ಕೇಂದ್ರ-ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗೆ ಖಂಡನೆ

Team Udayavani, Oct 3, 2020, 3:50 PM IST

RC-TDY-2

ಸಿಂಧನೂರು: ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ, ಕಾರ್ಮಿಕ, ಜನವಿರೋಧಿ ನೀತಿ ಖಂಡಿಸಿ ನಗರ, ಗ್ರಾಮೀಣ ಬ್ಲಾಕ್‌ ಕಾಂಗ್ರೆಸ್‌ ಮತ್ತು ಯುವ ಕಾಂಗ್ರೆಸ್‌ ತಾಲೂಕು ಘಟಕದಿಂದ ಶುಕ್ರವಾರ ಪ್ರತ್ಯೇಕ ಪ್ರತಿಭಟನೆ ನಡೆಸಲಾಯಿತು. ಇದು ತಾಲೂಕಿನ ಕಾಂಗ್ರೆಸ್‌ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದಕ್ಕೆ ಪುಷ್ಠಿ ನೀಡಿತು.

ಮಾಜಿ ಶಾಸಕ ಹಂಪನಗೌಡ ಬಾದರ್ಲಿ ನೇತೃತ್ವದಲ್ಲಿ ಗ್ರಾಮೀಣ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಹಾಗೂ ಯುವ ಕಾಂಗ್ರೆಸ್‌ ರಾಜ್ಯ ಅಧ್ಯಕ್ಷ ಬಸನಗೌಡ ಬಾದರ್ಲಿ ನೇತೃತ್ವದಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರದ ವಿವಿಧ ಕಾಯ್ದೆಗಳ ವಿರುದ್ಧ ಪ್ರತ್ಯೇಕ ಹೋರಾಟ ಹಮ್ಮಿಕೊಂಡಿದ್ದರಿಂದ ಕಾರ್ಯಕರ್ತರಲ್ಲಿ ಗೊಂದಲದ ವಾತಾವರಣ ಕಂಡುಬಂತು

ನಗರ-ಗ್ರಾಮೀಣ ಬ್ಲಾಕ್‌ ಕಾಂಗ್ರೆಸ್‌: ಮಾಜಿ ಶಾಸಕ ಹಂಪನಗೌಡ ಬಾದರ್ಲಿ ನಿವಾಸದಿಂದ ಮಿನಿ ವಿಧಾನಸೌಧದವರೆಗೆ ಮೆರವಣಿಗೆ ನಡೆಸಿ ತಹಶೀಲ್ದಾರ್‌ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ಬಿಜೆಪಿ ಸರಕಾರ ಜನವಿರೋಧಿ ನೀತಿ ಜಾರಿಗೆ ತರುತ್ತಿದೆ. ಇದನ್ನು ಪ್ರತಿಯೊಬ್ಬರು ವಿರೋಧಿಸಬೇಕು.ರೈತ ವಿರೋಧಿಯಾದ ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ಕಾಯ್ದೆಗಳು ಖಾಸಗಿ ಕಂಪನಿಗಳ ಪರವಾಗಿವೆ ಎಂದು ಆರೋಪಿಸಿದರು.

ನಗರಸಭೆ ಮಾಜಿ ಅಧ್ಯಕ್ಷ ಜಾಫರ್‌ ಸಾಬ್‌ ಜಾಗೀರದಾರ, ಗ್ರಾಮೀಣ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪಂಪನಗೌಡ ಬಾದರ್ಲಿ, ನಗರ ಘಟಕ ಅಧ್ಯಕ್ಷ ಖಾಜಿ ಮಲ್ಲಿಕ್‌ ವಕೀಲ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 ಯುವ ಕಾಂಗ್ರೆಸ್‌: ಇನ್ನೊಂದೆಡೆ ಯುವ ಕಾಂಗ್ರೆಸ್‌ ಬಸನಗೌಡ ಬಾದರ್ಲಿ ನೇತೃತ್ವದಲ್ಲಿ ಎಪಿಎಂಸಿ ಗಣೇಶ ದೇವಸ್ಥಾನದಿಂದ ಎತ್ತಿನ ಬಂಡಿಗಳ ಮೆರವಣಿಗೆ ನಡೆಸಿ ತಹಶೀಲ್ದಾರ್‌ ಗೆ ಮನವಿ ಸಲ್ಲಿಸಿದರು. ಯುವ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಬಸನಗೌಡ ಬಾದರ್ಲಿ ಮಾತನಾಡಿ, ದೇಶದಲ್ಲಿ ರೈತರ ಹಿತ ಕಾಯುವ ಕಾಯ್ದೆಗಳನ್ನು ಜಾರಿಗೆ ತರದೆ ಅವರಿಗೆ ಅನ್ಯಾಯ ಮಾಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಯಡಿಯೂರಪ್ಪ ಕಾಯ್ದೆ ಜಾರಿಗೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.

ದೇಶದಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬಂದು ಒಂದು ವರ್ಷವಾದರೂ ರೈತಪರ ಯಾವುದೇ ಯೋಜನೆ ಜಾರಿಗೆ ತಂದಿಲ್ಲ. ರೈತರ ಜೀವನದ ಜತೆ ಚಲ್ಲಾಟವಾಡುತ್ತಿದೆ. ಕಾರ್ಪೋರೇಟ್‌ ಕಂಪನಿಗಳ ಪರ ಕೆಲಸ ಮಾಡುತ್ತಿದೆ ಎಂದು ದೂರಿದರು. ಕೂಡಲೇ ಭೂ ಸುಧಾರಣೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಕೆಪಿಸಿಸಿ ಕಾರ್ಯದರ್ಶಿ ಕೆ.ಕರಿಯಪ್ಪ, ಹಿರಿಯ ಮುಖಂಡ ಶಿವಕುಮಾರ ಜವಳಿ, ವೆಂಕಟೇಶ ರಾಗಲಪರ್ವಿ, ಖಾಜಾಹುಸೇನ್‌ ರೌಡಕುಂದ, ಪಂಪಾಪತಿ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Ad

ಟಾಪ್ ನ್ಯೂಸ್

CPY–Family

ಶಾಸಕ ಸಿ.ಪಿ.ಯೋಗೇಶ್ವರ್‌ ವಿರುದ್ಧ ಮೊದಲ ಪತ್ನಿ, ಪುತ್ರಿಯಿಂದ ಸುರ್ಜೇವಾಲಗೆ ದೂರು

Ashok-Bjp

ಉಗ್ರರಿಗೆ ಜೈಲಿನಲ್ಲೇ ಅನುಕೂಲ: ರಾಜ್ಯದಲ್ಲಿ ಗೃಹ ಇಲಾಖೆ ಸತ್ತೇ ಹೋಗಿದೆ: ಆರ್‌.ಅಶೋಕ್‌

FATF; ಪಾಕ್‌ ಹಣ ಬೆಂಬಲ: ಭಾರತದ ವಾದಕ್ಕೆ ಮೊದಲ ಜಯ

FATF; ಪಾಕ್‌ ಹಣ ಬೆಂಬಲ: ಭಾರತದ ವಾದಕ್ಕೆ ಮೊದಲ ಜಯ

Chinnaswamy-CId

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಪ್ರಕರಣ ಶೀಘ್ರ ಸಿಐಡಿ ವರದಿ ಸಲ್ಲಿಕೆ?

ಉಗ್ರನ ಪರಾರಿ ಮಾಡಿಸಲು ಸಜ್ಜಾಗಿದ್ದ ಎಎಸ್‌ಐ, ಮಹಿಳೆ! ಎನ್‌ಐಎ ತನಿಖೆಯಲ್ಲಿ ಬಹಿರಂಗ

ಉಗ್ರನ ಪರಾರಿ ಮಾಡಿಸಲು ಸಜ್ಜಾಗಿದ್ದ ಎಎಸ್‌ಐ, ಮಹಿಳೆ! ಎನ್‌ಐಎ ತನಿಖೆಯಲ್ಲಿ ಬಹಿರಂಗ

BKh-BYV

ಬಿ.ಕೆ.ಹರಿಪ್ರಸಾದ್‌ ನಡೆ ದುಶ್ಯಾಸನ ಸಂಸ್ಕೃತಿಯ ನೆನಪಿಸುತ್ತದೆ: ಬಿ.ವೈ.ವಿಜಯೇಂದ್ರ

ಸುಳ್ಳು ಸುದ್ದಿ ತಡೆಗೆ ಮುಂದಿನ ಅಧಿವೇಶನದಲ್ಲೇ ಮಸೂದೆ: ಗೃಹ ಸಚಿವ ಡಾ| ಪರಮೇಶ್ವರ್‌

ಸುಳ್ಳು ಸುದ್ದಿ ತಡೆಗೆ ಮುಂದಿನ ಅಧಿವೇಶನದಲ್ಲೇ ಮಸೂದೆ: ಗೃಹ ಸಚಿವ ಡಾ| ಪರಮೇಶ್ವರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

RCR–Hanuma

ಮೊಹರಂ ಆಚರಣೆ ವೇಳೆ ಕೆಂಡದ ಕುಣಿಗೆ ಬಿದ್ದಿದ್ದ ಗಾಯಾಳು ಸಾವು

Raichu-Burn

ಮೊಹರಂ ಆಚರಣೆ ವೇಳೆ ಅಗ್ನಿ ಕುಂಡದಲ್ಲಿ ಬಿದ್ದ ಯುವಕ; ಗಂಭೀರ ಗಾಯ

19

Devadurga: ನಿರ್ವಹಣೆ ಇಲ್ಲದೇ ಹದಗೆಟ್ಟ ರಸ್ತೆ; ಸಂಚಾರ ದುಸ್ತರ

9

Raichur: ರಾಜಕೀಯ ಸ್ವರೂಪ ಪಡೆದ ‘ಏಮ್ಸ್‌’ ಹೋರಾಟ!

5-maski

Maski: ಜೀವನದಲ್ಲಿ ಜಿಗುಪ್ಸೆ; ಯುವತಿ ನೇಣಿಗೆ ಶರಣು

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

CPY–Family

ಶಾಸಕ ಸಿ.ಪಿ.ಯೋಗೇಶ್ವರ್‌ ವಿರುದ್ಧ ಮೊದಲ ಪತ್ನಿ, ಪುತ್ರಿಯಿಂದ ಸುರ್ಜೇವಾಲಗೆ ದೂರು

Ashok-Bjp

ಉಗ್ರರಿಗೆ ಜೈಲಿನಲ್ಲೇ ಅನುಕೂಲ: ರಾಜ್ಯದಲ್ಲಿ ಗೃಹ ಇಲಾಖೆ ಸತ್ತೇ ಹೋಗಿದೆ: ಆರ್‌.ಅಶೋಕ್‌

FATF; ಪಾಕ್‌ ಹಣ ಬೆಂಬಲ: ಭಾರತದ ವಾದಕ್ಕೆ ಮೊದಲ ಜಯ

FATF; ಪಾಕ್‌ ಹಣ ಬೆಂಬಲ: ಭಾರತದ ವಾದಕ್ಕೆ ಮೊದಲ ಜಯ

Chinnaswamy-CId

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಪ್ರಕರಣ ಶೀಘ್ರ ಸಿಐಡಿ ವರದಿ ಸಲ್ಲಿಕೆ?

ಉಗ್ರನ ಪರಾರಿ ಮಾಡಿಸಲು ಸಜ್ಜಾಗಿದ್ದ ಎಎಸ್‌ಐ, ಮಹಿಳೆ! ಎನ್‌ಐಎ ತನಿಖೆಯಲ್ಲಿ ಬಹಿರಂಗ

ಉಗ್ರನ ಪರಾರಿ ಮಾಡಿಸಲು ಸಜ್ಜಾಗಿದ್ದ ಎಎಸ್‌ಐ, ಮಹಿಳೆ! ಎನ್‌ಐಎ ತನಿಖೆಯಲ್ಲಿ ಬಹಿರಂಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.