ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ

ಅರ್ಹ ವಿದ್ಯಾರ್ಥಿಗಳಿಗೆ ಅನ್ಯಾಯ

Team Udayavani, Sep 14, 2019, 5:43 PM IST

14-Spectember-31

ಶಹಾಪುರ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಎಸ್‌ಎಫ್‌ಐ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿತು.

ಶಹಾಪುರ: ಸಮಾಜ ಕಲ್ಯಾಣ ಇಲಾಖೆಯಡಿ ವಸತಿ ನಿಲಯಕ್ಕೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಅಧಿಕಾರಿಗಳು ತಮ್ಮ ಮನಬಂದಂತೆ ವಿದ್ಯಾರ್ಥಿಗಳ ಆಯ್ಕೆ ನಡೆಸಿದ್ದು, ಅರ್ಹ ವಿದ್ಯಾರ್ಥಿಗಳಿಗೆ ಅನ್ಯಾಯ ಎಸಗಿದ್ದಾರೆ ಎಂದು ಎಸ್‌ಎಫ್‌ಐ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿ ಸ್ಥಳಕ್ಕೆ ಆಗಮಿಸಿದ ಕಂದಾಯ ಇಲಾಖೆ ಸಿಬ್ಬಂದಿಗೆ ಮನವಿ ಪತ್ರ ಸಲ್ಲಿಸಿದರು.

ತಾಲೂಕಿನಲ್ಲಿ ಶೇ.70ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಅರ್ಹ ವಿದ್ಯಾರ್ಥಿಗಳನ್ನು ಕಡೆಗಣಿಸಿದ್ದು, ಜನಪ್ರತಿನಿಧಿಗಳು ಸೂಚಿಸಿರುವ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅಲ್ಲದೆ ತಮ್ಮ ಇಚ್ಛಾನುಸಾರ ವಿದ್ಯಾರ್ಥಿಗಳನ್ನು ನಿಲಯಕ್ಕೆ ಸೇರ್ಪಡೆ ಮಾಡಿಕೊಂಡಿದ್ದು, ಸಾಕಷ್ಟು ಪ್ರತಿಭಾವಂತ ಬಡ ವಿದ್ಯಾರ್ಥಿಗಳನ್ನು ಕಡೆಗಣೆಸುವ ಮೂಲಕ ಅರ್ಹರಿಗೆ ಅನ್ಯಾಯ ಎಸಗಿದ್ದಾರೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.

ಸಮಾಜ ಕಲ್ಯಾಣ ಇಲಾಖೆ ಹಿಂದುಳಿದ ವಿಭಾಗದಲ್ಲಿ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿಭಾಗದಲ್ಲಿ ವಿದ್ಯಾರ್ಥಿಗಳನ್ನು ವಸತಿ ನಿಲಯಕ್ಕೆ ಆಯ್ಕೆ ಮಾಡಿಕೊಳ್ಳದ ಕಾರಣ ನೂರಾರು ವಿದ್ಯಾರ್ಥಿಗಳು ವಿದ್ಯಾರ್ಜನೆಯಿಂದ ವಂಚಿತಗೊಳ್ಳುವ ಸಾಧ್ಯತೆ ಇದೆ. ಕಾರಣ ಜಿಲ್ಲಾಧಿಕಾರಿಗಳು ಅರ್ಹ ವಿದ್ಯಾರ್ಥಿಗಳನ್ನು ವಸತಿ ನಿಲಯಕ್ಕೆ ಸೇರ್ಪಡೆಗೊಳಿಸಿಕೊಳ್ಳುವಂತೆ ಸೂಚನೆ ನೀಡಬೇಕೆಂದು ಆಗ್ರಹಿಸಿದರು. ಮತ್ತು ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಶಿಷ್ಯ ವೇತನ ನೀಡುವಲ್ಲಿಯೂ ಇಲಾಖೆ ಅಧಿಕಾರಿಗಳು ಎಡವಿದ್ದಾರೆ ಎಂದು ಆರೋಪಿಸಿದರು.

ಅಲ್ಲದೆ ಕನ್ಯಾಕೋಳೂರ ಗ್ರಾಮದಿಂದ ಡಿಗ್ರಿ ಕಾಲೇಜುವರೆಗೂ ಸಿಟಿ ಬಸ್‌ ವ್ಯವಸ್ಥೆ ಕಲ್ಪಿಸಬೇಕು ಎಂಬುದನ್ನು ಸೇರಿದಂತೆಇತರೆ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಹಶೀಲ್ದಾರ್‌ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಮುಖಂಡರಾದ ಚೆನ್ನಪ್ಪ ಆನೇಗುಂದಿ, ಎಸ್‌.ಎಂ. ಸಾಗರ, ವಿಜಯ ರಾಠೊಡ, ಹೊನ್ನಪ್ಪ ಮಾನ್ಪಡೆ, ಭೀಮರಾಯ ಪೂಜಾರಿ, ಕೇಶುನಾಥ ರಾಠೊಡ, ಹಣಮಂತ ವಡಿಗೇರಾ, ಜುಬಲೇಶ ಪಿಂಜಾರ್‌, ಆನಂದ ಪವಾರ್‌, ಸುರೇಶ ಚವ್ಹಾಣ ಸೇರಿದಂತೆ ಇತರರು ಭಾಗವಹಿಸಿದ್ದರು.

Ad

ಟಾಪ್ ನ್ಯೂಸ್

baby 2

Shocking; ಸ್ಲೀಪರ್ ಕೋಚ್ ಬಸ್ ನಲ್ಲೆ ಹೆರಿಗೆ: ಹೊರಗೆಸೆದ ನವಜಾತ ಶಿಶು ಸಾ*ವು!

Rcb-highcourt

ಐಪಿಎಲ್‌ ಕಾಲ್ತುಳಿತ ಪ್ರಕರಣ: ಸ್ಥಿತಿಗತಿ ವರದಿ ಆರ್‌ಸಿಬಿ, ಕೆಎಸ್‌ಸಿಎ ಜತೆ ಹಂಚಲು ನಿರ್ದೇಶನ

Surya-Tejasvi-MP

ರಾಜ್ಯ ಸರ್ಕಾರ ಭೂಸ್ವಾಧೀನ ಕೈ ಬಿಟ್ಟಿದ್ದಕ್ಕೆ ಸಂಸದ ತೇಜಸ್ವಿ ಸೂರ್ಯ ಅಸಮಾಧಾನ 

drowned

ಗಂಗೊಳ್ಳಿ ದೋಣಿ ದುರಂತ; ಓರ್ವ ಮೀನುಗಾರನ ಶ*ವ ಪತ್ತೆ: ಮುಂದುವರಿದ ಹುಡುಕಾಟ

ಮೋದಿ, ಆರ್‌ಎಸ್‌ಎಸ್‌ ಟೀಕೆ: ವ್ಯಂಗ್ಯಚಿತ್ರಕಾರನಿಗೆ ಮಧ್ಯಂತರ ಜಾಮೀನು

Hemant Malviya: ಮೋದಿ, ಆರ್‌ಎಸ್‌ಎಸ್‌ ಟೀಕೆ: ವ್ಯಂಗ್ಯಚಿತ್ರಕಾರನಿಗೆ ಮಧ್ಯಂತರ ಜಾಮೀನು

Andhra-CM-Nara-Lokesh

ದೇವನಹಳ್ಳಿ ಭೂಸ್ವಾಧೀನ ರದ್ದು ಬೆನ್ನಲ್ಲೇ ಉದ್ಯಮಿಗಳಿಗೆ ಆಂಧ್ರ ಪ್ರದೇಶ ಗಾಳ

ಕಂ ಬ್ಯಾಕ್‌ ಟೈಗರ್‌! ವಿವಿಧ ರಾಜ್ಯಗಳಲ್ಲಿನ ಕರಾವಳಿಯ ಐಟಿ ವೃತ್ತಿಪರರಿಗೆ ಆಹ್ವಾನ

ಕಂ ಬ್ಯಾಕ್‌ ಟೈಗರ್‌! ವಿವಿಧ ರಾಜ್ಯಗಳಲ್ಲಿನ ಕರಾವಳಿಯ ಐಟಿ ವೃತ್ತಿಪರರಿಗೆ ಆಹ್ವಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Surya-Tejasvi-MP

ರಾಜ್ಯ ಸರ್ಕಾರ ಭೂಸ್ವಾಧೀನ ಕೈ ಬಿಟ್ಟಿದ್ದಕ್ಕೆ ಸಂಸದ ತೇಜಸ್ವಿ ಸೂರ್ಯ ಅಸಮಾಧಾನ 

drowned

ಗಂಗೊಳ್ಳಿ ದೋಣಿ ದುರಂತ; ಓರ್ವ ಮೀನುಗಾರನ ಶ*ವ ಪತ್ತೆ: ಮುಂದುವರಿದ ಹುಡುಕಾಟ

Andhra-CM-Nara-Lokesh

ದೇವನಹಳ್ಳಿ ಭೂಸ್ವಾಧೀನ ರದ್ದು ಬೆನ್ನಲ್ಲೇ ಉದ್ಯಮಿಗಳಿಗೆ ಆಂಧ್ರ ಪ್ರದೇಶ ಗಾಳ

ಕಂ ಬ್ಯಾಕ್‌ ಟೈಗರ್‌! ವಿವಿಧ ರಾಜ್ಯಗಳಲ್ಲಿನ ಕರಾವಳಿಯ ಐಟಿ ವೃತ್ತಿಪರರಿಗೆ ಆಹ್ವಾನ

ಕಂ ಬ್ಯಾಕ್‌ ಟೈಗರ್‌! ವಿವಿಧ ರಾಜ್ಯಗಳಲ್ಲಿನ ಕರಾವಳಿಯ ಐಟಿ ವೃತ್ತಿಪರರಿಗೆ ಆಹ್ವಾನ

Bgk-Kudalasangama

ಕೂಡಲಸಂಗಮ ಪಂಚಮಸಾಲಿ ಪೀಠಕ್ಕೆ ಬೀಗ ವಿವಾದ ತಾತ್ಕಾಲಿಕ ಅಂತ್ಯ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

baby 2

Shocking; ಸ್ಲೀಪರ್ ಕೋಚ್ ಬಸ್ ನಲ್ಲೆ ಹೆರಿಗೆ: ಹೊರಗೆಸೆದ ನವಜಾತ ಶಿಶು ಸಾ*ವು!

police

Bengaluru;ವಿಮಾನ, ಬಸ್‌ನಲ್ಲಿ ಮಾದಕ ವಸ್ತು ತರಿಸುತ್ತಿದ್ದ 3 ಮಹಿಳೆಯರ ಬಂಧನ

Madhu-Bangarappa

ಶಿಕ್ಷಣ ಇಲಾಖೆ ಸಾಧನೆ ಕೇಳಿ ಸುರ್ಜೇವಾಲ ಖುಷ್‌: ಸಚಿವ ಮಧು ಬಂಗಾರಪ್ಪ

Tax-Collect

ಸಣ್ಣ ಉದ್ದಿಮೆದಾರರಿಗೆ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್‌ ವಿರುದ್ಧ ಜು.23ರಿಂದ 2 ದಿನ ಬಂದ್‌

Rcb-highcourt

ಐಪಿಎಲ್‌ ಕಾಲ್ತುಳಿತ ಪ್ರಕರಣ: ಸ್ಥಿತಿಗತಿ ವರದಿ ಆರ್‌ಸಿಬಿ, ಕೆಎಸ್‌ಸಿಎ ಜತೆ ಹಂಚಲು ನಿರ್ದೇಶನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.