
ಫುಟ್‌ಪಾತ್ ಅವ್ಯವಸ್ಥೆ; ನಾಗರಿಕರ ಆಕ್ರೋಶ
Team Udayavani, Mar 25, 2023, 2:49 PM IST

ಚನ್ನಪಟ್ಟಣ: ಪಟ್ಟಣದ ಬೆಂಗಳೂರು- ಮೈಸೂರು ರಸ್ತೆಯನ್ನು ಗಾಂಧಿಭವನ ದಿಂದ- ಮಂಗಳವಾರಪೇಟೆ ವರೆಗೆ ಫುಟ್ ಪಾತ್ ಅಗಲೀಕರಣ ಮಾಡುವ ಕಾಮಗಾ ರಿಯನ್ನು ಇತ್ತೀಚಿಗೆ ಕೈಗೆತ್ತಿಕೊಳ್ಳಲಾಗಿದೆ. ಆದರೆ, ಈ ಕಾಮಗಾರಿಯು ಅವೈಜ್ಞಾನಿಕವಾಗಿದ್ದು, ಚುನಾವಣೆ ಸಮೀಪಿಸುತ್ತಿರುವುದರಿಂದ ಸಂಬಂಧಿಸಿದ ಗುತ್ತಿಗೆದಾರ ಕೇವಲ ಹಣ ಮಾಡಿಕೊಳ್ಳುವ ಉದ್ದೇಶದಿಂದ ಆತುರಾತುರವಾಗಿ ಕಾಮಗಾರಿಯನ್ನು ಅವೈಜ್ಞಾನಿಕ ಹಾಗೂ ಕಳಪೆ ಯಾಗಿ ಮಾಡುತ್ತಿದ್ದಾರೆ ಎಂಬ ಆರೋಪವು ಇಲ್ಲಿನ ವರ್ತಕರು, ಸಾರ್ವಜನಿಕರು ಹಾಗೂ ಪಾದಚಾರಿಗಳಿಂದ ಕೇಳಿಬಂದಿದೆ.
ರಸ್ತೆಯ ಎರಡೂ ಬದಿಯಲ್ಲಿ ವ್ಯವಸ್ಥಿತವಾದ ಫುಟ್‌ಪಾತ್ ನಿರ್ಮಿಸಲು ವರ್ಷಗಳ ಹಿಂದೆಯೇ ಟೆಂಡರ್ ಕೆರಯಲಾಗಿತ್ತು. ಆದರೆ, ಚುನಾವಣೆ ಹೊಸ್ತಿಲಲ್ಲಿ ಆತುರಾತುರವಾಗಿ ಕಾಮಗಾರಿ ನಡೆಯುತ್ತಿದೆ. ರಸ್ತೆಯ ಎಡ-ಬಲ ಎರಡೂ ಕಡೆ ನಡೆಯಬೇಕಾದ ಕಾಮಗಾರಿ ಎಡ ಭಾಗದಲ್ಲಿ ಮಾತ್ರ ನಡೆಯುತ್ತಿದೆ. ಬಲ ಭಾಗದಲ್ಲಿ ಹಾಗೆಯೇ ಬಿಡಲಾಗಿದೆ. ಗುತ್ತಿಗೆದಾರ ತನ್ನ ಜೇಬು ತುಂಬಿಸಿಕೊಳ್ಳುವ ಏಕೈಕ ಉದ್ದೇಶದಿಂದ ಸಾರ್ವಜ ನಿಕರ ಹಿತಾಸಕ್ತಿಯನ್ನು ಕಡೆಗಣಿಸಿದ್ದರೂ, ಇಲ್ಲಿನ ನಗರಸಭೆಯ ಸ್ಥಳೀಯ ಸದಸ್ಯರಾಗಲಿ, ಚುನಾಯಿತ ಪ್ರತಿನಿಧಿಗಳಾಗಲಿ, ಸಂಬಂಧಿಸಿದ ಆಧಿಕಾರಿಗಳಾಗಲಿ, ನಗರಸಭೆ ಆಡಳಿತವಾಗಲಿ ಇತ್ತ ಗಮನ ಹರಿಸದೇ ಮೌನವಾಗಿರುವುದರ ಔಚಿತ್ಯ ಏನೂ ಎಂಬುದೇ ಗೊತ್ತಾಗುತ್ತಿಲ್ಲ ಎಂದು ನಾಗರಿಕರು ನೇರವಾಗಿ ಪ್ರಶ್ನಿಸಿದ್ದಾರೆ.
ಕೆಲವೆಡೆ ವರ್ತಕರ ಅತಿಕ್ರಮಣ ಹಾಗೂ ಇನ್ನೊಂದೆಡೆ ನಿಧಾನಗತಿಯ ಕಾಮಗಾರಿ ಯಿಂದಾಗಿ ಹೆದ್ದಾರಿಯು ಈ ಜಾಗದಲ್ಲಿ ಕಿಸ್ಕಿಂಧೆಯಾಗಿದ್ದು, ಸವಾರರು, ಸಾರ್ವಜನಿಕರು ಓಡಾಡಲು ಕಷ್ಟಕರವಾಗಿದೆ. ಹಬ್ಬ- ಹರಿದಿನಗಳಲ್ಲಿ ವ್ಯಾಪಾರದಲ್ಲಿ ತೊಡಗುವ ಸಾರ್ವಜನಿಕ ಗ್ರಾಹಕರು ಇಲ್ಲಿ ತಮ್ಮ ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರದ ವಾಹನಗಳನ್ನು ಎಲ್ಲೆಂದರಲ್ಲಿ ಬೇಕಾ ಬಿಟ್ಟಿಯಾಗಿ ಬೇಜವಾಬ್ದಾರಿಯಿಂದ ನಿಲ್ಲಿಸುವುದರಿಂದ ಟ್ರಾಫಿಕ್ ಜಾಮ್ ಆಗಿ ಬೆಂಗಳೂರು- ಮೈಸೂರು ಹೆದ್ದಾರಿ ಸವಾರರ ಜೊತೆಗೆ, ಸ್ಥಳೀಯರಿಗೂ ಸಾಕಷ್ಟು ಕಿರಿಕಿರಿ ಉಂಟು ಮಾಡುತ್ತಿದ್ದು, ಈ ಬಗ್ಗೆ ಸಂಬಂಧಿಸಿದ ಅಧಿಕಾರಿ ವರ್ಗದವರು ಚುನಾಯಿತ ಪ್ರತಿನಿಧಿಗಳು ಗಮನ ಹರಸಿ ಸಮಸ್ಯೆಯನ್ನು ಕೊನೆಗಾಣಿಸಬೇಕು ಎಂದು ನಾಗರಿಕರು ಒತ್ತಾಯ ಮಾಡಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ
