
ಬೀಡು ಬಿಟ್ಟ ಕಾಡಾನೆ ಹಿಂಡು: ಜನರಲ್ಲಿ ಆತಂಕ
Team Udayavani, Feb 8, 2021, 12:54 PM IST

ಕನಕಪುರ: ತಾಲೂಕಿನ ದೊಡ್ಡಮುದುವಾಡಿ ಗ್ರಾಮದ ಸುತ್ತಮುತ್ತ ಆರು ಕಾಡಾನೆಗಳ ಗುಂಪು ಬೀಡು ಬಿಟ್ಟಿದ್ದು, ಜನರಲ್ಲಿ ಆತಂಕ ಮೂಡಿದೆ.
ಆಹಾರ ಅರಸಿ ಕಾಡಿನಿಂದ ಗ್ರಾಮದತ್ತ ಕಾಡಾನೆಗಳ ಹಿಂಡು ಬಂದಿವೆ ಎನ್ನಲಾಗಿದೆ. ತಾಲೂಕಿನ ಹಾರೋಹಳ್ಳಿ ದೊಡ್ಡಮುದುವಾಡಿಯ ನದಿಯಲ್ಲಿ ನಾಲ್ಕು ಆನೆ, ಸಮೀಪದ ಹಂದಿಗುಂದಿ ಅರಣ್ಯದಲ್ಲಿ ಎರಡು ಆನೆಗಳು ಬೀಡುಬಿಟ್ಟಿದ್ದು, ವಿಷಯ ತಿಳಿದ ಗ್ರಾಮಸ್ಥರು ಆನೆ ಹಿಂಡು ನೋಡಲು ಮುಗಿಬಿದ್ದರು.
ಆನೆಗಳು ಬೀಡು ಬಿಟ್ಟಿರುವ ದೊಡ್ಡಮುದುವಾಡಿಯ ಮತ್ತಿ ಕುಂಟೆ ಸ್ಥಳವು ಜಿಲ್ಲಾ ಮತ್ತು ತಾಲೂಕಿನ ನಡುವಿನ ಗಡಿಯಾಗಿದ್ದು, ಆನೆಗಳು ಮುತ್ತತ್ತಿ ಅರಣ್ಯ ಪ್ರದೇಶದಿಂದ ಆಹಾರ ಅರಸಿ ಬಂದಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ :ಹೈನುಗಾರಿಕೆ ರೈತರ ಬದುಕಿಗೆ ಸಂಜೀವಿನಿ: ಶಾಸಕ
ಜನರ ಓಡಾಟಕ್ಕೆ ಹೆದರಿ ಆನೆಗಳು ಅರ್ಕಾವತಿ ನದಿ ನೀರಿನಲ್ಲಿ ಸಂಜೆಯವರೆಗೂ ಕಾಲ ಕಳೆದಿವೆ. ಸಂಜೆ ಬಳಿಕ ಕಾಡಿಗೆ ಅಟ್ಟಲು ಅಧಿಕಾರಿಗಳು ಸಿದ್ಧತೆ ಮಾಡಿಕೊಂಡು, ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ. ಅರಣ್ಯ ಇಲಾಖೆ ಡಿಸಿಎಫ್ ದೇವರಾಜು, ಎಸಿಎಫ್ ರಾಮಕೃಷ್ಣ, ತಾಲೂಕು ವಲಯ ಅರಣ್ಯಾಧಿಕಾರಿ ದಾಳೇಶ್, ಉಪವಲಯ ಅರಣ್ಯಾಧಿಕಾರಿ ಕೀರಣ್, ಸಿಬ್ಬಂದಿ ಇದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Daily Horoscope: ಸಜ್ಜನರ ಸೋಗುಹಾಕಿದ ವಂಚಕರ ಬಗ್ಗೆ ಎಚ್ಚರ, ಉದ್ಯೋಗಸ್ಥರಿಗೆ ಕೈತುಂಬಾ ಕೆಲಸ

KSRTC Bus: ಬಾಗಿಲಿದ್ದರೂ ಮುಚ್ಚುವವರಿಲ್ಲ! ಪ್ರಾಣಕ್ಕೆ ಎರವಾಗುತ್ತಿದೆ ಅಜಾಗರೂಕತೆ

Mullugudde ಕೊರಗಜ್ಜನ ಪವಾಡ; ನಾಪತ್ತೆ ಯುವಕ ಅಜ್ಜನ ಸನ್ನಿಧಾನದಲ್ಲಿ ಪ್ರಾರ್ಥನೆ

Mangaluru ಹಿಂದೂ ಸಂಘಟನೆಗಳ ಆಕ್ಷೇಪ; ಗೊಂದಲವಿಲ್ಲ: ಸಂಘ

Robbery case: ಕೇರಳದಲ್ಲಿ ಓರ್ವನ ಬಂಧನ?