ರೇಷ್ಮೆ ಗೂಡು ಮಾರುಕಟ್ಟೆ ಎಷ್ಟು ಸುರಕ್ಷಿತ?


Team Udayavani, Mar 21, 2020, 5:51 PM IST

rn-tdy-1

ರಾಮನಗರ: ನಗರದ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ನಿತ್ಯ ಸಾವಿರಾರು ಮಂದಿ ಸೇರುವ ಸ್ಥಳವಾಗಿದ್ದು , ಕೋವಿಡ್ 19 ವೈರಸ್‌ ಸೋಂಕು ಹರಡುವ ಎಲ್ಲಾ ಸಾಧ್ಯತೆಗಳಿದ್ದು, ರೈತರಿಗೆ ಇದು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ನಾಗರೀಕ ವಲಯದಲ್ಲಿ ವ್ಯಕ್ತವಾಗಿದೆ.

ದಿನನಿತ್ಯ ಈ ಮಾರುಕಟ್ಟೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ, ನೆರೆಹೊರೆಯ ರಾಜ್ಯಗಳಿಂದಲೂ ರೇಷ್ಮೆ ಕೃಷಿಕರು ಗೂಡು ಮಾರಲು ಬರುತ್ತಾರೆ. ಗೂಡು ಖರೀದಿಸಲು ರೀಲರ್‌ಗಳು ಸಂಖ್ಯೆಯೂ ಕಡಿಮೆ ಏನಿಲ್ಲ. ಹೀಗಾಗಿ ಇಲ್ಲಿ ನಿತ್ಯ ಸಾವಿರಾರು ಮಂದಿ ಸೇರುವ ತಾಣವಾಗಿದೆ. ಜಿಲ್ಲಾಡಳಿತ ಮತ್ತು ಮಾರುಕಟ್ಟೆಯ ಅಧಿಕಾರಿಗಳು ತಕ್ಷಣ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಾರ್ವಜಿಕರು ಆಗ್ರಹಿಸಿದ್ದಾರೆ.

ಕೋವಿಡ್ 19 ಸೋಂಕು ಹರಡುವುದನ್ನು ತಡೆಯಲು ವ್ಯಕ್ತಿಗಳ ನಡುವೆ ಕನಿಷ್ಠ 2 ಮೀಟರ್‌ ಅಂತರ ಕಾಯ್ದುಕೊಳ್ಳಲು ಸರ್ಕಾರ ಸೂಚಿಸುತ್ತಲೇ ಇದೆ. ಆದರೆ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಈ ವ್ಯವಸ್ಥೆ ಕಷ್ಟ ಸಾಧ್ಯ. ಮೇಲಾಗಿ ರೇಷ್ಮೆ ಕೃಷಿಕರು ಅಕ್ಷರ ಕಲಿತವರಲ್ಲ. ಇಲ್ಲಿ ಬಹುತೇಕರಿಗೆ ಕೊರೊನಾ ಸೋಂಕಿನ ಬಗ್ಗೆ ಅರಿವಿಲ್ಲ. ದೂರದ ಊರುಗಳಿಂದ ಸಾರ್ವಜನಿಕರ ವ್ಯವಸ್ಥೆಯಲ್ಲೇ ಇಲ್ಲಿಗೆ ಬರುತ್ತಾರೆ. ಇಲ್ಲಿ ತಂಗಲು ವಿಶೇಷ ವ್ಯವಸ್ಥೆ ಇಲ್ಲ. ಶೌಚಾಲಯ ಹೊರತುಪಡಿಸಿ ಸ್ನಾನ ಮಾಡಲು ಅವಕಾಶವಿಲ್ಲ. ಹೀಗಾಗಿ ವೈಯಕ್ತಿಕ  ಸ್ವಚ್ಛತೆ ಇಲ್ಲಿ ಮರೀಚಿಕೆ.

ಸೌಕರ್ಯ ಕಲ್ಪಿಸಲು ಮುಂದಾಗಿಲ್ಲ: ರೇಷ್ಮೆ ಗೂಡು ಹರಾಜು ಬೆಳಗ್ಗೆ ಮುಗಿದರೂ, ರೈತರು ಸಂಜೆವರೆಗೆ ಕೆಲವೊಮ್ಮೆ ಎರಡು ಮೂರು ದಿನಗಳವರೆಗೂ ಹರಾಜು ಮೊತ್ತವನ್ನು ಪಡೆಯಲು ಕಾಯಬೇಕಾಗುತ್ತದೆ. ಇಲ್ಲಿ ರೈತರು ತಂಗುವ ವ್ಯವಸ್ಥೆ ಇಲ್ಲ. ಪರಿಸ್ಥಿತಿ ಹೀಗಿರುವಾಗ ಅವರ ಆರೋಗ್ಯ ಹತ್ತಾರು ಬಗೆಯಲ್ಲಿ ಕೆಡುವ ಸಾಧ್ಯತೆ ಇದ್ದು, ಇವರ ರಕ್ಷಣೆಗೆ ಸ್ಥಳೀಯ ಆಡಳಿತ ಮತ್ತು ಗೂಡು ಮಾರುಕಟ್ಟೆಯ ಅಧಿಕಾರಿಗಳೇ ನಿರ್ವಹಿಸ ಬೇಕಾಗಿದೆ. ಆದರೆ ದುರಾದೃಷ್ಠವಶಾತ್‌ ಈ ವಿಚಾರದಲ್ಲಿ ಈ ಅಧಿಕಾರಿಗಳು ಸ್ವತಂತ್ರವಾಗಿ ಕ್ರಮಗಳನ್ನು ಕೈಗೊಳ್ಳುವ ಅಧಿಕಾರ ಇಲ್ಲ. ಎಲ್ಲದಕ್ಕೂ ಸರ್ಕಾರದ ಅನುಮತಿಯೇ ಬೇಕಾಗಿದೆ. ಈ ವಿಚಾರಗಳು ಸ್ಥಳೀಯ ಘಟಾನುಘಟಿ ರಾಜಕೀಯ ನಾಯಕರಿಗೆಗೊತ್ತಿದ್ದರೂ, ಯಾವುದೊಂದು ಸೌಕರ್ಯ ಕಲ್ಪಿಸಲು ಮುಂದಾಗಿಲ್ಲ.

ಮಾರುಕಟ್ಟೆ ಮುಚ್ಚಿದರೆ? : ರೇಷ್ಮೆ ಕೃಷಿ ಮತ್ತು ರೀಲಿಂಗ್‌ ಉದ್ಯಮ ಜಿಲ್ಲೆಯ ಆರ್ಥಿ ಕತೆಯ ಮೇಲೆ ಪರಿಣಾಮ ಬೀರುವ ಪ್ರಮುಖ ಉದ್ಯಮ. ಹಾಗೊಮ್ಮೆ ರೇಷ್ಮೆ ಗೂಡು ಮಾರುಕಟ್ಟೆಯನ್ನು ಮುಚ್ಚಿಬಿಟ್ಟರೆ ಜಿಲ್ಲೆಯ ಆರ್ಥಿಕತೆಯ ಮೇಲೆ ಪರಿಣಾಮ ಬೀರಿ ಜನಜೀವನ ಅಸ್ತ್ಯವ್ಯಸ್ತವಾಗುವುದು ನಿಸ್ಸಂಶಯ. ಕಳೆದೊಂದು ವಾರದಿಂದ ರೇಷ್ಮೆ ಗೂಡು ದರಗಳು ಕುಸಿಯುತ್ತಿದ್ದು, ಆರ್ಥಿಕ ವ್ಯವಹಾರದ ಮೇಲೆ ಪರಿಣಾಮ ಬೀರುತ್ತಿದೆ.

ರೇಷ್ಮೆ ಫಿಲೇಚರ್‌ಗಳು ಸುರಕ್ಷಿತವಲ್ಲ! :  ಕೋವಿಡ್ 19  ವೈರಸ್‌ ಸೋಂಕು ಮಾನವ ದೇಹದ ಉಸಿರಾಟದ ವ್ಯವಸ್ಥೆಯನ್ನೇ ಹಾಳಗೆಡುವ ಮಹಾಮಾರಿ. ರೇಷ್ಮೆ ಗೂಡಿನಿಂದ ನೂಲು ತೆಗೆಯುವ ವೇಳೆ ಉತ್ಪತ್ತಿಯಾಗುವ ಅಲೆರ್ಜನ್‌ಗಳು ( ಅಲರ್ಜಿ ಉಂಟು ಮಾಡುವ ವೈರಾಣು) ಕೆಮ್ಮು, ಆಸ್ತಮಾಗಳಿಗೆ ಕಾರಣವಾಗುವುದು ಹೊಸ ವಿಚಾರವೇನಲ್ಲ. ಆಕಸ್ಮಿಕವಾಗಿ ಈ ಶ್ರಮಿಕ ಕಾರ್ಮಿಕ ವರ್ಗಕ್ಕೆ ಸೋಂಕು ತಗುಲಿದರೆ ದೇಹದ ಮೇಲಾಗುವ ಪರಿಣಾಮ ಘೋರ.

 

- ಬಿ.ವಿ.ಸೂರ್ಯ ಪ್ರಕಾಶ್‌

ಟಾಪ್ ನ್ಯೂಸ್

Road mishap: ಖಾಸಗಿ ಬಸ್ – ಗೂಡ್ಸ್ ವಾಹನದ ನಡುವೆ ಅಪಘಾತ: ಇಬ್ಬರಿಗೆ ಸಣ್ಣಪುಟ್ಟ ಗಾಯ

Road mishap: ಖಾಸಗಿ ಬಸ್ – ಗೂಡ್ಸ್ ವಾಹನದ ನಡುವೆ ಅಪಘಾತ: ಇಬ್ಬರಿಗೆ ಸಣ್ಣಪುಟ್ಟ ಗಾಯ

shivamogga

Shimoga; ವಾಲ್ಮೀಕಿನಿಗಮದ ಚಂದ್ರಶೇಖರ್ ಆತ್ಮಹತ್ಯೆ: ಇಬ್ಬರು ಆರೋಪಿಗಳು ನ್ಯಾಯಾಲಯಕ್ಕೆ ಹಾಜರು

Panaji: Smart city ಕಾಮಗಾರಿಗಳ ವರದಿಯನ್ನು ಸರ್ಕಾರ ಸಿದ್ಧಪಡಿಸುತ್ತಿದೆ: ಗೋವಾ ಸಿಎಂ

Panaji: Smart city ಕಾಮಗಾರಿಗಳ ವರದಿಯನ್ನು ಸರ್ಕಾರ ಸಿದ್ಧಪಡಿಸುತ್ತಿದೆ: ಗೋವಾ ಸಿಎಂ

Chirathe

Chittapura: ಮೇಯಲು ತೆರಳಿದ್ದ ಹೋರಿ ಮೇಲೆ ಚಿರತೆ ದಾಳಿ

ಕೊಹ್ಲಿ, ರೋಹಿತ್ ಕರಿಯರ್ ಮುಗಿಸುವಂತಹ ಷರತ್ತು ಹಾಕಿದ ಗೌತಿ; ಒಪ್ಪಿಗೆ ಕೊಟ್ತಾ ಬಿಸಿಸಿಐ?

ಕೊಹ್ಲಿ, ರೋಹಿತ್ ಕರಿಯರ್ ಮುಗಿಸುವಂತಹ ಷರತ್ತು ಹಾಕಿದ ಗೌತಿ; ಒಪ್ಪಿಗೆ ಕೊಟ್ತಾ ಬಿಸಿಸಿಐ?

Gundlupete: ಕಚೇರಿಯ ಕೊಠಡಿಯಲ್ಲೇ ನೇಣಿಗೆ ಶರಣಾದ ಪೈನಾನ್ಸ್ ಸಿಬ್ಬಂದಿ… ಕಾರಣ ನಿಗೂಢ

Gundlupete: ಕಚೇರಿಯ ಕೊಠಡಿಯಲ್ಲೇ ನೇಣಿಗೆ ಶರಣಾದ ಫೈನಾನ್ಸ್ ಸಿಬ್ಬಂದಿ… ಕಾರಣ ನಿಗೂಢ

protest

BJP protest: ಶಾಸಕ ಅಭಯ ಪಾಟೀಲರನ್ನು ಹೊತ್ತುಕೊಂಡು ವ್ಯಾನ್ ಗೆ ಹಾಕಿದ ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತಪ್ಪು ಮಾಡಿ ಎಂದು ಮಕ್ಕಳಿಗೆ ನಾವು ಹೇಳುತ್ತೇವಾ: ಎಚ್‌ಡಿಕೆತಪ್ಪು ಮಾಡಿ ಎಂದು ಮಕ್ಕಳಿಗೆ ನಾವು ಹೇಳುತ್ತೇವಾ: ಎಚ್‌ಡಿಕೆ

HDK; ತಪ್ಪು ಮಾಡಿ ಎಂದು ಮಕ್ಕಳಿಗೆ ನಾವು ಹೇಳುತ್ತೇವಾ…

HDK 2

By-Election; ನಿಖಿಲ್ ನನ್ನು ಕಣಕ್ಕಿಳಿಸುವುದಿಲ್ಲ: ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟನುಡಿ

Nikhil contest for Channapatna by-election?: HDK openly announced the decision

Channapatna ಉಪಚುನಾವಣೆಗೆ ನಿಖಿಲ್ ಸ್ಪರ್ಧೆ?: ಬಹಿರಂಗವಾಗಿ ನಿರ್ಧಾರ ಪ್ರಕಟಿಸಿದ ಎಚ್ ಡಿಕೆ

Untitled-1

Fraud: ಫೋನ್‌ ಪೇ ಹ್ಯಾಕ್‌ ಮಾಡಿ ಉದ್ಯಮಿಗೆ 1.94 ಲಕ ವಂಚನೆ

Ramanagar: ಪತ್ನಿ, ಪ್ರಿಯಕರ ಸೇರಿ ಮಗುವಿನ ಮೇಲೆ ಹಲ್ಲೆ: ದೂರು ದಾಖಲು

Ramanagar: ಪತ್ನಿ, ಪ್ರಿಯಕರ ಸೇರಿ ಮಗುವಿನ ಮೇಲೆ ಹಲ್ಲೆ: ದೂರು ದಾಖಲು

MUST WATCH

udayavani youtube

ಮಾವುತನನ್ನು ಕಾಲಿನಿಂದ ತುಳಿದು ಅಪ್ಪಚ್ಚಿ ಮಾಡಿದ ಆನೆ!

udayavani youtube

“ನನ್ನಿಂದ ತಪ್ಪಾಗಿದೆ ಸರ್‌ ಆದರೆ..” | ಸಪ್ತಮಿ ಅವರದ್ದು ಎನ್ನಲಾದ Audio

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

udayavani youtube

ಮುಳ್ಳಯ್ಯನಗಿರಿ,ದತ್ತಪೀಠ, ಸೀತಾಳಯ್ಯನಗಿರಿಯಲ್ಲಿ ಜನಜಾತ್ರೆ; ಖಾಕಿ ಹೈ ಅಲರ್ಟ್

ಹೊಸ ಸೇರ್ಪಡೆ

Road mishap: ಖಾಸಗಿ ಬಸ್ – ಗೂಡ್ಸ್ ವಾಹನದ ನಡುವೆ ಅಪಘಾತ: ಇಬ್ಬರಿಗೆ ಸಣ್ಣಪುಟ್ಟ ಗಾಯ

Road mishap: ಖಾಸಗಿ ಬಸ್ – ಗೂಡ್ಸ್ ವಾಹನದ ನಡುವೆ ಅಪಘಾತ: ಇಬ್ಬರಿಗೆ ಸಣ್ಣಪುಟ್ಟ ಗಾಯ

shivamogga

Shimoga; ವಾಲ್ಮೀಕಿನಿಗಮದ ಚಂದ್ರಶೇಖರ್ ಆತ್ಮಹತ್ಯೆ: ಇಬ್ಬರು ಆರೋಪಿಗಳು ನ್ಯಾಯಾಲಯಕ್ಕೆ ಹಾಜರು

20-uv-fusion

UV Fusion: ಪ್ರಕೃತಿ ಶಾಶ್ವತ ಮನುಷ್ಯನ ಕೊಡುಗೆ ನಿಮಿತ್ತ…

Panaji: Smart city ಕಾಮಗಾರಿಗಳ ವರದಿಯನ್ನು ಸರ್ಕಾರ ಸಿದ್ಧಪಡಿಸುತ್ತಿದೆ: ಗೋವಾ ಸಿಎಂ

Panaji: Smart city ಕಾಮಗಾರಿಗಳ ವರದಿಯನ್ನು ಸರ್ಕಾರ ಸಿದ್ಧಪಡಿಸುತ್ತಿದೆ: ಗೋವಾ ಸಿಎಂ

19-fusion

Father: ನಮಗಾಗಿ ದುಡಿದ ನಾಯಕ ನಮ್ಮ ಜನಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.