ಅನುದಾನ ತಾರತಮ್ಯ ವಿರೋಧಿಸಿ ಪ್ರತಿಭಟನೆ


Team Udayavani, Nov 22, 2022, 2:52 PM IST

ಅನುದಾನ ತಾರತಮ್ಯ ವಿರೋಧಿಸಿ ಪ್ರತಿಭಟನೆ

ರಾಮನಗರ: ಕೇಂದ್ರದಲ್ಲಿ ಮೋದಿ ಇದ್ದ ಹಾಗೇ ಮಾಗಡಿಯಲ್ಲಿ ಶಾಸಕ ಎ. ಮಂಜುನಾಥ್‌ ಇಬ್ಬರ ಹೇಳಿಕೆಗಳೂ ಒಂದೇ ಆಗಿದೆ. ಇಬ್ಬರು ಸುಳ್ಳಿನಲ್ಲಿ ಸಾಮ್ರಾಜ್ಯ ಕಟ್ಟುತ್ತಿದ್ದಾರೆ. ಕೂಡಲೇ ಅದನ್ನ ಸರಿಪಡಿಸಿಕೊಳ್ಳದಿದ್ದರೆ ಇನ್ನು ಕೆಲವೇ ದಿನಗಳಲ್ಲಿ ಚುನಾವಣೆ ಬರುತ್ತಿದೆ. ಜನರು ತೀರ್ಮಾನಿ ಸುತ್ತಾರೆ ಎಂದು ವಿಧಾನಪರಿಷತ್‌ ಸದಸ್ಯ ಸಿ.ಎಂ. ಲಿಂಗಪ್ಪ ಹೇಳಿದರು.

ಬಿಡದಿ ಪುರಸಭೆಯಲ್ಲಿ ಅನುದಾನ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿ ಅಧಿಕಾರಿಗಳು ಮತ್ತು ಶಾಸಕರ ವರ್ತನೆ ವಿರೋಧಿಸಿ ಕಾಂಗ್ರೆಸ್‌ ನಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿ, ಯಾವುದೇ ಶಾಸಕ ಅಥವಾ ಪ್ರತಿನಿಧಿ ಅಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಂಡರೆ ಅದು ಅವರ ಸ್ವಂತದ್ದಲ್ಲ, ಸರ್ಕಾರದ ಹಣ. ಜನರು ಕಟ್ಟಿದ ತೆರಿಗೆಯಿಂದ ಬಂದ ಹಣವೇ ಆಗಿದೆ. ಆದರೂ, ಸರ್ಕಾರದಲ್ಲಿ ದುಡ್ಡಿಲ್ಲ, ಕೇವಲ ಬಾಯಿ ಮಾತಿಗೆ ಅಭಿವೃದ್ಧಿ ಮಂತ್ರ ಜಪಿಸುತ್ತಿದ್ದಾರೆ. ಹೊಸ ಯೋ ಜನೆಗಳೇನಾದರೂ ಇದ್ದರೆ ಹೇಳಲಿ, ಜೊತೆಗೆ 3 ಕೋಟಿ ಅನುದಾನ ಅವರೇನು ವಿಶೇಷವಾಗಿ ತಂದಿಲ್ಲ. ಎಲ್ಲಾ ಶಾಸಕರಿಗೆ ನೀಡಿದಂತೆ ಅವರಿಗೂ ನೀಡಿದ್ದಾರೆ. ಆದ್ದರಿಂದ ಎ. ಮಂಜುನಾಥ್‌ ಸುಳ್ಳು ಹೇಳುವುದನ್ನ ನಿಲ್ಲಿಸಬೇಕು ಎಂದರು.

ಸಾರ್ವಜನಿಕವಾಗಿ ಹೇಳಿ: ಸಂಪರ್ಕ ಸಭೆಯಲ್ಲಿ ಅಭಿವೃದ್ಧಿ ಕಾರ್ಯಗಳ ವಿವರ ನೀಡುವುದಾಗಿ ಹೇಳಿದ್ದರು, ಆದರೆ, ತುಟಿಬಿಚ್ಚಲಿಲ್ಲ ಏಕೆ?. ಯಾವುದೇ ಜನಪ್ರತಿನಿಧಿಗಳು ಪೂಜೆ ಮಾಡಿ ಹೋಗುವುದಲ್ಲ. ಜನತೆಗೆ ಗೊತ್ತಾಗಬೇಕು ಏನೆಲ್ಲಾ ಕೆಲಸ ಮಾಡುತ್ತಿದ್ದಾರೆ ಎಂದು, ಬನ್ನಿ ಸಾರ್ವಜನಿಕವಾಗಿ ಹೇಳಿ ಎಂದು ಶಾಸಕರಿಗೆ ಸವಾಲು ಹಾಕಿದರು.

ಶಾಸಕರು ಮತ್ತು ಬಿಡದಿ ಪುರಸಭೆ ಆಡಳಿತಾ ಧಿಕಾರಿಗಳಾಗಿ ರುವ ಉಪವಿಭಾಗಾಧಿಕಾರಿಗಳಿಗೆ ಕನಿಷ್ಠ ಜ್ಞಾನವಿಲ್ಲ. ಎಲ್ಲಾ ಚುನಾಯಿತ ಪ್ರತಿನಿಧಿ ಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡ ಬೇಕು ಎಂಬ ಬಗ್ಗೆ ತಿಳುವಳಿಕೆ ಇಲ್ಲ. ಬಿಡದಿ ಪುರ ಸಭೆಯಲ್ಲಿ ಪ್ರತಿನಿಧಿಗಳ ತಂಡ ಇಲ್ಲದಿರುವುದು ಸರ್ಕಾರದ ಆಡಳಿತ ವೈಖರಿಗೆ ಹಿಡಿದ ಕನ್ನಡಿಯಾಗಿದೆ ಎಂದರು.

ಅರ್ಧ ದಿನಕ್ಕೆ ಜಾಗ ಖಾಲಿ: ರಾಮನಗರ ಉಪ ವಿಭಾಗಾಧಿಕಾರಿಗಳು ವಾರದಲ್ಲಿ ಎರಡು ದಿನ ಮಾತ್ರ ಕಚೇರಿಗೆ ಬರುತ್ತಾರೆ. ಅದೂ ಅರ್ಧ ದಿನಕ್ಕೆ ಜಾಗ ಖಾಲಿ ಮಾಡುತ್ತಾರೆ. ಯಾವಾಗ ಕೇಳಿ ದರೂ, ಕೋರ್ಟ್‌ ಎನ್ನುತ್ತಾರೆ. ಅವರ ಕೋರ್ಟ್‌ ಇರೋದು ಪದ್ಮನಾಭನಗರದ ಅಶೋಕ್‌ ಮನೆ ಯಲ್ಲಿ. ಅವರ ಸ್ವಂತ ಕೆಲಸ ಮಾಡಿಕೊಡುವುದ ಕ್ಕಾಗಿ ಇವರನ್ನ ಇಲ್ಲಿಗೆ ವರ್ಗಾವಣೆ ಮಾಡಿಸಿದ್ದಾರೆ. ನಾವು ಕೂಡ 1965ರಿಂದ ಅದೆಷ್ಟು ಎಸಿಗಳನ್ನು ಕಂಡಿದ್ದೇವೆ. ಇಂತಹ ಉಪವಿಭಾಗಾಧಿಕಾರಿಗಳು ಯಾರೂ ಇರಲಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ನಾವು ಎಲ್ಲದಕ್ಕೂ ಸಿದ್ಧ: ಮಾಜಿ ಶಾಸಕ ಎಚ್‌.ಸಿ. ಬಾಲಕೃಷ್ಣ ಮಾತನಾಡಿ, ಬಿಡದಿ ಪುರಸಭೆಗೆ ಬರುವ ಹಣ ಸರ್ಕಾರದ್ದು. ಶಾಸಕರ ಸ್ವಂತ ಹಣವಲ್ಲ. ಅವರು ಎಲ್ಲೋ ಕುಳಿತು ತೀರ್ಮಾನ ಮಾಡಲು ಬರಲ್ಲ. ಆದರೆ, ಅದನ್ನು ಮುಂದು ವರಿಸಿ, ಮತ್ತಷ್ಟು ಅವಾಂತರ ಸೃಷ್ಟಿಸಿದ್ದಾರೆ. ಶಾಸಕರೇ ನಾನು ನಿಮಗಿಂತ ಮೊದಲೇ ಎರಡು ಭಾರಿ ಜೆಡಿಎಸ್‌ನಲ್ಲೇ ಶಾಸಕನಾಗಿದ್ದೇನೆ. ನೀವು ಕ್ಷೇತ್ರದ ಪ್ರತಿಯೊಬ್ಬರಿಗೂ ಶಾಸಕರಾಗಿರಬೇಕು. ಕಾಂಗ್ರೆಸ್‌ ಪುರಸಭಾ ಸದಸ್ಯರು ಇರುವ ವಾರ್ಡ್‌ ನ ನ ಜನರು ನಿಮಗೆ ಮತ ನೀಡಿಲ್ಲವೆ?. ಶಾಸಕ ಮಂಜುನಾಥ್‌ ಉತ್ತರ ಕುಮಾರ ಇದ್ದಹಾಗೆ. ತಾಕತ್ತಿನ ಬಗ್ಗೆ ಮಾತನಾಡಿದ್ದಾರೆ. ಅವರು ಅಭಿವೃದ್ಧಿ ವಿಚಾರಗಳ ಚರ್ಚೆಗೆ ಬರಲ್ಲ. ಅವರದ್ದು ಪಲಾಯನವಾದ. ಅಂತಹ ತಾಕತ್ತನ್ನು ನಾವು ಕಂಡಿದ್ದೇವೆ. ವೇದಿಕೆಗೆ ಬನ್ನಿ ನಾವು ಎಲ್ಲದಕ್ಕೂ ಸಿದ್ಧರಿದ್ದೇವೆ ಎಂದು ಹೇಳಿದರು.

ಕ್ರಮ ಕೈಗೊಳ್ಳುವ ಭರವಸೆ: ಬಿಡದಿ ಪುರಸಭೆ ಬಳಿ ಜಮಾಯಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಒತ್ತಾಯಕ್ಕೆ ಉತ್ತರಿಸುವಲ್ಲಿ ಚೀಫ್‌ ಆಫೀಸರ್‌ ಗೊಂದಲದ ಹೇಳಿಕೆ ನೀಡಿದ್ದರಿಂದ ಅವರ ವಿರುದ್ಧ ಉಪವಿಭಾಗಾಧಿಕಾರಿಗಳ ಸಮ್ಮುಖದಲ್ಲೇ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಉಪವಿಭಾಗಾಧಿಕಾರಿ ಮಂಜುನಾಥ್‌ ಮಾತನಾಡಿ, ಜಿಲ್ಲಾಧಿಕಾರಿಗಳ ಜೊತೆಗೆ ಚರ್ಚಿಸಿ, ಆದಷ್ಟು ಬೇಗ ಸೂಕ್ತ ಕ್ರಮ ಕೈಗೊಂಡು ತಾರತಮ್ಯ ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ತಾಪಂ ಮಾಜಿ ಅಧ್ಯಕ್ಷ ಗಾಣಕಲ್‌ ನಟರಾಜ್‌, ಮುಖಂಡ ಚಂದ್ರಶೇಖರ್‌.ಎಲ್‌ ಸೇರಿದಂತೆ ಬಿಡದಿ ಪುರಸಭೆ ಸದಸ್ಯರು, ಕಾರ್ಯಕರ್ತರು ಹಾಜರಿದ್ದರು.

ಎಲ್ಲರೂ ತೆರಿಗೆ ಕಟ್ಟುತ್ತಾರೆ. ಬಿಡದಿ ಪುರಸಭೆ ವಾರ್ಡ್‌ಗಳಿಗೆ ಸಮಾನ ಹಂಚಿಕೆಯಾಗಬೇಕಿದ್ದ ಹಣ, ಕೇವಲ ಜೆಡಿಎಸ್‌ ಸದಸ್ಯರು ಪ್ರತಿನಿಧಿಸಿ ಜಯ ಗಳಿಸಿರುವ ವಾರ್ಡ್‌ಗಳಿಗೆ ಮಾತ್ರ ನೀಡಿದ್ದು, ಅಕ್ಷಮ್ಯವಾಗಿದೆ. ಕೂಡಲೇ ಸರಿಪಡಿಸಬೇಕು. ಇಲ್ಲವಾದರೆ ಕೈ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಕಾಮಗಾರಿ ನಡೆಯಲು ಬಿಡಲ್ಲ. – ಸಿ.ಎಂ.ಲಿಂಗಪ್ಪ, ವಿಧಾನ ಪರಿಷತ್‌ ಸದಸ್ಯ

ಸರ್ಕಾರದ ಅನುದಾನ ಹಂಚಿಕೆ ಯಲ್ಲಿ ಶಾಸಕರ ಒತ್ತಡಕ್ಕೆ ಅಧಿಕಾರಿ ಗಳು ಮಣಿದಿದ್ದಾರೆ. ಕೂಡಲೇ ವ್ಯತ್ಯಾಸ ಸರಿಪಡಿಸಬೇಕು. ಇಲ್ಲವಾದರೆ ಪ್ರತಿಭ ಟನೆ ತೀವ್ರಸ್ವರೂಪ ಪಡೆಯುತ್ತದೆ. ಅಲ್ಲದೆ, ಯಾವ ವಾರ್ಡ್‌ಗೆ ಅನುದಾನ ನೀಡಿಲ್ಲ, ಅಂತಹ ವಾರ್ಡ್‌ಗಳ ಜನ ತೆರೆಗೆ ಕಟ್ಟದಂತೆ ಮಾಡಿ ಹೋರಾಟ ಮಾಡುತ್ತೇವೆ. – ಎಚ್‌.ಸಿ.ಬಾಲಕೃಷ್ಣ, ಮಾಜಿ ಶಾಸಕ

ಟಾಪ್ ನ್ಯೂಸ್

ತಲೆಮರೆಸಿಕೊಂಡಿದ್ದ ಅಮೃತ್‌ಪಾಲ್‌ ಸಿಂಗ್ ಶರಣಾಗಲು ಯೋಜಿಸಿದ್ದಾನಾ ?

ಹತ್ತು ದಿನಗಳಿಂದ ತಲೆಮರೆಸಿಕೊಂಡಿದ್ದ ಅಮೃತ್‌ಪಾಲ್‌ ಸಿಂಗ್ ಶರಣಾಗಲು ಯೋಜಿಸಿದ್ದಾನಾ ?

Supreme Court

ರಾಜಕೀಯದಲ್ಲಿ ಧರ್ಮ ಬಳಸುವುದನ್ನು ನಿಲ್ಲಿಸಿದಾಗ ದ್ವೇಷ ಭಾಷಣಗಳು ದೂರ:ಸುಪ್ರೀಂ

ಕಲಬುರಗಿ: ಶೇ. 50 ರಷ್ಟು ಮತಗಟ್ಟೆಗಳಿಗೆ ಸಿಸಿ ಕ್ಯಾಮರಾ: ಡಿಸಿ ಗುರುಕರ್

ಕಲಬುರಗಿ: ಶೇ. 50 ರಷ್ಟು ಮತಗಟ್ಟೆಗಳಿಗೆ ಸಿಸಿ ಕ್ಯಾಮರಾ: ಡಿಸಿ ಗುರುಕರ್

1-sad-asd

ವಯನಾಡ್ ಕ್ಷೇತ್ರಕ್ಕೆ ಉಪಚುನಾವಣೆ; ಯಾವುದೇ ಆತುರವಿಲ್ಲ ಎಂದ ಚುನಾವಣಾ ಆಯೋಗ

ಜಮೀನು,ಚಿನ್ನ,ಟ್ರ್ಯಾಕ್ಟರ್‌, ವಾಹನ.. ತಂಗಿ ಮದುವೆಗೆ 8ಕೋಟಿ ರೂ. ವರದಕ್ಷಿಣೆ ನೀಡಿದ ಸಹೋದರರು

ಜಮೀನು,ಚಿನ್ನ,ಟ್ರ್ಯಾಕ್ಟರ್‌, ವಾಹನ.. ತಂಗಿ ಮದುವೆಗೆ 8ಕೋಟಿ ರೂ. ವರದಕ್ಷಿಣೆ ನೀಡಿದ ಸಹೋದರರು

1-wwqewqewqewqe

ಬಳ್ಳಾರಿ ಪಾಲಿಕೆ ಮೇಯರ್ ಆಗಿ ಕಾಂಗ್ರೆಸ್ ನ ತ್ರಿವೇಣಿ ಆಯ್ಕೆ,ಜಾನಕಿ ಉಪಮೇಯರ್

KAGODU

ಅಳಿಯನೇ ಪಕ್ಷದ ಅಭ್ಯರ್ಥಿಯಾಗಿರುವಾಗ ಭಿನ್ನಮತದ ಮಾತೆಲ್ಲಿ: ಕಾಗೋಡು ಪ್ರಶ್ನೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಮಮಂದಿರ ನಿರ್ಮಾಣಕ್ಕೆ  ಬ್ಲೂಪ್ರಿಂಟ್‌ ಬಿಡುಗಡೆ

ರಾಮಮಂದಿರ ನಿರ್ಮಾಣಕ್ಕೆ  ಬ್ಲೂಪ್ರಿಂಟ್‌ ಬಿಡುಗಡೆ

tdy-11

ಪ್ರಸನ್ನ ಪಿ.ಗೌಡ ಅಧಿಕೃತವಾಗಿ ಜೆಡಿಎಸ್‌ ಸೇರ್ಪಡೆ

tdy-9

ಬೊಂಬೆನಗರಿಯಲ್ಲಿ ಕೈ ಅಭ್ಯರ್ಥಿ ಕಗ್ಗಂಟು

tdy-13

ನಿಷೇಧದ ನಡುವೆಯೂ ಭರ್ಜರಿ ದನಗಳ ಜಾತ್ರೆ

tdy-15

ಫುಟ್‌ಪಾತ್‌ ಅವ್ಯವಸ್ಥೆ; ನಾಗರಿಕರ ಆಕ್ರೋಶ

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

ತಲೆಮರೆಸಿಕೊಂಡಿದ್ದ ಅಮೃತ್‌ಪಾಲ್‌ ಸಿಂಗ್ ಶರಣಾಗಲು ಯೋಜಿಸಿದ್ದಾನಾ ?

ಹತ್ತು ದಿನಗಳಿಂದ ತಲೆಮರೆಸಿಕೊಂಡಿದ್ದ ಅಮೃತ್‌ಪಾಲ್‌ ಸಿಂಗ್ ಶರಣಾಗಲು ಯೋಜಿಸಿದ್ದಾನಾ ?

sub registrar

ಸಬ್‌ರಿಜಿಸ್ಟ್ರಾರ್‌ ಕಚೇರಿಗಳು ಇನ್ನು ಸ್ಮಾರ್ಟ್‌

Supreme Court

ರಾಜಕೀಯದಲ್ಲಿ ಧರ್ಮ ಬಳಸುವುದನ್ನು ನಿಲ್ಲಿಸಿದಾಗ ದ್ವೇಷ ಭಾಷಣಗಳು ದೂರ:ಸುಪ್ರೀಂ

ಶ್ರೀರಾಮನ ವನವಾಸದ ಚಿತ್ರಕೂಟ ಭಾರತೀಯರೆಲ್ಲ ವೀಕ್ಷಿಸಬೇಕಾದ ಸ್ಥಳ;ವಿದ್ಯಾಧೀಶ ತೀರ್ಥ ಸ್ವಾಮೀಜಿ

ಶ್ರೀರಾಮನ ವನವಾಸದ ಚಿತ್ರಕೂಟ ಭಾರತೀಯರೆಲ್ಲ ವೀಕ್ಷಿಸಬೇಕಾದ ಸ್ಥಳ;ವಿದ್ಯಾಧೀಶ ತೀರ್ಥ ಸ್ವಾಮೀಜಿ

ಕಲಬುರಗಿ: ಶೇ. 50 ರಷ್ಟು ಮತಗಟ್ಟೆಗಳಿಗೆ ಸಿಸಿ ಕ್ಯಾಮರಾ: ಡಿಸಿ ಗುರುಕರ್

ಕಲಬುರಗಿ: ಶೇ. 50 ರಷ್ಟು ಮತಗಟ್ಟೆಗಳಿಗೆ ಸಿಸಿ ಕ್ಯಾಮರಾ: ಡಿಸಿ ಗುರುಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.