ಮಾಲೀಕರಿಗಾಗಿ ಆಸ್ಪತ್ರೆ ಬಾಗಿಲಲ್ಲೇ ಕಾದು ಕುಳಿತ ನಾಯಿ; ತೀರ್ಥಹಳ್ಳಿಯಲ್ಲೊಂದು ರಿಯಲ್ ʼಚಾರ್ಲಿʼ


Team Udayavani, Jan 8, 2023, 11:08 AM IST

4–charlie-dog-story

ತೀರ್ಥಹಳ್ಳಿ: ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಾಲೀಕರಿಗಾಗಿ ನಾಯಿಯೊಂದು ಆಸ್ಪತ್ರೆಯ ಬಾಗಿಲಲ್ಲಿ ಕಾದು ಕುಳಿತ ಫೋಟೊವೊಂದು ವೈರಲ್ ಆಗಿದೆ.

ಇದು ಇತ್ತೀಚೆಗೆ ಬಿಡುಗಡೆಯಾದ ‘ಚಾರ್ಲಿ 777’ ಸಿನಿಮಾದ ದೃಶ್ಯವನ್ನು ನೆನಪಿಸುತ್ತಿದೆ. ಅಷ್ಟೆ ಅಲ್ಲ, ಈಗ ಇಡೀ ಪಟ್ಟಣದ ಜನ ಈ ಶ್ವಾನಕ್ಕೆ ಚಾರ್ಲಿ ಎಂದು ಕರೆಯುತ್ತಿದ್ದಾರೆ.

ಆಸ್ಪತ್ರೆ ಬಾಗಿಲಲ್ಲೇ ಮೊಕ್ಕಾಂ: ಪಟ್ಟಣದ ಸೊಪ್ಪುಗುಡ್ಡೆ ನಿವಾಸಿ ನಾಗರತ್ನ ಶಾಸ್ತ್ರಿ ಅವರ ಮಗಳು ಸುಧಾ ಜೋಯಿಸ್ ಅವರು ಮನೆಯಲ್ಲಿ ನಾಯಿ ಸಾಕಿದ್ದಾರೆ. 8 ತಿಂಗಳ ಈ ನಾಯಿಯ ಹೆಸರು ʼಪಪ್ಪಿʼ. ನಾಗರತ್ನ ಶಾಸ್ತ್ರಿಯವರು ವಯೋ ಸಹಜ ಆರೋಗ್ಯ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಪಟ್ಟಣದ ಆಸ್ಪತ್ರೆಯೊಂದರಲ್ಲಿ ನಾಗರತ್ನ ಶಾಸ್ತ್ರಿಯವರಿಗೆ ಚಿಕಿತ್ಸೆ ನಡೆಯುತ್ತಿತ್ತು. ಆಸ್ಪತ್ರೆಗೆ ದಾಖಲಾದ ದಿನದಿಂದ ಪಪ್ಪಿ, ಆಸ್ಪತ್ರೆ ಬಾಗಿಲಲ್ಲಿ ಮೊಕ್ಕಾಂ ಹೂಡಿತ್ತು. ಆಸ್ಪತ್ರೆ ಸಿಬ್ಬಂದಿ ಮತ್ತು ಇತರ ಸಾರ್ವಜನಿಕರಿಗೆ ಪಪ್ಪಿ ಯಾವುದೇ ತೊಂದರೆ ಕೊಟ್ಟಿಲ್ಲ. ಆದರೆ ಹೆಚ್ಚು ಹೊತ್ತು ಆಸ್ಪತ್ರೆ ಬಾಗಿಲಲ್ಲೆ ಕಾದು ಕುಳಿತಿರುತ್ತಿತ್ತು ಎನ್ನುತ್ತಾರೆ ಅಲ್ಲಿನ ಸ್ಥಳೀಯರು.

ವಾರ್ಡ್ ಕಡೆಗೆ ಗಮನ: ಆಸ್ಪತ್ರೆ ಬಾಗಿಲಲ್ಲೇ ನಿಲ್ಲುತ್ತಿದ್ದ ಪಪ್ಪಿ, ನಾಗರತ್ನ ಶಾಸ್ತ್ರಿಯವರನ್ನು ಕರೆದೊಯ್ದು ದಾಖಲು ಮಾಡಿದ್ದ ವಾರ್ಡ್ ಕಡೆಗೆ ದೃಷ್ಟಿ ನೆಟ್ಟಿರುತ್ತಿತ್ತು. ಬೇರೆ ಯಾರೆ ಬಂದು ಮಾತನಾಡಿಸಿದರೂ ಸೌಮ್ಯವಾಗಿಯೇ ಪ್ರತಿಕ್ರಿಯಿಸುತ್ತಿತ್ತು. ಆ ಬಳಿಕ ಪುನಃ ವಾರ್ಡ್ ಕಡೆಗೆ ಕಣ್ಣು ನೆಟ್ಟು ಕಾದು ನಿಲ್ಲುತ್ತಿತ್ತು. ನಾಗರತ್ನ ಶಾಸ್ತ್ರಿಯವರು ಆಸ್ಪ್ರೆಯಿಂದ ಡಿಸ್ಚಾರ್ಜ್ ಆದಾಗ, ಆಂಬುಲೆನ್ಸ್ ಬಳಿ ಕುಣಿದಾಡಿತ್ತು ಅನ್ನುತ್ತಾರೆ ಅಲ್ಲಿನ ಸಿಬ್ಬಂದಿ.

ಒಂದೂವರೆ ತಿಂಗಳಿದ್ದಾಗ ಅದನ್ನು ಮನೆಗೆ ತಂದಿದ್ದು, ಪಪ್ಪಿ ಎಂದು ಕರೆಯುತ್ತೇವೆ. ಈಗ ಅದಕ್ಕೆ 8 ತಿಂಗಳು. ನಮ್ಮ ತಾಯಿಗೆ ವಯಸ್ಸಾಗಿದೆ. ವಯೋ ಸಹಜ ಆರೋಗ್ಯ ಸಮಸ್ಯೆಗಳಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಮ್ಮ ಜೊತೆಗೆ ಬಂದು ಆಸ್ಪತ್ರೆ ಮುಂದೆ ನಿಲ್ಲುತ್ತಿತ್ತು. ʼಅಲ್ಲಿಗೆ ಬರುವ ಎಲ್ಲರಿಗೂ ಅದು ನಮ್ಮ ಮನೆ ನಾಯಿ ಎಂದು ಗೊತ್ತಾಗಿ ಹೋಗಿದೆʼ ಎನ್ನುತ್ತಾರೆ ನಾಗರತ್ನ ಶಾಸ್ತ್ರಿ ಅವರ ಮಗಳು ಸುಧಾ ಜೋಯಿಸ್.

ಆಹಾರ ತಿನ್ನದೇ ಕುಳಿತಿದ್ದ ಪಪ್ಪಿ: ವಯೋ ಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನಾಗರತ್ನ ಶಾಸ್ತ್ರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಕೊನೆಯುಸಿರೆಳೆದಿದ್ದಾರೆ. ಅಂದಿನಿಂದಲೂ  ಪಪ್ಪಿ ಆಹಾರ ಸೇವಿಸದೆ ಸುಮ್ಮನೆ ಕುಳಿತಿರುತ್ತಿದ್ದು, ನಮ್ಮ ಮನೆಯಲ್ಲಿ ಯಾರಿಗಾದರು ಆರೋಗ್ಯ ಸಮಸ್ಯೆಯಾದರು ಅದಕ್ಕೆ ಗೊತ್ತಾಗುತ್ತದೆ. ಆಗ ಅದು ಕೂಡ ಮಂಕಾಇ ಕೂತಿರುತ್ತದೆ ಎನ್ನುತ್ತಾರೆ ಸುಧಾ ಜೋಯಿಸ್.

ಪಪ್ಪಿ ಚಾರ್ಲಿ ಆಯಿತು: ಸುಧಾ ಜೋಯಿಸ್ ಅವರ ಮನೆಯ ಪಪ್ಪಿಗೆ ಈಗ ಪಟ್ಟಣದ ಜನರು ಚಾರ್ಲಿ ಎಂದು ಕರೆಯಲು ಆರಂಭಿಸಿದ್ದಾರೆ. ಚಾರ್ಲಿ ಸಿನಿಮಾದ ನಾಯಿಯಂತೆಯೆ ಬಣ್ಣ, ಅದರಂತೆಯೇ ಹೊಂದಾಣಿಕೆ, ಹೇಳಿದ್ದು ಕೇಳುವ ಸ್ವಭಾವ ಕಂಡು ಜನರು ಚಾರ್ಲಿ ಎಂದು ಕರೆಯುತ್ತಿದ್ದಾರಂತೆ.

ಟಾಪ್ ನ್ಯೂಸ್

Jaishankar

Rahul Gandhi ಅವರಿಗೆ ವಿದೇಶದಲ್ಲಿ ಭಾರತವನ್ನು ಟೀಕಿಸುವ ಅಭ್ಯಾಸ: ಜೈಶಂಕರ್

sanjay-raut

BJPಗೆ ಬಜರಂಗ ಬಲಿ ಸಹಾಯ ಮಾಡಲಿಲ್ಲ,ಈಗ ಔರಂಗಜೇಬ..: ರಾವುತ್

1-saddsad

Chikkamagaluru ; ನಾಲ್ವರು ಕುಖ್ಯಾತ ಶ್ರೀಗಂಧ ಕಳ್ಳರ ಬಂಧನ

1-sasdsadad

Vijayapura ಡಿಡಿಪಿಐ ಹುದ್ದೆಗೆ ಅಧಿಕಾರಿಗಳಿಬ್ಬರ ಕಿತ್ತಾಟ;ಪೊಲೀಸರ ಮಧ್ಯ ಪ್ರವೇಶ

1-swqqe

WTC Final ; 469ಕ್ಕೆ ಆಸೀಸ್ ಆಲೌಟ್ ಮಾಡಿದ ಟೀಮ್ ಇಂಡಿಯಾ

ಆಂತರಿಕ ಭದ್ರತಾ ವಿಭಾಗಕ್ಕೆ ರವಿ ಡಿ ಚನ್ನಣ್ಣನವರ್ ವರ್ಗಾವಣೆ

ಮುಂದುವರಿದ ವರ್ಗಾವಣೆ ಪರ್ವ: ಆಂತರಿಕ ಭದ್ರತಾ ವಿಭಾಗಕ್ಕೆ ರವಿ ಡಿ ಚನ್ನಣ್ಣನವರ್ ವರ್ಗಾವಣೆ

ಕಾಂಗ್ರೆಸ್ ಸರಕಾರದಲ್ಲಿ ವರ್ಗಾವಣೆ ದಂಧೆ ಆರಂಭ; ಪ್ರತಿ ಹುದ್ದೆಗೂ ರೇಟ್ ಫಿಕ್ಸ್: HDK ಆರೋಪ

ಕಾಂಗ್ರೆಸ್ ಸರಕಾರದಲ್ಲಿ ವರ್ಗಾವಣೆ ದಂಧೆ ಆರಂಭ; ಪ್ರತಿ ಹುದ್ದೆಗೂ ರೇಟ್ ಫಿಕ್ಸ್: HDK ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಣಹೇಡಿಗಳ ವಿಚಾರ ಮಕ್ಕಳ ಪಠ್ಯಪುಸ್ತಕದಲ್ಲಿ ಇಡಲು ಬಿಡುವುದಿಲ್ಲ: ಬಿ.ಕೆ.ಹರಿಪ್ರಸಾದ್

ರಣಹೇಡಿಗಳ ವಿಚಾರ ಮಕ್ಕಳ ಪಠ್ಯಪುಸ್ತಕದಲ್ಲಿ ಇಡಲು ಬಿಡುವುದಿಲ್ಲ: ಬಿ.ಕೆ.ಹರಿಪ್ರಸಾದ್

Shivamogga: ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಪೋಸ್ಟ್ ಮಾರ್ಟಮ್ ಮಾಡಿದ ವೈದ್ಯರು

Shivamogga: ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಪೋಸ್ಟ್ ಮಾರ್ಟಮ್ ಮಾಡಿದ ವೈದ್ಯರು

police crime

Shivamogga ಬಂಧಿಸಲು ತೆರಳಿದ್ದ ವೇಳೆ ದಾಳಿ; ಆರೋಪಿಗೆ ಪೊಲೀಸರ ಗುಂಡು

2–shivamogga

Shivamogga : ಕ್ಷುಲಕ ವಿಚಾರಕ್ಕೆ ಬಾರ್‌ ಕ್ಯಾಶಿಯರ್‌ ಕೊಲೆ

1-werr

Linganamakki Dam ನೀರು ಕುಸಿತ; ಹಸಿರುಮಕ್ಕಿ ಲಾಂಚ್ ಸೇವೆ ಸ್ಥಗಿತ

MUST WATCH

udayavani youtube

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

udayavani youtube

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

udayavani youtube

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಹೊಸ ಸೇರ್ಪಡೆ

Jaishankar

Rahul Gandhi ಅವರಿಗೆ ವಿದೇಶದಲ್ಲಿ ಭಾರತವನ್ನು ಟೀಕಿಸುವ ಅಭ್ಯಾಸ: ಜೈಶಂಕರ್

sanjay-raut

BJPಗೆ ಬಜರಂಗ ಬಲಿ ಸಹಾಯ ಮಾಡಲಿಲ್ಲ,ಈಗ ಔರಂಗಜೇಬ..: ರಾವುತ್

1-saddsad

Chikkamagaluru ; ನಾಲ್ವರು ಕುಖ್ಯಾತ ಶ್ರೀಗಂಧ ಕಳ್ಳರ ಬಂಧನ

1-sasdsadad

Vijayapura ಡಿಡಿಪಿಐ ಹುದ್ದೆಗೆ ಅಧಿಕಾರಿಗಳಿಬ್ಬರ ಕಿತ್ತಾಟ;ಪೊಲೀಸರ ಮಧ್ಯ ಪ್ರವೇಶ

1-swqqe

WTC Final ; 469ಕ್ಕೆ ಆಸೀಸ್ ಆಲೌಟ್ ಮಾಡಿದ ಟೀಮ್ ಇಂಡಿಯಾ