ತ್ಯಾಜ್ಯ ದುರ್ವಾಸನೆಗೆ ಚನ್ನ ಪಟ್ಟಣ ತತ್ತರ

Team Udayavani, Jan 7, 2020, 2:36 PM IST

rn-tdy-1

ಚನ್ನಪಟ್ಟಣ: ನಗರದಲ್ಲಿ ಉತ್ಪತ್ತಿಯಾಗುವ ಕೋಳಿ ತ್ಯಾಜ್ಯ- ಕಸ ಎಲ್ಲೆಂದರಲ್ಲಿ ವಿಲೇವಾರಿ ಮಾಡುತ್ತಿರು ವುದರಿಂದ ದುರ್ವಾಸನೆ ನಗರವಾಗಿ ಮಾರ್ಪಟ್ಟಿದೆ.  ಸಮರ್ಪಕವಾಗಿ ವಿಲೇವಾರಿ ಮಾಡಬೇಕಾದ ಕೋಳಿತ್ಯಾಜ್ಯ ಹಾಗೂ ಕಸವನ್ನು ಕೆರೆಯಂಗಳ, ಮಠ, ದೇವಾಲಯಗಳ ಸಮೀಪ, ಹೆದ್ದಾರಿ, ರಸ್ತೆ ಬದಿ ಸೇರಿದಂತೆ ಎಲ್ಲೆಂದರಲ್ಲಿ ವಿಲೇವಾರಿ ಮಾಡಲಾ ಗುತ್ತಿದೆ. ಇದರಿಂದಾಗಿ ದಾರಿಹೋಕರು ಸಹಿಸಲಾಗದ ವಾಸನೆಯಿಂದ ರೋಸಿ ಹೋಗಿದ್ದಾರೆ.

ಪ್ರಮುಖವಾಗಿ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ, ಪಟ್ಟಣದ ಹೊರವಲಯದ ಕೆರೆಗಳ ಏರಿ, ಅಂಗಳ, ಸೇತುವೆ ಕೆಳಗೆ ಕೋಳಿ ತ್ಯಾಜ್ಯದ ಮೂಟೆ ಗಳನ್ನು ವಿಲೇವಾರಿ ಮಾಡಲಾಗುತ್ತಿದೆ. ಇದರಿಂದಾಗಿ ಅಲ್ಲಿ ಸಂಚಾರ ಮಾಡುವ ಪ್ರಯಾಣಿಕರು ಉಸಿರು ಬಿಗಿ ಹಿಡಿದು ಸಾಗುವಂತಾಗಿದೆ. ಅಲ್ಲದೇ, ಸುತ್ತಮುತ್ತಲಿನ ಪರಿಸರ ಗಬ್ಬೆದ್ದು ನಾರುತ್ತಿದೆ.

 ಭಕ್ತರಿಗೆ ಕಿರಿಕಿರಿ: ವಿರಕ್ತಮಠದ ಎದುರಿಗೆ ಇರುವ ಕುಡಿಯುವ ನೀರು ಕಟ್ಟೆಗೆ ಮೂಟೆಗಳಲ್ಲಿ ಕೋಳಿ ತ್ಯಾಜ್ಯ ಕಟ್ಟಿ ಬಿಸಾಡುತ್ತಿರುವುದರಿಂದ ಮಠಕ್ಕೆ ಆಗಮಿಸುವ ಭಕ್ತರು ಸಹಿಸಲು ಆಗದ ವಾಸನೆ ಸಹಿಸಿಕೊಂಡೇ ಮಠ ಪ್ರವೇಶಿಸಬೇಕಾಗಿದೆ. ಇನ್ನುಮಠಕ್ಕೆ ಆಗಮಿಸುವ ರಸ್ತೆ ಬದಿಯಲ್ಲಿಯೂ ತ್ಯಾಜ್ಯದ ಮೂಟೆಗಳನ್ನು ಬಿಸಾಡಲಾಗುತ್ತಿದೆ. ಈ ಬಗ್ಗೆ ನಗರಸಭೆ ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂದು ಮಠಾಧೀಶ ಶಿವರುದ್ರಸ್ವಾಮೀಜಿ ಆಗ್ರಹಿಸಿದ್ದಾರೆ. ಇನ್ನು ಇಂತಹದ್ದೇ ಸ್ಥಿತಿ ಕಲ್ಯನಾಥೇಶ್ವರ ದೇವಾಲಯದ ಬಳಿಯೂ ಇದೆ. ಹೆದ್ದಾರಿ ಇನ್ನೊಂದು ಬದಿಯಲ್ಲಿ ಸೇತುವೆ ಬಳಿ ಹೆಚ್ಚಾಗಿ ಕೋಳಿ ತ್ಯಾಜ್ಯ ಬಿಸಾಡುತ್ತಿರುವುದರಿಂದ ಅಲ್ಲಿಗೆ ಆಗಮಿಸುವ ಭಕ್ತರೂ ಮೂಗುಮುಚ್ಚಿಕೊಂಡೇ ದೇವಸ್ಥಾನಕ್ಕೆ ತೆರಳಬೇಕಿದೆ. ಸುಮಾರು ವರ್ಷಗಳಿಂದಲೂ ಇಲ್ಲಿ ತ್ಯಾಜ್ಯ ಬಿಸಾಡುತ್ತಿದ್ದರೂ ಸಂಬಂಧಪಟ್ಟವರು ಮಾತ್ರ ಕಂಡೂ ಕಾಣದಂತೆ ಸುಮ್ಮನಿದ್ದಾರೆ.

ಕೆರೆ ನೀರು ಕಲುಷಿತ: ಕೆರೆಯಂಗಳಕ್ಕೆ ತ್ಯಾಜ್ಯದ ಮೂಟೆಗಳನ್ನು ಬಿಸಾಡುತ್ತಿರುವುದರಿಂದ ಕೋಳಿಯ ವಿವಿಧ ಭಾಗಗಳು ಕೊಳೆತು ನೀರು ಕಲುಷಿತವಾಗುತ್ತಿದೆ. ಇನ್ನು ಕೆರೆಗಳಲ್ಲಿನ ಮೀನುಗಳ ಬೆಳವಣಿಗೆಗೆ ತ್ಯಾಜ್ಯವನ್ನು ತಂದು ಹಾಕಲಾಗುತ್ತಿದೆ ಎಂಬ ಆರೋಪಗಳೂ ಕೇಳಿ ಬಂದಿವೆ. ಕೆರೆಯ ಬಳಿಗೆ ತ್ಯಾಜ್ಯ ತಿನ್ನಲು ಬರುವ ನಾಯಿ, ಹಂದಿಗಳು ಆ ಸ್ಥಳವನ್ನೆಲ್ಲಾ ಇನ್ನಷ್ಟು ಕಲುಷಿತ ಮಾಡುತ್ತಿವೆ.

ಕ್ರಮ ಕೈಗೊಳ್ಳಲಿ: ಕೋಳಿ ಶುಚಿಗೊಳಿಸಿದ ನಂತರ ಬಿಸಾಡಬೇಕಾಗಿರುವ ತ್ಯಾಜ್ಯವನ್ನು ಗುಂಡಿತೋಡಿ ವೈಜಾnನಿಕವಾಗಿ ವಿಲೇವಾರಿ ಮಾಡಬೇಕೆಂದು ನಗರಸಭೆ ಪರವಾನಗಿ ನೀಡುವ ಸಂದರ್ಭದಲ್ಲೇ ತಿಳಿಸಿದೆ. ಆದರೆ, ಅದನ್ನು ಯಾರೂ ಪಾಲಿಸುತ್ತಿಲ್ಲ. ಇನ್ನು ನಗರಸಭೆಯೂ ಬಿಸಾಡುತ್ತಿರುವ ಮಾಹಿತಿ ತಿಳಿದಿದ್ದರೂ, ಅವರನ್ನು ಹಿಡಿದು ದಂಡ ವಿಧಿಸುವ ಅಥವಾ ಪರವಾನಗಿ ರದ್ದು ಮಾಡುವ ಗೋಜಿಗೆ ಹೋಗಿಲ್ಲ. ಹೀಗಾಗಿ ಕೋಳಿ ತ್ಯಾಜ್ಯ ನಿತ್ಯ ಪ್ರಯಾಣಿಕರಿಗೆ ಇನ್ನಿಲ್ಲದ ಸಮಸ್ಯೆ ಒಡ್ಡುತ್ತಿದೆ. ನಗರಸಭೆ ಪ್ರಭಾರ ಪೌರಾಯುಕ್ತರಾಗಿದ್ದ ಮಾಯಣ್ಣಗೌಡ, ಕೋಳಿ ತ್ಯಾಜ್ಯ ಸಂಗ್ರಹಣೆಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು, ಎಲ್ಲೆಂದರಲ್ಲಿ ಬಿಸಾಡುವವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು ಎಂದು ಈ ಹಿಂದಿನ ತಾಪಂ ಸಭೆಯೊಂದರಲ್ಲಿ ತಿಳಿಸಿದ್ದರು.

ಆದರೆ, ಅವರು ಈಗ ಕರ್ತವ್ಯದಿಂದ ಮುಕ್ತರಾಗಿ ಹೊಸ ಪೌರಾಯುಕ್ತರು ಆಗಮಿಸಿದ್ದಾರೆ. ಈ ಹಿಂದೆ ಇದೇ ನಗರಸಭೆಯಲ್ಲಿ ಸಮುದಾಯ ಅಭಿವೃದ್ಧಿ ಅಧಿಕಾರಿಯಾಗಿದ್ದ ಶಿವನಂಕಾರಿಗೌಡ, ಈಗ ಪೌರಾಯುಕ್ತರಾಗಿದ್ದಾರೆ. ಇನ್ನಾದರೂ ಈ ಬಗ್ಗೆ ಗಮನಹರಿಸಿ ಕೋಳಿ ಅಂಗಡಿ ಮಾಲಿಕರಿಗೆ ನಿಯಮ ಪಾಲಿಸುವಂತೆ ನೋಟಿಸ್‌ ನೀಡಿ ಕೋಳಿ ತ್ಯಾಜ್ಯ ದುರ್ವಾಸನೆಯಿಂದ ಜನತೆಗೆ ಅನುಕೂಲ ಮಾಡಿಕೊಡಬೇಕಿದೆ.

-ಎಂ.ಶಿವಮಾದು

ಟಾಪ್ ನ್ಯೂಸ್

Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ

Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Magadi; Mother-son passed away due to gas leak from geyser

Magadi; ಗೀಸರ್ ನಿಂದ ಅನಿಲ ಸೋರಿಕೆಯಿಂದ ಮೃತಪಟ್ಟ ತಾಯಿ – ಮಗ

Ramanagara: ಮಳೆಗೆ ಗವಿಯ ಆಸರೆ ಪಡೆದಿದ್ದ ವ್ಯಕ್ತಿ ಮೇಲೆ ಕರಡಿ ದಾಳಿ

Ramanagara: ಮಳೆಗೆ ಗವಿಯ ಆಸರೆ ಪಡೆದಿದ್ದ ವ್ಯಕ್ತಿ ಮೇಲೆ ಕರಡಿ ದಾಳಿ

Lokayukta Raids: ಹಾರೋಹಳ್ಳಿ ತಹಸೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ

Lokayukta Raids: ಹಾರೋಹಳ್ಳಿ ತಹಸೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ

1-train

Train;ಬೆಂಗಳೂರು-ಮೈಸೂರು ಮಾರ್ಗದ ಎಲ್ಲಾ ರೈಲುಗಳು ಸ್ಥಗಿತ: ಪ್ರಯಾಣಿಕರಿಗೆ ಅನಾನುಕೂಲ

HD-Kumaraswamy

Bengaluru South; ನಾನು ಅಧಿಕಾರಕ್ಕೆ ಬಂದಾಗ ಇವರಿಟ್ಟ ಹೆಸರು ಕಿತ್ತೆಸೆಯುವೆ: ಎಚ್‌ಡಿಕೆ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ

Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ

2-chithapura

Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.