Udayavni Special

ಕಿಮ್ಮನೆ ನೇತೃತ್ವದಲ್ಲಿ ಕಾಂಗ್ರೆಸ್‌ ಮುಖಂಡರ ಉಪವಾಸ ಸತ್ಯಾಗ್ರಹ

Team Udayavani, Oct 3, 2020, 6:43 PM IST

ಕಿಮ್ಮನೆ ನೇತೃತ್ವದಲ್ಲಿ ಕಾಂಗ್ರೆಸ್‌ ಮುಖಂಡರ ಉಪವಾಸ ಸತ್ಯಾಗ್ರಹ

ತೀರ್ಥಹಳ್ಳಿ: ಗಾಂಧಿ ಜಯಂತಿಯಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ನೇತೃತ್ವದಲ್ಲಿ ತೀರ್ಥಹಳ್ಳಿ ತಾಲೂಕು ಕಚೇರಿ ಎದುರು ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದು, ನೂರಾರು ಕಾರ್ಯಕರ್ತರು ಈ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆತಂದಿರುವ ಭೂ ಸುಧಾರಣೆ, ಕಾರ್ಮಿಕ,  ಎಪಿಎಂಸಿ ಮಸೂದೆ ತಿದ್ದುಪಡಿ ವಿರೋಧಿಸಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು. ಕಿಮ್ಮನೆ ರತ್ನಾಕರ್‌ ಮಾತನಾಡಿ, ವಿಶ್ವದಲ್ಲಿ ಗಾಂ ಧಿ ಮೇರು ವ್ಯಕ್ತಿ. ತಮ್ಮ ಬದುಕನ್ನು ದೇಶಕ್ಕೆ ಮೀಸಲಿಟ್ಟ ಮಹಾನ್‌ ನಾಯಕ. ಆದರೆ ಬಿಜೆಪಿಗೆ ಗಾಂಧಿ ಕೊಲೆ ಮಾಡಿದ ಗೋಡ್ಸೆ ಹೀರೋ. ಬಿಜೆಪಿ ಜನರ ಬದುಕು, ಜೀವನ, ಅಭಿವೃದ್ಧಿ ಬದಲು ಧರ್ಮ, ಜಾತಿ ಹೆಸರಲ್ಲಿ ರಾಜಕೀಯ ಮಾಡುವ ಶ್ರೀಮಂತರ ಪರವಾದ ಪಕ್ಷ ಎಂದು ಆರೋಪಿಸಿದರು.

ಅಂಬೇಡ್ಕರ್‌ ಹಿಂದೂ ಧರ್ಮ ಬಿಟ್ಟಿದ್ದೇಕೆ ಎಂಬ ಬಗ್ಗೆ ಬಿಜೆಪಿ ಬಳಿ ಉತ್ತರ ಇಲ್ಲ. ಸೋಫಾ ಮೇಲೆ ನಾಯಿ ಕೂರಿಸಿಕೊಳ್ಳುವ ಈ ಜನ ದಲಿತರು, ಬಡವರನ್ನು ಮನೆಯೊಳಗೇ ಸೇರಿಸಲ್ಲ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್‌ ಕುಮಾರ್‌ ಕಟೀಲ್‌ ಗಾಂಧಿ ಗೆ ಇನ್ನೆರಡು ಗುಂಡು ಹೊಡಿಬೇಕಿತ್ತು ಅಂತಾರೆ. ಮತ್ತೂಬ್ಬ ನಾಯಕ ಅನಂತ್‌ ಕುಮಾರ್‌ ಹೆಗಡೆ ಗಾಂಧಿ  ಸಾಯಿಸಿದ್ದು ಒಳ್ಳೆಯದೇ ಆಯಿತು ಎನ್ನುತ್ತಾರೆ. ಗಾಂಧಿ  ಕೊಲೆಯ ಆರೋಪಿಗೆ ಭಾರತ ರತ್ನಕ್ಕೆ ಶಿಫಾರಸ್ಸು ಮಾಡಲಾಗುತ್ತದೆ. ದೇಶದ ಅಭಿವೃದ್ಧಿಗೆ ಬಿಜೆಪಿ ಕೊಡುಗೆ ಏನೂ ಇಲ್ಲ. ಜನ ಬೇಸತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಆಡಳಿತಕ್ಕೆ ಬರಲಿದೆ ಎಂದರು.

ಮಾಧ್ಯಮಗಳು ಈಗ ಮಾರಾಟವಾಗಿವೆ. ಜನ ಊಟ, ಉದ್ಯೋಗ ಇಲ್ಲದೆ ಸಾಯುತ್ತಿದ್ದಾರೆ. ಸರ್ಕಾರ ಯಾವುದೇ ಸೌಲಭ್ಯ ನೀಡುತ್ತಿಲ್ಲ. ಜನತೆಗೆ ನ್ಯಾಯ ಕೊಡಬೇಕಾದ ಮಾಧ್ಯಮಗಳು ರಾಗಿಣಿ, ಸಂಜನಾ ತೋರಿಸುತ್ತಾ ಜನರ ದಿಕ್ಕು ತಪ್ಪಿಸುತ್ತಿವೆ. ನಮಗೆ ರಾಗಿಣಿ, ಸಂಜನಾ ಹಾಡು ಕುಣಿತ ಬೇಕಾ? ಒಂದು ನಿಮಿಷ ಕೂಡ ಕಾಗೋಡು ಹೋರಾಟ ತೋರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಭೆಯಲ್ಲಿ ಕಾಂಗ್ರೆಸ್‌ ನಾಯಕರಾದ ನಾರಾಯಣ ರಾವ್‌, ಕೆಸ್ತೂರು ಮಂಜುನಾಥ್‌, ಮುಡುಬ ರಾಘವೇಂದ್ರ, ಭಾರತಿ ಬಾಳೇಹಳ್ಳಿ ಪ್ರಭಾಕರ್‌, ಕಲ್ಪನಾ ಪದ್ಮನಾಭ, ಬಾಳೆಹಳ್ಳಿ ಪ್ರಭಾಕರ್‌, ಪದ್ಮನಾಭ, ಬಂಡೆ ವೆಂಕಟೇಶ್‌, ಕೇಳೂರು ಮಿತ್ರ, ಮಳಲೇಕೊಪ್ಪ ಧರಣೇಶ್‌, ಪಡುವಳ್ಳಿ, ಮಹಾಬಲೇಶ್‌, ಗೀತಾ ರಮೇಶ್‌, ಆದರ್ಶ ಹುಂಚದಕಟ್ಟೆ, ಸಂದೀಪ್‌ ಕುಡುಮಲ್ಲಿಗೆ, ವಾದಿರಾಜ್‌ ಭಟ್‌, ಪ್ರಶಾಂತ್‌ ಪ್ರಭು, ನೆಂಪೆ ದೇವರಾಜ್‌, ನಿಶ್ಚಲ್‌ ಜಾದೂಗಾರ, ರಾಘವೇಂದ್ರ , ಫಣಿರಾಜ್‌ ಕಟ್ಟೆಹಕ್ಕಲು, ಪೂರ್ಣೆàಶ್‌ ಕೆಳಕೆರೆ ಇತರರು ಇದ್ದರು.

ಟಾಪ್ ನ್ಯೂಸ್

bangla

ದೇಗುಲಗಳ ಮೇಲೆ ದಾಳಿ, ಹತ್ಯೆ ಖಂಡಿಸಿ ಬಾಂಗ್ಲಾ ಹಿಂದೂಗಳಿಂದ ದೇಶವ್ಯಾಪಿ ನಿರಶನ

ದೇಶದ ಸಂಸ್ಕೃತಿ, ಇತಿಹಾಸ ಯುವ ಬರಹಗಾರರಿಗೆ ಆವಿಷ್ಕಾರ : ಚಂದ್ರಶೇಖರ ಕಂಬಾರ

ದೇಶದ ಸಂಸ್ಕೃತಿ, ಇತಿಹಾಸ ಯುವ ಬರಹಗಾರರಿಗೆ ಆವಿಷ್ಕಾರ : ಚಂದ್ರಶೇಖರ ಕಂಬಾರ

ವಿಶ್ವ ಅಂಚೆ ದಿನಾಚರಣೆ : ರಾಜ್ಯಪಾಲರಿಂದ ಡಾಕ್‌ ಸೇವಾ ಪ್ರಶಸ್ತಿ ಪ್ರದಾನ

ವಿಶ್ವ ಅಂಚೆ ದಿನಾಚರಣೆ : ರಾಜ್ಯಪಾಲರಿಂದ ಡಾಕ್‌ ಸೇವಾ ಪ್ರಶಸ್ತಿ ಪ್ರದಾನ

ಒಂದು ಡೋಸ್‌ ಪಡೆದವರಿಗೆ ಸ್ಥಳೀಯ ರೈಲು  ಮತ್ತು ಮಾಲ್‌ಗ‌ಳಲ್ಲಿ ಪ್ರವೇಶ ಸಾಧ್ಯತೆ

ಒಂದು ಡೋಸ್‌ ಪಡೆದವರಿಗೆ ಸ್ಥಳೀಯ ರೈಲು  ಮತ್ತು ಮಾಲ್‌ಗ‌ಳಲ್ಲಿ ಪ್ರವೇಶ ಸಾಧ್ಯತೆ

Untitled-1

ಸಹೋದರಿಯನ್ನು ಕರೆದೊಯ್ಯುತ್ತಿದ್ದ ಉದ್ಯೋಗಿ ಕೊಲೆ; ಆಟೋ ಚಾಲಕ ಸೇರಿ ನಾಲ್ಪರ ಬಂಧನ

ಡ್ರಗ್ಸ್‌ ಪ್ರಕರಣವನ್ನು ಇಲಾಖೆ ಗಂಭಿರವಾಗಿ ಪರಿಗಣಿಸುತ್ತಿದೆ: ಡಿಜಿಪಿ ಪ್ರವೀಣ್‌ ಸೂದ್‌

ಡ್ರಗ್ಸ್‌ ಪ್ರಕರಣವನ್ನು ಇಲಾಖೆ ಗಂಭಿರವಾಗಿ ಪರಿಗಣಿಸುತ್ತಿದೆ: ಡಿಜಿಪಿ ಪ್ರವೀಣ್‌ ಸೂದ್‌

gfgfdg

ಹುಬ್ಬಳ್ಳಿ: ಸಾರಿಗೆ ಸಂಸ್ಥೆ ನಮ್ಮ ಕಾರ್ಗೋಗೆ ಉತ್ತಮ ಸ್ಪಂದನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

hjgutyuty

ಆರ್​​ಎಸ್​ಎಸ್​​​  ಬಾಂಬ್ ಹಾಕುವವರನ್ನ ತಯಾರು ಮಾಡುವುದಿಲ್ಲ : ಗೃಹ ಸಚಿವ ಆರಗ ಜ್ಞಾನೇಂದ್ರ

shivamogga news

ಸಿದ್ದು ಅಲ್ಪಸಂಖ್ಯಾತರಿಗೆ ಉತ್ತರ ನೀಡಲಿ: ಎಚ್ಡಿಕೆ

nayi

ಸಿಸಿ ಕ್ಯಾಮರಾ, ಸಾಮಾಜಿಕ ಜಾಲತಾಣಗಳಿಂದ ನಾಯಿಮರಿ ಪತ್ತೆ!

ಜೋಗ ನೋಡಲು ಸಾವಿರಾರು ಪ್ರವಾಸಿಗರ ಆಗಮನ: ಮೂರು ಕಿ.ಮೀ ಟ್ರಾಫಿಕ್ ಜಾಮ್!

ಜೋಗ ನೋಡಲು ಸಾವಿರಾರು ಪ್ರವಾಸಿಗರ ಆಗಮನ: ಮೂರು ಕಿ.ಮೀ ಟ್ರಾಫಿಕ್ ಜಾಮ್!

ವಿಜೃಂಭಣೆಯ ವಿಜಯ ದಶಮಿ ಮೆರವಣಿಗೆ

ವಿಜೃಂಭಣೆಯ ವಿಜಯ ದಶಮಿ ಮೆರವಣಿಗೆ

MUST WATCH

udayavani youtube

ಅರರೆ… ಬಾಳೆ ಕಾಯಿ ಶ್ಯಾವಿಗೆ.. ರುಚಿ ಬಾಯಿಗೆ, ಉತ್ತಮ ಆರೋಗ್ಯಕ್ಕೆ

udayavani youtube

ದಾಂಡೇಲಿ : ಜನಮನ ಸೂರೆಗೊಂಡ ದನಗರ ಗೌಳಿ ನೃತ್ಯ

udayavani youtube

ಭತ್ತದ ಕೃಷಿ ಭರಪೂರ ಲಾಭ ತಂದು ಕೊಡುತ್ತಾ ?

udayavani youtube

ಸಮಾಜ ಮೆಚ್ಚುವಂತೆ ಬಾಳುವೆ: ಆರ್ಯನ್‌ ಖಾನ್ |UDAYAVANI NEWS BULLETIN|17/10/2021

udayavani youtube

ಅರಕಲಗೂಡು: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರ ದಾಳಿ

ಹೊಸ ಸೇರ್ಪಡೆ

ಐಪಿಎಲ್‌ ಇಲೆವೆನ್‌: ಕೆ.ಎಲ್‌. ರಾಹುಲ್‌ ಕೀಪರ್‌

ಐಪಿಎಲ್‌ ಇಲೆವೆನ್‌: ಕೆ.ಎಲ್‌. ರಾಹುಲ್‌ ಕೀಪರ್‌

bangla

ದೇಗುಲಗಳ ಮೇಲೆ ದಾಳಿ, ಹತ್ಯೆ ಖಂಡಿಸಿ ಬಾಂಗ್ಲಾ ಹಿಂದೂಗಳಿಂದ ದೇಶವ್ಯಾಪಿ ನಿರಶನ

ಮನೆಯ ನಾಲ್ವರನ್ನು ವಿಷವಿಕ್ಕಿ ಕೊಂದ ಬಾಲಕಿ!

ಮನೆಯ ನಾಲ್ವರನ್ನು ವಿಷವಿಕ್ಕಿ ಕೊಂದ ಬಾಲಕಿ!

ದೇಶದ ಸಂಸ್ಕೃತಿ, ಇತಿಹಾಸ ಯುವ ಬರಹಗಾರರಿಗೆ ಆವಿಷ್ಕಾರ : ಚಂದ್ರಶೇಖರ ಕಂಬಾರ

ದೇಶದ ಸಂಸ್ಕೃತಿ, ಇತಿಹಾಸ ಯುವ ಬರಹಗಾರರಿಗೆ ಆವಿಷ್ಕಾರ : ಚಂದ್ರಶೇಖರ ಕಂಬಾರ

ವಿಶ್ವ ಅಂಚೆ ದಿನಾಚರಣೆ : ರಾಜ್ಯಪಾಲರಿಂದ ಡಾಕ್‌ ಸೇವಾ ಪ್ರಶಸ್ತಿ ಪ್ರದಾನ

ವಿಶ್ವ ಅಂಚೆ ದಿನಾಚರಣೆ : ರಾಜ್ಯಪಾಲರಿಂದ ಡಾಕ್‌ ಸೇವಾ ಪ್ರಶಸ್ತಿ ಪ್ರದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.