Udayavni Special

ಸ್ಟ್ರಾಂಗ್‌ ರೂಂ ಸೇರಿದ ಮತಯಂತ್ರ-ಭದ್ರತೆ

ಬಾಬು ಅಡ್ಡಂಕಿ ಜತೆ ಅನೇಕ ಅಧಿಕಾರಿಗಳು ವಿವಿಧ ಪಕ್ಷಗಳ ಮುಖಂಡರು ಭೇಟಿ ನೀಡಿ ಪರಿಶೀಲಿಸಿದರು.

Team Udayavani, Apr 19, 2021, 6:48 PM IST

Poll

ರಾಯಚೂರು: ಮಸ್ಕಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಬಳಿಕ ಎಲ್ಲ ಮತಯಂತ್ರಗಳನ್ನು ನಗರದ ಎಸ್‌ಆರ್‌ಪಿಎಸ್‌ ಕಾಲೇಜಿನಲ್ಲಿ ಸ್ಥಾಪಿಸಿದ ಸ್ಟ್ರಾಂಗ್‌ ರೂಂನಲ್ಲಿರಿಸಿ ಸೀಲ್‌ ಹಾಕಲಾಯಿತು. ಮೂರು ಹಂತದ ಭದ್ರತೆ ಜತೆಗೆ ನಿರಂತರ 24/7 ಸಿಸಿ ಕ್ಯಾಮರಾ ಕಣ್ಗಾವಲು ಒದಗಿಸಲಾಗಿದೆ.

305 ಮತಗಟ್ಟೆಗಳಿಂದ ಮತದಾನ ಕಾರ್ಯಕ್ಕೆ ನಿಯೋಜಿಸಿದ್ದ ಸಿಬ್ಬಂದಿ, ಶನಿವಾರ ರಾತ್ರಿ ವೇಳೆಗೆ ಹಿಂದಿರುಗಿದರು. ಮಸ್ಕಿಯ ದೇವನಾಂಪ್ರಿಯ ಅಶೋಕ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಡಿ ಮಸ್ಟರಿಂಗ್‌ ಕಾರ್ಯ ಕೈಗೊಳ್ಳಲಾಯಿತು. ಅದೇ ಕಾಲೇಜಿನಲ್ಲಿ ಸಿದ್ಧಪಡಿಸಿದ್ದ ಸ್ಟ್ರಾಂಗ್‌ ರೂಂನಲ್ಲಿ ಮತಪೆಟ್ಟಿಗಳನ್ನು ಬಿಗಿ ಭದ್ರತೆಯ ನಡುವೆ ಇರಿಸಲಾಗಿತ್ತು.

ನಂತರ ಮತ ಎಣಿಕೆ ನಡೆಯಲಿರುವ ರಾಯಚೂರಿನ ಎಸ್‌ಆರ್‌ಪಿಎಸ್‌ ಪದವಿ ಪೂರ್ವ ಕಾಲೇಜಿಗೆ ಶನಿವಾರ ರಾತ್ರಿಯೇ ಬಿಗಿ ಬಂದೋಬಸ್ತ್ ನಡುವೆ ಮತಯಂತ್ರಗಳನ್ನು ತಂದು ಇರಿಸಲಾಯಿತು. ರವಿವಾರ ಬೆಳಗ್ಗೆ ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ  ಜಿಲ್ಲಾಧಿಕಾರಿ ಆರ್‌.ವೆಂಕಟೇಶ ಕುಮಾರ್‌, ಚುನಾವಣಾ ವೀಕ್ಷಕರಾದ ಶ್ರೀಧರ ಬಾಬು ಅಡ್ಡಂಕಿ ಜತೆ ಅನೇಕ ಅಧಿಕಾರಿಗಳು ವಿವಿಧ ಪಕ್ಷಗಳ ಮುಖಂಡರು ಭೇಟಿ ನೀಡಿ ಪರಿಶೀಲಿಸಿದರು.

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಆರ್‌.ವೆಂಕಟೇಶ ಕುಮಾರ್‌, ಮತದಾನ ಮುಗಿದ ಬಳಿಕ 305 ಮತಗಟ್ಟೆಗಳಲ್ಲಿನ ಇವಿಎಂ ಯಂತ್ರಗಳನ್ನು ಹಾಗೂ ಕಾನೂನು ಬದ್ದ ಲಕೋಟೆಗಳನ್ನು ಎಸ್‌ಆರ್‌ಪಿಎಸ್‌ ಪದವಿ ಪೂರ್ವ ಕಾಲೇಜಿನಲ್ಲಿ ನಿರ್ಮಿಸಿರುವ ಸ್ಟ್ರಾಂಗ್‌ ರೂಂಗೆ ರಾತ್ರಿಯೇ ತರಲಾಗಿದೆ. ಚುನಾವಣಾ ವೀಕ್ಷಕರು, ಅಭ್ಯರ್ಥಿಗಳು, ಏಜೆಂಟರು, ಚುನಾವಣಾಧಿಕಾರಿಯ ಸಮ್ಮುಖದಲ್ಲಿ ಸ್ಟ್ರಾಂಗ್‌ ರೂಂನಲ್ಲಿ ಮಾಡಿಕೊಳ್ಳಲಾದ ಎಲ್ಲ ಸಿದ್ಧತೆಗಳನ್ನು ತೋರಿಸಲಾಗಿದೆ, ಮತಯಂತ್ರಗಳ ಕಾವಲಿಗೆ ಬಿಗಿ ಭದ್ರತೆ ಅಂದರೆ ಮೂರು ರೀತಿಯ ಭದ್ರತೆ ಒದಗಿಸಲಾಗಿದೆ ಎಂದರು.

ಒಳಗೆ ಕೇಂದ್ರೀಯ ಮೀಸಲು ಪಡೆ, ನಂತರ ಕೆಎಸ್‌ಆರ್‌ಪಿ ಹಾಗೂ ಹೊರಗೆ ಪೊಲೀಸರು ಸೇರಿದಂತೆ ಮೂರು ವಲಯದಲ್ಲಿ ಭದ್ರತೆ ಒದಗಿಸಲಾಗಿದೆ. ಮತಯಂತ್ರಗಳನ್ನು ಸುರಕ್ಷಿತವಾಗಿವೆ. 24 ಗಂಟೆ ವೀಡಿಯೋ ರೆಕಾರ್ಡಿಂಗ್‌ ಮಾಡಲಾಗುತ್ತಿದೆ. ಸ್ಥಳದಲ್ಲಿಯೇ ಅಗ್ನಿ ಶಾಮಕ ಪಡೆಯನ್ನು ಇರಿಸಲಾಗಿದೆ. ಸುರಕ್ಷತಾ ದೃಷ್ಟಿಯಿಂದ ಕೈಗೊಳ್ಳಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಎಸ್‌ಪಿ ಪ್ರಕಾಶ್‌ ನಿಕ್ಕಂ, ಎಡಿಸಿ ದುರಗೇಶ್‌, ಸಹಾಯಕ ಆಯುಕ್ತರಾದ ರಾಜಶೇಖರ ಡಂಬಳ, ಸಂತೋಷ್‌ ಕಾಮಗೌಡ, ತಹಶೀಲ್ದಾರ್‌ ಡಾ| ಹಂಪಣ್ಣ ಸಜ್ಜನ್‌ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಇದ್ದರು.

ಟಾಪ್ ನ್ಯೂಸ್

hgfvbhgff

ಕೋವಿಡ್ ಲಸಿಕೆ ವಿತರಣೆಗೆ ಕಾಂಗ್ರೆಸ್ ಪಕ್ಷ 100 ಕೋಟಿ ಯೋಜನೆ ರೂಪಿಸಿದೆ : ಡಿಕೆಶಿ

ghgfdghnbvd

ಬಸವ ಜಯಂತಿ : ಬಸವಣ್ಣ ಅವರ ಪುತ್ಥಳಿಗೆ ಸಿಎಂ ಮಾಲಾರ್ಪಣೆ

ಕೋವಿಡ್ ಸೋಂಕು ನಡುವೆ ಉತ್ತರಪ್ರದೇಶದಲ್ಲಿ 73 ಬ್ಲ್ಯಾಕ್ ಫಂಗಸ್ ಪ್ರಕರಣ ಪತ್ತೆ

ಕೋವಿಡ್ ಸೋಂಕು ನಡುವೆ ಉತ್ತರಪ್ರದೇಶದಲ್ಲಿ 73 ಬ್ಲ್ಯಾಕ್ ಫಂಗಸ್ ಪ್ರಕರಣ ಪತ್ತೆ

sgrdsdaSA

ಸುಮ್ ಸುಮ್ನೆ ಕೋವಿಡ್ ಚೆಕ್ ಮಾಡಿದ್ರೆ ಸರಿ ಇರಲ್ಲ, ನನಗೆ ಡಿಸಿ ಗೊತ್ತು: ವ್ಯಕ್ತಿಯಿಂದ ರಂಪಾಟ

madras-high-court-warns-against-religious-intolerance-after-muslims-object-to-conduct-of-hindu-festival

ಹಿಂದೂಗಳ ಹಬ್ಬ, ಮೆರವಣಿಗೆ ನಿಷೇಧಿಸಿ;ಮುಸ್ಲಿಮರ ಅರ್ಜಿಯನ್ನು ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್

ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ ಕೋವಿಡ್ ಪ್ರಕರಣ ಅಲ್ಪ ಪ್ರಮಾಣದ ಇಳಿಕೆ, 4000 ಸಾವು

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್ ಪ್ರಕರಣ ಅಲ್ಪ ಪ್ರಮಾಣದ ಇಳಿಕೆ, 4000 ಸಾವು

Teenage Cell Phone Addiction: Are You Worried About Your Child?

ನಿಮ್ಮ ಮಕ್ಕಳು ಫೋನ್ ಚಟಕ್ಕೆ ಒಳಗಾಗಿದ್ದಾರೆ ಎಂದು ಹೇಗೆ ತಿಳಿಯಬಹುದು..? ಇಲ್ಲಿದೆ ಮಾಹಿತಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

fghjhgfghjh

ವ್ಯಾಪಾರ ವಲಯಕ್ಕೆ ಕರ್ಫ್ಯೂ ಕಾರ್ಮೋಡ!

jjjjjjjjjjjjjjjjjjjjjjjjjjjjjjjjjj

ಆಂಬ್ಯುಲೆನ್ಸ್ ಸೇವೆ ನೀಡಿದ ಖಂಡ್ರೆ

rrrrrrrrrrrrrrrrrrrrrrrrrrrrrrrrrrrrrrrrrrr

ಬೇಕಾಬಿಟ್ಟಿ ವ್ಯಾಪಾರಕ್ಕೆ ಪೊಲೀಸರ ಕಡಿವಾಣ

gfdfghgf

ಸ್ಮೈಲ್ ಪ್ಲೀಸ್ ಎನ್ನುವವರ ನಗು ಕಸಿದ ಕೋವಿಡ್!

jhgfdfgh

ಕಾಂಗ್ರೆಸ್‌ ನಿಂದ ಸೋಂಕಿತರಿಗೆ ಪೌಷ್ಟಿ ಕ ಆಹಾರ ವಿತರಣೆ

MUST WATCH

udayavani youtube

ರಾಬರ್ಟ್ ಚಿತ್ರ Tonic ಆಯ್ತು

udayavani youtube

ತನ್ನ ಮದುವೆಗೆ ತಾನೇ ಬ್ಯಾಂಡ್ ಬಾರಿಸಿದ ಮದುಮಗ

udayavani youtube

ಸರ್ವಾಧಿಕಾರಿ ಧೋರಣೆಗೆ ಆಕ್ರೋಶ : ಉನ್ನಾವ್ನಲ್ಲಿ ವೈದ್ಯರಿಂದ ಸಾಮೂಹಿಕ ರಾಜೀನಾಮೆ

udayavani youtube

ಬೆಂಗಳೂರು: ಮನೆ ಬಾಗಿಲಿಗೆ ಬರಲಿದೆ ಆಕ್ಸಿಜನ್‌ ಬಸ್‌

udayavani youtube

18 ರಿಂದ 44 ವರ್ಷ ವಯೋಮಾನದವರಿಗೆ ಸದ್ಯಕ್ಕಿಲ್ಲ ಲಸಿಕೆ

ಹೊಸ ಸೇರ್ಪಡೆ

hgfvbhgff

ಕೋವಿಡ್ ಲಸಿಕೆ ವಿತರಣೆಗೆ ಕಾಂಗ್ರೆಸ್ ಪಕ್ಷ 100 ಕೋಟಿ ಯೋಜನೆ ರೂಪಿಸಿದೆ : ಡಿಕೆಶಿ

ಪ್ರಧಾನಮಂತ್ರಿ ಕಿಸಾನ್ ಯೋಜನೆ 8ನೇ ಕಂತು: 20,000 ಸಾವಿರ ಕೋಟಿ ಬಿಡುಗಡೆ

ಪ್ರಧಾನಮಂತ್ರಿ ಕಿಸಾನ್ ಯೋಜನೆ 8ನೇ ಕಂತು: 20,000 ಸಾವಿರ ಕೋಟಿ ಬಿಡುಗಡೆ

jhgfnhgf

ಡಿ ಆರ್ ಡಿ ಒ ನಿರ್ದೇಶಕರ ಕಾರ್ಯಾಲಯಕ್ಕೆ ಸುಧಾಕರ್ ಭೇಟಿ-ಪರಿಶೀಲನೆ

ghgfdghnbvd

ಬಸವ ಜಯಂತಿ : ಬಸವಣ್ಣ ಅವರ ಪುತ್ಥಳಿಗೆ ಸಿಎಂ ಮಾಲಾರ್ಪಣೆ

ಕೋವಿಡ್ ಸೋಂಕು ನಡುವೆ ಉತ್ತರಪ್ರದೇಶದಲ್ಲಿ 73 ಬ್ಲ್ಯಾಕ್ ಫಂಗಸ್ ಪ್ರಕರಣ ಪತ್ತೆ

ಕೋವಿಡ್ ಸೋಂಕು ನಡುವೆ ಉತ್ತರಪ್ರದೇಶದಲ್ಲಿ 73 ಬ್ಲ್ಯಾಕ್ ಫಂಗಸ್ ಪ್ರಕರಣ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.