ಈ ಶಾಲೆಗೆ ಬೇಕಿದೆ ಕಾಯಂ ಶಿಕ್ಷಕರು

Team Udayavani, Nov 8, 2021, 6:01 PM IST

30school

ದೇವದುರ್ಗ: ಕೆ.ಇರಬಗೇರಾ ಕ್ಲಸ್ಟರ್‌ ವ್ಯಾಪ್ತಿಯ ಕೋತಿಗುಡ್ಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದೆ.

1ರಿಂದ 7ನೇ ತರಗತಿ 185 ಮಕ್ಕಳು ದಾಖಲಾತಿ ಹೊಂದಿದ್ದು, ಮುಖ್ಯಶಿಕ್ಷಕಿ ಅನಾರೋಗ್ಯ ನಿಮಿತ್ತ ನ.13ರವರೆಗೆ ರಜೆ ತೆರಳಿದ್ದಾರೆ. ಕಾಯಂ ಶಿಕ್ಷಕರ ಕೊರತೆಯಿಂದ ಧರ್ಮನಾಯ್ಕ ತಾಂಡಾ ಶಾಲೆಯಿಂದ ಕೋತಿಗುಡ್ಡ ಶಾಲೆಗೆ ಮಂಜುಳಾ ಎಂಬ ಶಿಕ್ಷಕಿಯನ್ನು ಎರವಲು ಸೇವೆ ನೀಡಲಾಗಿದೆ. ಒಬ್ಬ ಶಿಕ್ಷಕಿ 1ರಿಂದ 7ನೇ ತರಗತಿ 185 ಮಕ್ಕಳಿಗೆ ಪಾಠ ಪ್ರವಚನ ಮಾಡಬೇಕಿದೆ.

ಕೊಠಡಿಗಳ ಸಮಸ್ಯೆಯಿಂದ ಶಾಲಾ ಆವರಣದಲ್ಲಿ ಒಂದೊಂದು ತರಗತಿ ಮಕ್ಕಳಿಗೆ ಬೋಧನೆ ಮಾಡಲಾಗುತ್ತಿದೆ. ಈಗಾಗಲೇ ಒಂದು ಕೋಣೆ ಶಿಥಿಲಗೊಂಡ ಕಾರಣ ಬೀಗ ಜಡಿಯಲಾಗಿದೆ. ಒಂದೂವರೆ ವರ್ಷದ ನಂತರ ಶಾಲೆಗಳು ಆರಂಭವಾದರೂ ಶಿಕ್ಷಕರ ಕೊರತೆಯಿಂದ ಕಲಿಕೆಯಲ್ಲಿ ಮಕ್ಕಳಿಗೆ ಹಿನ್ನಡೆಯಾಗುತ್ತಿದೆ.

ಕೋತಿಗುಡ್ಡ ಸರ್ಕಾರಿ ಶಾಲೆಗೆ ಐದಾರು ಜನ ಶಿಕ್ಷಕರು ಬೇಕಿದೆ. ಒಬ್ಬ ಮುಖ್ಯ ಶಿಕ್ಷಕಿ ಇದ್ದು, ಇನ್ನುಳಿದ ಶಿಕ್ಷಕರ ಕೊರತೆ ಕಾಡುತ್ತಿದೆ. ಕೋವಿಡ್‌ ಹಿನ್ನೆಲೆ ಆನ್‌ ಲೈನ್‌, ವಠಾರ ಸೇರಿದಂತೆ ಮಕ್ಕಳಿಗೆ ಬೋಧಿಸಲಾಗುತ್ತಿತ್ತು. ಆದರೀಗ ಶಾಲೆಗಳು ಆರಂಭವಾಗಿದ್ದು, ಕೊಠಡಿಯಲ್ಲಿ ಕುಳಿತ ಮಕ್ಕಳಿಗೆ ಬೋಧಿಸಲು ಶಿಕ್ಷಕರು ಇಲ್ಲದಂತಾಗಿದೆ.

ಇದನ್ನೂ ಓದಿ: “ಮಹಾತ್ಮರ ಚರಿತಾಮೃತ’ ಗ್ರಂಥ ಲೋಕಾರ್ಪಣೆ

ರಾಜ್ಯ ಸರಕಾರ ಅತಿಥಿ ಶಿಕ್ಷಕರ ನೇಮಕಾತಿ ಬಗ್ಗೆ ಯಾವುದೇ ಚಿಂತನೆ ನಡೆದಿಲ್ಲ. ಕುಡಿವ ನೀರು, ಶೌಚಾಲಯ ಸೇರಿದಂತೆ ಕೊಠಡಿಗಳ ಸಮಸ್ಯೆಯೂ ಎದುರಾಗಿದೆ. ಕೆಲ ಕೋಣೆಗಳು ಶಿಥಿಲಗೊಂಡಿದ್ದು, ಅಂತಹ ಕೋಣೆಯಲ್ಲಿ ಶಿಕ್ಷಕರು ಪಾಠ ಮಾಡಬೇಕಿದೆ. ಅಗತ್ಯ ಮೂಲಸೌಕರ್ಯ ಜತೆ ಶಿಕ್ಷಕರ ಕೊರತೆ ಉಂಟಾಗಿದೆ. ಮಕ್ಕಳಿಗೆ ಬೋಧಿಸಲು ತೊಂದರೆ ಆಗದಂತೆ ಶಿಕ್ಷಕರನ್ನು ಶಾಲೆಗೆ ನಿಯೋಜಿಸಬೇಕೆಂದು ಪಾಲಕರಾದ ದುರುಗಪ್ಪ, ಬಸಲಿಂಗಪ್ಪ ಆಗ್ರಹಿಸಿದ್ದಾರೆ.

ತಾಲೂಕಿನಲ್ಲಿ ಶಿಕ್ಷಕರ ಕೊರತೆ ಇದ್ದು, ಅಗತ್ಯ ಬೇಕಿರುವಂತ ಶಾಲೆಗಳಿಗೆ ಎರವಲು ನೀಡಲಾಗಿದೆ. ಅತಿಥಿ ಶಿಕ್ಷಕರ ನೇಮಕಾತಿ ಆದೇಶ ಬಂದ ನಂತರ ನಿಯೋಜಿಸಲಾಗುತ್ತದೆ. -ಆರ್‌.ಇಂದಿರಾ, ಕ್ಷೇತ್ರ ಶಿಕ್ಷಣಾಧಿಕಾರಿ

ಕೋವಿಡ್‌ ಹಿನ್ನೆಲೆ ಒಂದೂವರೆ ವರ್ಷಗಳ ನಂತರ ಶಾಲೆಗಳು ಆರಂಭವಾಗಿದ್ದು, ಬಹುತೇಕ ಸರ್ಕಾರಿ ಶಾಲೆ ಗಳಲ್ಲಿ ಶಿಕ್ಷಕರ ಕೊರತೆಯಿಂದ ಮಕ್ಕಳ ಕಲಿಕೆಗೆ ಹಿನ್ನಡೆಯಾಗುತ್ತಿದೆ. ಕೂಡಲೇ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಬೇಕು. -ಮಹಾಲಿಂಗ ದೊಡ್ಡಮನೆ, ಎಸ್‌ಎಫ್‌ಐ ಕಾರ್ಯದರ್ಶಿ

-ನಾಗರಾಜ ತೇಲ್ಕೂರ

ಟಾಪ್ ನ್ಯೂಸ್

siddaramaiah

ಸಿದ್ರಾಮಣ್ಣೋರ್‌ ಫೈವ್‌ ಗ್ಯಾರಂಟಿ ಕೊಟ್‌ಮ್ಯಾಕೆ ಲೈಫ್ ಈಸ್‌ ಜಿಂಗಾಲಾಲಾ…

amitTelangana Polls; ತೆಲಂಗಾಣ ಚುನಾವಣೆಗೆ ಬಿಜೆಪಿ ಜತೆ ಟಿಡಿಪಿ ಮೈತ್ರಿ?

Telangana Polls; ತೆಲಂಗಾಣ ಚುನಾವಣೆಗೆ ಬಿಜೆಪಿ ಜತೆ ಟಿಡಿಪಿ ಮೈತ್ರಿ?

TDY-2

CSK Forever: ಮದುವೆ ಕಾರ್ಡ್‌ನಲ್ಲಿ ಧೋನಿ ಫೋಟೋ ಪ್ರಿಂಟ್‌ ಮಾಡಿಸಿದ  ಅಭಿಮಾನಿ

ಹೊಸ ಇನ್ನಿಂಗ್ಸ್‌ ಆರಂಭಿಸಿದ ರುತುರಾಜ್: ಕ್ರಿಕೆಟ್ ಆಟಗಾರ್ತಿಯನ್ನೇ ವರಿಸಿದ CSK ಪ್ಲೇಯರ್

ಹೊಸ ಇನ್ನಿಂಗ್ಸ್‌ ಆರಂಭಿಸಿದ ರುತುರಾಜ್: ಕ್ರಿಕೆಟ್ ಆಟಗಾರ್ತಿಯನ್ನೇ ವರಿಸಿದ CSK ಪ್ಲೇಯರ್

Chikkamagaluru: ಕಾಂಗ್ರೆಸ್ ಶಾಸಕರ ಅಭಿನಂದನಾ ಸಮಾರಂಭದಲ್ಲಿ ಗಲಾಟೆ, ಯುವಕನ ಕೊಲೆ

Chikkamagaluru: ಕಾಂಗ್ರೆಸ್ ಶಾಸಕರ ಅಭಿನಂದನಾ ಸಮಾರಂಭದಲ್ಲಿ ಗಲಾಟೆ, ಯುವಕನ ಕೊಲೆ

ಮಂಗಳೂರು: ಹಳೆಯ “ನೈತಿಕ ಪೊಲೀಸ್‌ಗಿರಿ’ ಆರೋಪಿಗಳಿಂದ ಮುಚ್ಚಳಿಕೆ

ಮಂಗಳೂರು: ಹಳೆಯ “ನೈತಿಕ ಪೊಲೀಸ್‌ಗಿರಿ’ ಆರೋಪಿಗಳಿಂದ ಮುಚ್ಚಳಿಕೆ

ಮಣಿಪಾಲ: ರ್‍ಯಾಂಕಿಂಗ್‌ನಲ್ಲಿ ಮಾಹೆಗೆ ವಿಶ್ವದಲ್ಲಿ 4ನೇ ಸ್ಥಾನ

ಮಣಿಪಾಲ: ರ್‍ಯಾಂಕಿಂಗ್‌ನಲ್ಲಿ ಮಾಹೆಗೆ ವಿಶ್ವದಲ್ಲಿ 4ನೇ ಸ್ಥಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಸ್ಲಿಂ ಮಹಿಳೆಯರ ವಿರುದ್ಧ ಅವಹೇಳಕಾರಿಯಾಗಿ ಪೋಸ್ಟ್: ಬಿಜೆಪಿ ಕಾರ್ಯಕರ್ತ ವಶಕ್ಕೆ

ಮುಸ್ಲಿಂ ಮಹಿಳೆಯರ ವಿರುದ್ಧ ಅವಹೇಳಕಾರಿಯಾಗಿ ಪೋಸ್ಟ್: ಬಿಜೆಪಿ ಕಾರ್ಯಕರ್ತ ವಶಕ್ಕೆ

Lingasugur: ಸೌಕರ್ಯಗಳಿಲ್ಲದ ಲಿಂಗಸುಗೂರು ಬಸ್‌ ನಿಲ್ದಾಣ

Lingasugur: ಸೌಕರ್ಯಗಳಿಲ್ಲದ ಲಿಂಗಸುಗೂರು ಬಸ್‌ ನಿಲ್ದಾಣ

MLA- MLC ಅಲ್ಲದಿದ್ದರೂ ಸಚಿವ ಸ್ಥಾನ: ಪಕ್ಷನಿಷ್ಠೆಯಿಂದ ಬೋಸರಾಜ್ ಗೆ ಮಂತ್ರಿ ಭಾಗ್ಯ

MLA- MLC ಅಲ್ಲದಿದ್ದರೂ ಸಚಿವ ಸ್ಥಾನ: ಪಕ್ಷನಿಷ್ಠೆಯಿಂದ ಬೋಸರಾಜ್ ಗೆ ಮಂತ್ರಿ ಭಾಗ್ಯ

Sick after drinking contaminated water

ಕಲುಷಿತ ನೀರು ಕುಡಿದು ಅಸ್ವಸ್ಥ: ಮಗು ಸಾವು

drowned

Sirwar ಕೆರೆಯಲ್ಲಿ‌ ಬಿದ್ದು ಮೂವರ ಮೃತ್ಯು

MUST WATCH

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

ಹೊಸ ಸೇರ್ಪಡೆ