ವ್ಯಾಪಾರ ವಲಯಕ್ಕೆ ಕರ್ಫ್ಯೂ ಕಾರ್ಮೋಡ!

Team Udayavani, May 13, 2021, 3:37 PM IST

fghjhgfghjh

ರಾಯಚೂರು: ಜನತಾ ಕರ್ಫ್ಯೂ ಅವಧಿ  ವಿಸ್ತರಿಸುತ್ತಲೇ ಸಾಗಿದಂತೆ ವ್ಯಾಪಾರ ವಲಯ ಸಂಪೂರ್ಣ ಜರ್ಜರಿತಗೊಂಡಿದೆ. ಕಳೆದ 22 ದಿನಗಳಿಂದ ವ್ಯಾಪಾರಕ್ಕೆ ಬ್ರೇಕ್‌ ಬಿದ್ದಿದ್ದು, ಈಗಾಗಲೇ ವ್ಯಾಪಾರಸ್ಥರು ಕೋಟ್ಯಂತರ ರೂ. ನಷ್ಟ ಅನುಭವಿಸಿದ್ದಾರೆ.

ಎಲ್ಲೆಡೆ ಕೊರೊನಾ ಸೋಂಕು ಮಿತಿಮೀರಿ ಹರಡುತ್ತಿದೆ. ಇದರಿಂದ ಸರ್ಕಾರ ಕಟ್ಟುನಿಟ್ಟಿನ ಜನತಾ ಕರ್ಫ್ಯೂ ಜಾರಿ ಮಾಡಿದೆ. ಕಳೆದ ಏ.20ರಿಂದಲೇ ಅಗತ್ಯ ವಸ್ತುಗಳು ಬಿಟ್ಟರೆ ಉಳಿದ ಯಾವುದೇ ವಹಿವಾಟು ನಡೆಸುವಂತಿಲ್ಲ ಎಂಬ ಸರ್ಕಾರದ ಆದೇಶದಿಂದ ವ್ಯಾಪಾರ ವಲಯ ತಲ್ಲಣಗೊಂಡಿದೆ. ನಿತ್ಯ ಕೋಟ್ಯಂತರ ವಹಿವಾಟು ನಡೆಯುತ್ತಿದ್ದು, ಸರ್ಕಾರಕ್ಕೆ ಲಕ್ಷಾಂತರ ರೂ. ತೆರಿಗೆ ಪಾವತಿಯಾಗುತ್ತಿತ್ತು.

ಈಗ ವ್ಯಾಪಾರಿಗಳಿಗೂ ಆದಾಯವಿಲ್ಲ; ಅತ್ತ ಸರ್ಕಾರಕ್ಕೂ ತೆರಿಗೆ ಇಲ್ಲ ಎನ್ನುವಂತಾಗಿದೆ. ಇದು ಮದುವೆ ಕಾಲವಾದ್ದರಿಂದ ಬಟ್ಟೆ, ಚಿನ್ನಾಭರಣ ಸೇರಿದಂತೆ ಇನ್ನಿತರ ವಸ್ತುಗಳ ಖರೀದಿಗೆ ಎಲ್ಲಿಲ್ಲದ ಬೇಡಿಕೆ ಇರುತ್ತಿತ್ತು. ಕರ್ಫ್ಯೂ ಕಾರಣಕ್ಕೆ ಅದೆಲ್ಲದಕ್ಕೂ ಬ್ರೇಕ್‌ ಬಿದ್ದಿದೆ. ನಗರದಲ್ಲಿ 250ಕ್ಕೂ ಅ ಧಿಕ ಚಿನ್ನಾಭರಣ ಅಂಗಡಿಗಳಿದ್ದು, ಮದುವೆ ಕಾಲದಲ್ಲಿ ಏನಿಲ್ಲವೆಂದರೂ 20-25 ಕೋಟಿ ವಹಿವಾಟು ನಡೆಯುತ್ತಿತ್ತು. ಚಿನ್ನಕ್ಕೆ ಶೇ.3ರಷ್ಟು ತೆರಿಗೆ ಇರುವ ಕಾರಣ ಸರ್ಕಾರ ಲಕ್ಷಾಂತರ ರೂ. ಆದಾಯಕ್ಕೆ ಕೊಕ್ಕೆ ಬಿದ್ದಿದೆ. ಸರಾಫ್‌ ಬಜಾರ್‌ ವೆಲೆಧೀರ್‌ ಅಸೊಸಿಯೇಶನ್‌ನಿಂದ ಮದುವೆ ಕಾಲ ಮುಗಿಯುವವರೆಗೆ ಕೆಲ ಕಾಲ ವ್ಯಾಪಾರ ವಹಿವಾಟು ನಡೆಸಲು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿತ್ತು.

ಆದರೆ, ಅದಕ್ಕೆ ಜಿಲ್ಲಾಡಳಿತದಿಂದ ನಿರೀಕ್ಷಿತ ಸ್ಪಂದನೆ ಸಿಕ್ಕಿಲ್ಲ. ಅಲ್ಲದೇ, ಈಗ ಅಕ್ಷಯ ತೃತೀಯ ಇರುವ ಕಾರಣ ಅದಕ್ಕೂ ಕರ್ಫ್ಯೂ ಕಾರ್ಮೋಡ ಕವಿದಂತಾಗಿದೆ. ಅಕ್ಷಯ ತೃತೀಯ ದಿನದಂದೇ ಏನಿಲ್ಲವೆಂದರೂ ಒಂದರಿಂದ ಒಂದೂವರೆ ಕೋಟಿ ರೂ. ವಹಿವಾಟು ನಡೆಯುತ್ತಿತ್ತು. ಇನ್ನೂ ಅಟೋ ಮೊಬೈಲ್‌ ಕ್ಷೇತ್ರವಂತೂ ಸಂಪೂರ್ಣ ಸ್ಥಗಿತಗೊಂಡಿದೆ. ನಗರದಲ್ಲಿ 70 ಕ್ಕೂ ಅಧಿಕ ಅಂಗಡಿಗಳಿದ್ದರೆ, ಜಿಲ್ಲೆಯಲ್ಲಿ 500ಕ್ಕೂ ಅಧಿಕ ಇವೆ. ನಿತ್ಯ ಕೋಟ್ಯಂತರ ವಹಿವಾಟು ನಡೆಸುತ್ತಿದ್ದ ಅಟೋ ಮೊಬೈಲ್‌ ಅಂಗಡಿಗಳು, ಈಗ ಬಾಗಿಲು ಹಾಕಿಕೊಂಡು ಬಿಟ್ಟಿವೆ. ಇದರಿಂದಲೇ ಸರ್ಕಾರಕ್ಕೆ ಸಾಕಷ್ಟು ನಷ್ಟ ಎಂದರೆ ತಪ್ಪಾಗಲಿಕ್ಕಿಲ್ಲ. ಅಟೋ ಮೊಬೈಲ್‌ ವಲಯದ ಮೇಲೆ ಸರ್ಕಾರ ಶೇ.28 ತೆರಿಗೆ ವಿಧಿ ಸುತ್ತಿದೆ.

ಆದರೆ, ಈಗ ಬಹುತೇಕ ಅಂಗಡಿಗಳ ವಹಿವಾಟು ನಿಂತಿರುವ ಕಾರಣ ನಿತ್ಯ ಸಾವಿರಾರು ನಷ್ಟ ಎದುರಿಸುವಂತಾಗಿದೆ. ಸರ್ಕಾರಿ ಇಲಾಖೆಗಳ ವಾಹನಗಳು ಮಾತ್ರ ದುರಸ್ತಿ ಮಾಡಿ ಕೊಡಲಾಗುತ್ತಿದೆ. ಮುಂಗಾರು ಶುರುವಾಗುವ ಕಾರಣ ರೈತಾಪಿ ವರ್ಗ ವಾಹನಗಳ ದುರಸ್ತಿಗೆ ಈಗಾಗಲೇ ಬರುತ್ತಿತ್ತು. ಆದರೆ, ಈ ವರ್ಷ ಲಾಕ್‌ಡೌನ್‌ ಕಾರಣ ಯಾರು ಬರುತ್ತಿಲ್ಲ. ಆದರೆ, ಕೆಲ ಮೆಕ್ಯಾನಿಕ್‌ಗಳು ವಾಹನಗಳು ಇದ್ದಲ್ಲಿಗೆ ಹೋಗಿ ದುರಸ್ತಿ ಮಾಡಿ ಬರುತ್ತಿದ್ದಾರೆ.

ಟಾಪ್ ನ್ಯೂಸ್

ಬೀದರ್:ಇತಿಹಾಸದಲ್ಲಿ ಪ್ರಥಮ ಬಾರಿಗೆ ಐಎಎಫ್ ಯುದ್ಧ ವಿಮಾನ ಹಾರಿಸಿದ ಅಪ್ಪ-ಮಗಳು

ಬೀದರ್:ಇತಿಹಾಸದಲ್ಲಿ ಪ್ರಥಮ ಬಾರಿಗೆ ಐಎಎಫ್ ಯುದ್ಧ ವಿಮಾನ ಹಾರಿಸಿದ ಅಪ್ಪ-ಮಗಳು

ಕಲಬುರಗಿ: ವಾಹನಗಳ ಅನಧಿಕೃತ ನಾಮಫಲಕ ತೆರವು; ಪೊಲೀಸರಿಂದ ಕಾರ್ಯಾಚರಣೆ

ಕಲಬುರಗಿ: ವಾಹನಗಳ ಅನಧಿಕೃತ ನಾಮಫಲಕ ತೆರವು; ಪೊಲೀಸರಿಂದ ಕಾರ್ಯಾಚರಣೆ

ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ಸಭಾಪತಿ ಸ್ಥಾನ ಕೊಟ್ಟರೆ ನಿಭಾಯಿಸುವೆ: ಬಸವರಾಜ್ ಹೊರಟ್ಟಿ

ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ಸಭಾಪತಿ ಸ್ಥಾನ ಕೊಟ್ಟರೆ ನಿಭಾಯಿಸುವೆ: ಬಸವರಾಜ್ ಹೊರಟ್ಟಿ

5gay-couple

ಮೊದಲ ಬಾರಿಗೆ ಹಿಂದೂ ಸಂಪ್ರದಾಯ ಮೂಲಕ ದಾಂಪತ್ಯ ಜೀವನಕ್ಕೆ ಗೇ ಕಪಲ್ಸ್‌!

ಚಂದ್ರಶೇಖರ ಗುರೂಜಿ ಅಂತ್ಯಕ್ರಿಯೆಗೆ ಸಿದ್ಧತೆ: ವೀರಶೈವ ಲಿಂಗಾಯತ ಸಂಪ್ರದಾಯದಂತೆ ವಿಧಿವಿಧಾನ

ಚಂದ್ರಶೇಖರ ಗುರೂಜಿ ಅಂತ್ಯಕ್ರಿಯೆಗೆ ಸಿದ್ಧತೆ: ವೀರಶೈವ ಲಿಂಗಾಯತ ಸಂಪ್ರದಾಯದಂತೆ ವಿಧಿವಿಧಾನ

ಹೌದು. ನಾನು ಲಕ್ಕಿಡಿಪ್‌ ಸಿಎಂ,ಏನೀಗ?: ಬಿಜೆಪಿ,ಕುಟುಂಬ ರಾಜಕಾರಣ ವಿರುದ್ಧ HDK ಸರಣಿ ಟ್ವೀಟ್

ಹೌದು. ನಾನು ಲಕ್ಕಿಡಿಪ್‌ ಸಿಎಂ,ಏನೀಗ?: ಬಿಜೆಪಿ,ಕುಟುಂಬ ರಾಜಕಾರಣ ವಿರುದ್ಧ HDK ಸರಣಿ ಟ್ವೀಟ್

‘ಅಘಾಡಿ ಸರ್ಕಾರದಲ್ಲಿ ದಾವೂದ್, ಹಿಂದುತ್ವದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ’

‘ಅಘಾಡಿ ಸರ್ಕಾರದಲ್ಲಿ ದಾವೂದ್, ಹಿಂದುತ್ವದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ’ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15protest

ಕನ್ಹಯ್ಯಲಾಲ್‌ ಹಂತಕರಿಗೆ ಗಲ್ಲುಶಿಕ್ಷೆ ವಿಧಿಸಿ

14voilencwe

ಹಿಂಸಾ ಕೃತ್ಯ ಹತ್ತಿಕ್ಕುವ ಕೆಲಸವಾಗಲಿ: ವಿರೂಪಾಕ್ಷಪ್ಪ

13water

ಕಲುಷಿತ ನೀರು ಸೇವನೆ: ಜೂಕೂರು ಜನ ಅಸ್ವಸ್ಥ

23theft

8 ಅಂಗಡಿಗಳಲ್ಲಿ ಸರಣಿ ಕಳ್ಳತನಕ್ಕೆ ಯತ್ನ

13economy

ದೇಶದ ಪ್ರಗತಿಗೆ ಆರ್ಥಿಕತೆಯೊಂದೇ ಮುಖ್ಯವಲ್ಲ

MUST WATCH

udayavani youtube

ಚಂದ್ರಶೇಖರ ಗುರೂಜಿ ಹತ್ಯೆ : ಕೇವಲ 4 ಗಂಟೆಯಲ್ಲಿ ಹಂತಕರ ಪತ್ತೆ

udayavani youtube

Lightings ನೋಡಿದಾಗ Shock ಆದೆ! – ಪ್ರೇಮಾ

udayavani youtube

ಚಂದ್ರಶೇಕರ್‌ ಗುರೂಜಿ ಹತ್ಯೆ: ಹಂತಕರ ಬಂಧನ

udayavani youtube

ಮಡಿಕೇರಿ : ಧಾರಾಕಾರ ಮಳೆಗೆ ರಸ್ತೆಗೆ ಉರುಳಿ ಬಿದ್ದ ಬಂಡೆ ಕಲ್ಲು, ತಪ್ಪಿದ ಭಾರಿ ದುರಂತ

udayavani youtube

ವಿಟ್ಲ ಸಾರಡ್ಕ ಬಳಿ ಕುಸಿದ ಗುಡ್ಡ : ಕರ್ನಾಟಕ – ಕೇರಳ ಸಂಚಾರ ಬಂದ್

ಹೊಸ ಸೇರ್ಪಡೆ

ಬೀದರ್:ಇತಿಹಾಸದಲ್ಲಿ ಪ್ರಥಮ ಬಾರಿಗೆ ಐಎಎಫ್ ಯುದ್ಧ ವಿಮಾನ ಹಾರಿಸಿದ ಅಪ್ಪ-ಮಗಳು

ಬೀದರ್:ಇತಿಹಾಸದಲ್ಲಿ ಪ್ರಥಮ ಬಾರಿಗೆ ಐಎಎಫ್ ಯುದ್ಧ ವಿಮಾನ ಹಾರಿಸಿದ ಅಪ್ಪ-ಮಗಳು

6UT-khadar

ಸಾರ್ವಜನಿಕರಿಂದ ಅಹವಾಲು ಸಲ್ಲಿಕೆ: ಶಾಸಕ ಯು.ಟಿ.ಖಾದರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ

ಕಲಬುರಗಿ: ವಾಹನಗಳ ಅನಧಿಕೃತ ನಾಮಫಲಕ ತೆರವು; ಪೊಲೀಸರಿಂದ ಕಾರ್ಯಾಚರಣೆ

ಕಲಬುರಗಿ: ವಾಹನಗಳ ಅನಧಿಕೃತ ನಾಮಫಲಕ ತೆರವು; ಪೊಲೀಸರಿಂದ ಕಾರ್ಯಾಚರಣೆ

ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ಸಭಾಪತಿ ಸ್ಥಾನ ಕೊಟ್ಟರೆ ನಿಭಾಯಿಸುವೆ: ಬಸವರಾಜ್ ಹೊರಟ್ಟಿ

ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ಸಭಾಪತಿ ಸ್ಥಾನ ಕೊಟ್ಟರೆ ನಿಭಾಯಿಸುವೆ: ಬಸವರಾಜ್ ಹೊರಟ್ಟಿ

5gay-couple

ಮೊದಲ ಬಾರಿಗೆ ಹಿಂದೂ ಸಂಪ್ರದಾಯ ಮೂಲಕ ದಾಂಪತ್ಯ ಜೀವನಕ್ಕೆ ಗೇ ಕಪಲ್ಸ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.