Raichur: ಮುಂಗಾರು ಸಾಂಸ್ಕೃತಿಕ ಹಬ್ಬಕ್ಕೆ ಸಚಿವ ಶರಣ ಪ್ರಕಾಶ್ ಪಾಟೀಲ್ ಚಾಲನೆ


Team Udayavani, Jun 21, 2024, 4:25 PM IST

Raichur: ಮುಂಗಾರು ಸಾಂಸ್ಕೃತಿಕ ಹಬ್ಬಕ್ಕೆ ಸಚಿವ ಚಾಲನೆ

ರಾಯಚೂರು: ನಗರದ ರಾಜೇಂದ್ರ ಗಂಜ್ ಆವರಣದಲ್ಲಿ ಮುನ್ನೂರು ಕಾಪು ಸಮಾಜದಿಂದ ಆಯೋಜಿಸಿರುವ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬಕ್ಕೆ ವೈದ್ಯಕೀಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಚಾಲನೆ ನೀಡಿದರು.

ಮೊದಲ ದಿನದ ಎತ್ತುಗಳಿಂದ ಒಂದೂವರೆ ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮುಂಗಾರು ಹಬ್ಬವನ್ನು ಅತ್ಯಂತ ಅದ್ದೂರಿಯಾಗಿ ಆಚರಿಸುವ ಮೂಲಕ ರಾಜ್ಯದಲ್ಲಿ ಗಮನ ಸೆಳೆದ ಮುನ್ನೂರು ಕಾಪು ಸಮಾಜದ ಕಾರ್ಯ ಶ್ಲಾಘನೀಯ. ಈ ಹಬ್ಬ ರಾಜ್ಯದಲ್ಲಿ ಮಾದರಿಯಾಗಿದೆ. ಭಾರತ ಕೃಷಿ ಪ್ರಧಾನ ದೇಶ. ಮುನ್ನೂರು ಕಾಪು ಸಮಾಜ ಕಳೆದ 24 ವರ್ಷಗಳಿಂದ ಈ ಹಬ್ಬವನ್ನು ಆಯೋಜಿಸುತ್ತಿರುವುದು ಸಂತೋಷದ ಸಂಗತಿ ಎಂದರು.

ಶಾಸಕ ಶಿವರಾಜ ಪಾಟೀಲ್ ಮಾತನಾಡಿ, ಮುನ್ನೂರು ಕಾಪು ಯಾರ ನೆರವು ಪಡೆಯದೆ ಕಳೆದ 24 ವರ್ಷದದಿಂದ ಅತ್ಯಂತ ಅದ್ದೂರಿಯಾಗಿ ಈ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದೆ. ಈ ರೀತಿ ಹಬ್ಬಗಳನ್ನು ಬೇರೆ ಯಾವ ಜಿಲ್ಲೆಗಳಲ್ಲಿ ಕೂಡ ಜರುಗುವುದಿಲ್ಲ. ಸರ್ಕಾರದಿಂದ ಒಂದು ರೂ. ಕೂಡ ಪಡೆಯದೆ ಕೇವಲ ಸಮಾಜದಿಂದ ಇಷ್ಟೊಂದು ಅದ್ದೂರಿಯಾಗಿ ಮಾಡುತ್ತಿರುವುದು ಸಾಮಾನ್ಯದ ವಿಷಯವಲ್ಲ ಎಂದರು.

ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಮಾತನಾಡಿ, ಈ ಹಬ್ಬವನ್ನು ಸರ್ಕಾರದಿಂದ ಆಯೋಜಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಒತ್ತಾಯಿಸಿದರು. ಬಿಚ್ಚಾಲಿಯ ಶ್ರೀ ವೀರಭದ್ರ ಶಿವಾಚಾರ್ಯರು, ಸೋಮವಾರಪೇಟೆ ಹಿರೇಮಠದ ಶ್ರೀ ಅಭಿನವ ರಾಚೋಟಿ ವೀರ ಶಿವಾಚಾರ್ಯರು, ಸುಲ್ತಾನಪುರದ ಶ್ರೀ ಶಂಭು ಸೋಮನಾಥ ಶಿವಾಚಾರ್ಯರು, ಎಂಎಲ್ ಸಿ ಎ.ವಸಂತಕುಮಾರ, ಮುಖಂಡರಾದ ಎ.ಪಾಪಾರೆಡ್ಡಿ, ಬೆಲ್ಲಂ ನರಸರೆಡ್ಡಿ, ಕಾಂಗ್ರೆಸ್‌  ಜಿಲ್ಲಾಧ್ಯಕ್ಷ ಬಸವರಾಜ ಪಾಟೀಲ್ ಇಟಗಿ ಸೇರಿ ಸಾವಿರಾರು ಜನ ಪಾಲ್ಗೊಂಡಿದ್ದರು.

Ad

ಟಾಪ್ ನ್ಯೂಸ್

1-aa-des

Mangaluru: ಬ್ರಾಸ್ಲೈಟ್ ಮರಳಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

1-desss

ಹೊಸನಗರ; ಮಳೆ ರಜೆ ಕುರಿತು ನಕಲಿ‌ ಸರ್ಕಾರಿ ಆದೇಶ: ಪೊಲೀಸರಿಗೆ ದೂರು

SOMANNA 2

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸ*ತ್ತು ಹೋಗಿದೆ: ಸಚಿವ ಸೋಮಣ್ಣ ವಾಗ್ದಾಳಿ

fadnavis

Maharashtra; ಧಾರ್ಮಿಕ ಸ್ಥಳಗಳಿಂದ 3,367 ಧ್ವನಿವರ್ಧಕಗಳ ತೆರವು : ಸಿಎಂ ಫಡ್ನವಿಸ್

ಎಲ್‌ಐಸಿಯ ಮತ್ತಷ್ಟು ಷೇರುಗಳ ಮಾರಾಟಕ್ಕೆ ಮುಂದಾದ ಕೇಂದ್ರ?

ಎಲ್‌ಐಸಿಯ ಮತ್ತಷ್ಟು ಷೇರುಗಳ ಮಾರಾಟಕ್ಕೆ ಮುಂದಾದ ಕೇಂದ್ರ?

ತಿರುಪತಿ ದೇಗುಲದ 1000 ಹಿಂದೂಯೇತರ ಸಿಬಂದಿ ಕೆಲಸ: ಕೇಂದ್ರ ಸಚಿವ

ತಿರುಪತಿ ದೇಗುಲದಲ್ಲಿ 1000 ಹಿಂದೂಯೇತರ ಸಿಬಂದಿಗಳಿಂದ ಕೆಲಸ: ಬಂಡಿ ಸಂಜಯ್ ಆರೋಪ

ಬಿಹಾರ ಚುನಾವಣೆಯ ಹೈಜಾಕ್‌ಗೆ ಬಿಜೆಪಿ ಪ್ರಯತ್ನ: ರಾಹುಲ್‌ ಗಾಂಧಿ

ಬಿಹಾರ ಚುನಾವಣೆಯ ಹೈಜಾಕ್‌ಗೆ ಬಿಜೆಪಿ ಪ್ರಯತ್ನ: ರಾಹುಲ್‌ ಗಾಂಧಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15

Raichur: ‘ಶ್ವಾನ ಪಡೆ’ ದಾಳಿಗೆ ರಾಯಚೂರು ಜಿಲ್ಲಾಡಳಿತ ತತ್ತರ!

v

Raichur: ಜೆಸ್ಕಾಂ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ ಬಂಧನ

Raichur: ರಿಮ್ಸ್‌ ನಲ್ಲಿ ಮಕ್ಕಳ ಕಳ್ಳತನ ಆರೋಪ; ಮಂಗಳಮುಖಿಯ ವಿಚಾರಣೆ

Raichur: ರಿಮ್ಸ್‌ ನಲ್ಲಿ ಮಕ್ಕಳ ಕಳ್ಳತನ ಆರೋಪ; ಮಂಗಳಮುಖಿಯ ವಿಚಾರಣೆ

Guru Purnima; ಮಂತ್ರಾಲಯದ ರಾಯರ ಮಠಕ್ಕೆ ಹರಿದು ಬಂದ ಭಕ್ತಸಾಗರ

Guru Purnima; ಮಂತ್ರಾಲಯದ ರಾಯರ ಮಠಕ್ಕೆ ಹರಿದು ಬಂದ ಭಕ್ತಸಾಗರ

RCR–Hanuma

ಮೊಹರಂ ಆಚರಣೆ ವೇಳೆ ಕೆಂಡದ ಕುಣಿಗೆ ಬಿದ್ದಿದ್ದ ಗಾಯಾಳು ಸಾವು

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

1-aa-des

Mangaluru: ಬ್ರಾಸ್ಲೈಟ್ ಮರಳಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

1-desss

ಹೊಸನಗರ; ಮಳೆ ರಜೆ ಕುರಿತು ನಕಲಿ‌ ಸರ್ಕಾರಿ ಆದೇಶ: ಪೊಲೀಸರಿಗೆ ದೂರು

POLICE-5

Brahmavar: ಮದ್ಯ ಅಕ್ರಮ ಮಾರಾಟ; ಪ್ರಕರಣ ದಾಖಲು

1

Hiriydaka: ಆನ್‌ಲೈನ್‌ ವಂಚನೆ; 3.60 ಲಕ್ಷ ರೂ. ಕಳೆದುಕೊಂಡ ಯುವತಿ

SOMANNA 2

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸ*ತ್ತು ಹೋಗಿದೆ: ಸಚಿವ ಸೋಮಣ್ಣ ವಾಗ್ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.