ಒಳಹರಿವು ಭಾರೀ ಹೆಚ್ಚಳ: ಭದ್ರಾ ಜಲಾಶಯದಿಂದ 50 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ
Team Udayavani, Sep 20, 2020, 11:27 AM IST
ಭದ್ರಾವತಿ: ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಮುಂಜಾನೆ ಒಟ್ಟು 50 ಸಾವಿರ ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ.
ಈ ಕುರಿತಂತೆ ಮಾಹಿತಿ ನೀಡಿದ ಬಿಆರ್ ಪಿ ಎಇಇ ಮಂಜುನಾಥ್ ಅವರು, ಆರಂಭದಲ್ಲಿ ಕ್ರಸ್ಟ್ ಗೇಟ್ ಮೂಲಕ 10 ಸಾವಿರ ಕ್ಯೂಸೆಕ್ಸ್ ನೀರು ಹೊರಬಿಡಲಾಗಿದ್ದು, ಆನಂತರ 30 ಸಾವಿರ ಕ್ಯೂಸೆಕ್ಸ್ ಬಿಡಲಾಯಿತು. ಆದರೆ, ಒಳಹರಿವಿನ ಪ್ರಮಾಣ ಹೆಚ್ಚಾದ ಕಾರಣ ಮತ್ತೆ 5 ಸಾವಿರ ಕ್ಯೂಸೆಕ್ಸ್ ಬಿಡಲಾಗುತ್ತಿದ್ದು, ಒಟ್ಟು ನದಿಗೆ 45 ಸಾವಿರ ಕ್ಯೂಸೆಕ್ಸ್ ನೀರನ್ನು ಕ್ರಸ್ಟ್ ಗೇಟ್ ಮೂಲಕ ಬಿಡಲಾಗುತ್ತಿದೆ. ಇನ್ನು, ಇದೇ ವೇಳೆಯಲ್ಲಿ 5 ಸಾವಿರ ಕ್ಯೂಸೆಕ್ಸ್ ನೀರನ್ನು ಕೆನಾಲ್ ಮೂಲಕ ಹರಿಸಲಾಗುತ್ತಿದೆ ಎಂದರು.
ಇದನ್ನೂ ಓದಿ: ದಶಕದ ಮಳೆಗೆ ಬೆಚ್ಚಿದ ಕೃಷ್ಣನಗರಿ: ಕ್ರೇನ್, ದೋಣಿ ಬಳಸಿ ಜನರ ರಕ್ಷಣೆ, ಲಕ್ಷಾಂತರ ರೂ. ನಷ್ಟ
ಮಲೆನಾಡು ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಪರಿಣಾಮ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 50 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬಂದಿದೆ ಎಂದವರು ತಿಳಿಸಿದ್ದಾರೆ.
ಇದನ್ನೂ ಓದಿ: ಗುಡ್ಡ ಕುಸಿದು ಮನೆ ಸಂಪೂರ್ಣ ನೆಲಸಮ: 6 ಮಂದಿಗೆ ಗಾಯ, ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ದುರಂತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಂಚಮಸಾಲಿ ಸಮುದಾಯಕ್ಕೆ 2-ಎ ಮೀಸಲಾತಿ ಘೋಷಿಸಿ
ಶಿವಮೊಗ್ಗ, ಭದ್ರಾವತಿಯಲ್ಲಿ ಗಲಾಟೆ ನಾನೇ ಮಾಡಿದ್ದು!: ಈಶ್ವರಪ್ಪ ಕಿಡಿ
ಕಾಂಗ್ರೆಸ್ ನಾಯಕರ ಹೇಳಿಕೆ ವಿರುದ್ಧ ಮುಸ್ಲಿಂ ಮುಖಂಡನ ಆಕ್ರೋಶ: ವಿಡಿಯೋ ವೈರಲ್
ಸಾವರ್ಕರ್ ಫ್ಲೆಕ್ಸ್ ವಿಚಾರಕ್ಕೆ ಪ್ರಕ್ಷುಬ್ಧಗೊಂಡಿದ್ದ ಶಿವಮೊಗ್ಗ ಸಹಜ ಸ್ಥಿತಿಗೆ
ಧರ್ಮ ಸಂಘರ್ಷ ಶೀಘ್ರ ಇನ್ನಷ್ಟು ಉಲ್ಬಣ, ರಾಜಕೀಯ ಪಕ್ಷಗಳು ಇಬ್ಭಾಗ: ಕೋಡಿಮಠ ಶ್ರೀ