ಶಿವಮೊಗ್ಗದಲ್ಲಿ ಆಪರೇಶನ್ ಕಮಲ: ಸಾಗರ-ಶಿವಮೊಗ್ಗದ ಪ್ರಮುಖರು ಪಕ್ಷ ಸೇರ್ಪಡೆ
Team Udayavani, Dec 4, 2022, 11:38 AM IST
ಶಿವಮೊಗ್ಗ: ವಿಧಾನಸಭಾ ಚುನಾವಣೆಗೆ ಕೆಲವು ತಿಂಗಳಿದ್ದಾಗಲೇ ಶಿವಮೊಗ್ಗ ಬಿಜೆಪಿ ಕೆಲಸ ಆರಂಭಿಸಿದೆ. ಸೊರಬ, ಶಿಕಾರಿಪುರ ಬಳಿಕ ಸಾಗರ ಹಾಗೂ ಶಿವಮೊಗ್ಗ ಕ್ಷೇತ್ರದ ಪ್ರಮುಖರು ಬಿಜೆಪಿಗೆ ಸೇರ್ಪಡೆಯಾಗಿದ್ದು, ಚುನಾವಣಾ ತಂತ್ರಗಾರಿಕೆ ಅಧಿಕೃತವಾಗಿ ಆರಂಭವಾಗಿದೆ.
ಇಂದು ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಗರದ ಕೆ.ಎಸ್.ಪ್ರಶಾಂತ್ ಹಾಗೂ ಖ್ಯಾತ ಮಕ್ಕಳ ತಜ್ಞ ಡಾ ಧನಂಜಯ್ ಸರ್ಜಿ ಬಿಜೆಪಿಗೆ ಸೇರ್ಪಡೆಯಾದರು.
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ ನೇತೃತ್ವದಲ್ಲಿ ಇವರುಗಳು ಬಿಜೆಪಿ ಸೇರ್ಪಡೆಯಾದರು. ಕಾರ್ಯಕ್ರಮದಲ್ಲಿ ಶಾಸಕರಾದ ಆಯನೂರು ಮಂಜುನಾಥ್, ಡಿ.ಎಸ್.ಅರುಣ್, ಎಸ್.ರುದ್ರೇಗೌಡ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಉಪಸ್ಥಿತರಿದ್ದರು.
ಇದನ್ನೂ ಓದಿ:ಏಕದಿನ ಸರಣಿ; ಟಾಸ್ ಗೆದ್ದ ಬಾಂಗ್ಲಾ; ಟೀಂ ಇಂಡಿಯಾದ ಹಲವು ಅಚ್ಚರಿಯ ಬದಲಾವಣೆ
ಮಾಜಿ ಸಂಸದ ಕೆ.ಜಿ.ಶಿವಪ್ಪ ಅವರ ಪುತ್ರ, ಸಾಗರದ ಯುವ ಮುಖಂಡರಾಗಿರುವ ಕೆ.ಎಸ್.ಪ್ರಶಾಂತ್ ಈ ಹಿಂದೆ ರಾಜಕೀಯವಾಗಿ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದರು. ತನ್ನದೇ ಸಂಘಟನೆ ಮೂಲಕ ಸಾಮಾಜಿಕ ಚಟುವಟಿಕೆ ಮಾಡುತ್ತಿದ್ದ ಕೆ.ಎಸ್.ಪ್ರಶಾಂತ್ ಸೇರ್ಪಡೆ ಸಾಗರ ಭಾಗದಲ್ಲಿ ಬಿಜೆಪಿಗೆ ಬಲ ತುಂಬಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಶಿವಮೊಗ್ಗ ನಗರದ ಖ್ಯಾತ ಮಕ್ಕಳ ತಜ್ಞರಾಗಿರುವ ಡಾ.ಧನಂಜಯ್ ಸರ್ಜಿ ಅವರು ಸಾಮಾಜಿಕ ಕಾರ್ಯಕ್ರಮದ ಶಿವಮೊಗ್ಗದಲ್ಲಿ ಗುರುತಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನನಗೆ, ನನ್ನ ಮಗಳಿಗೆ ಇಡಿ ನೋಟಿಸ್: ಡಿ.ಕೆ.ಶಿವಕುಮಾರ್
ವಿಐಎಸ್ಎಲ್ ಉಳಿವಿಗೆ ಕೇಂದ್ರಕ್ಕೆ ಪ್ರಸ್ತಾವನೆ: ಸಿಎಂ ಬೊಮ್ಮಾಯಿ
ಕಮಲ ಕೆರೆಯಲ್ಲಿ, ತೆನೆ ಹೊಲದಲ್ಲಿ,ಕೈ ಅಧಿಕಾರದಲ್ಲಿದ್ದರೆ ಚೆಂದ: ಡಿಕೆಶಿ
ಜನರೊಂದಿಗೆ ದರ್ಪದ ವರ್ತನೆ ತೋರುತ್ತಿರುವ ಮೇಲಿನ ಕುರುವಳ್ಳಿ ಪಿಡಿಒ ವರ್ಗಾವಣೆಗೆ ಆಗ್ರಹ
ವಿಐಎಸ್ಎಲ್ ವಿಚಾರದಲ್ಲಿ ರಾಜಕೀಯ ಬೆಳೆಸುವ ಅವಶ್ಯಕತೆ ಇಲ್ಲ: ಸಿಎಂ ಬೊಮ್ಮಾಯಿ