ಸೀಲ್ ಡೌನ್ ಆಗಿದ್ದ ಹಕ್ಕಿಪಿಕ್ಕಿ ಕ್ಯಾಂಪ್ ಜನರಿಂದ ಪಕ್ಕದ ಊರಿನ ಜನರ ಮೇಲೆ ಹಲ್ಲೆ
Team Udayavani, Jun 3, 2020, 10:47 AM IST
ಶಿವಮೊಗ್ಗ: ಹಕ್ಕಿಪಿಕ್ಕಿ ಕ್ಯಾಂಪ್ ನಲ್ಲಿದ್ದ ಕೆಲವರಿಗೆ ಕೋವಿಡ್-19 ಸೋಂಕು ಕಾಣಿಸಿಕೊಂಡಿದ್ದು, ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ. ಆದರೂ ಜನರು ಕಳ್ಳದಾರಿಯಲ್ಲಿ ಹೊರಗಡೆ ಬಂದಿರುವುದ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ ಮಾಡಲಾಗಿದೆ.
ಜಿಲ್ಲೆಯ ಚಿಕ್ಕಮರಡಿ ಗ್ರಾಮದ ಜನರ ಮೇಲೆ ದಾಳಿ ನಡೆಸಿದ ಹಲ್ಲೆ ನಡೆಸಲಾಗಿದೆ. ಹಕ್ಕಿಪಿಕ್ಕಿ ಕ್ಯಾಂಪ್ ಅನ್ನು ಸೀಲ್ ಡೌನ್ ಮಾಡಿದರೂ, ಅಲ್ಲಿನ ಜನರು ಆದರೆ ಕಳ್ಳದಾರಿಯ ಮೂಲಕ ಪಕ್ಕದ ಊರಿಗೆ ಬರುತ್ತಿದ್ದರು. ನಿಮ್ಮೂರು ಸೀಲ್‌ಡೌನ್ ಆಗಿದೆ ಹೀಗಾಗಿ ನಿಮ್ಮೂರಿನಿಂದ ಹೊರ ಬರಬೇಡಿ ಎಂದು ಹೇಳಿದ್ದಕ್ಕೆ ಆಕ್ರೋಶಗೊಂಡು ದಾಳಿ ಮಾಡಿದ್ದಾರೆ ಎನ್ನಲಾಗಿದೆ.
150 ಜನರ ತಂಡದಿಂದ ದಾಳಿ ನಡೆದಿದ್ದು, ಹಕ್ಕಿಪಿಕ್ಕಿ ಕ್ಯಾಂಪ್ ಜನರ ದಾಳಿಯಿಂದ ಚಿಕ್ಕಮರಡಿ ಗ್ರಾಮದ 15 ಜನರು ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಗಾಯಾಳುಗಳನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.