

Team Udayavani, Sep 19, 2020, 8:24 PM IST
ಸಾಂದರ್ಭಿಕ ಚಿತ್ರ
ಶಿವಮೊಗ್ಗ: ಹೊಸನಗರ ತಾಲೂಕು ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ಕಲ್ಲೂರು ಗ್ರಾಮದ ಕೋಡಿಹಳ್ಳದ ದಂಡೆ ಬಲಪಡಿಸುವ ನರೇಗಾ ಯೋಜನೆಯಡಿಯ 5 ಲಕ್ಷ ರೂ. ವೆಚ್ಚದ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ಆರೋಪಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳಪೆ ಕಾಮಗಾರಿ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ಇಂಜಿನಿಯರ್ ವಿನಯ್ ಕುಮಾರ್ ಅವರನ್ನು ಅಮಾನತುಗೊಳಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಆದೇಶಿಸಬೇಕೆಂದು ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಒತ್ತಾಯಿಸಿದರು.
5 ಲಕ್ಷ ರೂ. ವೆಚ್ಚದ ಕಾಮಗಾರಿಯಲ್ಲಿ ಕೇವಲ 1 ಲಕ್ಷ ರೂ.ವೆಚ್ಚ ಮಾಡಿ ಹಣ ಪಾವತಿಸಲಾಗಿದೆ. ಕಾಮಗಾರಿಯಲ್ಲಿ ಯಂತ್ರಗಳನ್ನು ಬಳಸಲಾಗಿದೆ. ಸುಳ್ಳು ಲೆಕ್ಕ ನೀಡಲಾಗಿದೆ. ಆದ್ದರಿಂದ ಇಂಜಿನಿಯರ್‌ರನ್ನು ಅಮಾನತುಗೊಳಿಸಬೇಕೆಂದು ಒತ್ತಾಯಿಸಿದರು. ಜಿಪಂ ವತಿಯಿಂದ ನರೇಗಾ ಯೋಜನೆಯಡಿ ನಡೆದ ಕಾಮಗಾರಿಗಳಲ್ಲಿ ಜಿಪಂನ ಸಿಇಒ ಎಂ.ಎಲ್. ವೈಶಾಲಿ ಅವರ ಕುಮ್ಮಕ್ಕಿನಿಂದ ಭಾರೀ ಭ್ರಷ್ಟಾಚಾರವಾಗಿದ್ದು, ಇವರ ಅಧಿಕಾರಾವಧಿಯಲ್ಲಿ ಜಿಲ್ಲೆಯಲ್ಲಿ ನಡೆದ ಎಲ್ಲ ನರೆಗಾ ಯೋಜನೆಯ ಕಾಮಗಾರಿಗಳ ಬಗ್ಗೆ ಉನ್ನತ ಮಟ್ಟದ ತಂಡದಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಎಚ್.ಎಂ. ಸಂಗಯ್ಯ, ಎಲ್. ಆದಿಶೇಷ, ಸಂಕ್ರಾನಾಯ್ಕ ಇದ್ದರು.
Ad
America: ಕಾರು-ಮಿನಿ ಟ್ರಕ್ ಡಿಕ್ಕಿ; ಭಾರತೀಯ ಮೂಲದ ದಂಪತಿ ಸೇರಿ ನಾಲ್ವರು ಸಜೀವ ದಹನ
Arrested: ಕರೆ ಮಾಡಲು ಕೊಟ್ಟ ಮೊಬೈಲ್ ವಾಪಸ್ ಕೇಳಿದ್ದಕ್ಕೆ ಹಲ್ಲೆ: ಬಂಧನ
ರಸ್ತೆಯಲ್ಲಿ ಕಾರು ತಗುಲಿದ್ದನ್ನು ಪ್ರಶ್ನಿಸಿದ್ದಕ್ಕೆ ಮಾರಕಾಸ್ತ್ರ ತೋರಿಸಿ ಪ್ರಾಣ ಬೆದರಿಕೆ
Bengaluru: ವರದಕ್ಷಿಣೆ: ಡಿವೈಎಸ್ಪಿ ವಿರುದ್ಧ ಕೇಸ್
High Court: ಗಾರ್ಡನ್ ಅಲ್ಲ, ಫ್ಲೆಕ್ಸ್ ಸಿಟಿ: ಹೈಕೋರ್ಟ್ ಚಾಟಿ
You seem to have an Ad Blocker on.
To continue reading, please turn it off or whitelist Udayavani.