ಜಿಲ್ಲೆಯ 1,290 ಪ್ರಕರಣ ಇತ್ಯರ್ಥ್ಯ
Team Udayavani, Sep 23, 2020, 4:53 PM IST
ರಾಮನಗರ: ಜಿಲ್ಲಾದ್ಯಂತ ನಡೆದ ಇ-ಲೋಕ್ ಅದಾಲತ್‌ನಲ್ಲಿ 1,290 ಪ್ರಕರಣಗಳು ಇತ್ಯರ್ಥ್ಯಗೊಂಡಿವೆ. ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಬೆಂಗಳೂರಿನ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ರಾಮನಗರ ಜಿಲ್ಲಾದ್ಯಂತ ಇರುವ 18 ಬೆಂಚ್‌ಗಳಲ್ಲಿ ಕಳೆದ ಶನಿವಾರ ನಡೆದ ಮೆಗಾ ಇ-ಲೋಕ್ ಅದಾಲತ್‌ನಲ್ಲಿ ವಿವಿಧ ಪ್ರಕರಣಗಳನ್ನು ಬಗೆಹರಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಜಿ.ರಮಾ ಮಾಹಿತಿ ನೀಡಿದರು.
ಕೋವಿಡ್ 19 ಹಿನ್ನೆಲೆಯಲ್ಲಿ ಕಳೆದ ಕೆಲವು ತಿಂಗಳಿಂದ ಲೋಕ ಅದಾಲತ್‌ನಲ್ಲಿ ಪ್ರಕರಣ ಇತ್ಯರ್ಥಪಡಿಸಲು ಸಾಧ್ಯವಾಗಿರಲಿಲ್ಲ. ಎಲ್ಲರಿಗೂ ನ್ಯಾಯ ದೊರಕಿಸಿ ಕೊಡುವ ಉದ್ದೇಶದಿಂದ ದೇಶದಲ್ಲಿಯೇ ಪ್ರಥಮ ಬಾರಿಗೆ ಆನ್‌ಲೈನ್ ಮೂಲಕ ಸಣ್ಣಪುಟ್ಟ ಪ್ರಕರಣಗಳನ್ನು ಇತ್ಯರ್ಥ್ಯ ಪಡಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು.ಕ್ರಿಮಿನಲ್ ಪ್ರಕರಣಗಳೇ ಹೆಚ್ಚು: ಹಿರಿಯ ಸಿವಿಲ್ ನ್ಯಾಯಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ವೆಂಕಟಪ್ಪ ಮಾತನಾಡಿ, ಮೆಗಾ ಇ-ಲೋಕ್ ಅದಾಲತ್‌ನಲ್ಲಿ ಇತ್ಯರ್ಥಗೊಳಿಸಿದ 1,290 ಪ್ರಕರಣಗಳ ಪೈಕಿ 982 ಪ್ರಕರಣಗಳು ರಾಜಿಯಾಗಬಲ್ಲ ಕ್ರಿಮಿನಲ್ ಪ್ರಕರಣಗಳಾಗಿವೆ. 140 ಕ್ರಿಮಿ ನಲ್ ಕಾಂಪೌಡಬಲ್ ಪ್ರಕರಣಗಳಾಗಿದ್ದರೆ, 70 ಸಿವಿಲ್, 46 ವ್ಯಾಜ್ಯ ಪೂರ್ವ, 44ಅಪಘಾತ ಪರಿಹಾರ, ನೆಗೋಷಿಯಬಲ್‌ಆಕ್ಟ್ ನ 30 ಪ್ರಕರಣಗಳು, 6 ಬ್ಯಾಂಕ್ ಹಣ ವಸೂಲಾತಿ ಪ್ರಕರಣ,2 ಕೈಗಾರಿಕಾ ವಿವಾದದ ಪ್ರಕರಣಗಳು ಸೇರಿದಂತೆ ಇನ್ನಿತರ ಪ್ರಕರಣ ಗಳನ್ನು ಇತ್ಯರ್ಥ್ಯ ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಒಟ್ಟು 39,686 ಪ್ರಕರಣಗಳು ಬಾಕಿ ಇವೆ. ಇವುಗಳ ಪೈಕಿ 4,384 ಪ್ರಕರಣ ಗಳು ಹಾಗೂ ಇ-ಲೋಕ್ ಅದಾಲತ್‌ಗಾಗಿ ನೊಂದಣಿಮಾಡಿಸಿಕೊಂಡಿದ್ದಪ್ರಕರಣಗಳನ್ನು ರಾಜಿಪ್ರಕರಣಗಳನ್ನಾಗಿಪರಿಗಣಿಸಿವಿಚಾರಣೆ ಕೈಗೆತ್ತಿಕೊಳ್ಳಲಾಗಿತ್ತು ಎಂದರು.
ರಾಮನಗರ ಜಿಲ್ಲೆ ಹಾಗೂ ಎಲ್ಲಾ 18 ಅಧೀನ ನ್ಯಾಯಾಲಯಗಳಲ್ಲಿ ಆನ್‌ಲೈನ್ ಮೂಲಕವೇ ಕಲಾಪ ನಡೆದಿದ್ದು ವಿಶೇಷ. ನ್ಯಾಯಾಲಯದ ಕಲಾಪಗಳಲ್ಲಿ ಕೆಲವು ವಕೀಲರು ಖುದ್ದಾಗಿ ಭಾಗವಹಿಸಿದ್ದರೆ, ಇನ್ನು ಕೆಲವರು ಆನ್‌ಲೈನ್ ಮೂಲಕ ಭಾಗವಹಿಸಿದ್ದರು. ಅವಶ್ಯಕತೆ ಇದ್ದಂತಹ ಪ್ರಕರಣಗಳಲ್ಲಿ ಕಕ್ಷಿದಾರರನ್ನು ಆನ್‌ಲೈನ್ ಮೂಲಕ ಸಂಪರ್ಕಿಸಿ ಪ್ರಕರಣ ಇತ್ಯರ್ಥ್ಯ ಪಡಿಸಲಾುತು ಎಂದು ತಿಳಿಸಿದರು.