
Ramanagara: ಮಾವಿನಕಾಯಿ ತುಂಬಿದ್ದ ವಾಹನ ಪಲ್ಟಿ
Team Udayavani, Jun 9, 2023, 1:09 PM IST

ರಾಮನಗರ: ಮಾವಿನಕಾಯಿ ತುಂಬಿದ್ದ ವಾಹನವೊಂದು ಪಲ್ಟಿಯಾದ ಘಟನೆ ಚನ್ನಪಟ್ಟಣ ತಾಲೂಕಿನ ಸಂಕಲಗೆರೆ ಗೇಟ್ ನ ಕದಂಬ ಹೋಟೆಲ್‌ನ ಬಳಿ ಶುಕ್ರವಾರ ನಡೆದಿದೆ.
ಕೇರಳಕ್ಕೆ ಮಾವಿನ ಕಾಯಿಯನ್ನು ತುಂಬಿಕೊಂಡು ಹೋಗುತ್ತಿದ್ದ ಬೋಲೇರೋ ಪಿಕಪ್ ವಾಹನ ಪಲ್ಟಿಯಾಗಿದೆ. ಚಾಲಕನ ನಿಯಂತ್ರಣವನ್ನು ತಪ್ಪಿ ಡಿವೈಡರ್ ಗೆ ಹೋಗಿ ಗುದ್ದಿದೆ. ಡಿವೈಡರ್ ಗೆ ಗುದ್ದಿದ ಪರಿಣಾಮ ಹಾಕಿದ್ದ ತಂತಿ ಬೇಲಿ ತುಂಡಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಸ್ಥಳಕ್ಕೆ ಆಗಮಿಸಿದ ಚನ್ನಪಟ್ಟಣ ಸಂಚಾರಿ ಪೊಲೀಸರು ವಾಹನಗಳು ಓಡಾಟ ಮಾಡಲು ಅನುವು ಮಾಡಿಕೊಟ್ಟಿದ್ದಾರೆ. ನಂತರ ಮಾವಿನ ಕಾಯಿಗಳನ್ನು ಬೇರೆ ಕಡೆ ಶಿಫ್ಟ್ ಮಾಡಿಸಿದ್ದಾರೆ.
ಈ ಸಂಬಂಧ ಚೆನ್ನಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karnataka Politics: ಜೆಡಿಎಸ್ ಕೊನೆಯ ಹಂತ ತಲುಪಿದೆ: ದಿನೇಶ್ ಗುಂಡೂರಾವ್

Ramanagara: ಚುನಾವಣಾಧಿಕಾರಿಗಳ ಕಾರು ತಡೆದು ದಾಖಲೆಗಳನ್ನು ದೋಚಿದ ದುಷ್ಕರ್ಮಿಗಳು

Ramanagara: ಬಿಡದಿ ಸ್ಮಾರ್ಟ್ಸಿಟಿ ಯೋಜನೆಗೆ ಬಾಲಗ್ರಹಣ

Protest: ಕಾವೇರಿ ಕಿಚ್ಚು… ರಾಮನಗರದಲ್ಲಿ ತಮಿಳುನಾಡು ಸರ್ಕಾರದ ವಿರುದ್ಧ ಆಕ್ರೋಶ

Channapatna: ಕಳೆದ ವರ್ಷ ಅತಿವೃಷ್ಟಿ; ಈ ಬಾರಿ ಅನಾವೃಷ್ಟಿ!