

Team Udayavani, Jul 19, 2024, 11:47 AM IST
ರಾಮನಗರ: ಮಳೆಗೆ ಗವಿಯ ಆಸರೆ ಪಡೆದಿದ್ದ ವ್ಯಕ್ತಿಯೋರ್ವನ ಮೇಲೆ ಕರಡಿಯೊಂದು ದಾಳಿ ನಡೆಸಿದೆ.
ರಾಮನಗರ ಹೊರವಲಯದ ಕಣ್ವ ಹೊಳೆ ಬಳಿ ಘಟನೆ ನಡೆದಿದ್ದು, ಇರುಳಿಗರ ದೊಡ್ಡಿ ನಿವಾಸಿ ಮರಿಲಿಂಗ (50) ಎಂಬವರಿಗೆ ಮಾರಣಾಂತಿಕ ಗಾಯವಾಗಿದೆ.
ಗುರುವಾರ ಕೂಲಿ ಕೆಲಸಕ್ಕೆ ತೆರಳಿದ್ದ ಮರಿಲಿಂಗ ಅವರು ಮಳೆ ಬಂದ ಕಾರಣ ಬೆಟ್ಟದ ಗವಿ ಪಕ್ಕದಲ್ಲಿ ನಿಂತಿದ್ದರು. ಈ ವೇಳೆ ಗವಿಯೊಳಗಿನಿಂದ ಬಂದ ಕರಡಿ ಗುಂಪು ಮರಿಲಿಂಗನ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ.
ಮರಲಿಂಗ ಅವರ ಮೈಯೆಲ್ಲಾ ಗಾಯವಾಗಿದೆ. ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕರಡಿಗಳ ಆಕ್ರಮಣ ಹೆಚ್ಚುತ್ತಿದ್ದರೂ ಅರಣ್ಯ ಇಲಾಖೆ ಸುಮ್ಮನಿರುವುದಕ್ಕೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Ad
ನನಗೆ ಸಚಿವ ಸ್ಥಾನ ಬೇಕಿಲ್ಲ, ಡಿ.ಕೆ.ಶಿವಕುಮಾರ್ ಸಿಎಂ ಆದ್ರೆ ಸಾಕು: ಸಿ.ಪಿ.ಯೋಗೇಶ್ವರ್
ರಂಭಾಪುರಿ ಶ್ರೀಗಳ ಮಾತು ನಿಜವಾಗುತ್ತೆ: ಡಿಕೆಶಿ ಆಪ್ತ ಶಾಸಕ ಇಕ್ಬಾಲ್ ಹುಸೇನ್
Ramanagar: ರಸ್ತೆಯಲ್ಲೇ ಹೊತ್ತಿ ಉರಿದ ಎಲೆಕ್ಟ್ರಿಕ್ ಸ್ಕೂಟರ್
Congress: ಒಪ್ಪಂದದಂತೆ ಡಿ.ಕೆ.ಶಿವಕುಮಾರ್‌ಗೆ ಉನ್ನತ ಸ್ಥಾನ ಕೊಡಲಿ: ರಂಭಾಪುರಿ ಶ್ರೀ
Ramanagar: ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಕ್ರಾಂತಿಯೇ ಆಗಬೇಕು: ವಾಟಾಳ್
You seem to have an Ad Blocker on.
To continue reading, please turn it off or whitelist Udayavani.