ಕೋವಿಡ್ ಆಸ್ಪತ್ರೆಗೆ ನೀರಿನ ಕೊರತೆ: ಸೋಂಕಿತರ ಪ್ರತಿಭಟನೆ
Team Udayavani, Apr 24, 2021, 2:53 PM IST
ರಾಮನಗರ: ಜಿಲ್ಲಾ ಕೇಂದ್ರ ರಾಮನಗರದ ಕೋವಿಡ್ ರೆಫರಲ್ ಆಸ್ಪತ್ರೆಯಲ್ಲಿನ (ಕಂದಾಯಭವನ) ನೀರಿನ ಕೊರತೆ ನೀಗಿಸುವಂತೆ ಮತ್ತು ಶುಚಿತ್ವ ಕಾಪಾಡಿಕೊಳ್ಳುವಂತೆ ಒತ್ತಾಯಿಸಿ ಕೋವಿಡ್ ಸೋಂಕಿತರು ಗುರುವಾರ ರಾತ್ರಿಆಸ್ಪತ್ರೆಯಿಂದ ಹೊರ ಬಂದು ಪ್ರತಿಭಟನೆ ನಡೆಸಿದ ಮತ್ತು ಪೊಲೀಸರು ಮಧ್ಯ ಪ್ರವೇಶಿಸಿದ ಪ್ರಸಂಗ ನಡೆದಿದೆ.
ಆಸ್ಪತ್ರೆಯಲ್ಲಿನ ಶೌಚಾಲಯಗಳಲ್ಲಿ ನೀರಿಲ್ಲ, ಶುಚಿತ್ವ ಕಾಪಾಡುತ್ತಿಲ್ಲ, ಈ ಬಗ್ಗೆ ಪದೇ ಪದೆಮನವಿ ಮಾಡಿದರೂ ಬಗೆಹರಿಸುತ್ತಿಲ್ಲ ಎಂದು ಆರೋಪಿಸಿ, ಆಕ್ರೋಶಗೊಂಡ ರೋಗಿಗಳುಆಸ್ಪತ್ರೆಯಿಂದ ಹೊರ ಬಂದು ಪ್ರತಿಭಟಿಸುವಮೂಲಕ ಜಿಲ್ಲಾಡಳಿತದ ಗಮನ ಸೆಳೆದರು.
ಸರಿಯಾಗಿ ಆಹಾರ, ವೈದ್ಯ ಸೇವೆ ಇಲ್ಲ:
ಜಿಲ್ಲಾದ್ಯಂತ ಸೋಂಕಿತರು ಈ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಯಾವ ರೋಗಿಗೂ ಸರಿಯಾದಆರೋಗ್ಯ ಸೇವೆ, ಗುಣಮಟ್ಟದ ಆಹಾರ ಸಿಗುತ್ತಿಲ್ಲ.ವೈದ್ಯರು ಬಂದು ತಪಾಸಣೆ ಮಾಡುತ್ತಿಲ್ಲ ಎಂದು ಸೋಂಕಿತರು ಆರೋಪಿಸಿದ್ದಾರೆ.
ತ್ಯಾಜ್ಯ ವಿಲೇವಾರಿ ಆಗಿಲ್ಲ: ಕೋವಿಡ್ ಆಸ್ಪತ್ರೆಯಲ್ಲಿನ ಶೌಚಾಲಯಗಳು ಸ್ವತ್ಛವಾಗಿಲ್ಲ,ದುರ್ನಾತ ಬೀರುತ್ತಿವೆ. ಆವರಣವೂನಿರ್ಮಲವಾಗಿಲ್ಲ. ತ್ಯಾಜ್ಯ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ ಎಂದು ಕೊರೊನಾ ಸೋಂಕಿತರುಗಂಭೀರ ಆರೋಪ ಮಾಡಿದರು.
ಪೌಷ್ಟಿಕತೆಯೇ ಇಲ್ಲ: ಕೋವಿಡ್ ಸೋಂಕಿತರಿಗೆ ದಿನನಿತ್ಯ ನೀಡುವ ಆಹಾರದಲ್ಲಿ ಪೌಷ್ಟಿಕತೆಗೆ ಆದ್ಯತೆ ಕೊಡಬೇಕು. ಆದರೆ, ಇದ್ಯಾವುದೂ ಇಲ್ಲಿ ಪಾಲನೆ ಆಗುತ್ತಿಲ್ಲ. ಇಲ್ಲಿನ ಸಿಬ್ಬಂದಿ ಕಾಫಿ, ಟೀ ಕೊಡುವ ಮನಸ್ಸಾದರೆ ಮಾತ್ರ ಕೊಡುತ್ತಾರೆ, ಇಲ್ಲದಿದ್ದರೆ ಇಲ್ಲ ಎಂದು ದೂರಿದರು.
ಮನೆಗೆ ಕಳುಹಿಸಿ: ಆಸ್ಪತ್ರೆಯಲ್ಲಿ ಮೂಲ ಸೌಕರ್ಯಗಳನ್ನು ವೃದ್ಧಿಸಿ ಇಲ್ಲವೇ ತಮ್ಮನ್ನು ಮನೆಗೆ ಕಳುಹಿಸಿ ಅಲ್ಲೇ ಚಿಕಿತ್ಸೆ ಕೊಡಿ ಎಂದು ಸೋಂಕಿತರು ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ. ಪ್ರತಿಭಟನೆವಿಚಾರ ತಿಳಿದಾಕ್ಷಣ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ.
ನೀರು ಮತ್ತು ಸ್ವತ್ಛತೆಗೆ ತಕ್ಷಣದ ವ್ಯವಸ್ಥೆ ಮಾಡುವುದಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸರು ಭರವಸೆ ನೀಡಿದನಂತರ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದುಕೊಂಡಿದ್ದಾರೆ.ಮನೆಗೆ ಕರೆದುಕೊಂಡು ಹೋಗಲು ಮನವಿ:ಆದರೆ, ಶುಕ್ರವಾರ ಬೆಳಗ್ಗೆಯಾದರೂ ಸಮಸ್ಯೆಗಳು ಮುಂದುವರಿದಿದೆ. ಹೀಗಾಗಿ ಸೋಂಕಿತರು ತಮ್ಮಕುಟುಂಬಗಳಿಗೆ ಫೋನಾಯಿಸಿ ತಮ್ಮನ್ನು ಆಸ್ಪತ್ರೆಯಿಂದ ಕರೆದುಕೊಂಡು ಹೋಗುವಂತೆ ಮನವಿಮಾಡಿದ್ದಾರೆ ಎಂದು ಗೊತ್ತಾಗಿದೆ.
ಕೋವಿಡ್ ರೆಫರಲ್ ಆಸ್ಪತ್ರೆಯಲ್ಲಿ (ಕಂದಾಯ ಭವನ) ಕುಡಿಯುವ ನೀರಿಗೆ ಸಮಸ್ಯೆ ಇರಲಿಲ್ಲ. ಕುಡಿಯುವ ನೀರು ಪೂರೈಸುವ 15 ಡಿಸ್ಪೆಂಸರ್‌ಗಳು ಸ್ಥಾಪನೆಯಾಗಿವೆ. ಹೆಚ್ಚುವರಿಯಾಗಿ ಇನ್ನೂ ಐದು ಡಿಸ್ಪೆಂಸರ್ ವ್ಯವಸ್ಥೆಗೆ ಸೂಚಿಸಲಾಗಿದೆ.– ಇಕ್ರಂ, ಸಿಇಒ, ಜಿಲ್ಲಾ ಪಂಚಾಯ್ತಿ