ನಗರದ 40ನೇ ಉಪಕಾಲುವೆ ರಸ್ತೆ ಕೆಲಸ ಶೀಘ್ರ
Team Udayavani, Jan 24, 2022, 2:28 PM IST
ಸಿಂಧನೂರು: ಬಹುನಿರೀಕ್ಷಿತ ಸಿಂಧನೂರು ನಗರದಲ್ಲಿನ 40ನೇ ಉಪಕಾಲುವೆ ಮಾರ್ಗದ ರಸ್ತೆ ಕಾಮಗಾರಿ ಕೈಗೊಳ್ಳುವುದು ನಿಶ್ಚಿತ. ಈಗಾಗಲೇ 2 ಕೋಟಿ ರೂ. ಟೆಂಡರ್ ಮುಕ್ತಾಯವಾಗಿದ್ದು, ತಾಂತ್ರಿಕ ಕಾರಣಕ್ಕೆ ವಿಳಂಬವಾಗಿದೆ ಎಂದು ಶಾಸಕ ವೆಂಕಟರಾವ್ ನಾಡಗೌಡ ಹೇಳಿದರು.
ನಿರ್ಮಿತಿ ಕೇಂದ್ರದವರಿಗೆ 40ನೇ ಉಪಕಾಲುವೆಯ ಸಿಸಿ ರಸ್ತೆ ಕಾಮಗಾರಿಗೆ 2 ಕೋಟಿ ರೂ. ವೆಚ್ಚದ ಕೆಲಸ ಹಂಚಿಕೆಯಾಗಿದೆ. 1 ಕೋಟಿ ರೂ. ವೆಚ್ಚದ ಕೆಲಸಕ್ಕೆ ಸಂಬಂಧಿಸಿ ತಾಂತ್ರಿಕ ಅಡಚಣೆ ಇದ್ದು, ಅದನ್ನು ಕೂಡ ಸರಿಪಡಿಸಲಾಗುವುದು ಎಂದರು.
ಅವರು ನಗರದ 18ನೇ ವಾರ್ಡ್‌ನಲ್ಲಿ 51 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ನಗರೋತ್ಥಾನ ಯೋಜನೆಯಡಿ ಸಿಂಧನೂರು ನಗರಕ್ಕೆ 30 ಕೋಟಿ ರೂ. ಅನುದಾನ ದೊರಕಿದೆ. ಆಯಾ ವಾರ್ಡಿನ ಸದಸ್ಯರ ನೇತೃತ್ವದಲ್ಲಿ ನಾನು ಮತ್ತು ನಗರಸಭೆ ಅಧ್ಯಕ್ಷರು ಅಗತ್ಯ ಇರುವ ರಸ್ತೆ ಕಾಮಗಾರಿಗಳ ಸರ್ವೇಗೆ ಮುಂದಾಗಿದ್ದೇವೆ. ಈಗಾಗಲೇ ನಗರದಲ್ಲಿ 14-15 ಕೋಟಿ ರೂ. ಅಂದಾಜು ವೆಚ್ಚದ ಕಾಮಗಾರಿಗಳು ಚಾಲ್ತಿಯಲ್ಲಿವೆ. ನಗರತ್ಥೋನ ಯೋಜನೆಯ ಅನುದಾನದಲ್ಲಿ ರಸ್ತೆಗಳನ್ನು ಕೈಗೊಂಡರೆ, ಬಹುತೇಕ ನಗರದಲ್ಲಿ ಶೇ.99ರಷ್ಟು ಕಾಮಗಾರಿ ಪೂರ್ಣಗೊಳ್ಳಲಿವೆ ಎಂದರು.
ಹಲವು ಕಾಮಗಾರಿಗೆ ಚಾಲನೆ
ಶಾಸಕ ವೆಂಕಟರಾವ್ ನಾಡಗೌಡರು ಬಳಿಕ ಹೊಸಳ್ಳಿ ಕ್ಯಾಂಪಿನಲ್ಲಿ 45 ಲಕ್ಷ ರೂ. ಅಂದಾಜು ವೆಚ್ಚದ ಸಿಸಿ ರಸ್ತೆ, ಚರಂಡಿ ಕಾಮಗಾರಿ, ಶ್ರೀಪುರಂಜಂಕ್ಷನ್‌ನಲ್ಲಿ 25 ಲಕ್ಷ ರೂ. ವೆಚ್ಚದ ಕಾಮಗಾರಿ, ಮಲ್ಕಾಪುರದಲ್ಲಿ 30 ಲಕ್ಷ ರೂ. ವೆಚ್ಚದ ಕೆಲಸ, ಹುಡಾ ಗ್ರಾಮದಲ್ಲಿ 40 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಸಿಸಿ ರಸ್ತೆ, ಚರಂಡಿ ಕಾಮಗಾರಿ, ಮುಕ್ಕುಂದಾ ಗ್ರಾಮದಲ್ಲಿ 26.82 ಲಕ್ಷ ರೂ. ಅಂದಾಜು ವೆಚ್ಚದ ಕಾಮಗಾರಿ, ಚನ್ನಳ್ಳಿ ಗ್ರಾಮದಲ್ಲಿ 35 ಲಕ್ಷ ರೂ. ಅಂದಾಜು ವೆಚ್ಚದ ಸಿಸಿ ರಸ್ತೆ ನಿರ್ಮಾಣ ಕೆಲಸಕ್ಕೆ ಚಾಲನೆ ನೀಡಿದರು.
ಗಾಂಧಿನಗರ ವ್ಯಾಪ್ತಿಯ ಹಂಚಿನಾಳ ಕ್ಯಾಂಪಿನಲ್ಲೂ ಇದೇ ವೇಳೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುತ್ತಿರುವುದಾಗಿ ಹೇಳಿದರು. ಜೆಡಿಎಸ್ ಮುಖಂಡರಾದ ಬಿ.ಹರ್ಷ, ಧರ್ಮನಗೌಡ ಮಲ್ಕಾಪುರ, ಶಂಕರಗೌಡ ಎಲೆಕೂಡ್ಲಿಗಿ, ಹೊಸಳ್ಳಿ ಗ್ರಾಪಂ ಅಧ್ಯಕ್ಷ ನಾಗಲಿಂಗಪ್ಪ, ಭಾಷಾ ಟೈಲ್ಸ್ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಟಿವಿಎಸ್ ನಿಂದ ಹೊಸ ಮಾದರಿಯ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಗಳ ಬಿಡುಗಡೆ
ತೈಲ ಸೋರಿಕೆಯಿಂದ ಕಪ್ಪಾದ ಸುಂದರ ಗೋವಾ ಬೀಚ್ : ಓಡಾಡುವುದೇ ಕಷ್ಟಕರ
ಜಾರಿಗೆಬೈಲು ಕಳ್ಳರ ಕೈಚಳಕ : 95 ಸಾವಿರ ಮೌಲ್ಯದ ನಗದು, ಸೊತ್ತು ಕಳವು
ಎಸ್ ಎಸ್ ಎಲ್ ಸಿ ಫಲಿತಾಂಶ; ಏನೇ ಬರಲಿ, ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ: ಸಚಿವ ಸುಧಾಕರ್ ಮನವಿ
ಕಣ್ಣು ಆಪರೇಷನ್ ಮಾಡಿದರೆ ಹಣ ನೀಡುತ್ತೇವೆಂದು ನಂಬಿಸಿ ಮಹಿಳೆಯ 5 ಲಕ್ಷದ ಚಿನ್ನ ದೋಚಿದ ಆಸಾಮಿ