ಅನಗತ್ಯ ಓಡಾಟ ತಡೆಗೆ ಪೊಲೀಸರ ಬಿಗಿ ಕ್ರಮ
Team Udayavani, May 7, 2021, 3:31 PM IST
ಲಿಂಗಸುಗೂರು : ಜನತಾ ಕರ್ಫ್ಯೂ ಲೆಕ್ಕಿಸದೇ ಅನಗತ್ಯವಾಗಿ ಓಡಾಡುತ್ತಿದ್ದವರಿಗೆ ಪಟ್ಟಣದಲ್ಲಿ ಪೊಲೀಸ್ ದಂಡ ಹಾಕುವ ಮೂಲಕ ಬಿಸಿ ಮುಟ್ಟಸುವ ಜೊತೆಗೆ ಬ್ಯಾರಿಕೇಡ್‌ಗಳ ಹಾಕಿ ಸಂಚಾರ ಮಾಡುತ್ತಿದ್ದವರ ವಿಚಾರಣೆ ನಡೆಸಿದ್ದರಿಂದ ಜನರ ಓಡಾಟಕ್ಕೆ ಬ್ರೇಕ್ ಬಿದ್ದಿದೆ.
ಪಟ್ಟಣದ ಪ್ರಮುಖ ವೃತ್ತ, ಬೀದಿಗಳಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್‌ಗಳ ತೆರೆದಿದ್ದವು. ಆದರೆ ಗುರುವಾರ ಪೊಲೀಸರು ಬ್ಯಾರಿಕೇಡ್ ಗಳನ್ನು ರಸ್ತೆಯುದ್ಧಕ್ಕೂ ಹಾಕಿ ಬೈಕ್, ಕಾರು, ಲಾರಿ ಸೇರಿದಂತೆ ಅನಗತ್ಯವಾಗಿ ಸಂಚರಿಸುವ ವಾಹನಗಳಿಗೆ ದಂಡ ಪ್ರಯೋಗಿಸಿದರು. ಇದರಿಂದ ಪಟ್ಟಣದಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ಅನಗತ್ಯವಾಗಿ ರಸ್ತೆ ಬಂದ ವಾಹನಗಳಿಗೆ ಪೊಲೀಸರು ಬಿಡದೆ ದಂಡ ಹಾಕಿದರು.
ಅಲ್ಲದೇ ಸಂಚಾರ ಹೊರಟಿದ್ದವರ ತಡೆದು ವಿಚಾರಿಸಿ ಕಾರಿನಲ್ಲಿ ತೆರಳುವವರಿಗೂ ಬಿಸಿ ಮುಟ್ಟಿಸಿದರು. ವಿಚಾರಣೆ ನಡೆಸಿ ಅಸಮರ್ಪಕ ಉತ್ತರ ನೀಡಿದವರಿಗೆ ದಂಡ ಹಾಕುವ ಜೊತೆಗೆ ಮಾಸ್ಕ್ ಧರಿಸುವ ಜೊತೆಗೆ ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯ ಮೀರಿದರೆ ಸಹಿಸುವುದಿಲ್ಲ ಎಂದು ತಾಕೀತು ಮಾಡಿದರು. ಪುರಸಭೆ ಅಧಿಕಾರಿ, ಸಿಬ್ಬಂದಿಗಳು ಮೊದಲು ಧ್ವನಿವರ್ಧಕ ಮೂಲಕ ಅಂಗಡಿಗಳ ಮುಚ್ಚಲು ಹಾಗೂ ಮಾಸ್ಕ್, ಧರಿಸಿ ಸಾಮಾಜಿಕ ಅಂತರ ಕಾಪಾಡಲು ಮನವಿ ಮಾಡುತ್ತಿದ್ದರು. ನಿಯಮ ಮೀರಿ ಅಂಗಡಿ ತೆರೆದವರು ಸಾಮಾಜಿಕ ಅಂತರ ಉಲ್ಲಂಘಿಸಿದ ಅಂಗಡಿಕಾರರ ದಂಡ ಹಾಕಿದರು.
ಇನ್ನೂ ಪೊಲೀಸರು ಪಟ್ಟಣದಲ್ಲಿ ಅನಗತ್ಯವಾಗಿ ಸಂಚರಿಸುತ್ತಿದ್ದವರ ತಡೆದು ವಿಚಾರಿಸಿ ಓಡಾಟಕ್ಕೆ ಕಾರಣ ತಿಳಿದುಕೊಂಡ ನಂತರ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಸುಖಾಸುಮ್ಮನೆ ಸಂಚಾರ ಮಾಡುವವರಿಗೆ ದಂಡ ಹಾಕಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಇದು ಗುಂಡಿಯೋ ! ಗುಂಡೊಯೊಳಗೊಂದು ರಸ್ತೆಯೋ ? ಹುಣಸೂರಿನ ಸಂಪರ್ಕ ರಸ್ತೆಯ ದುಸ್ಥಿತಿ
ಮೂಳೂರು ತೊಟ್ಟಂ ಪರಿಸರದ ಕಡಲ್ಕೊರೆತ ಪ್ರದೇಶಕ್ಕೆ ಜಿಲ್ಲಾಧಿಕಾರಿ, ಶಾಸಕರ ಭೇಟಿ ; ಪರಿಶೀಲನೆ
ಚಿಂಚೋಳಿ ತಾಲೂಕಿನಲ್ಲಿ ಭಾರಿ ಮಳೆ : ಜನಜೀವನ ಅಸ್ತವ್ಯಸ್ತ
ಬಿಲ್ ತುಂಬದ ಗ್ರಾ. ಪಂಚಾಯತ್ :ವಾರದಿಂದ ಗ್ರಾಮದಲ್ಲಿ ಬೆಳಗದ ಬೀದಿ ದೀಪ, ಗ್ರಾಮಸ್ಥರ ಹಿಡಿಶಾಪ
ಅಭಿಮಾನಿಯ ಟೀ ಅಂಗಡಿಯಲ್ಲಿ ಚಹಾ ಸವಿದ ಶಿವಣ್ಣ : 5 ವರ್ಷದ ಕನಸು – ನನಸು