ಮೇಲ್ಮನೆ ಚುನಾವಣೆ: ಕಟ್ಟುನಿಟ್ಟಾಗಿ ಕರ್ತವ್ಯ ನಿರ್ವಹಿಸಿ

Team Udayavani, Dec 6, 2021, 2:42 PM IST

ಮೇಲ್ಮನೆ ಚುನಾವಣೆ: ಕಟ್ಟುನಿಟ್ಟಾಗಿ ಕರ್ತವ್ಯ ನಿರ್ವಹಿಸಿ

ರಾಮನಗರ: ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನಪರಿಷತ್‌ಗೆ ನಡೆಯುತ್ತಿರುವ ಚುನಾವಣೆ ವೇಳೆ ಯಾವುದೇ ಲೋಪಗಳಿಗೆ ಅವಕಾಶವಾಗದಂತೆ ಕರ್ತವ್ಯ ನಿರ್ವಹಿಸುವಂತೆ ಚುನಾವಣಾ ವೀಕ್ಷಕಅಧಿಕಾರಿ ಶಿವಯೋಗಿ ಸಿ ಕಳಸದ್‌ ಜಿಲ್ಲಾಡಳಿತದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಡಿ.10ರಂದು ನಡೆಯುವ ಚುನಾವಣೆ ಸಂಬಂಧ ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ಸಿದ್ಧತೆಗಳ ಪರಿಶೀಲನೆಗೆಂದು ಭಾನುವಾರ ನಗರದ ಜಿಪಂ ಸಭಾಂಗಣದಲ್ಲಿನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದಅವರು,ವಿಧಾನ ಪರಿಷತ್‌ ಚುನಾವಣೆಗೆ ಕಡಿಮೆ ಮತದಾರರು, ಕಡಿಮೆ ಮತಗಟ್ಟೆಗಳಿವೆ ಎಂದು ಮೈ ಮರೆಯಬೇಡಿ. ಚುನಾವನಾ ಕರ್ತವ್ಯಕ್ಕೆ ನಿಯೋಜಿಸಿರುವ ಪ್ರತಿಯೊಬ್ಬರು ಎಚ್ಚರಿಕೆಯಿಂದ ತಮ್ಮ ಕರ್ತವ್ಯ ನಿಭಾಯಿಸಬೇಕು ಎಂದರು.

ಚುನಾವಣೆಗೆ ಪ್ರಕ್ರಿಯೆ: ಮತದಾನವು ಡಿ.10ರಂದು ಬೆಳಗ್ಗೆ 8ರಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ. ಮತದಾನ ನಡೆಯುವ ಕೊಠಡಿಯಲ್ಲಿ ಮತದಾನದಗೌಪ್ಯತೆ ಕಾಪಾಡುವ ರೀತಿ ಎಚ್ಚರಿಕೆ ವಹಿಸಬೇಕು.ಬೆಳಗ್ಗೆಯಿಂದ ಸಂಜೆವರೆಗೆ ವೀಡಿಯೋ ಚಿತ್ರೀಕರಣನಡೆಸಿ. ಇದಕ್ಕೆ ಬೇಕಿರುವ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು.

ಚುನಾವಣೆ ನೀತಿ ಪಾಲನೆ: ಮತದಾನ ಮಾಡುವ ಸಂದರ್ಭದಲ್ಲಿ ಮತದಾನದ ಕೊಠಡಿಗೆ ಮತದಾರರು ಮೊಬೈಲ್‌ ತೆಗೆದುಕೊಂಡುಹೋಗುವುದನ್ನು ನಿಷೇಧಿಸಲಾಗಿದೆ. ಕೊಠಡಿಯ ಹೊರಗೆ ಮೊಬೈಲ್‌ ಇಡುವ ವ್ಯವಸ್ಥೆ ಮಾಡಿ. ಮತದಾನವು ಗ್ರಾಪಂ ಕಚೇರಿ ಹಾಗೂ ನಗರ ಸ್ಥಳೀಯ ಸಂಸ್ಥೆಯ ಕಚೇರಿಗಳಲ್ಲಿ ನಡೆಸಬೇಕು. ಹೀಗಾಗಿ ಈ ಕೇಂದ್ರಗಳಲ್ಲಿ ಡಿ.10ರಂದು ಮತದಾನದ ಕೆಲಸದ ಹೊರತುಕಚೇರಿ ಕೆಲಸಗಳು ನಡೆಯದಂತೆ ಎಚ್ಚರಿಕೆ ವಹಿಸಿ ಸೂಚನೆ ಕೊಟ್ಟರು. ಸಿದ್ಧತೆ ಬಗ್ಗೆ ಪರಿಶೀಲನೆ: ಮಸ್ಟರಿಂಗ್‌ ಮತ್ತು ಡಿಮಸ್ಟರಿಂಗ್‌ ಕೆಲಸಗಳು ತಾಲೂಕು ಕೇಂದ್ರದಲ್ಲಿನಡೆಸಿ. ಮತಗಟ್ಟೆಗಳ ರೂಟ್‌ ಮ್ಯಾಪ್‌ ಮಾಡಿಕೊಂಡುಬೇಕಿರುವ ವಾಹನದ ವ್ಯವಸ್ಥೆಗಳನ್ನು ಮಾಡಿಕೊಳ್ಳಿ ಎಂದರು.

ಇದೇ ವೇಳೆ ಅವರು ಚುನಾವಣೆಗೆ ನಿಯೋಜಿಸಿರುವ ಸಿಬ್ಬಂದಿ ಸಂಖ್ಯೆ, ಅವರು ಪಡೆದಿರುವ ತರಬೇತಿ ಕುರಿತು ಮಾಹಿತಿ ಪಡೆದರು.

ಜಿಲ್ಲೆಯಲ್ಲಿ 2062 ಮತದಾರರು: ಜಿಲ್ಲಾಧಿಕಾರಿ ಡಾ: ರಾಕೇಶ್‌ ಕುಮಾರ್‌ ಕೆ ಅವರು ಮಾತನಾಡಿ ಜಿಲ್ಲೆಯಲ್ಲಿ 973 ಪುರುಷರು ಹಾಗೂ 1089 ಮಹಿಳೆಯರು ಸೇರಿ ಒಟ್ಟು 2062 ಮತದಾರರಿದ್ದಾರೆ. 122 ಗ್ರಾಪಂ ಹಾಗೂ 4 ನಗರ ಸ್ಥಳೀಯ ಸಂಸ್ಥೆಗಳು ಸೇರಿ ಒಟ್ಟು 126 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ. ಇದರಲ್ಲಿ 24 ಮತಗಟ್ಟೆ ಗಳನ್ನು ಅತಿ ಸೂಕ್ಷ್ಮ ಹಾಗೂ 49 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಲಾಗಿದೆ ಎಂದರು.

ನೋಡಲ್‌ ಅಧಿಕಾರಿಗಳ ನೇಮಕ: ಮಸ್ಟರಿಂಗ್‌ ಮತ್ತು ಡಿಮಸ್ಟರಿಂಗ್‌ ಕೇಂದ್ರಗಳಿಗೆ ನೋಡಲ್‌ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. 145 ಪಿಆರ್‌ಒಗಳು, 145ಎಪಿಆ ರ್‌ಒ, 145 ಮೈಕ್ರೋ ವೀಕ್ಷಕರನ್ನು ನೇಮಕ ಮಾಡಿ ತರಬೇತಿ ನೀಡಲಾಗಿದೆ. ಮಾದರಿ ನೀತಿ ಸಂಹಿತೆಗೆ ಸಂಬಂಧಿಸಿದಂತೆ ಪ್ರತಿತಾಲೂಕಿಗೆ ಎರಡು ತಂಡ ರಚಿಸಿ ನೋಡಲ್‌ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ವೀಕ್ಷಕರಿಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಪಂ ಸಿಇಒಇಕ್ರಮ್‌, ಎಸ್ಪಿ ಎಸ್‌.ಗಿರೀಶ್‌, ಅಪರ ಜಿಲ್ಲಾಧಿಕಾರಿ ಜವರೇಗೌಡ ಟಿ, ಜಿಪಂ ಉಪಕಾರ್ಯದರ್ಶಿ ರಮೇಶ್‌, ತಹಶೀಲ್ದಾರರು ಗಳಾದ ವಿಜಯ್‌ ಕುಮಾರ್‌, ವಿಶ್ವನಾಥ್‌, ಶ್ರೀನಿವಾಸ್‌ ಪ್ರಸಾದ್‌ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

1-sadasd

BJP-JDS ಮೈತ್ರಿ ಯಾರ “ಸಂತೋಷ”ಕ್ಕೆ?: ವಾಗ್ದಾಳಿ ವಿಡಿಯೋ ಹಂಚಿ ಕಾಂಗ್ರೆಸ್ ಟಾಂಗ್

BJP-JDS ಮೈತ್ರಿ ಬಗ್ಗೆ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಹೇಳಿದ್ದೇನು?

BJP-JDS ಮೈತ್ರಿ ಬಗ್ಗೆ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಹೇಳಿದ್ದೇನು?

vijayen

Cauvery ವಿಚಾರದಲ್ಲಿ ರಾಜ್ಯ ಸರಕಾರ ತಲೆ ಕೆಡಿಸಿಕೊಂಡಿರದಿರುವುದು ಅಕ್ಷಮ್ಯ:ವಿಜಯೇಂದ್ರ

11-chikkamagaluru

Chikkamagaluru: ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ: ಮೂವರು ಪಾರು !

1-wqewqwqe

Raichur: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಪತ್ನಿಯನ್ನು ಕೊಂದು ಪತಿ ನೇಣಿಗೆ ಶರಣು

iPhone 15ಗಾಗಿ ಮೊಬೈಲ್‌ ಅಂಗಡಿ ಸಿಬ್ಬಂದಿಯನ್ನೇ ಹಿಗ್ಗಾಮುಗ್ಗಾವಾಗಿ ಥಳಿಸಿದ ಗ್ರಾಹಕರು.!

iPhone 15ಗಾಗಿ ಮೊಬೈಲ್‌ ಅಂಗಡಿ ಸಿಬ್ಬಂದಿಯನ್ನೇ ಹಿಗ್ಗಾಮುಗ್ಗಾವಾಗಿ ಥಳಿಸಿದ ಗ್ರಾಹಕರು.!

Nijjar: ಕೆನಡಾದಲ್ಲಿ ಇದ್ದುಕೊಂಡೇ ಭಾರತ ಮೇಲಿನ ದಾಳಿಗೆ ಧನಸಹಾಯ ಮಾಡುತ್ತಿದ್ದ ನಿಜ್ಜರ್

Nijjar: ಕೆನಡಾದಲ್ಲಿ ಇದ್ದುಕೊಂಡೇ ಭಾರತದಲ್ಲಿ ದಾಳಿಗೆ ಧನಸಹಾಯ ಮಾಡುತ್ತಿದ್ದ ನಿಜ್ಜರ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ramnagar: ಡಿಕೆಶಿ ಕೋಟೆಯಲ್ಲಿ ಮೈತ್ರಿ ಕಮಾಲ್‌ ಮಾಡುತ್ತಾ?

Ramnagar: ಡಿಕೆಶಿ ಕೋಟೆಯಲ್ಲಿ ಮೈತ್ರಿ ಕಮಾಲ್‌ ಮಾಡುತ್ತಾ?

Ramanagar; ವಸತಿ ಶಾಲೆಯಲ್ಲಿ ನೀರಿನ ಸಂಪು ಕುಸಿದು ಬಾಲಕ ಸಾವು

Ramanagar; ವಸತಿ ಶಾಲೆಯಲ್ಲಿ ನೀರಿನ ಸಂಪು ಕುಸಿದು ಬಾಲಕ ಸಾವು

tdy-4

Mekedatu: ಕಾವೇರಿ ಸಂಕಷ್ಟಕ್ಕೆ ಮೇಕೆದಾಟು ಅಣೆಕಟ್ಟು ಪರಿಹಾರ

Cauvery Issue ರಾಜ್ಯದ ರೈತರ ಹಿತಕಾಯುವಲ್ಲಿ ರಾಜ್ಯ ಸರ್ಕಾರ ಎಡವಿದೆ: ಕುಮಾರಸ್ವಾಮಿ ಆರೋಪ

Cauvery Issue ರಾಜ್ಯದ ರೈತರ ಹಿತಕಾಯುವಲ್ಲಿ ರಾಜ್ಯ ಸರ್ಕಾರ ಎಡವಿದೆ: ಕುಮಾರಸ್ವಾಮಿ ಆರೋಪ

Missing: ರಾಮನಗರ: ಬಾಲಮಂದಿರದಿಂದ ಮೂವರು ಬಾಲಕರು ನಾಪತ್ತೆ

Missing: ರಾಮನಗರ: ಬಾಲಮಂದಿರದಿಂದ ಮೂವರು ಬಾಲಕರು ನಾಪತ್ತೆ

MUST WATCH

udayavani youtube

ಮೈಸೂರಿನ ಕೃಷ್ಣಧಾಮಕ್ಕೆ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಭೇಟಿ

udayavani youtube

ಓಡಿಸ್ಸಾದ ಮರಳಿನಲ್ಲಿ ಅರಳಿದ ಸ್ಟೀಲ್ ಗಣಪ

udayavani youtube

ಯಾಕಾಗಿ ಗಣೇಶ ಹಲವು ಕೈಗಳನ್ನು ಹೊಂದಿದ್ದಾನೆ ?

udayavani youtube

69 ಕೆಜಿ ಚಿನ್ನ 336 ಕೆಜಿ ಬೆಳ್ಳಿ ಇದು ಮುಂಬೈನ ಶ್ರೀಮಂತ ಗಣಪತಿ|

udayavani youtube

ಕಾರಂತರ ಹೋಟೆಲ್ ಊಟ ಬೇಕಾದ್ರೆ ಫೋನ್ ಮಾಡಿ ಹೇಳಬೇಕು!

ಹೊಸ ಸೇರ್ಪಡೆ

1-sadasd

BJP-JDS ಮೈತ್ರಿ ಯಾರ “ಸಂತೋಷ”ಕ್ಕೆ?: ವಾಗ್ದಾಳಿ ವಿಡಿಯೋ ಹಂಚಿ ಕಾಂಗ್ರೆಸ್ ಟಾಂಗ್

BJP-JDS ಮೈತ್ರಿ ಬಗ್ಗೆ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಹೇಳಿದ್ದೇನು?

BJP-JDS ಮೈತ್ರಿ ಬಗ್ಗೆ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಹೇಳಿದ್ದೇನು?

vijayen

Cauvery ವಿಚಾರದಲ್ಲಿ ರಾಜ್ಯ ಸರಕಾರ ತಲೆ ಕೆಡಿಸಿಕೊಂಡಿರದಿರುವುದು ಅಕ್ಷಮ್ಯ:ವಿಜಯೇಂದ್ರ

11-chikkamagaluru

Chikkamagaluru: ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ: ಮೂವರು ಪಾರು !

Bahrain: ನೂತನ ನಿಯೋಜಿತ ರಾಯಭಾರಿ ಭೇಟಿ

Bahrain: ನೂತನ ನಿಯೋಜಿತ ರಾಯಭಾರಿ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.