
ಬಿಜೆಪಿ ಸರಕಾರದಲ್ಲಿ ಬಡವರ ಕಡೆಗಣನೆ
Team Udayavani, Jan 24, 2022, 2:33 PM IST

ಸಿಂಧನೂರು: ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರ ಕಾರ್ಮಿಕರಿಗೆ ಆದ್ಯತೆ ನೀಡಿಲ್ಲ. ಕಾಂಗ್ರೆಸ್ ಪಕ್ಷದಿಂದ ಮಾತ್ರ ಹಿಂದುಳಿದವರ ಕಲ್ಯಾಣ ಸಾಧ್ಯ ಎಂದು ಕಾಂಗ್ರೆಸ್ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಉರುಕುಂದಪ್ಪ ಆರೋಪಿಸಿದರು.
ಮಾಜಿ ಶಾಸಕ ಹಂಪನಗೌಡ ಬಾದರ್ಲಿ ನಿವಾಸದಲ್ಲಿ ಕಾರ್ಮಿಕ ಘಟಕಕ್ಕೆ ಜಿಲ್ಲಾಧ್ಯಕ್ಷ ನನ್ನುಸಾಬ್ ಮೇಸ್ತ್ರಿ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಮಿಕರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಸಾಕಷ್ಟು ಶ್ರಮಿಸಿತ್ತು. ಅಂತಹ ಕೆಲಸಗಳು ಇಂದು ನಡೆಯುತ್ತಿಲ್ಲ ಎಂದರು.
ಕಾರ್ಮಿಕ ಘಟಕದ ನೂತನ ಕಾರ್ಯದರ್ಶಿ ಮೋಹನ್ ಕುಮಾರ್, ನಗರ ಘಟಕದ ಅಧ್ಯಕ್ಷ ಮುಕ್ತಾರ್ ಆಹ್ಮದ್, ಗ್ರಾಮೀಣ ಘಟಕದ ಅಧ್ಯಕ್ಷ ವಿವೇಕ್ ಮಂಡಲ್, ನಗರ ಘಟಕದ ಕಾರ್ಯದರ್ಶಿ ಹಾಜಿಸಾಬ್ ಅವರಿಗೆ ನೇಮಕಾತಿ ಪತ್ರ ವಿತರಿಸಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಂಪನಗೌಡ ಬಾದರ್ಲಿ, ನಗರ ಘಟಕದ ಅಧ್ಯಕ್ಷ ಖಾಜಿಮಲಿಕ್, ಪ್ರಧಾನ ಕಾರ್ಯದರ್ಶಿ ಅನಿಲ್‌ಕುಮಾರ್, ಕಾಂಗ್ರೆಸ್ ಮುಖಂಡ ರಾಜುಗೌಡ ಬಾದರ್ಲಿ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Thirthahalli: ಬಾವಿಕೈಸರು ಬಳಿ ಟ್ರಾಕ್ಟರ್ ಪಲ್ಟಿ, ಓರ್ವ ಕಾರ್ಮಿಕ ಮೃತ್ಯು

Kollywood: 4 ಬಾರಿ ರಜಿನಿಕಾಂತ್ ಜೊತೆ ನಟಿಸುವ ಅವಕಾಶ ಬಂದರೂ ತಿರಸ್ಕರಿಸಿದ ಖ್ಯಾತ ನಟಿ ಈಕೆ

Agriculture: ಮನೆಯ ತಾರಸಿನಲ್ಲಿ 200ಕ್ಕೂ ಹೆಚ್ಚು ಬೆಳೆ: ಜೋಸೆಫ್ ಲೋಬೋ ಸಾಧನೆ

CM: 536ನೇ ಶ್ರೀ ಕನಕ ಜಯಂತ್ಯೋತ್ಸವ, ಭಾವೈಕ್ಯತಾ ಸಮಾವೇಶ ಉದ್ಘಾಟಿಸಿದ ಸಿ.ಎಂ. ಸಿದ್ದರಾಮಯ್ಯ

Aircraft: 8 ಮಂದಿಯನ್ನು ಹೊತ್ತ ಅಮೆರಿಕದ ಸೇನಾ ವಿಮಾನ ಜಪಾನ್‌ನ ಯಕುಶಿಮಾ ದ್ವೀಪದ ಬಳಿ ಪತನ