
ಹೆದರಿಸಿದರೆ ಹೆದರುವ ವ್ಯಕ್ತಿ ನಾನಲ್ಲ: ಗಾಲಿ ರೆಡ್ಡಿ ಸವಾಲು
Team Udayavani, Jan 27, 2023, 9:43 PM IST

ರಾಯಚೂರು: ಆಸ್ತಿ ಮುಟ್ಟುಗೋಲು ಹಾಕಿಕೊಂಡು ನನ್ನನ್ನು ಹೆದರಿಸಲು ಆಗುವುದಿಲ್ಲ. ನಾನು ಮಾನಸಿಕವಾಗಿ ಸಿದ್ಧವಾಗಿದ್ದು ಯಾವುದಕ್ಕೂ ಹೆದರುವ ವ್ಯಕ್ತಿಯಲ್ಲ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಮುಖ್ಯಸ್ಥ ಗಾಲಿ ಜನಾರ್ದನ ರೆಡ್ಡಿ ಸವಾಲೆಸೆದರು.
ಸುದ್ದಿಗಾರರ ಜತೆ ಮಾತನಾಡಿ, ಈಗ ನಡೆಯುತ್ತಿರುವ ಬೆಳವಣಿಗೆಗಳನ್ನು ನಾನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ನನ್ನಿಂದ ಒಂದು ರೂಪಾಯಿ ಜಪ್ತಿ ಮಾಡಿದರೆ 10 ವರ್ಷಗಳಲ್ಲಿ 10 ರೂ. ವಾಪಸ್ ಬರುತ್ತದೆ. ಫೆ.10ರೊಳಗೆ ಅನೇಕ ದೊಡ್ಡ ನಾಯಕರು ನಮ್ಮ ಪಕ್ಷ ಸೇರ್ಪಡೆಯಾಗಲಿದ್ದಾರೆ.
ರಾಜ್ಯದ 30 ಕ್ಷೇತ್ರಗಳಲ್ಲಿ ಪಕ್ಷ ಸದೃಢವಾಗಿದ್ದು, ಈಗಾಗಲೇ 13 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಿದ್ದಾರೆ. 17 ಕ್ಷೇತ್ರಗಳಿಗೆ ಫೆ.10ರೊಳಗೆ ಅಭ್ಯರ್ಥಿಗಳನ್ನು ಘೋಷಿಸಲಾಗುವುದು.
ನಾನು ನನ್ನ ಪಕ್ಷದ ಸಂಘಟನೆ ಮಾಡುತ್ತೇನೆ. ಎಲ್ಲರನ್ನು ಕರೆದು ಏನು ಮಾಡುತ್ತಿದ್ದೇನೆ ಎಂದು ಹೇಳಲು ಸಾಧ್ಯವಿಲ್ಲ. ರಾಯಚೂರು ಜಿಲ್ಲೆಯಲ್ಲೇ ಬೃಹತ್ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತದೆ ಎಂದರು.
ರಾಜ್ಯದಲ್ಲಿ 2023ರಲ್ಲಿ ಸರ್ಕಾರ ರಚನೆ ಮಾಡುವ ಶಕ್ತಿ ಭಗವಂತ ನೀಡಲಿ. ನಾನು ಯಾರನ್ನೂ ನಂಬಿ ಪಕ್ಷ ಸ್ಥಾಪಿಸಿಲ್ಲ.
ಕುಟುಂಬದವರಿಗಾಗಿಯೂ ಕಾದಿಲ್ಲ. ನನ್ನ ಪತ್ನಿ ಚುನಾವಣೆಗೆ ಸ್ಪರ್ಧಿಸುವುದು ನಿಶ್ಚಿತ. ಯಾವ ಕ್ಷೇತ್ರ ಎಂಬುವುದನ್ನು ಮುಂದೆ ಘೋಷಿಸಲಾಗುವುದು. ನನ್ನ ಪುತ್ರಿ ಸಕ್ರಿಯ ರಾಜಕಾರಣಕ್ಕೆ ಆಗಮಿಸುತ್ತಾಳೆ. ಆದರೆ, ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

ಹುಣಸೂರು: ಇಂದಿನಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆ

ಕಾಡಾನೆಯ ಹನಿಟ್ರ್ಯಾಪ್: ತೀರ್ಥಹಳ್ಳಿ ಪಟ್ಟಣಕ್ಕೆ ನುಗ್ಗಿದ್ದ ಕಾಡಾನೆಯ ಸೆರೆಯಾಗಿಸಿದ ಭಾನುಮತಿ

ಅಗ್ನಿ ಆಕಸ್ಮಿಕ: ಲಕ್ಷಾಂತರ ರೂಪಾಯಿ ಮೌಲ್ಯದ ಪೀಠೋಪಕರಣಗಳು ಬೆಂಕಿಗಾಹುತಿ

ಚಿತ್ರ ವಿಮರ್ಶೆ: ‘ಹೊಯ್ಸಳ’ ಸಾಮ್ರಾಜ್ಯದಲ್ಲಿ ಆ್ಯಕ್ಷನ್ ಅಬ್ಬರ

ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನಲ್ಲಿ ಜ್ಯೂರಿ ಮೆಚ್ಚುಗೆಯ ಪ್ರಶಸ್ತಿ ಪಡೆದ ‘ಇನ್’