ಗ್ರಾಪಂ ಸಮಸ್ಯೆ ಅಲ್ಲಿಯೇ ಬಗೆಹರಿಸಿ
Team Udayavani, Jan 26, 2022, 5:34 PM IST
ಲಿಂಗಸುಗೂರು: ಗ್ರಾಮಗಳಲ್ಲಿನ ಸಮಸ್ಯೆಗಳನ್ನು ಗ್ರಾ.ಪಂ ಮಟ್ಟದಲ್ಲಿ ಪರಿಹರಿಸಬೇಕು. ಗ್ರಾಮೀಣ ಭಾಗದ ಜನರನ್ನು ತಾಲೂಕು ಕಚೇರಿಗೆ ಅಲೆದಾಡುವಂತೆ ಮಾಡಬೇಡಿ ಎಂದು ವಿಧಾನ ಪರಿಷತ್ ಸದಸ್ಯ ಶರಣಗೌಡ ಬಯ್ನಾಪುರ ಪಿಡಿಒಗಳಿಗೆ ಸೂಚಿಸಿದರು.
ತಾಪಂ ಸಭಾಂಗಣದಲ್ಲಿ ನರೇಗಾ ಕಾಮಗಾರಿಗಳ ಪ್ರಗತಿ ಪರಿಶೀಲನೆಗಾಗಿ ಮಂಗಳವಾರ ನಡೆದ ಪಿಡಿಒಗಳ ಸಭೆಯಲ್ಲಿ ಅವರು ಮಾತನಾಡಿದರು.
ನರೇಗಾದಡಿ ಕೃಷಿ ಹೊಂಡ, ರೈತರ ಹೊಲಗಳಿಗೆ ಬದು ನಿರ್ಮಾಣ ಸೇರಿದಂತೆ ರೈತರು ಹಾಗೂ ಕೃಷಿಗೆ ಹೆಚ್ಚು ಅನುಕೂಲವಾಗುವ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಗ್ರಾಪಂಯಲ್ಲಿನ ಸಮಸ್ಯೆ ಅಲ್ಲಿಯೇ ಪರಿಹರಿಸಬೇಕು. ಅದನ್ನು ತಾಲೂಕು ಕಚೇರಿವರೆಗೆ ಅಲೆದಾಡುವಂತೆ ಮಾಡಬೇಡಿ, ಗ್ರಾಮೀಣ ಜನರಿಗೆ ತೊಂದರೆಯಾಗದಂತೆ ಹೆಚ್ಚಿನ ಕಾಳಜಿ ವಹಿಸಬೇಕು. ಕೊರೊನಾ ಸೊಂಕು ವ್ಯಾಪಕವಾಗಿ ಹರಡುತ್ತಿದ್ದು, ಈ ಬಗ್ಗೆ ಪಿಡಿಒಗಳು ಹೆಚ್ಚಿನ ಕಾಳಜಿ ವಹಿಸಿ, ಔಷಧಿ ಸಿಂಪಡಿಸಿ ಮುನ್ನೆಚ್ಚರಿಕೆ ವಹಿಸಬೇಕು. ಈ ಬಗ್ಗೆ ನಿರ್ಲಕ್ಷ್ಯ ಬೇಡ ಎಂದರು.
ಈ ವೇಳೆ ಶಾಸಕ ಡಿ.ಎಸ್. ಹೂಲಗೇರಿ, ತಾಪಂ ಇಒ ಲಕ್ಷ್ಮೀದೇವಿ, ನರೇಗಾ ಎಡಿ ಸೋಮನಗೌಡ ಲೆಕ್ಕಿಹಾಳ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ರಾಹುಲ್ ಬಾಬಾ ನಿಮ್ಮ ಇಟಲಿ ಕನ್ನಡಕ ತೆಗೆಯಿರಿ: ಅಮಿತ್ ಶಾ ಟಾಂಗ್
ತೆರಿಗೆ ಇಳಿಕೆಗೆ ಕೇಂದ್ರದ ಸಮರ್ಥನೆ: ಮಹಾರಾಷ್ಟ್ರ, ಒಡಿಶಾದಿಂದಲೂ ವ್ಯಾಟ್ ಇಳಿಕೆ
ಚುನಾವಣೆಗಾಗಿ ಕಾಂಗ್ರೆಸ್ ವಿವಾದ ಸೃಷ್ಟಿ: ಹರಿಕೃಷ್ಣ ಬಂಟ್ವಾಳ್
ನಿಬಿಡ ಶುಭ ಸಮಾರಂಭಗಳು: ಮೆಲ್ಕಾರ್-ಕಲ್ಲಡ್ಕ ಟ್ರಾಫಿಕ್ ಜಾಮ್
ರಬಕವಿ-ಬನಹಟ್ಟಿ ಪ್ರಾಥಮಿಕ ಶಾಲೆ: ಹೆಸರಿಗೆ ಐದು ಕೊಠಡಿ, ಉಪಯೋಗಕ್ಕೆ ಒಂದೇ