
ಕೊರೊನಾ ವೈರಸ್ ಬಗ್ಗೆ ಮುಂಜಾಗ್ರತೆ ವಹಿಸಿ: ತಾಪಂ ಅಧ್ಯಕ್ಷೆ ಗೀತಾ
ಜನ ಜಾಗೃತಿ ಮೂಡಿಸಲು ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ: ವಿವಿಧ ಯೋಜನೆಗಳ ಬಗ್ಗೆ ಚರ್ಚೆ
Team Udayavani, Mar 5, 2020, 4:58 PM IST

ಮಾಗಡಿ: ಭಯಾನಕ ಕೊರೊನಾ ವೈರಸ್ ಕುರಿತು ಮುಂಜಾಗ್ರತಾ ಕ್ರಮವಾಗಿ ಜನ ಜಾಗೃತಿಗೊಳಸುವಂತೆ ತಾಲೂಕು ಪಂಚಾಯ್ತಿ ಅಧ್ಯಕ್ಷೆ ಗೀತಾ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ ತಾಪಂ ಸದಸ್ಯ ಕೆ.ಎಚ್. ಶಿವರಾಜು ಮನವಿಗೆ ಪ್ರತೀಕ್ರಿಯಿಸಿದ ಅವರು, ರಾಜ್ಯದ ಬೆಂಗಳೂರಿನಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿದ್ದು, ಸರ್ಕಾರಿ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳ ವೈದ್ಯರು ಮುಂಜಾಗ್ರತೆ ಅನುಸರಿ ಜನರಲ್ಲಿ ಅರಿವು ಮೂಡಿಸಲು ಅಗತ್ಯ ಕ್ರಮ ಕೈಗೊಳ್ಳಲು ಸಭೆ ಯಲ್ಲಿ ಹಾಜರಿದ್ದ ವೈದ್ಯರಿಗೆ ತಿಳಿಸಿದರು.
ಕೊಳವೆ ಬಾವಿ ಕೊರೆಯಲು ಆದೇಶವಿಲ್ಲ: ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಅಗತ್ಯ ಕೊಳವೆ ಬಾವಿ ಕೊರೆ ಸುವಂತೆ ಜಿಲ್ಲಾ ಪಂಚಾಯ್ತಿ ಹೋಬಳಿವಾರು ಏಜಿಸ್ಸಿಗಳನ್ನು ನೇಮಿಸಿದ್ದರೂ, ಅವರಿಗೆ ಕಾರ್ಯಾದೇಶ ನೀಡಿಲ್ಲ. ಇದರಿಂದ ಅವರು ಕೊಳವೆ ಬಾವಿ ಕೊರೆಯಲು ಮುಂದೆ ಬರುತ್ತಿಲ್ಲ. ಅಧಿಕಾರಿಗಳು ಏಕೆ ಕಾರ್ಯಾದೇಶ ನೀಡುತ್ತಿಲ್ಲ ಎಂದು ಸದಸ್ಯ ನಾರಾಯಣಪ್ಪ ಇದರಿಂದ ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆದೋರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಶಾಲಾದಾಖಲಾತಿ ಆಂದೋಲನಾ: ಮುಂಬ ರುವ ಶೈಕ್ಷಣಿಕ ವರ್ಷದಲ್ಲಿ ತಾಲೂಕಿನ ಎಲ್ಲಾ ಸರ್ಕಾರಿ ಶಾಲೆಗಳ ಬಲವರ್ಧನೆಗೆ ದಾಖಲಾತಿ ಆಂದೋಲನಾ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ. ಕಳೆದ ಸಾಲಿನಲ್ಲಿ ಕುದೂರು ಮತ್ತು ತಿಪ್ಪಸಂದ್ರದಲ್ಲಿ ಕರ್ನಾಟಕ ಮಾದರಿ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭಿಸಲಾಗಿದ್ದು, ಪ್ರಸ್ತುತ ಸಾಲಿನಲ್ಲಿಯೂ ಬಾಚೇನಹಟ್ಟಿ ಅಥವಾ ಮಾಡಬಾಳ್ ನಲ್ಲಿ ಒಂದೇ ಸೂರಿನಡಿ ಪ್ರಾಥ ಮಿಕ, ಪ್ರೌಢ ಹಾಗೂ ಪಿಯು ಕಾಲೇಜು ಪ್ರಾರಂಭಿಸಲು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಬಿಆರ್‌ಸಿ ಕೇಂದ್ರದ ಸಂಪನ್ಮಾಲಾಧಿಕಾರಿ ರೂಪಾಕ್ಷಾ ಸಭೆಗೆ ತಿಳಿಸಿದರು.
ಈ ಸಂಬಂಧ ತಾಪಂ ಸದಸ್ಯೆ ಸುಗುಣ, ಪ್ರತಿಕ್ರಿಯಿಸಿ ಸೋಲೂರಿಗೂ ಕರ್ನಾಟಕ ಮಾದರಿ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭಿಸಲು ಸರ್ಕಾರಕ್ಕೆ ಶಿಪಾರಸ್ಸು ಮಾಡುವಂತೆ ರೂಪಾಕ್ಷಾ ಅವರಲ್ಲಿ ಮನವಿ ಮಾಡಿದರು.
ಸಿಡಿಪಿಒ ಸುರೇಂದ್ರ ಮಾತನಾಡಿ, ದೊಡ್ಡಸೋಮನಹಳ್ಳಿ ಗ್ರಾಮದಲ್ಲಿನ ಅಂಗನವಾಡಿ ಕೇಂದ್ರ ಸಂಪೂರ್ಣ ಶಿಥಿಲಗೊಂಡಿದ್ದು, ಅದನ್ನು ಪಂಚಾಯ್ತಿ ತೆರವುಗೊಳಿಸಿಕೊಟ್ಟರೆ, ನೂತನ ಅಂಗನವಾಡಿ ಕಟ್ಟಡ ಕಟ್ಟಿಸಲಾಗುವುದು. ಈ ಸಂಬಂಧ ಈಗಾಗಲೇ ಅನುದಾನ ಮೀಸಲಿಟ್ಟಿದ್ದೇವೆ. ಮಾತೃ ವಂದನಾ, ಮಾತೃಸ್ತ್ರೀ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗಿದೆ. ಉದ್ಯೋಗಿನಿ ಯೋಜನೆಯಡಿ 17 ಮಂದಿ ಪಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಸಮೃದ್ಧಿ ಯೋಜನೆಯ ಹಣ ಪಾವತಿಸಲಾಗುತ್ತಿದೆ ಎಂದು ಸಭೆಗೆ ವಿವರಿಸಿದರು.
ಪಶುಭಾಗ್ಯ ಪಲಾನುಭವಿಗಳ ಆಯ್ಕೆ: ಪಶು ಸಂಗೋಪನಾ ಇಲಾಖೆಯ ಸಹಾಯ ಕನಿರ್ದೇಶಕ ಜನಾರ್ಧನ್ ಮಾತನಾಡಿ, ಪಶು ಭಾಗ್ಯ ಯೋಜನೆಯಡಿ ತಾಲೂಕಿನಲ್ಲಿ ಪಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ನೊಂದಾಯಸಿಕೊಂಡಿರುವ ಕೆಲ ಪಲಾನುಭವಿಗಳಿಗೆ ಸಾಲ ಸೌಲಭ್ಯ ನೀಡುವುದಿಲ್ಲ ಎಂದು ವಾಪಸ್ಸಾಗಿಸಿದ್ದಾರೆ. ಅಂತವರ ದಾಖಲೆಗಳನ್ನು ವಿಎಸ್‌ಎಸ್‌ಎನ್‌ಗೆ ವರ್ಗಾಯಿಸಿ ಸಾಲ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಇಲಾಖೆ ಪ್ರಗತಿ ಕುರಿತು ವಿವರಿಸಿದರು.
ತಾಲೂಕಿನಲ್ಲಿ ರಾಸುಗಳ ಜಾತ್ರೆಗಳು ಪ್ರಾರಂಭಗೊಳ್ಳುತ್ತಿದ್ದು, ರಾಸುಗಳಿಗೆ ಅಗತ್ಯ ಲಸಿಕೆ ಹಾಕುವ ಕುರಿತು ಸದಸ್ಯ ನಾರಾಯಣ್ ಪ್ರಶ್ನಿಸಿದರು. ಅಗತ್ಯ ಲಸಿಕೆ ಹಾಕುವ ಕಾರ್ಯಕ್ರಮ ನಿರಂತರವಾಗಿ ಕೈಗೊಂಡಿದ್ದೇವೆ. ವರದೇನಹಳ್ಳಿ ಹ್ಯಾಂಡ್ ಪೋಸ್ಟ್‌ನಲ್ಲಿ ಪಂಚಾಯ್ತಿ ನಿವೇಶನ ನೀಡಿದರೆ, ಪಶು ಚಿಕಿತ್ಸಾ ಕೇಂದ್ರದ ಕಟ್ಟಡ ನಿರ್ಮಿಸಿ ರೈತರಿಗೆ ಅನುಕೂಲ ಕಲ್ಪಿಸುವುದಾಗಿ ತಿಳಿಸಿದರು. ಇದಕ್ಕೆ ತಾಪಂ ಇಒ ಟಿ.ಪ್ರದೀಪ್ ಸೂಕ್ತ ನಿವೇಶನ ಗುರುತಿಸಿ ನೀಡಲು ಬಾಚೇನಹಟ್ಟಿ ಪಂಚಾಯ್ತಿ ಪಿಡಿಒಗೆ ಸೂಚಿಸುವುದಾಗಿ ತಿಳಿಸಿದರು.
ಅಕ್ಷರ ದಾಸೋಹ ಅಡುಗೆ ಸಿಬ್ಬಂದಿಗೆ ಆಯುಷ್ಮಾನ್ ಭಾರತ್ ಕಾರ್ಡ್ ನೀಡಲು ಕ್ರಮ ಕೈಗೊಳ್ಳಲಾಗಿದೆ. ಶಾಲಾ ಕೈತೋಟದಲ್ಲಿ ಪಪ್ಪಾಯಿ ಮತ್ತು ನುಗ್ಗೆ ಬೆಳೆಸಲು ಅಗತ್ಯ ಸಸಿಗಳನ್ನು ತೋಟಗಾರಿಕೆಯ ಇಲಾಖೆಯಿಂದ ಸರಬರಾಜು ಮಾಡಲು ಅಗತ್ಯ ಕ್ರಮ ಪಂಚಾಯ್ತಿಗೆ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಗಂಗಾಧರ್ ಮನವಿ ಮಾಡಿದರು. ಈ ಸಂಬಂಧ ಪತ್ರ ಬರೆಯುವುದಾಗಿ ತಾಪಂ ಇಒ ಟಿ.ಪ್ರದೀಪ್ ತಿಳಿಸಿದರು.
ಸಭೆಯಲ್ಲಿ ಇಲಾಖಾವಾರು ಮಾಹಿತಿ ಪಡೆದರು. ಸದಸ್ಯರಾದ ನಾರಾಯಣಪ್ಪ, ನರಸಿಂಹಮೂರ್ತಿ, ಹನುಮೇಗೌಡ, ಹನುಮಂತರಾಯಪ್ಪ, ಸುಗುಣಾ ಕಾಮ ರಾಜ್, ಗಂಗಮ್ಮ, ದಿವ್ಯರಾಣಿ, ಶಿವಮ್ಮ, ರತ್ನಮ್ಮ, ಸುಧಾ ವಿಜಯಕುಮಾರ್, ತೋಟಗಾರಿಕೆ ಸಹಾಯಕ ನಿರ್ದೇಶಕ ನಾಗರಾಜು, ಕೃಷಿ ಸಹಾಯಕ ನಿರ್ದೆಶಕ ಶಿವಶಂಕರ್, ಅರಣ್ಯ ಇಲಾಖಾಧಿಕಾರಿ ಚಿದಾನಂದ್, ಬಿಸಿಎಂ ಅಧಿಕಾರಿ ನಾಗರಾಜು, ವ್ಯವಸ್ಥಾಪಕ ಸಚ್ಚಿದಾನಂದಮೂರ್ತಿ, ಲೆಕ್ಕಾಧಿಕಾರಿ ಮಂಗಳಮ್ಮ, ನರಸಿಂಹಮೂರ್ತಿ ಇತರರು ಇದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ
