ತಾಂಜೇನಿಯಾ- ಗೋವಾ- ಶಿವಮೊಗ್ಗ .. ಅಪರೂಪದ ನೀರಾನೆ ದಂತ ಕಳ್ಳಸಾಗಾಣಿಕೆ ಹಿಂದಿದೆ ರೋಚಕ ಕಹಾನಿ

Team Udayavani, Aug 30, 2020, 3:46 PM IST

ತಾಂಜೇನಿಯಾ- ಗೋವಾ- ಶಿವಮೊಗ್ಗ .. ಅಪರೂಪದ ನೀರಾನೆ ದಂತ ಕಳ್ಳಸಾಗಾಣಿಕೆ ಹಿಂದಿದೆ ರೋಚಕ ಕಹಾನಿ

ಶಿವಮೊಗ್ಗ: ನೀರಾನೆಗಳೇ ಇಲ್ಲದ ಭಾರತದಲ್ಲಿ ನೀರಾನೆ ದಂತ ಸಿಕ್ಕರೆ ಏನಾಗಬಹುದು. ಅದು ಕೂಡ ನಮ್ಮ ಶಿವಮೊಗ್ಗದಲ್ಲಿ! ನೀರಾನೆಗೂ ಶಿವಮೊಗ್ಗಕ್ಕೂ ಎಲ್ಲಿಂದೆಲ್ಲಿನ ಸಂಬಂಧ. ಈತ್ತೀಚೆಗೆ ಸೊರಬ ತಾಲ್ಲೂಕಿನಲ್ಲಿ ಸಿಕ್ಕ ನೀರಾನೆ ದಂತ ಪ್ರಕರಣ ಇಡೀ ದಕ್ಷಿಣ ಭಾರತದಲ್ಲೇ ಮೊದಲನೆಯದ್ದಾಗಿದೆ. ಈ ಪ್ರಕರಣವೀಗ ಅಂತಾರಾಷ್ಟ್ರೀಯ ಸ್ಮಗ್ಲಿಂಗ್‌ಗೆ ತಳುಕು ಹಾಕಿಕೊಂಡಿದ್ದು ತನಿಖೆ ಹಾದಿಯಲ್ಲಿದೆ.

ತಾಂಜೇನಿಯದ ದಂತ!

ಗೋವಾದಲ್ಲಿರುವ 80 ವರ್ಷದ ಮಹಿಳೆ ಈ ಮುಂಚೆ ಆಫ್ರಿಕಾದ ತಾಂಜೇನಿಯದಲ್ಲಿರು. ಆದರೆ, ಕುಟುಂಬ ಸಮೇತ 1960ರಲ್ಲಿ ಅವರು ಗೋವಾಕ್ಕೆ ಮರಳಿದ್ದಾರೆ. ಆಗ ಅವರು ಈ ದಂತಗಳನ್ನು ತಂದಿದ್ದರು. ಆ ದಂತಗಳು ಮನೆಯ ಸ್ಟೋರ್ ಸ್ವಚ್ಛಗೊಳಿಸುವಾಗ ಸಿಕ್ಕಿವೆ ಎಂದು ತನಿಖೆ ವೇಳೆ ತಿಳಿದುಬಂದಿದೆ. ದಂತಗಳನ್ನು ಪ್ರಯೋಗಾಲಯಕ್ಕೆ ಒಳಪಡಿಸಿ ಅದು ಯಾವ ವರ್ಷದಲ್ಲಿ ಜೀವಿತವಾಗಿತ್ತು ಎಂಬಿತಾ ದಿ ಅಂಶಗಳನ್ನು ತಿಳಿದುಕೊಳ್ಳುವ ಪ್ರಯತ್ನ ನಡೆದಿದೆ.

ಶಿವಮೊಗ್ಗದ ಸೊರಬದಲ್ಲಿ ಸೆರೆಸಿಕ್ಕ ನೀರಾನೆ ದಂತ ಕಳ್ಳಸಾಗಣೆ ಜಾಲಕ್ಕೆ ಗೋವಾ ನಂಟಿದೆ ಹಾಗೂ ನೀರಾನೆ ದಂತ ತಾಂಜೇನಿಯಾ ರಾಷ್ಟ್ರದ್ದು ಎಂದು ಶಿವಮೊಗ್ಗ ಅರಣ್ಯ ವಲಯ ಮುಖ್ಯ ಸಂರಕ್ಷಣಾಧಿಕಾರಿ (ಸಿಸಿಎಫ್) ರವಿಶಂಕರ್ ಹೇಳಿದ್ದಾರೆ. ಮೊದಲ ಬಾರಿ ಶಿವಮೊಗ್ಗ ಬೆರಗುಗೊಳಿಸಿದ ಪ್ರಕರಣದ ಜಾಡು ಹಿಡಿದು ಹೊರಟ ಶಿವಮೊಗ್ಗ ಅರಣ್ಯ ಸಂಚಾರಿ ದಳಕ್ಕೆ ಸಿಕ್ಕಿದ್ದು ಗೋವಾದಲ್ಲಿ ಮನೆ ಖಾಲಿ ಮಾಡಿ ಹೋಗಿದ್ದ ವೃದ್ಧೆ..!

ಭಾರತದಲ್ಲಿ ನೀರಾನೆ ಪ್ರಬೇಧವೇ ಇಲ್ಲ ಆದರೂ ಶಿವಮೊಗ್ಗದ ಬಾರ್ಡರ್ ಸೊರಬದಲ್ಲಿ ನೀರಾನೆ ದಂತ ಮಾರಾಟಗಾರರನ್ನು ಕಳೆದ ಸೋಮವಾರ ಬಂಧಿಸಲಾಗಿದೆ ಎಂಬ ಸುದ್ದಿ ಅಚ್ಚರಿ ಮೂಡಿಸಿತ್ತು. ಬಂಧಿತರಲ್ಲಿ ಜಾಕೀರ್ ಖಾನ್ ಸೊರಬದ ಚಂದ್ರಗುತ್ತಿಯವನು. ಮುಜಾಫರ್ ಹೊನ್ನಾವರ ಹಾಗೂ ಮೊಹಮ್ಮದ್ ಡ್ಯಾನಿಷ್ ಭಟ್ಕಳದವನು. ಹೀಗಿರುವಾಗ ಅವರ ವಾಹನಗಳು ಮಾತ್ರ ಗೋವಾ ರಿಜಿಸ್ಟ್ರೇಷನ್ ಹೊಂದಿದ್ದು ಇನ್ನಷ್ಟು ಅನುಮಾನಕ್ಕೆಡೆಮಾಡಿತ್ತು. ಅಳಿವಿನಂಚಿನ ನೀರಾನೆ ದಂತಗಳನ್ನ ಆರೋಪಿಗಳ ಸಮೇತ ವಶಕ್ಕೆ ಪಡೆದ ಅರಣ್ಯ ಸಂಚಾರಿ ದಳದ ಖಡಕ್ ಅಧಿಕಾರಿ, ಡಿಸಿಎಫ್ ಬಾಲಚಂದ್ರ ಹೊಸಳ್ಳಿ ಅರ್ಧದಷ್ಟು ತನಿಖೆಯನ್ನ ಮೂರೇ ದಿನಗಳಲ್ಲಿ ಮುಗಿಸಿದ್ದಾರೆ. ಹಾಗೂ ನೀರಾನೆ ದಂತಗಳ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಹೆಚ್ಚಿನ ಸಂಶೋಧನೆಗೆ ಕಳುಹಿಸಿಕೊಡಲಿದ್ದಾರೆ.

ಇದನ್ನೂ ಓದಿ: ಮನೆಯಲ್ಲಿ ಯಾರೂ ಇಲ್ಲದ ವೇಳೆ 70 ಲಕ್ಷ ದೋಚಿದ್ದ ಅಡುಗೆ ಭಟ್ಟನ ಬಂಧನ

ಸೆರೆಸಿಕ್ಕ ಆರೋಪಿಗಳ ಮಾಹಿತಿ ಮೇರೆಗೆ ಗೋವಾ ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಸಹಯೋಗದಲ್ಲಿ ಈ ಜಾಲದ ಬೇರನ್ನ ಹುಡುಕಿ ಹೊರಟಾಗ ಸಿಕ್ಕವರು ಗೋವಾದ ಅನಿಲ್ ಪರ್ಸೆಕರ್ ಹಾಗೂ ವಿಶಾಲ್. ಅನಿಲ್ ಪರ್ಸೇಕರ್ ವಾಹನದಲ್ಲಿ ನೀರಾನೆ ದಂತಗಳನ್ನ ಕರ್ನಾಟಕದ ಗಡಿ ದಾಟಿಸಲಾಗಿದೆ. ನಮ್ಮ ದೇಶದಲ್ಲಿ ನೀರಾನೆಗಳೇ ಇಲ್ಲ, ದಂತಗಳೆಲ್ಲಿ ಬರಬೇಕು.? ಹಾಗಾದರೆ ಈ ದಂತಗಳು ಹೊರದೇಶದಿಂದಲೇ ಬಂದಿರಬೇಕು. ಈ ಅನುಮಾನ ದಟ್ಟವಾದಾಗ ಎದುರಾಗಿದ್ದು ಗೋವಾದ ವೃದ್ಧೆ.

ನೀರಾನೆ ದಂತ

ಈ ವೃದ್ಧೆ ಗೋವಾದಲ್ಲಿ ಮನೆ ಬದಲಿಸುವಾಗ ಹಳೇ ಕಾಲದ ನೀರಾನೆ ದಂತಗಳನ್ನ ಯಾರಿಗಾದರೂ ಕೊಡುವ ಚಿಂತನೆ ಮಾಡಿದ್ದಾಳೆ. ಅನಿಲ್ ಹಾಗೂ ವಿಶಾಲ್ ಈ ವೃದ್ಧೆಗೆ ಪರಿಚಿತರು. ಬಿಸಾಡುವಂತಹ ದಂತಗಳನ್ನ ನೋಡಿದ ಯುವಕರಿಗೆ ಬಂಗಾರದ ಬೆಲೆ ಗೋಚರವಾಗಿದೆ. ದಂತಗಳನ್ನು ಯಾರಿಗಾದರೂ ಮಾರಿಬಿಡಲೆಂದು ಹುಡುಕಾಟ ನಡೆಸುತ್ತಿದ್ದಾಗ ಸಿಕ್ಕವರು ಸೆರೆಸಿಕ್ಕ ಮೂವರು ಆರೋಪಿಗಳು. ಮೇಲ್ನೋಟಕ್ಕೆ ಮೂವರು ಸಾಗಟದಾರರಂತೆ ಕಂಡರೂ ಇವರಿಗೆ ಅಪರಾಧ ಹಿನ್ನೆಲೆಯಿದೆ. ಈ ಆನೆ ದಂತಗಳನ್ನ ವೃದ್ಧೆ ತಾಂಜೇನಿಯಾ ರಾಷ್ಟ್ರದಿಂದ ಹಲವಾರು ದಶಕಗಳ ಹಿಂದೆಯೇ (1962) ತಂದಿದ್ದಾಗಿ  ಹೇಳಿಕೆ ನೀಡಿರುವುದರಿಂದ ಅಧಿಕಾರಿಗಳು ಇದನ್ನು ಉನ್ನತ ಪ್ರಯೋಗಾಲಯಕ್ಕೆ ರವಾನೆ ಮಾಡಲಿದ್ದಾರೆ.

ಇದನ್ನೂ ಓದಿ: ಕದನ ವಿರಾಮ ಉಲ್ಲಂಘಿಸಿ ಪಾಕ್ ಸೇನೆಯಿಂದ ಗುಂಡಿನ ದಾಳಿ: ಭಾರತೀಯ ಯೋಧ ಹುತಾತ್ಮ

ಪ್ರಕರಣ ಭೇದಿಸಿದ್ದು ಹೇಗೆ?

ದಂತಗಳ ಮಾರಾಟಕ್ಕೆ ಪ್ರಯತ್ನಿಸುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದ್ದೇ ಅತ್ಯಂತ ಚಾಕಚಕ್ಯತೆಯಿಂದ ವರ್ತಿಸಿರುವ ಸಂಚಾರದ ದಳದ ಸಿಬ್ಬಂದಿ ವ್ಯಾಪಾರಿಗಳ ಸೋಗಿನಲ್ಲಿ ದಾನೀಷ್ ಮತ್ತವರ ಸಹಚರರನ್ನು ಭೇಟಿ ಮಾಡಿದ್ದಾರೆ. ವ್ಯಾಪಾರ ಕುದುರಿಸುವುದಕ್ಕಾಗಿಯೇ ಬಂದಿರುವುದನ್ನು ಖಾತರಿ ಪಡಿಸಿಕೊಂಡ ಬಳಿಕ ದಂತಗಳನ್ನು ತೋರಿಸಲಾಗಿದೆ. ಬಳಿಕ ಕಾರ್ಯಾಚರಣೆ ನಡೆಸಿದ ತಂಡ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಮುಜಾಫರ್ ಹಸನ್ (19), ಜಹೀರ್ ಖಾನ್ (34) ಎಂಬುವವರನ್ನು ಬಂಧಿಸಿ ನ್ಯಾಯಾಂಗಕ್ಕೆ ಹಾಜರು ಪಡಿಸಿದ್ದಾರೆ. ವಿಚಾರಣೆಯ ವೇಳೆ ನೀರಾನೆಗೆ ಗೋವಾ ಸಂಪರ್ಕ ಇರುವುದು ತಿಳಿದು ಅಲ್ಲಿಗೂ ಒಂದು ತಂಡ ಭೇಟಿ ನೀಡಿದೆ. ಆಗ ಸತ್ಯಾಂಶ ಬೆಳಕಿಗೆ ಬಂದಿದೆ.

ಟಾಪ್ ನ್ಯೂಸ್

ಅಗ್ರಸ್ಥಾನ ಅಲಂಕರಿಸಿದ ಬೆಂಗಳೂರು ಬುಲ್ಸ್‌

ಅಗ್ರಸ್ಥಾನ ಅಲಂಕರಿಸಿದ ಬೆಂಗಳೂರು ಬುಲ್ಸ್‌

ಸುಪ್ರಸಿದ್ಧ ಯಕ್ಷಗಾನ ಸ್ತ್ರೀವೇಷಧಾರಿ ಮಾರ್ಗೋಳಿ ಗೋವಿಂದ ಶೇರಿಗಾರ್ ನಿಧನ

ಸುಪ್ರಸಿದ್ಧ ಯಕ್ಷಗಾನ ಸ್ತ್ರೀವೇಷಧಾರಿ ಮಾರ್ಗೋಳಿ ಗೋವಿಂದ ಶೇರಿಗಾರ್ ನಿಧನ

ಭಾರತವನ್ನು ಕ್ಲೀನ್‌ ಸ್ವೀಪ್‌ ಮಾಡಿದ ದಕ್ಷಿಣ ಆಫ್ರಿಕಾ

ಭಾರತವನ್ನು ಕ್ಲೀನ್‌ ಸ್ವೀಪ್‌ ಮಾಡಿದ ದಕ್ಷಿಣ ಆಫ್ರಿಕಾ

ಉಡುಪಿ: 1,061; ದಕ್ಷಿಣ ಕನ್ನಡ: 770 ಮಂದಿಗೆ ಕೋವಿಡ್‌ ಸೋಂಕು

ಉಡುಪಿ: 1,061; ದಕ್ಷಿಣ ಕನ್ನಡ: 770 ಮಂದಿಗೆ ಕೋವಿಡ್‌ ಸೋಂಕು

ಪಿಂಚಣಿ ಪಡೆಯಲು ಶವವನ್ನೇ ಅಂಚೆ ಕಚೇರಿಗೆ ಒಯ್ದರು!

ಪಿಂಚಣಿ ಪಡೆಯಲು ಶವವನ್ನೇ ಅಂಚೆ ಕಚೇರಿಗೆ ಒಯ್ದರು!

ಕೋವಿಡ್‌ ಪರೀಕ್ಷೆ ಹೆಚ್ಚಳದಿಂದ ಸೋಂಕು ನಿಯಂತ್ರಣ: ಸಚಿವ ಡಾ.ಕೆ. ಸುಧಾಕರ್‌

ಕೋವಿಡ್‌ ಪರೀಕ್ಷೆ ಹೆಚ್ಚಳದಿಂದ ಸೋಂಕು ನಿಯಂತ್ರಣ: ಸಚಿವ ಡಾ.ಕೆ. ಸುಧಾಕರ್‌

ಮೇಕೆದಾಟು ಪಾದಯಾತ್ರೆ ತಡೆಗೆ ಬಿಜೆಪಿ ಕುತಂತ್ರ: ಸತೀಶ ಜಾರಕಿಹೊಳಿ

ಮೇಕೆದಾಟು ಪಾದಯಾತ್ರೆ ತಡೆಗೆ ಬಿಜೆಪಿ ಕುತಂತ್ರ: ಸತೀಶ ಜಾರಕಿಹೊಳಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋವಿಡ್‌ ಪರೀಕ್ಷೆ ಹೆಚ್ಚಳದಿಂದ ಸೋಂಕು ನಿಯಂತ್ರಣ: ಸಚಿವ ಡಾ.ಕೆ. ಸುಧಾಕರ್‌

ಕೋವಿಡ್‌ ಪರೀಕ್ಷೆ ಹೆಚ್ಚಳದಿಂದ ಸೋಂಕು ನಿಯಂತ್ರಣ: ಸಚಿವ ಡಾ.ಕೆ. ಸುಧಾಕರ್‌

ಚಾಮರಾಜನಗರದಲ್ಲಿ ಕೋವಿಡ್ ಪ್ರಕರಣಗಳ ಸ್ಫೋಟ : 752 ಪ್ರಕರಣ ದೃಢ

ಚಾಮರಾಜನಗರದಲ್ಲಿ ಕೋವಿಡ್ ಪ್ರಕರಣಗಳ ಸ್ಫೋಟ : 752 ಪ್ರಕರಣ ದೃಢ, ಓರ್ವ ಸೋಂಕಿತ ಸಾವು

ಭಟ್ಕಳ : ಮನೆಯ ಬೀಗ ಮುರಿದು ನಗ ನಾಣ್ಯ ದೋಚಿ ಪರಾರಿಯಾದ ಕಳ್ಳರು

ಮನೆಗೆ ಕನ್ನ ಹಾಕಿದ ಕಳ್ಳರು, ಅಪಾರ ಪ್ರಮಾಣದ ಸೊತ್ತು ಕಳವು : ಪೊಲೀಸರಿಂದ ಶೋಧ ಕಾರ್ಯ

ಸೋಡಿಗದ್ದೆ ದೇವಿಯ ವಾರ್ಷಿಕ ಜಾತ್ರೆ ಆರಂಭ : ಭಕ್ತರ ಸಂಖ್ಯೆಯಲ್ಲಿ ಭಾರೀ ಇಳಿಮುಖ

ಸೋಡಿಗದ್ದೆ ದೇವಿಯ ವಾರ್ಷಿಕ ಜಾತ್ರೆ ಆರಂಭ : ಭಕ್ತರ ಸಂಖ್ಯೆಯಲ್ಲಿ ಭಾರೀ ಇಳಿಮುಖ

containment ZOne

ರಾಜ್ಯದಲ್ಲಿ ಇಂದು 50 ಸಾವಿರ ಕೋವಿಡ್ ಕೇಸ್ : 165 ಹೊಸ ಒಮಿಕ್ರಾನ್; 19 ಸಾವು

MUST WATCH

udayavani youtube

ಕೋಲ್ಕತಾದಲ್ಲಿ ಬಿಜೆಪಿ ಮತ್ತು ಟಿಎಂಸಿ ಘರ್ಷಣೆ; ಸಂಸದರ ಮೇಲೆ ಕಲ್ಲು ತೂರಾಟ

udayavani youtube

ಹೆಣ ಸಾಗಿಸಲು ಹೆಣಗಾಟ..!| ಇದು ಹೊಳೆಕೂಡಿಗೆ ಗ್ರಾಮದ ಜನರ ನರಕದ ಬದುಕು

udayavani youtube

ಕತ್ತಲೆ ಬಸದಿಯ ಇತಿಹಾಸ

udayavani youtube

ತೊಕ್ಕೊಟ್ಟು : ಕಂಟೈನರ್ ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿತು ಬಾರಿ ಅನಾಹುತ

udayavani youtube

ತಪ್ಪಿಸುಕೊಳ್ಳಲು ಯತ್ನಿಸುವಾಗ ಕಟ್ಟಡದಿಂದ ಬಿದ್ದ ಕಳ್ಳ

ಹೊಸ ಸೇರ್ಪಡೆ

ಅಗ್ರಸ್ಥಾನ ಅಲಂಕರಿಸಿದ ಬೆಂಗಳೂರು ಬುಲ್ಸ್‌

ಅಗ್ರಸ್ಥಾನ ಅಲಂಕರಿಸಿದ ಬೆಂಗಳೂರು ಬುಲ್ಸ್‌

ಸುಪ್ರಸಿದ್ಧ ಯಕ್ಷಗಾನ ಸ್ತ್ರೀವೇಷಧಾರಿ ಮಾರ್ಗೋಳಿ ಗೋವಿಂದ ಶೇರಿಗಾರ್ ನಿಧನ

ಸುಪ್ರಸಿದ್ಧ ಯಕ್ಷಗಾನ ಸ್ತ್ರೀವೇಷಧಾರಿ ಮಾರ್ಗೋಳಿ ಗೋವಿಂದ ಶೇರಿಗಾರ್ ನಿಧನ

ಭಾರತವನ್ನು ಕ್ಲೀನ್‌ ಸ್ವೀಪ್‌ ಮಾಡಿದ ದಕ್ಷಿಣ ಆಫ್ರಿಕಾ

ಭಾರತವನ್ನು ಕ್ಲೀನ್‌ ಸ್ವೀಪ್‌ ಮಾಡಿದ ದಕ್ಷಿಣ ಆಫ್ರಿಕಾ

ಉಡುಪಿ: 1,061; ದಕ್ಷಿಣ ಕನ್ನಡ: 770 ಮಂದಿಗೆ ಕೋವಿಡ್‌ ಸೋಂಕು

ಉಡುಪಿ: 1,061; ದಕ್ಷಿಣ ಕನ್ನಡ: 770 ಮಂದಿಗೆ ಕೋವಿಡ್‌ ಸೋಂಕು

ಪಿಂಚಣಿ ಪಡೆಯಲು ಶವವನ್ನೇ ಅಂಚೆ ಕಚೇರಿಗೆ ಒಯ್ದರು!

ಪಿಂಚಣಿ ಪಡೆಯಲು ಶವವನ್ನೇ ಅಂಚೆ ಕಚೇರಿಗೆ ಒಯ್ದರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.