
Railway: ಶಿವಮೊಗ್ಗದಲ್ಲಿ ತಪ್ಪಿದ ಭಾರೀ ಅನಾಹುತ; ಚಲಿಸುತ್ತಿದ್ದ ರೈಲಿನಿಂದ ಕಳಚಿದ ಇಂಜಿನ್!
Team Udayavani, May 26, 2023, 10:51 AM IST

ಶಿವಮೊಗ್ಗ: ಚಲಿಸುತ್ತಿದ್ದ ರೈಲಿನ ಇಂಜಿನ್ ಕಳಚಿಹೋದ ಘಟನೆ ಇಲ್ಲಿನ ಬಿದರೆ ಬಳಿ ನಡೆದಿದ್ದು, ಅದೃಷ್ಟವಶಾತ್ ಭಾರೀ ಅನಾಹುತವೊಂದು ತಪ್ಪಿದೆ.
ತಾಳಗುಪ್ಪ- ಬೆಂಗಳೂರು ಎಕ್ಸ್‌ಪ್ರೆಸ್ ರೈಲಿ ನಲ್ಲಿ ಈ ಘಟನೆ ನಡೆದಿದ್ದು, ಕೆಲ ಕಾಲ ಭಯದ ವಾತಾವರಣ ಉಂಟಾಗಿತ್ತು.
ಈ ಎಕ್ಸ್ ಪ್ರೆಸ್ ರೈಲು ಶಿವಮೊಗ್ಗ ರೈಲ್ವೆ ನಿಲ್ದಾಣದಿಂದ ಹೊರಟಿತ್ತು. ಶಿವಮೊಗ್ಗ ಸಮೀಪದ ಬಿದರೆ ಬಳಿ ಬರುತ್ತಿದ್ದಂತೆ ಬೋಗಿಗಳಿಂದ ಇಂಜಿನ್ ಬೇರ್ಪಟ್ಟಿದೆ. ಕಪ್ಲಿಂಗ್ ಸಡಿಲಗೊಂಡ ಕಾರಣ ಬೋಗಿಗಳು ಮತ್ತು ಇಂಜಿನ್ ಬೇರೆ ಬೇರೆಯಾಗಿದೆ. ಬೋಗಿಗಳ ಬಿಟ್ಟು ಇಂಜಿನ್ ಸ್ವಲ್ಪ ದೂರ ಚಲಿಸಿದೆ.
ಇದನ್ನೂ ಓದಿ:U.T.Khader;ಕಾಗದಮುಕ್ತ ಪರಿಕಲ್ಪನೆಯಿಂದ ಡಿಜಿಟಲ್ ಅಸೆಂಬ್ಲಿ ಚಿಂತನೆ:ವಿಧಾನಸಭೆ ಸಭಾಧ್ಯಕ್ಷ
ಬಿದರೆ ಬಳಿ ಸಮತಟ್ಟಾಗಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ತಕ್ಷಣವೇ ಎಚ್ಚೆತ್ತ ಸಿಬ್ಬಂದಿಗಳು, ಸಮಸ್ಯೆ ಬಗೆಹರಿಸಿದರು. ರೈಲ್ವೇ ಪ್ರಯಾಣಿಕರು ಕೆಲಕಾಲ ಆತಂಕಗೊಂಡಿದ್ದರು. ಕೊನೆಗೆ ಬೆಂಗಳೂರು ಕಡೆಗೆ ರೈಲು ಹೊರಟಿತು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಸತಿ ವಿದ್ಯಾಲಯದಲ್ಲಿ ಬಾಲಕಿ ಆಕಸ್ಮಿಕ ಸಾವು; ಸೂಕ್ತ ತನಿಖೆಗೆ ಬೇಳೂರು ಸೂಚನೆ

ರಣಹೇಡಿಗಳ ವಿಚಾರ ಮಕ್ಕಳ ಪಠ್ಯಪುಸ್ತಕದಲ್ಲಿ ಇಡಲು ಬಿಡುವುದಿಲ್ಲ: ಬಿ.ಕೆ.ಹರಿಪ್ರಸಾದ್

Shivamogga: ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಪೋಸ್ಟ್ ಮಾರ್ಟಮ್ ಮಾಡಿದ ವೈದ್ಯರು

Shivamogga ಬಂಧಿಸಲು ತೆರಳಿದ್ದ ವೇಳೆ ದಾಳಿ; ಆರೋಪಿಗೆ ಪೊಲೀಸರ ಗುಂಡು

Shivamogga : ಕ್ಷುಲಕ ವಿಚಾರಕ್ಕೆ ಬಾರ್ ಕ್ಯಾಶಿಯರ್ ಕೊಲೆ
MUST WATCH

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ
