
ಪಂಚರತ್ನ ಯಾತ್ರೆಯಲ್ಲಿ ತೆಲಂಗಾಣ ಮಾದರಿ ಜಪ
ತೆಲಂಗಾಣ ಮಾದರಿ ಯೋಜನೆ ಜಾರಿ ವಾಗ್ಧಾನ; ಬಿಆರ್‌ಎಸ್ ಕಾಪಿ ಮಾಡಲು ಹೊರಟ ಎಚಿxಕೆ
Team Udayavani, Jan 30, 2023, 6:30 AM IST

ರಾಯಚೂರು: ಜೆಡಿಎಸ್‌ಗೆ ಸಂಪೂರ್ಣ ಬಹುಮತ ಸಿಗಬೇಕು ಎನ್ನುವ ಮಹತ್ವಾಕಾಂಕ್ಷೆಯೊಂದಿಗೆ ರಾಜ್ಯ ದಲ್ಲಿ ಪಂಚರತ್ನ ಯಾತ್ರೆ ನಡೆಸುತ್ತಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೋದಲ್ಲೆಲ್ಲ ತೆಲಂಗಾಣದ ಯೋಜನೆಗಳನ್ನೇ ಜಪಿಸುತ್ತಿದ್ದಾರೆ.
ತೆಲಂಗಾಣದ ಮಾದರಿಯಲ್ಲಿ ರಾಜ್ಯದಲ್ಲೂ ಯೋಜನೆಗಳನ್ನು ಜಾರಿ ಮಾಡಲಾಗುವುದು. ಪ್ರಾದೇಶಿಕ ಪಕ್ಷಕ್ಕೆ ಅ ಧಿಕಾರ ಕೊಟ್ಟು ನೋಡಿ ಕೇಂದ್ರ ಸರಕಾರದಿಂದ ಮುಕ್ತಿ ಕೊಡಿಸುವೆ ಎಂಬ ಮಾತುಗಳ ನ್ನಾಡುತ್ತಿದ್ದಾರೆ. ಕಳೆದ ಕೆಲವು ವರ್ಷಗಳ ಹಿಂದೆ ಪ್ರತ್ಯೇಕ ರಾಜ್ಯದೊಂದಿಗೆ ಆಡಳಿತಕ್ಕೆ ಬಂದ ತೆಲಂಗಾಣ ರಾಷ್ಟ್ರ ಸಮಿತಿ, ಈಗ ಭಾರತ ರಾಷ್ಟ್ರ ಸಮಿತಿಯಾಗಿ ಭಡ್ತಿ ಪಡೆದಿದೆ. ಪ್ರಾದೇಶಿಕ ಪಕ್ಷವಾಗಿದ್ದ ಟಿಆರ್‌ಎಸ್ ತೆಲಂಗಾಣದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ನವೋತ್ಸಾಹದಲ್ಲಿ ರಾಜ್ಯದ ಜನರಿಗೆ ಕೆಲವೊಂದು ಜನಪ್ರಿಯ ಯೋಜನೆ ಜಾರಿ ಮಾಡಿತು. ಅದೇ ಮಾದರಿಯ ಯೋಜನೆಗಳನ್ನು ಇಲ್ಲಿಯೂ ಜಾರಿ ಮಾಡುವೆ ಎನ್ನುತ್ತಿದ್ದಾರೆ ಎಚ್‌ಡಿಕೆ.
ಕೆಲ ತಿಂಗಳ ಹಿಂದೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರನ್ನು ಭೇಟಿ ಮಾಡಿದ್ದ ಎಚ್‌ಡಿಕೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳ ಒಗ್ಗೂಡುವಿಕೆ ಬಗ್ಗೆ ಚರ್ಚಿಸಿದ್ದರು ಎನ್ನಲಾಗಿತ್ತು. ಆಗ ಅಲ್ಲಿನ ಯೋಜನೆಗಳ ಬಗ್ಗೆ ತಿಳಿದುಕೊಂಡು ಈಗ ಅಂಥದ್ದೇ ಯೋಜನೆಗಳು ನಮ್ಮಲ್ಲಿಯೂ ಜಾರಿ ಮಾಡುವೆ ಎನ್ನುವ ಮೂಲಕ ತೆಲಂಗಾಣ ಮಾದರಿಗೆ ಮಾರು ಹೋಗಿದ್ದಾರೆ. ಹೋದಲ್ಲೆಲ್ಲ ಅವರು ತೆಲಂಗಾಣದ ಬಗ್ಗೆ ಗುಣಗಾನ ಮಾಡುತ್ತಿದ್ದಾರೆ.
ಜನಪ್ರಿಯ ಯೋಜನೆಗಳ ಆಕರ್ಷಣೆ: ತೆಲಂಗಾಣದಲ್ಲಿ ಈಗ “ಮಿಶನ್ ಭಗೀರಥ’ ಎನ್ನುವ ಯೋಜನೆ ಜಾರಿ ಮಾಡಿದ್ದು, ಮನೆ-ಮನೆಗೂ ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತಿದೆ. ರೈತರಿಗೆ ಪ್ರತೀ ಎಕ್ರೆಗೆ 10 ಸಾವಿರದಂತೆ ಎಷ್ಟು ಎಕ್ರೆ ಇದ್ದರೂ ಅಷ್ಟು ಹಣ ಹಾಕಲಾ ಗುತ್ತಿದೆ. ಜತೆಗೆ ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಜನೆ ಮಾಡುತ್ತಿದ್ದು, ದಲಿತ ಯುವಕರಿಗೆ ಆರ್ಥಿಕ ಸಹಾಯ ಧನ ನೀಡಲಾಗುತ್ತಿದೆ. ಈ ಎಲ್ಲ ಯೋಜನೆಗಳ ಬಗ್ಗೆ ವಿವರಿಸಿದ ಎಚ್‌ಡಿಕೆ ಜೆಡಿಎಸ್‌ಗೆ ಪೂರ್ಣ ಪ್ರಮಾಣದಲ್ಲಿ ಅಧಿ ಕಾರ ನೀಡಿದ್ದೇ ಆದರೆ ತೆಲಂಗಾಣದ “ಮಿಶನ್ ಭಗೀರಥ’ ರೀತಿಯಲ್ಲೇ ಯೋಜನೆ ಜಾರಿ ಮಾಡಲಾಗು ವುದು. ಎಲ್ಲ ನೀರಾವರಿ ಯೋಜನೆ ಪೂರ್ಣಗೊಳಿಸಲಾ ಗುವುದು. ರೈತರಿಗೆ ಪ್ರತಿ ಎಕರೆಗೆ 10 ಸಾವಿರದಂತೆ ಒಂದು ಲಕ್ಷ ರೂ.ವರೆಗೆ ಹಣ ಹಾಕಲಾಗುವುದು. ವೃದ್ಧರಿಗೆ 5000 ಸಾವಿರ ರೂ., 2500 ರೂ. ವಿಧವಾ ವೇತನ ಜಾರಿ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಗ್ರಾಮೀಣ ಭಾಗದಲ್ಲಿ ಹೈಟೆಕ್ ಕನ್ನಡ ಇಂಗ್ಲಿಷ್ ಮಾಧ್ಯಮ ಶಾಲೆಗಳು, ಪಂಚಾಯತ್‌ಗೊಂದು ಆಸ್ಪತ್ರೆ, ಗ್ರಾಮದಲ್ಲೇ ಯುವಕರಿಗೆ ಉದ್ಯೋಗ ನೀಡುವುದಾಗಿ ಘೋಷಿಸುತ್ತಿದ್ದಾರೆ. ಜತೆಗೆ ಎಲ್ಲದಕ್ಕೂ ಕೇಂದ್ರ ಸರಕಾರದ ಮುಂದೆ ನಡುಬಗ್ಗಿಸಿ ನಿಲ್ಲುವುದನ್ನು ತಪ್ಪಿಸುವೆ. ಏನು ಬೇಕು ಕೇಳಿ ನಮ್ಮ ಸರಕಾರವೇ ನಿಮಗೆ ಮಾಡಿಕೊಡುತ್ತದೆ ಎಂದು ಸ್ವಾವಲಂಬನೆ ಮಂತ್ರ ಜಪಿಸುತ್ತಿದ್ದಾರೆ.
-ಸಿದ್ಧಯ್ಯಸ್ವಾಮಿ ಕುಕನೂರು
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

ಮೋದಿಯನ್ನೇ ಟೀಕಿಸಿದ ರಾಯಚೂರು ನಗರ ಬಿಜೆಪಿ ಶಾಸಕ: ಆಡಿಯೊ ವೈರಲ್

ದಕ್ಷಿಣ ಆಗ್ನೇಯ ರೈಲ್ವೆ…ಒಂದು ವರ್ಷದಲ್ಲಿ 1ಕೋಟಿಗೂ ಅಧಿಕ ದಂಡ ವಸೂಲಿ ಮಾಡಿದ ಟಿಕೆಟ್ ಪರೀಕ್ಷಕ

ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿ ಆಯ್ಕೆ: ನಳಿನ್ ಕುಮಾರ್ ಕಟೀಲ್

ಇಬ್ಬರು ಶಾಸಕರ ರಾಜೀನಾಮೆ? ಶಿರಸಿಯತ್ತ ಎಲ್ಲರ ಚಿತ್ತ!

ಮುಂಬೈ-ಚೆನ್ನೈ ಅಲ್ಲ, ಐಪಿಎಲ್ ವಿಜೇತರ ಬಗ್ಗೆ ಭವಿಷ್ಯ ನುಡಿದ ಮೈಕಲ್ ವಾನ್