

Team Udayavani, Sep 16, 2023, 5:52 PM IST
ಶಿವಮೊಗ್ಗ: ಪ್ರಣವಾನಂದ ಸ್ವಾಮೀಜಿ ನಮ್ಮ ಸಮಾಜದವರೇ ಅಲ್ಲ. ಅವರೇನು ಈಡಿಗ ಸಮಾಜದವರಾ? ನಾನೇನು ಅವರ ಜಾತಕ ನೋಡಿಕೊಂಡು ಇರಲಾ. ಅವರ ಹಿನ್ನೆಲೆ ಕೆದಕಿ ನಿಮಗೆ ಗೊತ್ತಾಗುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಸಚಿವರು ಜೀವ ಬೆದರಿಕೆ ಹಾಕಿದ್ದಾರೆ ಎಂಬ ಸ್ವಾಮೀಜಿ ಆರೋಪಕ್ಕೆ ತಿರುಗೇಟು ನೀಡಿದ ಸಚಿವ ಮಧು ಬಂಗಾರಪ್ಪ, ಕಣ್ಣೀರು ಏಕೆ ಹಾಕಿದ್ದಾರೆ? ತಪ್ಪು ಮಾಡಿದ್ದಾರಾ? ಅವರನ್ನು ಬೇಕಾದಷ್ಟು ನೋಡಿದ್ದೇವೆ. ಇಂತಹ ಬುರುಡೆ ಬಿಟ್ಟುಕೊಂಡೆ ಬಂದಿದ್ದಾರೆ. ಕಳ್ಳತನ ಮಾಡಿದ್ದರೆ, ತಪ್ಪು ಮಾಡಿದ್ದರೆ ಕಣ್ಣೀರು ಹಾಕುತ್ತಾರೆ ಎಂದರು.
ನನ್ನ ವಿರುದ್ದ ಕಮಿಷನರ್, ಸ್ಪೀಕರ್, ಖರ್ಗೆ ಯಾರಿಗೆ ಬೇಕಾದರೂ ದೂರು ಕೊಡಲಿ. ನನಗೆ ಮಾಡಲು ಬೇಕಾದಷ್ಟು ಕೆಲಸ ಇದೆ. ಸ್ವಾಮೀಜಿ ಅವರು ಸುಮ್ಮನೆ ಪ್ರಚಾರ ತಗೆದುಕೊಳ್ಳುತ್ತಾರೆ. ನೀವುಗಳು ಇದನ್ನೆಲ್ಲಾ ಹಾಕುದು ನಿಲ್ಲಿಸಿ. ಇಂತಹವರಿಗೆಲ್ಲಾ ಏಕೆ ಪ್ರಚಾರ ಕೊಡುತ್ತೀರಿ ಎಂದು ಪ್ರಶ್ನಿಸಿದರು.
ಬಿ.ಕೆ ಹರಿಪ್ರಸಾದ್ ಅವರು ಹಿರಿಯರಿದ್ದಾರೆ. ಅವರಿಗೆ ಸ್ಥಾನಮಾನ ಕೊಡಬೇಡಿ ಎನ್ನಲು ನಾನು ಯಾರು ಎಂದರು.
ಬೆದರಿಕೆ ಆರೋಪ: ಸಚಿವ ಮಧು ಬಂಗಾರಪ್ಪ ಬೆಂಬಲಿಗರು ಫೋನ್ ಕರೆ ಮಾಡಿ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಪ್ರಣವಾನಂದ ಸ್ವಾಮೀಜಿ ಗಂಭೀರ ಆರೋಪ ಮಾಡಿದ್ದಾರೆ.
ನನಗೆ ಜೀವ ಬೆದರಿಕೆ ಇದೆ. ಪೊಲೀಸ್ ಕಮಿಷನರ್ ಭೇಟಿ ಮಾಡುತ್ತಿದ್ದೇನೆ. ಮಧು ಬಂಗಾರಪ್ಪ ವಿರುದ್ಧ ದೂರು ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
Ad
ಹೊಸನಗರ; ಮಳೆ ರಜೆ ಕುರಿತು ನಕಲಿ ಸರ್ಕಾರಿ ಆದೇಶ: ಪೊಲೀಸರಿಗೆ ದೂರು
Sagara: ಬೇಳೂರು ಅಪ್ರಬುದ್ಧರಾಗಿ ಮಾತನಾಡುವುದನ್ನು ಬಿಡಬೇಕು; ಹಾಲಪ್ಪ ಆಕ್ರೋಶ
Bhadra Reservoir: ಭರ್ತಿಯತ್ತ ಭದ್ರಾ ಜಲಾಶಯ: 2 ಸಾವಿರ ಕ್ಯೂಸೆಕ್ ನದಿಗೆ
Shimoga: ಕಾಲುವೆಗೆ ಬಿದ್ದ ಹಸುವನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
Channagiri: ಸಾಲದ ವಿಚಾರಕ್ಕೆ ಜಗಳ: ಪತ್ನಿಯ ಮೂಗನ್ನೇಕಚ್ಚಿ ತುಂಡರಿಸಿದ ಪತಿರಾಯ
Kolukkumala; ಹೂ ಬದಲು ಹುಲಿಯ ದರ್ಶನ: ಸ್ವಲ್ಪದರಲ್ಲೇ ಕೇರಳ ಚಾರಣಿಗ ಪಾರು
Mumbai: ಹಣವಿದ್ದ ಬ್ಯಾಗ್ ಜತೆ ಮಹಾರಾಷ್ಟ್ರ ಸಚಿವ: ವಿಪಕ್ಷಗಳಿಂದ ಟೀಕೆ
Chhattisgarh: ಒಟ್ಟು 37.5 ಲಕ್ಷ ರೂ. ಇನಾಮು ಹೊತ್ತಿದ್ದ 22 ನಕ್ಸಲರ ಶರಣಾಗತಿ
Lord’s Test: ಭಾರತದ ಎಚ್ಚರಿಕೆಯ ಬ್ಯಾಟಿಂಗ್: ರೂಟ್ 37ನೇ ಶತಕ, ಬುಮ್ರಾಗೆ 5 ವಿಕೆಟ್
ಕಡಿಮೆ ಬೆಲೆಗೆ ಎಲ್ಪಿಜಿ ಪೂರೈಕೆ: ತೈಲ ಸಂಸ್ಥೆಗಳಿಗೆ ಕೇಂದ್ರ ಸಬ್ಸಿಡಿ?
You seem to have an Ad Blocker on.
To continue reading, please turn it off or whitelist Udayavani.