ಪೋಲೀಸರ ವಿರುದ್ಧ ಪ್ರತಿಭಟನೆ

Team Udayavani, May 11, 2019, 12:13 PM IST

ರಾಮನಗರ: ಮಹಿಳಾ ಹಾಸ್ಟೆಲ್ ಬಳಿ ಅಶ್ಲೀಲವಾಗಿ ವರ್ತಿಸುತ್ತಿದ್ದ ಎನ್ನುವ ಆರೋಪವನ್ನು ದೃಢಪಡಿಸಿಕೊಳ್ಳದೆ ಅಂಗವಿಕಲ ಯುವಕ ಸಯ್ಯದ್‌ ತೌಸೀಫ್ ಮೇಲೆ ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಅಲ್ಪಸಂಖ್ಯಾತ ಸಂಘಟನೆಗಳು ಹಾಗೂ ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಪ್ರತಿಭಟನಾಕಾರರು ನಗರ ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿ, ಹಲ್ಲೆ ನಡೆಸ್ದಿ ಪೊಲೀಸರ ವಿರುದ್ಧ ಪ್ರತಿಭಟಿಸಿದರು. ಮುಸ್ಲಿಂರ ಮೇಲೆ ಅಧಿಕಾರಿಗಳು, ರಾಜ ಕಾರಣಿಗಳು ದಬ್ಟಾಳಿಕೆ ನಡೆಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪಾಫ‌್ಯುಲರ್‌ ಫ್ರಂಟ್ ಆಫ್ ಇಂಡಿ ಯಾದ ರಾಜ್ಯ ಸಮಿತಿ ಸದಸ್ಯ ಮೊಹ ಮದ್‌ ಫಾರೂಕ್‌ ಮಾತನಾಡಿ, ಕೆಲವೇ ಮಂದಿ ಪೊಲೀಸ್‌ ಪೇದೆಗಳಿಂದಾಗಿ ಇಡೀ ಪೊಲೀಸ್‌ ಇಲಾಖೆಗೆ ಕಟ್ಟೆ ಹೆಸರು ಬರುತ್ತಿದೆ ಎಂದು ಆರೋಪಿಸಿದರು.

ವಕೀಲ ಚಾನ್‌ ಪಾಷಾ ಮಾತನಾಡಿ, ಸಯ್ಯದ್‌ ತೌಸಿಫ್ ಮೇಲೆ ಮಾರ ಣಾಂತಿಕ ಹಲ್ಲೆ ನಡೆಸಿರುವ ಪೊಲೀಸರ ವಿರುದ್ಧ ಎಫ್ಐಆರ್‌ ದಾಖಲಿಸಬೇಕು. ಅವರನ್ನು ಅಮಾನತ್ತಿನಲ್ಲಿಡಬೇಕು. ನ್ಯಾಯಯುತ ತನಿಖೆ ನಡೆಸಬೇಕು. ಸಯ್ಯದ್‌ ತೌಸೀಫ್ ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಪ್ರಕರಣವನ್ನು ದಾಖ ಲಿಸಿ, ಶಿಕ್ಷೆ ವಿಧಿಸಬಹುದಾಗಿತ್ತು. ಆದರೆ ಪೊಲೀಸರು ಹಲ್ಲೆ ನಡೆಸಿರುವುದು ಸರಿ ಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಮುಖಂಡರಾದ ಸೈಯ್ಯದ್‌ ಶಹ ಬಾಜ್‌, ಆಮ್ಜದ್‌ ಷರೀಫ್, ಸೈಯ್ಯದ್‌ ಅಸಾದುಲ್ಲಾ, ಹುಮಾಯೂನ್‌, ಸುಲ್ತಾ ನ್‌, ವಸೀಂ, ಆರೀಫ್ ಪಾಷಾ, ಸೈಯ್ಯದ್‌ ಮತೀನ್‌, ಮಹಬೂಬ್‌ ಪಾಷಾ, ಇಮ್ರಾನ್‌ ರಫಾಯಿ, ಶಖೀಲ್ ಪಾಷಾ, ಇದಾಯುತ್‌ ಖಾನ್‌, ನಾಸೀರ್‌, ಅಜೀ ಜುಲ್ಲಾ ಷರೀಫ್, ಅಯಜ್‌ ಪಾಷಾ, ಇಮ್ರಾನ್‌ ಪಾಷಾ, ಖಯೂಂ ಪಾಷಾ, ಲಿಯಾಕತ್‌, ತಬರೇಜ್‌ ಆಲಿಖಾನ್‌, ಸುಲ್ತಾನ್‌ ಆಲಿಖಾನ್‌, ರಿಜ್ವಾನ್‌, ಜುಬೇರ್‌, ರಫೀಕ್‌, ಜಮೀರ್‌ ಇದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ