ಪರಿಶಿಷ್ಟರಿಗೆ ಸಾಮಾಜಿಕ ನ್ಯಾಯ, ಸೌಲಭ್ಯ ಒದಗಿಸಿ

Team Udayavani, Apr 11, 2021, 2:55 PM IST

ಪರಿಶಿಷ್ಟರಿಗೆ ಸಾಮಾಜಿಕ ನ್ಯಾಯ, ಸೌಲಭ್ಯ ಒದಗಿಸಿ

ಮಾಗಡಿ: ಎಸ್ಟಿ, ಎಸ್ಟಿ ಸಮುದಾಯಗಳು ಸಾಮಾಜಿಕ ನ್ಯಾಯ ಮತ್ತು ಸೌಲಭ್ಯಗಳಿಂದ ವಂಚಿತರಾಗ ಬಾರದು. ಇದನ್ನು ಕಾಪಾಡುವ ಜವಾಬ್ದಾರಿ ಎಲ್ಲಾ ಜನಪ್ರತಿನಿಧಿಗಳು, ಅಧಿಕಾರಿಗಳ ಮೇಲಿದೆ. ಮೂರು ತಿಂಗಳಿಗೊಮ್ಮೆ ಸಭೆ ಕರೆದು ಚರ್ಚಿಸಿಸಮಸ್ಯೆ ಬಗೆಹರಿಸಲಾಗುವುದು ಎಂದು ಶಾಸಕ ಎ.ಮಂಜುನಾಥ್‌ ಹೇಳಿದರು.

ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ತಾಲೂಕು ಆಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ ಏರ್ಪಡಿಸಿದ್ದ ಎಸ್ಸಿ, ಎಸ್ಟಿ ಕುಂದುಕೊರತೆಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಾರ್ವಜನಿಕ ಸ್ಮಶಾನ: ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ದಲಿತರಿಗೆ ಸ್ಮಶಾನವಿಲ್ಲ, ಕೂಡಲೇ ಸಾರ್ವಜನಿಕ ಸ್ಮಶಾನ ಎಂದು ಪರಿಗಣಿಸಿ ಎಂದು ಮುಖಂಡ ದೊಡ್ಡಿ ಲಕ್ಷ್ಮಣ್‌ ಸಲಹೆ ನೀಡಿದರು. ಬೆಳಗುಂಬ ಗ್ರಾಮದಲ್ಲಿ ಸ್ಮಶಾನ ಎಂದು ಪಹಣಿ ಬರುತ್ತಿದೆ. ಆದರೆ, ಸ್ಮಶಾನ ಎಲ್ಲಿದೆ ಎಂದು ಸರ್ವೆಇಲಾಖೆ ಅಳತೆ ಮಾಡಿಕೊಡಬೇಕು ಮತ್ತು ಹರ್ತಿಯಲ್ಲಿ ಸ್ಮಶಾನಕ್ಕೆ ನೀಡಿರುವ ಭೂಮಿ ಕಲ್ಲುಬಂಡೆಯಿಂದ ಕೂಡಿದೆ. ಅದನ್ನು ಬದಲಾಯಿಸಿ ಸರ್ವೆ ನಂ.66ರಲ್ಲಿ ಗುರುತಿಸಿ ಅಳತೆ ಮಾಡಿಸಿಕೊಡುವಂತೆ ಬೆಳಗುಂಬದ ನರಸಿಂಹಯ್ಯ ಶಾಸಕರಲ್ಲಿ ಮನವಿ ಮಾಡಿದರು. ನಾಗಶೆಟ್ಟಿಹಳ್ಳಿಯಲ್ಲಿ 6 ಗುಂಟೆ ಸ್ಮಶಾನವಿದೆ. ಅದನ್ನು ಕೆಲವರು ಉಳಿಮೆ ಮಾಡುತ್ತಿದ್ದಾರೆ. ಹೊಸಹಳ್ಳಿ ಗ್ರಾಮದಲ್ಲಿ ಸ್ಮಶಾನವಿಲ್ಲ, ಗೊಲ್ಲಹಳ್ಳಿಯಲ್ಲಿ ಕೆರೆಯಲ್ಲಿ ಶವ ಸಂಸ್ಕಾರ ಮಾಡುತ್ತಿದ್ದು, ಮಳೆ ನೀರು ಬಂದರೆ ಕೆರೆಯಲ್ಲಿ ತೇಲುತ್ತಿವೆ. ದಲಿತರಿಗೆ ಬೇರೆಡೆ ಸ್ಮಶಾನ ನೀಡುವಂತೆ ಮಹಿಳಾ ಮುಖಂಡರಾದ ಎಸ್‌.ಜಿ.ವನಜಾ ಶಾಸಕರ ಮನವಿ ಮಾಡಿದರು.

ತಾಲೂಕಿನಲ್ಲಿ 33.24 ಎಕರೆ ಸ್ಮಶಾನ ಜಾಗವನ್ನು ಗುರುತಿಸಿ ಜಿಲ್ಲಾಧಿಕಾರಿಗಳ ಆದೇಶಕ್ಕೆ ಕಳಿಸಲಾಗಿದೆ. ಈಗಾಗಲೇ 15.24.ಎಕರೆ ಜಮೀನನ್ನು ಸರ್ವೇಅಧಿಕಾರಿಗಳು ಅಳತೆ ಮಾಡಿ ಸ್ಕೇಚ್‌ ನೀಡಿದ್ದಾರೆ ಎಂದು ತಹಶೀಲ್ದಾರ್‌ ಬಿ.ಜೆ.ಶ್ರೀನಿವಾಸ ಪ್ರಸಾದ್‌ ಶಾಸಕರ ಗಮನಕ್ಕೆ ತಂದರು.

ಮನವಿ; ಕಳೆದ 10 ವರ್ಷಗಳಿಂದಲೂ ಅಲೆಯುತ್ತಿದ್ದೇವೆ. ಲಕ್ಕೇನಹಳ್ಳಿ ಗ್ರಾಮದಲ್ಲಿ 60 ದಲಿತರ ಭೂಮಿಯನ್ನು ಇನ್ನೂ ಪೋಡಿ ಮಾಡಿಲ್ಲ, ಕೂಡಲೆ ಪೋಡಿ ಮಾಡಿಕೊಡುವಂತೆ ಶಾಸಕರಲ್ಲಿ ಮಂಜೇಶ್‌ ಮನವಿ ಮಾಡಿದರು.

ಸುಮಟೋ ಕೇಸು ದಾಖಲಿಸಿ: ತಾಲೂಕಿನಲ್ಲಿ ಬಹುತೇಕ ಕೆರೆ-ಕಟ್ಟೆ, ರಸ್ತೆ ಒತ್ತುವರಿಯಾಗಿದೆ.ತಹಶೀಲ್ದಾರ್‌ ಸ್ಥಳ ಪರಿಶೀಲಿಸಿ, ಸರ್ವೆ ಮಾಡಿಸಿಅವರ ವಿರುದ್ಧ ಸುಮಟೋ ಕೇಸು ದಾಖಲಿಸಿ ದಂಡ ವಸೂಲಿ ಮಾಡಬೇಕು ಎಂದು ಕಲ್ಕೆರೆ ಶಿವಣ್ಣ ಮನವಿ ಮಾಡಿದರು.

ಕೆಡಿಪಿ ಸದಸ್ಯ ನಾಗರಾಜು, ಮುಖಂಡರಾದ ತೋ.ವಿ.ಗಿರೀಶ್‌, ನರಸಿಂಹಮೂರ್ತಿ, ಜೀವಿಕ ಗಂಗಹನುಮಯ್ಯ, ಶಿವಣ್ಣ, ರಂಗಪ್ಪ, ತಿರುಮಲೆಆಂಜನಪ್ಪ, ರಾಜಣ್ಣ, ತಾಪಂ ಇಒ ಟಿ. ಪ್ರದೀಪ್‌,ತಾಲೂಕು ಮಟ್ಟದ ಅಧಿಕಾರಿಗಳು, ವೈದ್ಯಾಧಿಕಾರಿಗಳು, ಮುಖಂಡರು ಇತರರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

ಬಿಡುಗಡೆ ಭರಾಟೆ ಜೋರು: ಜುಲೈ 8ಕ್ಕೆ 9 ಚಿತ್ರಗಳು ತೆರೆಗೆ

ಬಿಡುಗಡೆ ಭರಾಟೆ ಜೋರು: ಜುಲೈ 8ಕ್ಕೆ 9 ಚಿತ್ರಗಳು ತೆರೆಗೆ

ಜುಲೈ 8ರಂದು ತೆರೆಗೆ; ವಿಕ್ರಂ ಪ್ರಭು ಕನಸಿನ ಕೂಸು ‘ವೆಡ್ಡಿಂಗ್ ಗಿಫ್ಟ್’

ಜುಲೈ 8ರಂದು ತೆರೆಗೆ; ವಿಕ್ರಂ ಪ್ರಭು ಕನಸಿನ ಕೂಸು ‘ವೆಡ್ಡಿಂಗ್ ಗಿಫ್ಟ್’

ಸಿ.ಟಿ.ರವಿ

ಬಿಜೆಪಿ ಬೆಳವಣಿಗೆ ಜಾತಿವಾದಿ ತುಷ್ಟೀಕರಣ ವಾದಕ್ಕೆ ಕೊಡಲಿ ಪೆಟ್ಟು ಕೊಟ್ಟಿದೆ: ಸಿ.ಟಿ.ರವಿ

6death

ಬೈರಂಪಳ್ಳಿ: ಹೊಲದಲ್ಲಿ ಕೆಲಸ ಮಾಡುವಾಗ ಜಾರಿ ಬಿದ್ದು ಯುವ ಕೃಷಿಕ ಸಾವು

ಮಹಾರಾಷ್ಟ್ರದಲ್ಲಿ ಶಿಂಧೆ ದರ್ಬಾರ್ ಶುರು: ವಿಶ್ವಾಸಮತ ಗೆದ್ದ ಮುಖ್ಯಮಂತ್ರಿ ಏಕನಾಥ ಶಿಂಧೆ

ಮಹಾರಾಷ್ಟ್ರದಲ್ಲಿ ಶಿಂಧೆ ದರ್ಬಾರ್ ಶುರು: ವಿಶ್ವಾಸಮತ ಗೆದ್ದ ಮುಖ್ಯಮಂತ್ರಿ ಏಕನಾಥ ಶಿಂಧೆ

ಎರಡು ತಿಂಗಳ ನಂತರ ನನ್ನ ಮುಂದಿನ ರಾಜಕೀಯ ತೀರ್ಮಾನ: ಜಿಟಿ ದೇವೇಗೌಡ

ಎರಡು ತಿಂಗಳ ನಂತರ ನನ್ನ ಮುಂದಿನ ರಾಜಕೀಯ ತೀರ್ಮಾನ: ಜಿಟಿ ದೇವೇಗೌಡ

4road1

ಚಾರ್ಮಾಡಿ ಘಾಟ್‌ನಲ್ಲಿ ಮುಂದುವರೆದ ಪ್ರವಾಸಿಗರ ಪುಂಡಾಟ: ರಸ್ತೆ ಮಧ್ಯೆಯೇ ಮೋಜು ಮಸ್ತಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವೈದ್ಯರ ಅವಿರತ ನಿಸ್ವಾರ್ಥ ಸೇವೆ ಅನನ್ಯವಾದದು

ವೈದ್ಯರ ಅವಿರತ ನಿಸ್ವಾರ್ಥ ಸೇವೆ ಅನನ್ಯವಾದದು

ಮಿಂಚಿನ ಕಾರ್ಯಾಚರಣೆ: ಬೈಕ್‌, ಪಂಪ್‌ಸೆಟ್‌ ಕಳ್ಳರ ಬಂಧನ

ಮಿಂಚಿನ ಕಾರ್ಯಾಚರಣೆ: ಬೈಕ್‌, ಪಂಪ್‌ಸೆಟ್‌ ಕಳ್ಳರ ಬಂಧನ

ನಾಗರಿಕರ ಸುಲಿಗೆಗೆ ನಿಂತ ನಗರಸಭೆ

ನಾಗರಿಕರ ಸುಲಿಗೆಗೆ ನಿಂತ ನಗರಸಭೆ

ಮಹಿಳೆಯರಿಗೆ ಕಾನೂನು ಅರಿವು ಅಗತ್ಯ; ಪರಶುರಾಮ ಕೋಪರ್ಡೆ

ಮಹಿಳೆಯರಿಗೆ ಕಾನೂನು ಅರಿವು ಅಗತ್ಯ; ಪರಶುರಾಮ ಕೋಪರ್ಡೆ

ನುಸಿರೋಗಕ್ಕೆ ತುತ್ತಾದ ತೆಂಗು ಬೆಳೆ

ನುಸಿರೋಗಕ್ಕೆ ತುತ್ತಾದ ತೆಂಗು ಬೆಳೆ

MUST WATCH

udayavani youtube

ಇಬ್ಬರು ಶಸ್ತ್ರ ಸಜ್ಜಿತ ಲಷ್ಕರ್ ಉಗ್ರರನ್ನು ಹಿಡಿದು ಕೊಟ್ಟ ಕಾಶ್ಮೀರದ ಗ್ರಾಮಸ್ಥರು

udayavani youtube

ಜಿಂಕೆಯನ್ನು ನುಂಗಿದ್ದ 80 ಕೆ.ಜಿ. ತೂಕದ 14 ಅಡಿ ಉದ್ದದ ಹೆಬ್ಬಾವು!

udayavani youtube

ವಿಟ್ಲದ ಈ ವಿದ್ಯಾರ್ಥಿನಿಯ ಕಾರ್ಯಕ್ಕೊಂದು ಮೆಚ್ಚುಗೆ ಇರಲಿ…

udayavani youtube

ಕೊಪ್ಪಳ : ರೌಡಿಶೀಟರ್ ಗಳಿಗೆ ಖಡಕ್ ವಾರ್ನಿಂಗ್ ನೀಡಿದ ಎಸ್ಪಿ

udayavani youtube

ಮದ್ರಸಾದಿಂದ ಮನೆಗೆ ಬರುತ್ತಿದ್ದ ವಿದ್ಯಾರ್ಥಿ ಮೇಲೆ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್…

ಹೊಸ ಸೇರ್ಪಡೆ

ಬಿಡುಗಡೆ ಭರಾಟೆ ಜೋರು: ಜುಲೈ 8ಕ್ಕೆ 9 ಚಿತ್ರಗಳು ತೆರೆಗೆ

ಬಿಡುಗಡೆ ಭರಾಟೆ ಜೋರು: ಜುಲೈ 8ಕ್ಕೆ 9 ಚಿತ್ರಗಳು ತೆರೆಗೆ

7road

ರಸ್ತೆಗೆ ತಗ್ಗು-ಗುಂಡಿ ತೋಡಿ ಮುಳ್ಳು ಬಡಿತ!

4

ಸುತ್ತ ನದಿ ಇದ್ದರೂ ಕುಡಿಯುವ ನೀರಿನದ್ದೇ ಚಿಂತೆ!

ಜುಲೈ 8ರಂದು ತೆರೆಗೆ; ವಿಕ್ರಂ ಪ್ರಭು ಕನಸಿನ ಕೂಸು ‘ವೆಡ್ಡಿಂಗ್ ಗಿಫ್ಟ್’

ಜುಲೈ 8ರಂದು ತೆರೆಗೆ; ವಿಕ್ರಂ ಪ್ರಭು ಕನಸಿನ ಕೂಸು ‘ವೆಡ್ಡಿಂಗ್ ಗಿಫ್ಟ್’

ಸಿ.ಟಿ.ರವಿ

ಬಿಜೆಪಿ ಬೆಳವಣಿಗೆ ಜಾತಿವಾದಿ ತುಷ್ಟೀಕರಣ ವಾದಕ್ಕೆ ಕೊಡಲಿ ಪೆಟ್ಟು ಕೊಟ್ಟಿದೆ: ಸಿ.ಟಿ.ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.