ಎಸ್‌ಎಂಎಸ್ ಮೂಲಕವೇ ಒಂದೂವರೆ ಲಕ್ಷ ರೂ. ದೋಚಿದ ವಂಚಕರು!
ಸಾಗರ: ಬ್ಯಾಂಕಿನ ಎಸ್‌ಎಂಎಸ್ ಎಂದು ನಂಬಿ ಮೋಸ ಹೋದ ಮಹಿಳೆ
Team Udayavani, Dec 2, 2022, 10:30 PM IST
ಸಾಗರ: ಎಸ್‌ಬಿಐ ಬ್ಯಾಂಕಿನ ಎಸ್‌ಎಂಎಸ್ ಎಂದು ನಂಬಿದ ಮಹಿಳಾ ಗ್ರಾಹಕರೋರ್ವರು ತಮ್ಮ ಪಾನ್ ನಂಬರ್, ಆಧಾರ್, ಒಟಿಪಿಗಳನ್ನು ಕೊಟ್ಟಿದ್ದರ ಹಿನ್ನೆಲೆಯಲ್ಲಿ 1.56 ಲಕ್ಷ ರೂ. ಕಳೆದುಕೊಂಡ ಘಟನೆ ನಗರದಲ್ಲಿ ನಡೆದಿದೆ. ವಂಚನೆಗೊಳಗಾದವರು ಬುಧವಾರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇಲ್ಲಿನ ಸುಭಾಷ್ ನಗರದ ಪೂಜಾ ಆರ್. ಎಂಬುವವರಿಗೆ ನ. 27ರಂದು ಎಸ್‌ಬಿಐನಿಂದ ಬಂದಿದೆ ಎಂಬ ಮಾದರಿಯಲ್ಲಿ ನಕಲಿ ಎಸ್‌ಎಂಎಸ್ ಬಂದಿದ್ದು, ಪಾನ್ ನಂಬರ್ ಕಳುಹಿಸಲು ತಿಳಿಸಲಾಗಿದೆ. ಪೂಜಾ ಅವರು ಪಾನ್ ನಂಬರ್ ಕಳುಹಿಸಿದಾಗ ಬಂದಂತಹ ಒಟಿಪಿಯನ್ನು ಕಳುಹಿಸಲು ಮತ್ತೊಂದು ಮೆಸೇಜ್ ಬಂದಿದೆ. ಈ ರೀತಿ ಬ್ಯಾಂಕಿನಿಂದ ಎಸ್‌ಎಂಎಸ್ ಬಂದಿದೆ ಎಂದು ಮಹಿಳೆ ಆಧಾರ್ ಕಾರ್ಡ್ ವಿವರ, ಮತ್ತೆ ಬಂದ ಒಟಿಪಿಗಳನ್ನೆಲ್ಲ ಎಸ್‌ಎಂಎಸ್ ಮೂಲಕ ಆರೋಪಿಗಳ ನಂಬರ್‌ಗೆ ರವಾನಿಸಿದ್ದಾರೆ.
ಇದನ್ನು ಬಳಸಿಕೊಂಡ ಆರೋಪಿಗಳು ಮೊದಲು 9,300 ರೂ. ಹಾಗೂ ಎಂಟು ನಿಮಿಷಗಳ ನಂತರ 1,47,600 ರೂ.ಗಳನ್ನು ವಿತ್‌ಡ್ರಾ ಮಾಡಿದ್ದಾರೆ.
ಬ್ಯಾಂಕಿನಲ್ಲಿ ತಂದೆಯ ನಿವೃತ್ತಿ ಹಣವಾದ 10 ಲಕ್ಷ ರೂ.ಗಳನ್ನು ಕಳೆದ ಜೂನ್‌ನಲ್ಲಿ ಠೇವಣಿ ಇರಿಸಲಾಗಿತ್ತು. ಖದೀಮರು ಈ ಠೇವಣಿಯ ಮೇಲೆ ಸಾಲದ ಬೇಡಿಕೆಯನ್ನು ಸೃಷ್ಟಿಸಿ ಒಟ್ಟು 1,56,900 ರೂ. ಲಪಟಾಯಿಸಿದ್ದಾರೆ. ಮೋಸ ಹೋದುದರ ಅರಿವು ಬಂದ ನಂತರ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಈಶ್ವರಪ್ಪಗೆ 35 ವರ್ಷ ಅವಕಾಶ ಕೊಟ್ಟಾಯ್ತು, ಈ ಬಾರಿ ನನಗೆ ಕೊಡಲಿ: ಆಯನೂರು ಮಂಜುನಾಥ್
ಶಿವಮೊಗ್ಗದಲ್ಲಿ ಫ್ಲೆಕ್ಸ್ ಪಾಲಿಟಿಕ್ಸ್; ಈಶ್ವರಪ್ಪಗೆ ಆಯನೂರು ಮಂಜುನಾಥ್ ಟಾಂಗ್
ಡಿಸಿ ಕಚೇರಿ ಮುಂದೆ ಆಜಾನ್ ವಿಚಾರ: ಹಿಂದೂ ಕಾರ್ಯಕರ್ತರಿಂದ ಗೋಮೂತ್ರ ಹಾಕಿ ಸ್ಥಳ ಶುದ್ದೀಕರಣ
ಜಿಲ್ಲಾಧಿಕಾರಿ ಕಚೇರಿ ಮುಂದೆ ಆಜಾನ್ ಕೂಗಿರುವುದು ಅಕ್ಷಮ್ಯ ಅಪರಾಧ: ಕೆ.ಎಸ್.ಈಶ್ವರಪ್ಪ
ಶಿವಮೊಗ್ಗ ಡಿಸಿ ಕಚೇರಿ ಆವರಣದಲ್ಲಿ ಆಜಾನ್; ಯುವಕನ ಮೇಲೆ ಕೇಸ್, ಎಚ್ಚರಿಕೆ