Sagara ಆರೋಗ್ಯದ ಪಾಠ ಹೇಳಿಕೊಡುವ ಸೈಕ್ಲಿಂಗ್; ಒಂದೇ ದಿನ 225 ಕಿಮೀ ಪ್ರಯಾಣ!

ರಜಾ ದಿನವನ್ನು ಸೈಕ್ಲಿಂಗ್ ಹವ್ಯಾಸದಲ್ಲಿ ಕಳೆಯುವ ಆರೋಗ್ಯ ಇಲಾಖೆ ಉದ್ಯೋಗಿ!

Team Udayavani, Sep 24, 2023, 4:17 PM IST

Sagara ಆರೋಗ್ಯದ ಪಾಠ ಹೇಳಿಕೊಡುವ ಸೈಕ್ಲಿಂಗ್; ಒಂದೇ ದಿನ 225 ಕಿಮೀ ಪ್ರಯಾಣ!

ಸಾಗರ: ರಜಾ ದಿನದಂದು ಮೋಜು ಮಸ್ತಿಯಲ್ಲಿ ಕಳೆಯದೆ ತಮ್ಮ ಸೈಕಲ್‌ನಲ್ಲಿ ತೀರ್ಥಹಳ್ಳಿಯಿಂದ ಶಿವಮೊಗ್ಗ, ಅಲ್ಲಿಂದ ಸಾಗರಕ್ಕೆ ಹಾಗೂ ಮತ್ತೆ ತೀರ್ಥಹಳ್ಳಿಗೆ ಒಬ್ಬಂಟಿಯಾಗಿ ಸೈಕಲ್‌ನಲ್ಲಿಯೇ ಒಂದೇ ದಿನ 225 ಕಿಮೀ ಸಂಚರಿಸುವ ಮೂಲಕ ಆರೋಗ್ಯ ಇಲಾಖೆಯ ನೌಕರರೊಬ್ಬರು ಉತ್ತಮ ಆರೋಗ್ಯದ ಪಾಠವನ್ನು ತಮ್ಮ ನಡವಳಿಕೆಯ ಮೂಲಕವೇ ಸಾರಿದ ವಿಶಿಷ್ಟ ಘಟನೆ ನಡೆದಿದೆ.

ತೀರ್ಥಹಳ್ಳಿ ತಾಲೂಕು ಸರ್ಕಾರಿ ನೌಕರರ ಸಂಘ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ನೌಕರರ ಸಂಘದ ಅಧ್ಯಕ್ಷರಾದ ಟಿ.ವಿ.ಸತೀಶ್ ಶೆಟ್ಟಿ ತಮ್ಮ ಹವ್ಯಾಸವಾದ ಸೈಕ್ಲಿಂಗ್ ಮೂಲಕ ಸಾಗರಕ್ಕೆ ಆಗಮಿಸಿದವರು, ರಜಾ ದಿನಗಳನ್ನು ನಾನೆಂದೂ ವ್ಯರ್ಥ ಮಾಡಿಕೊಳ್ಳುವುದಿಲ್ಲ. ಉತ್ತಮ ಹವ್ಯಾಸದಿಂದ ಮೈ ಮನಸ್ಸು ಚೈತನ್ಯ ಪಡೆದುಕೊಳ್ಳುತ್ತದೆ. ಪರಿಸರದ ನಡುವೆ ಸಾಗುವ ಸೈಕಲ್ ಪ್ರವಾಸ ಮನಸ್ಸಿಗೆ ಮುದ ನೀಡುತ್ತದೆ. ಮಲೆನಾಡಿನ ಭಾಗದಲ್ಲಿ ಸಂಚರಿಸುವಾಗ ಸಿಗುವ ಆನಂದವೇ ವಿಶಿಷ್ಟವಾಗಿದೆ. ಆರೋಗ್ಯ ಇಲಾಖೆಯ ನೌಕರರೇ ಸರಿಯಾಗಿ ಆರೋಗ್ಯ ಕಾಪಾಡಿಕೊಳ್ಳದಿದ್ದರೆ ನಮ್ಮ ಬಳಿ ಬರುವ ರೋಗಿಗಳಿಗೆ ಸಲಹೆ ಕೊಡಲು ನಮಗೆ ನೈತಿಕತೆ ಉಳಿದಿರುವುದಿಲ್ಲ. ಕಚೇರಿ, ಮನೆಗಳಲ್ಲಿ ಒತ್ತಡವಿದ್ದರೂ ಅದಕ್ಕೆ ಉತ್ತಮ ಹವ್ಯಾಸದಲ್ಲಿ ಪರಿಹಾರವಿದೆ ಎಂದು ಪ್ರತಿಪಾದಿಸಿದರು.

ಅವರನ್ನು ಅಭಿನಂದಿಸಿದ ಸಾಗರ ಆರೋಗ್ಯ ಇಲಾಖೆ ನೌಕರರ ಒಕ್ಕೂಟ ಅವರಿಂದ ಆಸ್ಪತ್ರೆ ಆವರಣದಲ್ಲಿ ಗಿಡ ನೆಡಿಸಿ ಸಂಭ್ರಮದಲ್ಲಿ ಭಾಗಿಯಾಯಿತು. ಒಕ್ಕೂಟದ ಅಧ್ಯಕ್ಷ ಲೋಹಿತ್ ಎನ್. ಮಾತನಾಡಿ, ಉತ್ತಮ ಹವ್ಯಾಸ ಬೆಳೆಸಿಕೊಳ್ಳುವುದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಸುಸ್ಥಿರದಲ್ಲಿಟ್ಟುಕೊಳ್ಳಬಹುದು. ಶನಿವಾರ ಸರ್ಕಾರಿ ರಜಾ ದಿನವಾಗಿದ್ದರೂ ತಮ್ಮ ಸೈಕ್ಲಿಂಗ್ ಹವ್ಯಾಸದಿಂದ ತೀರ್ಥಹಳ್ಳಿಯಿಂದ ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ಸೈಕಲ್‌ನಲ್ಲಿ ಶೆಟ್ಟರು ಬಂದಿದ್ದಾರೆ. ಸದಾ ಒತ್ತಡದಲ್ಲಿ ಕೆಲಸ ಮಾಡುವ ಸರ್ಕಾರಿ ನೌಕರರು ರಜಾ ದಿನಗಳನ್ನು ಉತ್ತಮ ಹವ್ಯಾಸಗಳನ್ನು ಬಳಸಿಕೊಳ್ಳಲು ರೂಢಿಸಿಕೊಳ್ಳುವುದು ಅನುಕರಣೀಯ ಎಂದರು.

ಬಹುತೇಕ ಸರ್ಕಾರಿ ನೌಕರರು ರಜೆ ಬಂದರೆ ಮೋಜಿಗಾಗಿ ಪ್ರವಾಸಕ್ಕೆ ತೆರಳುವುದು, ನೆಂಟರಿಷ್ಟರ ಮನೆಗೆ ಹೋಗುವುದು ಸಾಮಾನ್ಯ. ಆದರೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಟ್ರಕ್ಕಿಂಗ್, ಕ್ರೀಡೆ, ಸಾಹಸ, ಅಧ್ಯಯನ ಪ್ರವಾಸ ಇತ್ಯಾದಿಗಳನ್ನು ರೂಢಿಸಿಕೊಳ್ಳುವುದಕ್ಕೆ ರಜೆಯನ್ನು ಬಳಸಿಕೊಳ್ಳುವುದು ವಿರಳ. ಆದರೆ ಸತೀಶ್ ಶೆಟ್ಟಿಯವರು ರಜಾ ದಿನಗಳನ್ನು ಉತ್ತಮ ಹವ್ಯಾಸಗಳಿಂದಲೇ ಕಳೆಯುತ್ತಾರೆ ಎನ್ನುವುದು ವಿಶೇಷ ಎಂದರು.

ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ. ಪರಪ್ಪ ಕೆ. ಮಾತನಾಡಿ, ಆಸ್ಪತ್ರೆಯಲ್ಲಿ ಕೆಲಸ ಮಾಡುವವರೆಲ್ಲ ಒಂದೇ ಕುಟುಂಬದವರು ಎಂಬ ಮನೋಭಾವ ಬೆಳೆಸಿಕೊಳ್ಳಬೇಕು. ಇಲ್ಲಿ ಯಾರೂ ಮೇಲು ಕೀಳು ಎಂಬ ಭೇದವಿಲ್ಲ. ಬರುವ ಎಲ್ಲ ಉಳ್ಳವ, ಬಡವ, ದೀನ ದಲಿತರಿಗೆಲ್ಲ ಸಮಾನ ಚಿಕಿತ್ಸೆ ಲಭ್ಯವಿದೆ. ನಾವು ಸಂಘಟಿತರಾಗಿ ಕೆಲಸ ಮಾಡಿದಾಗ ಮಾತ್ರ ಆಸ್ಪತ್ರೆಗೆ ಉತ್ತಮ ಹೆಸರು ಬರುತ್ತದೆ ಎಂದರು.

ನಿವೃತ್ತ ಸರ್ಕಾರಿ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಮ.ಸ.ನಂಜುಂಡಸ್ವಾಮಿ ಮಾತನಾಡಿ, ಒತ್ತಡದಲ್ಲಿ ಕೆಲಸ ಮಾಡುವ ಸರ್ಕಾರಿ ನೌಕರರು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡರೆ ಭವಿಷ್ಯದ ಬದುಕನ್ನು ಸಂತೋಷದಿಂದ ಕಳೆಯಲು ಸಾಧ್ಯ. ಆದರೆ ಬಹುತೇಕ ನೌಕರರು ಸಿಗುವ ವೇತನ, ಭತ್ಯೆ ಹಾಗೂ ಬ್ಯಾಂಕಿನಲ್ಲಿರುವ ಹಣದ ಜಮಾ ಖರ್ಚುಗಳ ಕುರಿತೇ ಯೋಚಿಸುವುದು ವಿಪರ್ಯಾಸ. ಕರ್ತವ್ಯ ನಿರ್ವಹಿಸುವ ದಿನಗಳಲ್ಲಿ ಕ್ರೀಡೆ, ವ್ಯಾಯಾಮ, ವಾಕಿಂಗ್, ಸಾಂಸ್ಕೃತಿಕವಾಗಿ ವ್ಯಕ್ತಿತ್ವವನ್ನು ಬೆಳೆಸಿಕೊಂಡರೆ ಮುಂದೆ ನಿವೃತ್ತ ಜೀವನವನ್ನು ಸಂತೋಷದಿಂದ ಕಳೆಯಬಹುದು. ಒತ್ತಡರಹಿತ ಜೀವನವನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ನಿರ್ದೇಶಕಿ ಪುಷ್ಪ, ಹಿರಿಯ ಶುಶ್ರೂಷಕಿ ಜುಬೇದ ಅಲಿ, ಕ್ಷಕಿರಣ ವಿಭಾಗದ ಮುಖ್ಯಸ್ಥ ರಾಜಶೇಖರ್ ಇಳಿಗೇರ್, ಕೀರ್ತನ, ತ್ರಿವೇಣಿ, ಆಕಾಶ್, ಸುನಿತಾ ಹಾಜರಿದ್ದರು.

ಟಾಪ್ ನ್ಯೂಸ್

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್‌

Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್‌

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.