ಮತ್ತೆರಡು ಕೋವಿಡ್‌ 19 ಸೋಂಕು ಪ್ರಕರಣ ಪತ್ತೆ!

Team Udayavani, Jun 10, 2020, 6:49 AM IST

matteredu-sonku

ರಾಮನಗರ/ಕನಕಪುರ: ಜಿಲ್ಲೆಯಲ್ಲಿ ಮಂಗಳವಾರ ಮತ್ತೆ ಎರಡು ಕೋವಿಡ್‌ -19 ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 7ಕ್ಕೆ ಏರಿದೆ. ಕನಕಪುರ ನಗರದಲ್ಲಿ 17 ವರ್ಷದ  ಯುವಕ ಮತ್ತು  ಮಾಗಡಿಯ ತಾಲೂಕಿನಲ್ಲಿ 24 ವರ್ಷದ ಮಹಿಳೆಯೊಬ್ಬರಲ್ಲಿ ಪಾಸಿಟಿವ್‌ ಫ‌ಲಿತಾಂಶ ಬಂದಿದೆ.

ಹೀಗಾಗಿ ಅವರಿಬ್ಬರನ್ನು ರಾಮನಗರದ ಕೋವಿಡ್‌-19 ರೆಫ‌ರಲ್‌ ಆಸ್ಪತ್ರೆಯಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. 2 ವರ್ಷದ  ಮಗುವೊಂದಕ್ಕೆ ಸೋಂಕು ತಗುಲಿದ್ದ ಪ್ರಥಮ ಪ್ರಕರಣದಲಿ, ಮಗು ಗುಣಮು ಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾ ಗಿದೆ. ಹೀಗಾಗಿ ಜಿಲ್ಲೆಯಲ್ಲಿ ಸೋಂಕಿನ ಸಕ್ರಿಯ ಪ್ರಕರಣಗಳು 6 ಮಾತ್ರ ಇವೆ.

ಯುವಕನಿಗೆ ಸೋಂಕು, ಕುಟುಂಬದವರ ಕ್ವಾರಂಟೈನ್‌: ಕನಕಪುರದ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡಿ ಕೊಂಡಿದ್ದ ಯುವಕನಿಗೆ ಕೋವಿಡ್‌ 19 ಸೋಂಕು ದೃಢಪಟ್ಟಿದ್ದು, ತಾಲೂಕು ಆಡಳಿತ ಬಟ್ಟೆ ಅಂಗಡಿ ಸುತ್ತಮುತ್ತಲು  100 ಮೀ. ವ್ಯಾಪ್ತಿಯನ್ನು ನಿರ್ಬಂಧಿತ ಪ್ರದೇಶ ಎಂದು ಘೋಷಿಸಿ ಸೀಲ್‌ಡೌನ್‌ ಮಾಡಿದೆ.

ತಮಿಳುನಾಡು ಗಡಿಭಾಗದ ಕಾಡು ಶಿವನಹಳ್ಳಿ ಯುವಕ, ನಗರದ ಬೂದಿಗೆರೆ ರಸ್ತೆಯ ನಿರ್ಮಲಾ ಫ್ಯಾಷನ್‌ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿ ಕೊಂಡು, ಅಂಗಡಿ ಮಾಲೀಕರ ಮನೆ  ಮಹಡಿ ಮೇಲೆ ವಾಸವಾಗಿದ್ದ. ಯುವಕ ಸ್ವಗ್ರಾಮದಲ್ಲಿ ನಡೆದ ಮದುವೆಗೆ ಹೋಗಿದ್ದು, ಅಲ್ಲಿಂದಲೇ ಸೋಂಕು ಹರಡಿರಬಹುದು ಎಂಬ ಶಂಕೆಯಿದೆ.

ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅಂಗಡಿ  ಮಾಲಿಕರ ಕುಟುಂಬದ 6 ಮಂದಿ ಮತ್ತು ತಂದೆ-ತಾಯಿ, ಅಕ್ಕ ಸೇರಿದಂತೆ 9 ಮಂದಿಯನ್ನು ನಗರದ ಹೊಸಕೋಟೆಯ ಮೊರಾರ್ಜಿ ದೇಸಾಯಿ  ವಸತಿ ಶಾಲೆಯಲ್ಲಿ ಕ್ಯಾರಂಟೈನ್‌ ಮಾಡ ಲಾಗಿದೆ. ಅವರ ಗಂಟಲು ದ್ರವ ಮತ್ತು ರಕ್ತ ಮಾದರಿ ಪರೀಕ್ಷೆಗೆ  ಕಳುಹಿಸಲಾಗಿದೆ. ಯುವಕನ ಪ್ರಯಾಣದ ವಿವರ ಮತ್ತು 2ನೇ ಹಂತದ ಸಂಪರ್ಕದಲ್ಲಿದ್ದವರ ಮಾಹಿತಿ ಸಂಗ್ರಹಿಸಲು ಆರೋಗ್ಯ ಅಧಿಕಾರಿಗಳು ನಿರತರಾಗಿದ್ದಾರೆ.

ಸಿಪಿಐ ಪ್ರಕಾಶ್‌, ನಗರ ಠಾಣೆ ಎಸ್‌ಐ ಲಕ್ಷ್ಮಣ್‌ಗೌಡ ಅವರ ತಂಡ ಕಟ್ಟೆಚ್ಚರ  ವಹಿಸಿದ್ದಾರೆ. ನಗರಸಭೆ ಪೌರಾಯುಕ್ತ ಮಾಯಣ್ಣ ಗೌಡರ ನೇತೃತ್ವದ ತಂಡ ಬಟ್ಟೆ ಅಂಗಡಿ ಸುತ್ತಮುತ್ತಲು ಮತ್ತು ಬಸವೇಶ್ವರ ನಗರದ ಅಂಗಡಿ ಮಾಲಿಕರ ಮನೆ ಸುತ್ತಲೂ ಔಷಧ ಸಿಂಪರಣೆ ಮಾಡಿ ಸ್ಯಾನಿಟೈಸ್‌ ಮಾಡಿದ್ದಾರೆ.

ಟಾಪ್ ನ್ಯೂಸ್

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Dk Suresh

Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.