ತೀರ್ಥಹಳ್ಳಿ: ಬಾಗಿಲು ಮುರಿದು ಮನೆಮಂದಿಯ ಮೇಲೆ ದುಷ್ಕರ್ಮಿಗಳಿಂದ ದಾಳಿ
ಮಲೆನಾಡು ಭಾಗದಲ್ಲಿ ಹೆಚ್ಚುತ್ತಿದೆ ರಾತ್ರಿ ವೇಳೆ ದಾಳಿ ಪ್ರಕರಣಗಳು
Team Udayavani, Oct 13, 2020, 1:08 PM IST
ಶಿವಮೊಗ್ಗ: ಮಲೆನಾಡು ಭಾಗದಲ್ಲಿ ರಾತ್ರಿ ವೇಳೆ ಮನೆಗಳ ಮೇಲೆ ದುಷ್ಕರ್ಮಿಗಳ ದಾಳಿ ಪ್ರಕರಣಗಳು ಹೆಚ್ಚುತ್ತಿದ್ದು, ಸೋಮವಾರ ರಾತ್ರಿಯೂ ಮೇಗರವಳ್ಳಿಯಲ್ಲಿ ದಾಳಿ ನಡೆದಿದೆ. ತೀರ್ಥಹಳ್ಳಿ ತಾಲೂಕು ಮೇಗರವಳ್ಳಿ ಗ್ರಾಮದ ಪುರುಷೋತ್ತಮ ಹೆಗ್ಡೆ ಎಂಬವರ ಮನೆಯ ಮೇಲೆ ಆರು ಮಂದಿ ದುಷ್ಕರ್ಮಿಗಳಿಂದ ದಾಳಿ ನಡೆಸಿದ್ದು, ದರೋಡೆ ಯತ್ನ ಮಾಡಿದ್ದಾರೆ.
ಸೋಮವಾರ ರಾತ್ರಿ ಮೇಗರವಳ್ಳಿ ಗ್ರಾಮದ ಪುರುಷೋತ್ತಮ ಹೆಗ್ಡೆಯವರ ಮನೆಗೆ ನುಗ್ಗಿದ ದುಷ್ಕರ್ಮಿಗಳು ದರೋಡೆಗೆ ಯತ್ನ ನಡೆಸಿದ್ದಾರೆ. ಇನ್ನೊವಾ ಕಾರಿನಲ್ಲಿ ಆಗಮಿಸಿದ್ದ ದುಷ್ಕರ್ಮಿಗಳು ಮನೆಯ ಬಾಗಿಲು ಮುರಿದು ಒಳನುಗ್ಗಿ ಮನೆಯಲ್ಲಿದ್ದವರನ್ನು ಕೊಲೆಮಾಡಲು ಮುಂದಾಗಿದ್ದರು.
ದಾಳಿಯಲ್ಲಿ ಪುರುಷೋತ್ತಮ ಹೆಗ್ಡೆ, ಅಣ್ಣ ಗಣೇಶ್ ಹೆಗ್ಡೆ ಹಾಗೂ ಅವರ ಮಗ ರೇವಂತ್ ಗೆ ಗಂಭೀರ ಗಾಯವಾಗಿದೆ. ಮನೆಯಲ್ಲಿನ ಸದಸ್ಯರು ಜೋರಾಗಿ ಬೊಬ್ಬೆಹಾಕಿದ ಕಾರಣ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಇದನ್ನೂ ಓದಿ:ಮಂಗಳೂರು: ಹಾಲಿನ ವಾಹನದಲ್ಲಿ ಅಕ್ರಮವಾಗಿ ಗೋ ಮಾಂಸ ಸಾಗಾಟ ಜಾಲ ಪತ್ತೆ
ಕಳೆದ ಕೆಲವು ವಾರಗಳಲ್ಲಿ ಮಲೆನಾಡಿನಲ್ಲಿ ಈ ರೀತಿಯ ದಾಳಿ ಪ್ರಕರಣಗಳು ಹೆಚ್ಚುತ್ತಿದೆ. ಬ್ಯಾಕೋಡು ಗ್ರಾಮದಲ್ಲಿ ಒಂದೂವರೆ ತಿಂಗಳ ಹಿಂದೆ ಒಂಟಿ ಮನೆಯಲ್ಲಿ ದಂಪತಿಗಳನ್ನು ಕೊಲೆ ಮಾಡಲಾಗಿತ್ತು. ಮೂರು ದಿನಗಳ ಹಿಂದೆ ಹಳೆ ಇಕ್ಕೇರಿ ಗ್ರಾಮದಲ್ಲೂ ಜೋಡಿ ಕೊಲೆ ನಡೆದಿತ್ತು. ಇದೇ ಮಾದರಿಯಲ್ಲೇ ಮೇಗರವಳ್ಳಿಯ ಮನೆಯ ಮೇಲೂ ದಾಳಿಯಾಗಿದೆ.
ದುಷ್ಕರ್ಮಿಗಳ ದಾಳಿ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು, ಜನರು ಭಯದಿಂದ ರಾತ್ರಿ ಕಳೆಯಬೇಕಾಗಿದೆ. ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸೊರಬ : ಎಸ್ಸೆಸ್ಸೆಲ್ಸಿ ಯಲ್ಲಿ ಸಮಾನ ಅಂಕ ಗಳಿಸುವ ಮೂಲಕ ಗಮನ ಸೆಳೆದ ಅವಳಿ ಸಹೋದರಿಯರು
ಮಳೆಯಿಂದ ಬೆಳೆ ನಷ್ಟ: ಸರ್ಕಾರ ಕೂಡಲೇ ರೈತರ ನೆರವಿಗೆ ಧಾವಿಸಬೇಕು; ಮಾಜಿ ಶಾಸಕ ಮಧು ಬಂಗಾರಪ್ಪ
ಸಾಗರ: ನೆಡುತೋಪು ಕಾವಲು ಕಾಯುತ್ತಿದ್ದವನಿಂದಲೇ ಪ್ಲಾಂಟೇಶನ್ನಿಂದ ಮರ ಕಳ್ಳತನ; ಆರೋಪಿಗಳ ಬಂಧನ
ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ಅವಾಂತರ ತಪ್ಪಿಸಲು ಮನವಿ
ತೀರ್ಥಹಳ್ಳಿ: ಗೋ ಮಾಂಸ ಮಾರಾಟ ಮಾಡುವ ಅಂಗಡಿ ಮೇಲೆ ಪೊಲೀಸರ ದಾಳಿ