ರಾಯಚೂರು: ಹಣಕ್ಕಾಗಿ ಹೆತ್ತ ತಂದೆಯನ್ನೇ ಕೊಲೆಗೈದು ಹೆದ್ದಾರಿ ಪಕ್ಕದಲ್ಲೇ ಹೂತಿಟ್ಟ ಮಗ
ಕೊಲೆಗೈದು ತಂದೆ ನಾಪತ್ತೆಯಾಗಿರುವ ಕುರಿತು ದೂರು ನೀಡಿದ ಆರೋಪಿ
Team Udayavani, Jul 19, 2023, 2:41 PM IST
ರಾಯಚೂರು: ಹಣಕ್ಕಾಗಿ ಪೀಡಿಸುತ್ತಿದ್ದ ಮಗ ತಂದೆಯನ್ನೇ ಕೊಂದು ಹೆದ್ದಾರಿ ಪಕ್ಕದಲ್ಲಿ ಹೂತಿಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ತಾಲೂಕಿನ ವಡ್ಲೂರು ಗ್ರಾಮದ ಶಿವನಪ್ಪ (65) ಮೃತ ವ್ಯಕ್ತಿ. ಈರಣ್ಣ (35) ಕೊಲೆಗೈದ ವ್ಯಕ್ತಿ.
ಹೆದ್ದಾರಿ ನಿರ್ಮಾಣಕ್ಕೆ ಶಿವನಪ್ಪ ಅವರ ಜಮೀನನ್ನು ಸರ್ಕಾರ ಪಡೆದಿತ್ತು. ಇದರಿಂದ ಪರಿಹಾರದ ಹಣ ಬಂದಿತ್ತು. ಇದನ್ನು ಕಂಡ ಮಗ ತಂದೆಯಲ್ಲಿ ಹಣ ಕೊಡುವಂತೆ ಕೇಳಿದ್ದಾನೆ, ಇದಕ್ಕೆ ತಂದೆ ನಿರಾಕರಿಸಿದ್ದಾರೆ. ಅದರಂತೆ ಕೋಪಗೊಂಡ ಮಗ ಕಳೆದ ಜುಲೈ 7ನೇ ತಾರೀಖಿನಂದು ತಂದೆಯನ್ನು ಕೊಲೆಗೈದಿದ್ದಾನೆ ಬಳಿಕ ತಂದೆಯ ದೇಹವನ್ನು ನಿರ್ಮಾಣ ಹಂತದಲ್ಲಿರುವ ಹೆದ್ದಾರಿ ಬಳಿ ಹೂತಿಟ್ಟಿದ್ದಾನೆ. ವಿಚಾರ ಯಾರಿಗೂ ಅನುಮಾನ ಬಾರದಂತೆ ತಂದೆ ಕಾಣೆಯಾಗಿದ್ದಾರೆ ಎಂದು ಸುದ್ದಿ ಹಬ್ಬಿಸಿ ಸ್ಥಳೀಯ ಠಾಣೆಯಲ್ಲಿ ದೂರು ನೀಡಿದ್ದಾನೆ.
ಮೃತ ಶಿವನಪ್ಪನ ಸಹೋದರರಿಗೆ ಅನುಮಾನ ಬಂದು ಈರಣ್ಣನನ್ನು ವಿಚಾರಿಸಿದಾಗ ಸತ್ಯ ಬಯಲಾಗಿದೆ. ಈ ವೇಳೆ ತಾನು ಕೊಲೆಗೈದು ಮೃತದೇಹವನ್ನು ಹೆದ್ದಾರಿ ಬದಿ ಹೂತಿಟ್ಟ ವಿಚಾರ ಬಾಯಿ ಬಿಟ್ಟಿದ್ದಾನೆ. ಬಳಿಕ ಗ್ರಾಮೀಣ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು: ಡಿವೈಡರ್ ಗೆ ದ್ವಿಚಕ್ರ ವಾಹನ ಢಿಕ್ಕಿ, ಕಾಲೇಜು ವಿದ್ಯಾರ್ಥಿ ಮೃತ್ಯು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Home Minister ಅಮಿತ್ ಶಾಗೆ ವಕೀಲ ದೇವರಾಜೇಗೌಡ ಪತ್ರ: ವೈರಲ್
Karnataka Govt ಎಸ್ಐಟಿಗೆ ಮತ್ತೆ 3 ಎಸಿಪಿ ಸೇರಿ 19 ಸಿಬ್ಬಂದಿ ನೇಮಕ
D. K. Shivakumar ಪೆನ್ಡ್ರೈವ್ನಂತಹ ಚಿಲ್ಲರೆ ಕೆಲಸ ನಾನು ಮಾಡಲ್ಲ
Prajwal Revanna Case ರಾಷ್ಟ್ರೀಯ ಮಹಿಳಾ ಆಯೋಗದಿಂದ ಸುಮೋಟೋ ಕೇಸ್ ದಾಖಲು
Hassan Pen Drive Case; ಕಾರ್ತಿಕ್ ಪೆನ್ಡ್ರೈವ್ ಕೊಟ್ಟಿದ್ದು ನಿಜ: ದೇವರಾಜೇಗೌಡ