ಪ್ರಸನ್ನ ಪಿ.ಗೌಡ ಅಧಿಕೃತವಾಗಿ ಜೆಡಿಎಸ್‌ ಸೇರ್ಪಡೆ

Team Udayavani, Mar 28, 2023, 12:32 PM IST

tdy-11

ಚನ್ನಪಟ್ಟಣ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಸಂಭಾವ್ಯ ಅಭ್ಯರ್ಥಿ, ಉದ್ಯಮಿ ಪಂಚಮಿ ಪ್ರಸನ್ನ ಪಿ.ಗೌಡ ಅವರು ಚನ್ನಪಟ್ಟಣದ ತಮ್ಮ ಕಚೇರಿಯಲ್ಲಿ ಮಾಜಿ ಸಿಎಂ ಎಚ್‌.ಡಿ.  ಕುಮಾರಸ್ವಾಮಿ ಹಾಗೂ ಸ್ಥಳೀಯ ಜೆಡಿಎಸ್‌ ಮುಂಚೂಣಿ ಮುಖಂಡರ ಸಮ್ಮುಖದಲ್ಲಿ ಜೆಡಿಎಸ್‌ಗೆ ಸೋಮವಾರ ಅಧಿಕೃತವಾಗಿ ಸೇರ್ಪಡೆಯಾದರು.

ಚನ್ನಪಟ್ಟಣ ಟಿಕೆಟ್‌ ಸಿಗುವುದು ಅನುಮಾನ ಎನ್ನುವ ಸುಳಿವು ಸಿಗುತ್ತಿದ್ದಂತೆಯೇ ಪ್ರಸನ್ನ ಪಿ.ಗೌಡ ಕಾಂಗ್ರೆಸ್‌ ತೊರೆದು ಜೆಡಿಎಸ್‌ನತ್ತ ಮುಖ ಮಾಡಿದ್ದಾರೆ. ಮೈಸೂರಿನಲ್ಲಿ ನಡೆದ ಜೆಡಿಎಸ್‌ ಪಂಚರತ್ನ ರಥಯಾತ್ರೆ ಸಮಾರೋಪದಲ್ಲಿ ಜೆಡಿಎಸ್‌ ಸೇರುವ ಇಂಗಿತ ವ್ಯಕ್ತಪಡಿಸಿದ್ದರು. ಇದೀಗ ಸ್ವತಃ ಕುಮಾರಸ್ವಾಮಿ ಅವರೇ ಪಕ್ಷದ ಶಾಲು, ಮೈಸೂರು ಪೇಟ ಹಾಗೂ ಹಾರ ತುರಾಯಿ ಹಾಕುವ ಮೂಲಕ ಉದ್ಯಮಿ ಪ್ರಸನ್ನ ಪಿ.ಗೌಡರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ಅಧಿಕೃತ: ಪ್ರಸನ್ನ ಪಿ.ಗೌಡ ಮಾತನಾಡಿ, “ಚನ್ನ ಪಟ್ಟಣ ದಲ್ಲಿ ನಾನು ಕಾಂಗ್ರೆಸ್‌ ಅಭ್ಯರ್ಥಿಯಾಗ ಬೇಕಿತ್ತು. ಆದರೆ, ಕಾಂಗ್ರೆಸ್‌ನ ನಾಯಕತ್ವದಿಂದ ಬೇಸತ್ತಿರುವೆ. ಆ ಪಕ್ಷದಲ್ಲಿ ಸ್ಪಷ್ಟ ನಿಲುವು ಇಲ್ಲ. ಸುಳ್ಳು ಘೋಷಣೆ ಮಾಡಿ ಜನರ ದಾರಿ ತಪ್ಪಿಸುತ್ತಿ ದ್ದಾರೆ. ಹೀಗಾಗಿ ಕುಮಾರಸ್ವಾಮಿ ನಾಯಕತ್ವ ಮೆಚ್ಚಿಕೊಂಡು ಜೆಡಿಎಸ್‌ ಸೇರುತ್ತಿದ್ದೇನೆ’ ಎಂದರು.

ಸೇರ್ಪಡೆ: ಕಾಂಗ್ರೆಸ್‌ ಮೊದಲ ಪಟ್ಟಿಯಲ್ಲಿ ರಾಮನಗರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದ ಪೈಕಿ 3 ಕ್ಷೇತ್ರಕ್ಕೆ ಟಿಕೆಟ್‌ ಘೋಷಿಸಲಾಗಿದೆ. ಆದರೆ, ಚನ್ನಪಟ್ಟಣ ಕ್ಷೇತ್ರಕ್ಕೆ ಟಿಕೆಟ್‌ ಫೈನಲ್‌ ಆಗದ ಕಾರಣ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ರಿಗೆ ಕೈ ನಾಯಕರು ಬಲೆ ಬೀಸಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಹಾಗೆಯೇ ನಟಿ ರಮ್ಯಾ ಕೂಡ ಚನ್ನಪಟ್ಟಣದಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಮಾತು ಹರಿದಾಡುತ್ತಿವೆ. ಹೀಗಾಗಿ ಈ ಎಲ್ಲಾ ಬೆಳವಣಿಗೆ ಗಮನಿಸಿ ಹಲವರೂ ಜೆಡಿಎಸ್‌ಗೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಜಿಲ್ಲಾ ಜೆಡಿಎಸ್‌ ಅಧ್ಯಕ್ಷ, ಮಾಗಡಿ ಶಾಸಕ ಎ.ಮಂಜುನಾಥ್‌, ವಿಧಾನ ಪರಿಷತ್‌ ಮಾಜಿ ಸದಸ್ಯ ರಮೇಶ್‌ಗೌಡ, ಜೆಡಿಎಸ್‌ ತಾಲೂಕು ಅಧ್ಯಕ್ಷ ಎಚ್‌.ಸಿ.ಜಯಮುತ್ತು, ನಗರ ಘಟಕದ ಅಧ್ಯಕ್ಷ ಅಜಯ್‌ ಕುಮಾರ್‌, ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಕುಕ್ಕೂರುದೊಡ್ಡಿ ಜಯ ರಾಮು, ಒಕ್ಕಲಿಗರ ಸಂಘದ ನಿರ್ದೇಶಕ ಹಾಪ್‌ ಕಾಮ್ಸ್‌ ಸಿ.ದೇವರಾಜು, ಮುಖಂಡರಾದ ಎಂ.ಸಿ. ಕರಿಯಪ್ಪ, ಬೋರ್‌ ವೆಲ್‌ ರಾಮಚಂದ್ರು, ವಡ್ಡರ ಹಳ್ಳಿ ರಾಜಣ್ಣ, ರಂಗಸ್ವಾಮಿ ಮತ್ತಿತರರು ಇದ್ದರು.

ಟಾಪ್ ನ್ಯೂಸ್

2-wadi

ವಾಡಿ: ಶಿವಲಿಂಗ ಕಿತ್ತು ನಿಧಿ ಶೋಧಿಸಿದ ಕಳ್ಳರು

ಮಂಡ್ಯ: ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಕಾರು: ನಾಲ್ವರು ಯುವಕರು ಸಾವು

ಮಂಡ್ಯ: ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಕಾರು: ನಾಲ್ವರು ಯುವಕರು ಸಾವು

ಮಾಜಿ ಎನ್ ಸಿಬಿ ನಿರ್ದೇಶಕ ಸಮೀರ್ ವಾಂಖೆಡೆಗೆ ದಾವೂದ್ ಇಬ್ರಾಹಿಂನಿಂದ ಬೆದರಿಕೆ ಕರೆ

ಮಾಜಿ ಎನ್ ಸಿಬಿ ನಿರ್ದೇಶಕ ಸಮೀರ್ ವಾಂಖೆಡೆಗೆ ದಾವೂದ್ ಇಬ್ರಾಹಿಂನಿಂದ ಬೆದರಿಕೆ ಕರೆ

Surathkal ರಸ್ತೆ ಅಪಘಾತ: ಮೂವರು ಪ್ರಾಣಾಪಾಯದಿಂದ ಪಾರು

Surathkal ರಸ್ತೆ ಅಪಘಾತ: ಮೂವರು ಪ್ರಾಣಾಪಾಯದಿಂದ ಪಾರು

tdy-3

Borewell: 19 ಗಂಟೆಗಳ ಕಾರ್ಯಾಚರಣೆ; ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಕಂದಮ್ಮ ಮೃತ್ಯು

siddaramaiah

ಸಿದ್ರಾಮಣ್ಣೋರ್‌ ಫೈವ್‌ ಗ್ಯಾರಂಟಿ ಕೊಟ್‌ಮ್ಯಾಕೆ ಲೈಫ್ ಈಸ್‌ ಜಿಂಗಾಲಾಲಾ…

amitTelangana Polls; ತೆಲಂಗಾಣ ಚುನಾವಣೆಗೆ ಬಿಜೆಪಿ ಜತೆ ಟಿಡಿಪಿ ಮೈತ್ರಿ?

Telangana Polls; ತೆಲಂಗಾಣ ಚುನಾವಣೆಗೆ ಬಿಜೆಪಿ ಜತೆ ಟಿಡಿಪಿ ಮೈತ್ರಿ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

KSRTC ನಡಿಬೇಕಲ್ಲ, ಗಂಡಸ್ರು ಟಿಕೇಟ್ ತಕೊಳ್ರಪ್ಪ…: ಡಿಕೆ ಶಿವಕುಮಾರ್

KSRTC ನಡಿಬೇಕಲ್ಲ, ಗಂಡಸ್ರು ಟಿಕೆಟ್ ತಕೊಳ್ರಪ್ಪ…: ಡಿಕೆ ಶಿವಕುಮಾರ್

jds

Wild animals ದಾಳಿ ತಡೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಹೆಚ್ ಡಿಕೆ ಆಗ್ರಹ

ಸೋರುತಿಹುದು ಸರ್ಕಾರಿ ಶಾಲೆಗಳ ಮಾಳಿಗೆ! ಜಿಲ್ಲೆಯ ನೂರಾರು ಶಾಲಾ ಕೊಠಡಿಗಳು ಶಿಥಿಲ

ಸೋರುತಿಹುದು ಸರ್ಕಾರಿ ಶಾಲೆಗಳ ಮಾಳಿಗೆ! ಜಿಲ್ಲೆಯ ನೂರಾರು ಶಾಲಾ ಕೊಠಡಿಗಳು ಶಿಥಿಲ

ನನ್ನನ್ನು CM ಮಾಡಬೇಕೆಂದು ನೀವು ಗೆಲ್ಲಿಸಿದಿರಿ, ಆದರೆ..: ಕನಕಪುರದಲ್ಲಿ ಡಿಕೆ ಶಿವಕುಮಾರ್

ನನ್ನನ್ನು CM ಮಾಡಬೇಕೆಂದು ನೀವು ಗೆಲ್ಲಿಸಿದಿರಿ, ಆದರೆ..: ಕನಕಪುರದಲ್ಲಿ ಡಿಕೆ ಶಿವಕುಮಾರ್

ರಾಮನಗರ: ಕಾಡಾನೆ ದಾಳಿಗೆ ಮಾವಿನತೋಟದ ಕಾವಲುಗಾರ ಬಲಿ

ರಾಮನಗರ: ಕಾಡಾನೆ ದಾಳಿಗೆ ಮಾವಿನತೋಟದ ಕಾವಲುಗಾರ ಬಲಿ

MUST WATCH

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

ಹೊಸ ಸೇರ್ಪಡೆ

2-wadi

ವಾಡಿ: ಶಿವಲಿಂಗ ಕಿತ್ತು ನಿಧಿ ಶೋಧಿಸಿದ ಕಳ್ಳರು

ಮಂಡ್ಯ: ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಕಾರು: ನಾಲ್ವರು ಯುವಕರು ಸಾವು

ಮಂಡ್ಯ: ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಕಾರು: ನಾಲ್ವರು ಯುವಕರು ಸಾವು

ಮಾಜಿ ಎನ್ ಸಿಬಿ ನಿರ್ದೇಶಕ ಸಮೀರ್ ವಾಂಖೆಡೆಗೆ ದಾವೂದ್ ಇಬ್ರಾಹಿಂನಿಂದ ಬೆದರಿಕೆ ಕರೆ

ಮಾಜಿ ಎನ್ ಸಿಬಿ ನಿರ್ದೇಶಕ ಸಮೀರ್ ವಾಂಖೆಡೆಗೆ ದಾವೂದ್ ಇಬ್ರಾಹಿಂನಿಂದ ಬೆದರಿಕೆ ಕರೆ

1-mundaragi

ಮುಂಡರಗಿ: ದ್ವಿ ಚಕ್ರ ವಾಹನ-ಬಸ್‌ ಅಪಘಾತ; ಸವಾರ ಸಾವು

Surathkal ರಸ್ತೆ ಅಪಘಾತ: ಮೂವರು ಪ್ರಾಣಾಪಾಯದಿಂದ ಪಾರು

Surathkal ರಸ್ತೆ ಅಪಘಾತ: ಮೂವರು ಪ್ರಾಣಾಪಾಯದಿಂದ ಪಾರು