222 ಕೋಟಿ ರೂ. ವೆಚ್ಚದ ಕಾಮಗಾರಿ ಅನುಷ್ಠಾನ


Team Udayavani, Aug 25, 2020, 7:00 PM IST

222 ಕೋಟಿ ರೂ. ವೆಚ್ಚದ ಕಾಮಗಾರಿ ಅನುಷ್ಠಾನ

ತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 222 ಕೋಟಿ ರೂ. ವೆಚ್ಚದ ಕಾಮಗಾರಿ ವಿವಿಧ ಹಂತದಲ್ಲಿ ಅನುಷ್ಠಾನಗೊಳ್ಳುತ್ತಿದೆ. ಕಾಮಗಾರಿಗಳ ಅನುಷ್ಠಾನಕ್ಕೆ ಹಣದ ಕೊರತೆಯಿಲ್ಲ. ಆದರೆ, ಅರಣ್ಯ ಇಲಾಖೆಯಿಂದ ಅನುಷ್ಠಾನಕ್ಕೆ ಅಡ್ಡಿ ಉಂಟಾಗಿದೆ. ಮುಂದಿನ ದಿನಗಳಲ್ಲಿ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಸರಿಪಡಿಸಬೇಕಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.

ಸೋಮವಾರ ತಾಲೂಕಿನ ಬೆಜ್ಜವಳ್ಳಿಯಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ವಿದ್ಯುತ್‌ ಸಬ್‌ ಸ್ಟೇಷನ್‌ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು. ಜಿಲ್ಲೆಯಲ್ಲದೇ ತಾಲೂಕಿನಾದ್ಯಂತ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಅರಣ್ಯ ಇಲಾಖೆಯಿಂದ ಅಡ್ಡಿ ಉಂಟಾಗುತ್ತಿದ್ದು, ಆದರ ನಿವಾರಣೆಗೆ ಪೂರಕವಾಗಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ ಕ್ರಮ ಕೈಗೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅಂತಹ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು. ಅರಣ್ಯ ಇಲಾಖೆಯವರೂ ಕೂಡಾ ಸಾರ್ವಜನಿಕರು, ರೈತರ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಸಹಕಾರ ನೀಡಬೇಕಾಗಿದೆ ಎಂದರು.

ಶಾಸಕ ಆರಗ ಜ್ಞಾನೇಂದ್ರ ಅವರು ಕ್ಷೇತ್ರದ ಅಭಿವೃದ್ಧಿಗಾಗಿ ಅವಿರತ ಶ್ರಮಿಸುತ್ತಿದ್ದಾರೆ. ಮಂತ್ರಿಗಳು ಕೂಡ ಕ್ಷೇತ್ರದ ಬೇಡಿಕೆಗೆ ಪೂರಕವಾಗಿ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಮುಖ್ಯಮಂತ್ರಿಗಳು ನನಗೆ ಹೆದರುವುದಿಲ್ಲ. ಆದರೆ, ಜಾನೇಂದ್ರ ಅವರಿಗೆ ಹೆದರುತ್ತಾರೆ. ಹಾಗಾಗಿ, ನಾನೂ ಸಹ ಅಭಿವೃದ್ಧಿ ನಿಟ್ಟಿನಲ್ಲಿ ಜ್ಞಾನೇಂದ್ರಣ್ಣ ಅವರನ್ನು ಅವಲಂಬಿಸಬೇಕಾಗುತ್ತದೆ ಎಂದರು.  ಬಿಎಸ್‌ಎನ್‌ಎಲ್‌ನ ನೆಟ್‌ವರ್ಕ್ ಸಮಸ್ಯೆ ಬಗ್ಗೆ ಹಿರಿಯ ಅಧಿಕಾರಿಗಳು, ಸರ್ಕಾರದೊಂದಿಗೆ ಮಾತನಾಡಿ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಪ್ರಗತಿ ಎಂದರೆ ರಸ್ತೆ, ಕುಡಿಯುವ ನೀರಿನ ಸಮಸ್ಯೆ ಮಾತ್ರವಲ್ಲ. ಬದಲಾಗಿ ಕ್ಷೇತ್ರ ಹಾಗೂ ಸಾರ್ವಜನಿಕರ ಸರ್ವಾಂಗೀಣ ಬದುಕಿಗೆ ಚಾಲನೆ ನೀಡುವ ವಿದ್ಯುತ್‌ ಕೂಡಾ ಬದುಕಿನ ಪ್ರಮುಖ ಘಟ್ಟವಾಗಿದೆ. ಇದನ್ನು ಮನಗಂಡು ವಿದ್ಯುತ್‌ ಸಂಪರ್ಕ ಹಾಗೂ ವೋಲ್ಟೆàಜ್‌ ಸಮಸ್ಯೆ ಬಗೆಹರಿಸಲು ಒತ್ತು ನೀಡಲಾಗುತ್ತಿದೆ. ನಾವು ಜನಸೇವೆಗಾಗಿ ಗೆದ್ದು ಬಂದವರು ಎಂದರು.

ಮೆಸ್ಕಾಂ ಸೂಪರಿಟೆಂಡೆಂಟ್‌ ಇಂಜಿನಿಯರ್‌ ವೆಂಕಟೇಶ್‌ ಪ್ರಸಾದ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಜಿಪಂ ಸದಸ್ಯ ಕೆ.ಬಿ.ಶ್ರೀನಿವಾಸ್‌, ಕಲ್ಪನಾ ಪದ್ಮನಾಭ್‌, ತಾಪಂ ಉಪಾಧ್ಯಕ್ಷೆ ಯಶೋಧಾ ಮಂಜುನಾಥ್‌, ತಾಪಂ ಸದಸ್ಯರು-ಎಪಿಎಂಸಿ ಅಧ್ಯಕ್ಷರು ಆದ ಸಾಲೇಕೊಪ್ಪ ರಾಮಚಂದ್ರ, ತಾಪಂ ಸದಸ್ಯ ಕುಕ್ಕೆ ಪ್ರಶಾಂತ್‌, ಕವಿರಾಜ್‌, ಗೀತಾ ಸದಾನಂದ ಶೆಟ್ಟಿ, ತಹಶೀಲ್ದಾರ್‌ ಡಾ| ಶ್ರೀಪಾದ, ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

1-dfsadsad

ಪ್ರೊ ಅಸ್ಸಾದಿ ಅವರಿಗೆ 26 ವರ್ಷಗಳ ನಂತರ ಕೈ ಸೇರಿದ ರಾಜೀನಾಮೆ ಪತ್ರ

1-wewqewqe

Nothing ಭಾರತದ ಮಾರ್ಕೆಟಿಂಗ್ ಡೈರೆಕ್ಟರ್ ಆಗಿ ಪ್ರಣಯ್ ರಾವ್ ನೇಮಕ

1-ssdsad

Shirva ಬೈಕುಗಳ ಮುಖಾಮುಖಿ:ಓರ್ವ ಮೃತ್ಯು, ಇನ್ನೋರ್ವ ಗಂಭೀರ

1-qwwqewq

Gadag ವಿರೇಶ್ವರ ಪುಣ್ಯಾಶ್ರಮದಲ್ಲಿ ಅದ್ದೂರಿ ಮಹಾರಥೋತ್ಸವ

Jaishankar

Rahul Gandhi ಅವರಿಗೆ ವಿದೇಶದಲ್ಲಿ ಭಾರತವನ್ನು ಟೀಕಿಸುವ ಅಭ್ಯಾಸ: ಜೈಶಂಕರ್

sanjay-raut

BJPಗೆ ಬಜರಂಗ ಬಲಿ ಸಹಾಯ ಮಾಡಲಿಲ್ಲ,ಈಗ ಔರಂಗಜೇಬ..: ರಾವುತ್

1-saddsad

Chikkamagaluru ; ನಾಲ್ವರು ಕುಖ್ಯಾತ ಶ್ರೀಗಂಧ ಕಳ್ಳರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asds-dsad

ವಸತಿ ವಿದ್ಯಾಲಯದಲ್ಲಿ ಬಾಲಕಿ ಆಕಸ್ಮಿಕ ಸಾವು; ಸೂಕ್ತ ತನಿಖೆಗೆ ಬೇಳೂರು ಸೂಚನೆ

ರಣಹೇಡಿಗಳ ವಿಚಾರ ಮಕ್ಕಳ ಪಠ್ಯಪುಸ್ತಕದಲ್ಲಿ ಇಡಲು ಬಿಡುವುದಿಲ್ಲ: ಬಿ.ಕೆ.ಹರಿಪ್ರಸಾದ್

ರಣಹೇಡಿಗಳ ವಿಚಾರ ಮಕ್ಕಳ ಪಠ್ಯಪುಸ್ತಕದಲ್ಲಿ ಇಡಲು ಬಿಡುವುದಿಲ್ಲ: ಬಿ.ಕೆ.ಹರಿಪ್ರಸಾದ್

Shivamogga: ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಪೋಸ್ಟ್ ಮಾರ್ಟಮ್ ಮಾಡಿದ ವೈದ್ಯರು

Shivamogga: ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಪೋಸ್ಟ್ ಮಾರ್ಟಮ್ ಮಾಡಿದ ವೈದ್ಯರು

police crime

Shivamogga ಬಂಧಿಸಲು ತೆರಳಿದ್ದ ವೇಳೆ ದಾಳಿ; ಆರೋಪಿಗೆ ಪೊಲೀಸರ ಗುಂಡು

2–shivamogga

Shivamogga : ಕ್ಷುಲಕ ವಿಚಾರಕ್ಕೆ ಬಾರ್‌ ಕ್ಯಾಶಿಯರ್‌ ಕೊಲೆ

MUST WATCH

udayavani youtube

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

udayavani youtube

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

udayavani youtube

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಹೊಸ ಸೇರ್ಪಡೆ

1-adasds

Hunsur; ಅಕ್ರಮ ಮರಳು ಸಾಗಾಟ;ಟಿಪ್ಪರ್‌ ಗಳು ವಶ, ಚಾಲಕರು ಪರಾರಿ

1-asds-dsad

ವಸತಿ ವಿದ್ಯಾಲಯದಲ್ಲಿ ಬಾಲಕಿ ಆಕಸ್ಮಿಕ ಸಾವು; ಸೂಕ್ತ ತನಿಖೆಗೆ ಬೇಳೂರು ಸೂಚನೆ

1-dfsadsad

ಪ್ರೊ ಅಸ್ಸಾದಿ ಅವರಿಗೆ 26 ವರ್ಷಗಳ ನಂತರ ಕೈ ಸೇರಿದ ರಾಜೀನಾಮೆ ಪತ್ರ

1-wewqewqe

Nothing ಭಾರತದ ಮಾರ್ಕೆಟಿಂಗ್ ಡೈರೆಕ್ಟರ್ ಆಗಿ ಪ್ರಣಯ್ ರಾವ್ ನೇಮಕ

1-ssdsad

Shirva ಬೈಕುಗಳ ಮುಖಾಮುಖಿ:ಓರ್ವ ಮೃತ್ಯು, ಇನ್ನೋರ್ವ ಗಂಭೀರ