

Team Udayavani, May 21, 2024, 5:07 PM IST
ತೀರ್ಥಹಳ್ಳಿ : ತೀರ್ಥಹಳ್ಳಿ-ಶಿವಮೊಗ್ಗ ನಡುವಿನ ರಾಷ್ಟ್ರೀಯ ಹೆದ್ದಾರಿಯ ಮಂಡಗದ್ದೆ ಸಮೀಪ ಖಾಸಗಿ ಬಸ್ ಯೊಂದು ಓವರ್ ಟೇಕ್ ಮಾಡುವ ಭರದಲ್ಲಿ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಮಂಗಳವಾರ ಸಂಭವಿಸಿದೆ.
ಕಳಸದಿಂದ ಶಿವಮೊಗ್ಗಕ್ಕೆ ಬರುವ ಖಾಸಗಿ ಬಸ್ ಮಂಡಗದ್ದೆಯ 15 ನೇ ಮೈಲಿಕಲ್ಲಿನ ಬಳಿ ಹೋಗುತ್ತಿರುವ ವೇಳೆ ಬಸ್ ಚಾಲಕ ಎದುರಿಗೆ ಸಾಗುತ್ತಿದ್ದ ವಾಹನವನ್ನ ಓವರ್ ಟೇಕ್ ಮಾಡಲು ಮುಂದಾಗಿದ್ದಾನೆ. ಈ ವೇಳೆ ಆತನ ನಿಯಂತ್ರಣ ತಪ್ಪಿದ ಬಸ್ ಇನ್ನೊಂದು ವಾಹನಕ್ಕೆ ಡಿಕ್ಕಿಯಾಗಿ ರಸ್ತೆ ಪಕ್ಕದ ಮರವೊಂದಕ್ಕೆ ಡಿಕ್ಕಿಯಾಗಿದೆ.
ಘಟನೆಯಲ್ಲಿ ಓರ್ವ ಮಹಿಳೆ ಹಾಗೂ ಓರ್ವ ಮಗುವು ಸೇರಿದಂತೆ ಕೆಲವರಿಗೆ ಗಾಯಗಳಾಗಿವೆ. ಇಬ್ಬರ ಪರಿಸ್ಥಿತಿ ಗಂಭೀರವಾಗಿ ಎನ್ನಲಾಗಿದೆ. ಇನ್ನೂ ಘಟನೆಯಲ್ಲಿ ಬಸ್‌ನ ಒಂದು ಬದಿ ಬಹುತೇಕ ನುಜ್ಜುಗುಜ್ಜಾಗಿದೆ.
Ad
Sagara: ದ್ವೀಪವಾಸಿಗಳ ಕಾಲಾಪಾನಿ ಶಿಕ್ಷೆಗೆ ಇಂದು ಮುಕ್ತಿ!
ಆರಗ ಅವರು ಅಧಿಕಾರಿಗಳೊಂದಿಗೆ ಏಕವಚನದಲ್ಲಿ ವಿವೇಚನೆ ಇಲ್ಲದೆ ಮಾತನಾಡುತ್ತಾರೆ: ಕಿಮ್ಮನೆ
ಶಿವಮೊಗ್ಗ ಕೇಂದ್ರ ಕಾರಾಗೃಹದ ಕೈದಿ ಹೊಟ್ಟೆಯಲ್ಲಿ ಮೊಬೈಲ್ ಪತ್ತೆ!
ತುಮರಿ ಸೇತುವೆ ಲೋಕಾರ್ಪಣೆ ವಿಚಾರದಲ್ಲಿ ಅಪಪ್ರಚಾರ ದುರದೃಷ್ಟಕರ: ಸಂಸದ ಬಿ.ವೈ.ರಾಘವೇಂದ್ರ
ಹೊಸನಗರ; ಮಳೆ ರಜೆ ಕುರಿತು ನಕಲಿ ಸರ್ಕಾರಿ ಆದೇಶ: ಪೊಲೀಸರಿಗೆ ದೂರು
You seem to have an Ad Blocker on.
To continue reading, please turn it off or whitelist Udayavani.