂಗಳವಾರ ಸಂಜೆ ಕೂಡ ಇದೇ ವಿಚಾರವಾಗಿ ಜಗಳವಾಗಿತ್ತು.
ಇದನ್ನೂ ಓದಿ: ಚಾಕು ಇರಿತ ಪ್ರಕರಣ: ಸಿದ್ದರಾಮಯ್ಯ ಹೇಳಿಕೆ ಇಂತಹ ಗಲಭೆಗಳಿಗೆ ಕುಮ್ಮಕ್ಕು- ಬಿ.ವೈ.ರಾಘವೇಂದ್ರ
ರೇಣುಕಾ ಇಂದು ಬೆಳಗ್ಗೆ ತವರು ಮನೆಗೆ ಹೋಗುತ್ತೇನೆಂದು ಹೇಳಿದ್ದಕ್ಕೆ ಗಂಡ ಕೊಡಲಿಯಿಂದ ತಲೆಗೆ ಬಲವಾಗಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ನಂತರ ಜೆಟ್ಟಪ್ಪ ಮಕ್ಕಳೊಂದಿಗೆ ಲಿಂಗಸೂಗುರು ಠಾಣೆಗೆ ಬಂದು ಶರಣಾಗಿದ್ದಾನೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BMTC ಯಲ್ಲಿ ಭಾರಿ ವಂಚನೆ : ಮುಖ್ಯ ಟ್ರಾಫಿಕ್ ಮ್ಯಾನೇಜರ್ ಬಂಧನ

Mysore: ಕರ್ನಾಟಕದಲ್ಲಿ ರಾಕ್ಷಸರ ರಾಜ್ಯ ಆಡಳಿತಕ್ಕೆ ಬಂದಿದೆ; ಪ್ರತಾಪ್ ಸಿಂಹ ವಾಗ್ದಾಳಿ

Belagavi: ಬಾಲಕಾರ್ಮಿಕರ ರಕ್ಷಣೆಗೆ ಟಾಸ್ಕ್ ಫೋಸ್೯ ರಚನೆ: ಸಂತೋಷ್ ಲಾಡ್

Protest: ಕಳಪೆ ಕಾಮಗಾರಿ… ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ

Shivamogga Incident: ರಾಗಿಗುಡ್ಡಕ್ಕೆ ಆತಂರಿಕ ಭದ್ರತಾ ವಿಭಾಗದ ಅಧಿಕಾರಿಗಳ ತಂಡ ಭೇಟಿ
MUST WATCH
ಹೊಸ ಸೇರ್ಪಡೆ

Asian Games :ನೀರಜ್ ಚೋಪ್ರಾಗೆ ನಿರೀಕ್ಷಿತ ಚಿನ್ನ; ಪದಕಪಟ್ಟಿಯಲ್ಲಿ ಇತಿಹಾಸ

BMTC ಯಲ್ಲಿ ಭಾರಿ ವಂಚನೆ : ಮುಖ್ಯ ಟ್ರಾಫಿಕ್ ಮ್ಯಾನೇಜರ್ ಬಂಧನ

Pollution; ಭಾರತದ ಅತ್ಯಂತ ಕಲುಷಿತ ಗಾಳಿಯಿರುವ ನಗರ ಯಾವುದು? : ವಿಶ್ಲೇಷಣೆ

Gaming App Case:ಬಾಲಿವುಡ್ ನಟ ರಣಬೀರ್ ಕಪೂರ್ ಗೆ ಜಾರಿ ನಿರ್ದೇಶನಾಲಯದ ಸಮನ್ಸ್ ಜಾರಿ

BJP ಸಖ್ಯ ತೊರೆಯಲು ಕಾರಣ ಹೇಳಿದ AIADMK ಅಧ್ಯಕ್ಷ ಪಳನಿಸ್ವಾಮಿ