ಕಾಡಿಗೆ ಲಾರಿಗಳ ಪ್ರವೇಶ ನಿರ್ಬಂಧಿಸಲು ತಾಕೀತು

ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಹರತಾಳು ಹಾಲಪ್ಪ ಸೂಚನೆ

Team Udayavani, May 18, 2022, 3:11 PM IST

hard

ಸಾಗರ: ಮಳೆಗಾಲ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಅಕೇಶಿಯಾ ಸೇರಿದಂತೆ ಇತರ ಮರ ಕಡಿತಲೆಗೆ ಅರಣ್ಯ ಇಲಾಖೆ ಲಾರಿಗಳು ಕಾಡಿನೊಳಗೆ ಪ್ರವೇಶ ಮಾಡುವುದನ್ನು ನಿಷೇಧಿಸಬೇಕು ಎಂದು ಶಾಸಕ ಎಚ್.ಹಾಲಪ್ಪ ಹರತಾಳು ತಿಳಿಸಿದರು.

ಇಲ್ಲಿನ ಸಾಮರ್ಥ್ಯ ಸೌಧದಲ್ಲಿ ಮಂಗಳವಾರ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಒಂದೊಮ್ಮೆ ಲಾರಿಗಳನ್ನು ಅರಣ್ಯದೊಳಗೆ ಬಿಟ್ಟರೆ ಸಂಬಂಧಪಟ್ಟ ಇಲಾಖೆ ಅರಣ್ಯ ಇಲಾಖೆಗೆ ನೋಟಿಸ್‌ ನೀಡುವಂತೆ ಆದೇಶ ನೀಡಿದರು.

ನಾಟಾ ತುಂಬಿಕೊಂಡು ಬಂದ ಲಾರಿ ರಸ್ತೆಯ ಮೇಲೆ ಸಂಚಾರ ಮಾಡುವುದರಿಂದ ರಸ್ತೆ ಗುಂಡಿ ಬೀಳುವ ಜೊತೆಗೆ ಕಸಕಡ್ಡಿಗಳು ಚರಂಡಿಯಲ್ಲಿ ತುಂಬಿ ನೀರು ರಸ್ತೆಯ ಮೇಲೆ ಹರಿದು ಡಾಂಬರು ಕಿತ್ತುಕೊಂಡು ಹೋಗಿ ರಸ್ತೆ ಹಾಳಾಗುತ್ತಿದೆ. ಆದ್ದರಿಂದ ಜೂನ್‌ನಿಂದ ಮಳೆಗಾಲ ಮುಗಿಯುವ ತನಕ ಕಾಡಿಗೆ ವಾಹನಗಳನ್ನು ಬಿಡಬಾರದು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜೂ.5ರಿಂದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಸಂದರ್ಭದಲ್ಲಿ ಮರಗಳನ್ನು ಕಡಿತಲೆ ಮಾಡಲಾಗಿದೆ. ಮರ ಕಡಿತಲೆ ಮಾಡಿದ್ದಕ್ಕೆ 10 ಪಟ್ಟು ಜಾಸ್ತಿ ಸಸಿಗಳನ್ನು ನೆಟ್ಟು ಅದನ್ನು ಪೋಷಣೆ ಮಾಡುವತ್ತ ಚಿಂತನೆ ನಡೆಸಲಾಗಿದ್ದು, ಜೂನ್‌ ತಿಂಗಳು ಪೂರ್ಣ ಸಸಿ ನೆಡಲಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಎಲ್ಲ ಇಲಾಖೆಯ ಅಭಿಯಂತರರು ಸಸಿ ನೆಡುವ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.

ಗ್ರಾಮೀಣ ರಸ್ತೆ ಅಭಿವೃದ್ಧಿಗೆ 50 ಕೋಟಿ ರೂ. ಮಂಜೂರಾಗಿದೆ. ರಸ್ತೆ ಕಾಮಗಾರಿಗೆ ಸಂಬಂಧಪಟ್ಟ ಟೆಂಡರ್‌ ತಕ್ಷಣ ಕರೆದು ಕಾಮಗಾರಿ ಪ್ರಾರಂಭಿಸಿ ಎಂದು ಸೂಚನೆ ನೀಡಿದ ಶಾಸಕರು, ಮಳೆಗಾಲ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರಿಗೆ ಕೃಷಿ ಕುರಿತು ಅಗತ್ಯ ಮಾಹಿತಿ ನೀಡಬೇಕು. ಗೊಬ್ಬರ, ಬಿತ್ತನೆ ಬೀಜ ಸಂಗ್ರಹ ಮಾಡಿಕೊಳ್ಳುವ ಜೊತೆಗೆ ರೈತರಿಗೆ ಕಾಲ- ಕಾಲಕ್ಕೆ ಪೂರೈಕೆ ಮಾಡುವತ್ತ ಗಮನ ಹರಿಸಬೇಕು. ಜೂನ್‌ನಿಂದ ಮೂರು ತಿಂಗಳ ಕಾಲ ನದಿ- ಕೆರೆಕಟ್ಟೆಗಳಲ್ಲಿ ಮೀನು ಹಿಡಿಯದಂತೆ ಕ್ರಮ ತೆಗೆದುಕೊಳ್ಳಿ. ಸ್ಲಂ ಬೋರ್ಡ್‌ನಿಂದ ನನಗೆ ಮತ್ತು ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ. ಮನೆ ನಿರ್ಮಾಣ ಕಾಮಗಾರಿ ಈತನಕ ಮುಗಿದಿಲ್ಲ. ಈ ಬಗ್ಗೆ ಸಂಬಂಧಪಟ್ಟ ಸಚಿವರ ಜೊತೆ ಚರ್ಚೆ ನಡೆಸುವುದಾಗಿ ಹೇಳಿದರು.

ಶಾಲೆ- ಅಂಗನವಾಡಿಗಳು ಪ್ರಾರಂಭ ಗೊಂಡಿವೆ. ಶಾಲಾ ಅಂಗನವಾಡಿ ಸುತ್ತಮುತ್ತಲಿನ ವಾತಾವರಣ ಸ್ವಚ್ಛವಾಗಿರಿಸಿಕೊಳ್ಳುವತ್ತ ಗಮನ ಹರಿಸಬೇಕು. ಶಾಲಾಭಿವೃದ್ಧಿ ಸಮಿತಿ ಸಹಕಾರದೊಂದಿಗೆ ಶಾಲೆಯ ಸುತ್ತಮುತ್ತಲಿನ ಗಿಡಗಂಟಿಗಳನ್ನು ತೆರವುಗೊಳಿಸಿ. ವಿದ್ಯಾರ್ಥಿ ನಿಲಯ ನಿರ್ವಹಣೆ ಬಗ್ಗೆ ಸಹ ಹೆಚ್ಚಿನ ಗಮನ ಹರಿಸಿ. ಶಾಲಾ- ಕಾಲೇಜು ಅಕ್ಕಪಕ್ಕ ದ್ವಿಚಕ್ರ ವಾಹನದಲ್ಲಿ ಮೂರರಿಂದ ನಾಲ್ಕು ಜನರು ಅತಿವೇಗವಾಗಿ ಸಂಚರಿಸುತ್ತಿದ್ದಾರೆ. ಕಾಲೇಜು ಆಸುಪಾಸಿನಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ, ಸವಾರರು ಪರವಾನಗಿ ಹೊಂದಿದ್ದಾರೋ ಎಂದು ಪರಿಶೀಲನೆ ನಡೆಸಿ. ಇಲ್ಲವಾದಲ್ಲಿ ದ್ವಿಚಕ್ರ ವಾಹನ ಸವಾರರು ಅಪ್ರಾಪ್ತರಾಗಿದ್ದರೆ ಅವರ ಪೋಷಕರಿಗೆ ನೋಟಿಸ್‌ ಕೊಡಿ ಎಂದು ಪೊಲೀಸ್‌ ಇಲಾಖೆಗೆ ಸೂಚನೆ ನೀಡಿದರು.

ಸಭೆಯಲ್ಲಿ ತಾಪಂ ಇಒ ಪುಷ್ಪಾ ಎಂ. ಕಮ್ಮಾರ್‌ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ಟಾಪ್ ನ್ಯೂಸ್

1-sdsadsad

Sugar factory; ಎಥೆನಾಲ್‌ಗೆ ಕಬ್ಬಿನ ರಸ ಬಳಸದಿರಿ: ಕೇಂದ್ರ ಸರಕಾರ ನಿರ್ದೇಶನ 

1-sadsdsa-d

BJP ಜನರ ಆಯ್ಕೆ ಎನ್ನುವುದು ಸಾಬೀತು: 3 ರಾಜ್ಯಗಳ ಗೆಲುವಿನ ಬಗ್ಗೆ ಮೋದಿ ಬಣ್ಣನೆ

1-sadasdd

Pro Kabaddi-10; ಗುಜರಾತ್‌ಗೆ ಆಘಾತ: ಪಾಟ್ನಾ ಜಯಭೇರಿ

1-sadasd

Painkiller ‘ಮೆಫ್ತಾಲ್’ ಮಾತ್ರೆ ಅಡ್ಡಪರಿಣಾಮ ಬೀರುತ್ತದೆ: ಸರಕಾರದ ಎಚ್ಚರಿಕೆ

ARINDAM BAGCHI

PoK ಭಾರತದ ಭಾಗ; ಯಾವುದೇ ಕಾರಣಕ್ಕೂ ಹೇಳಿಕೆಯನ್ನು ಬದಲಿಸುವುದಿಲ್ಲ: MEA

ವಾರದಲ್ಲಿ ಐಸಿಸ್ ನಂಟು ಸಾಬೀತಿಗೆ ಯತ್ನಾಳ್ ಗೆ ತನ್ವೀರ ಹಾಶ್ಮಿ ಸವಾಲು

Vijayapura; ವಾರದಲ್ಲಿ ಐಸಿಸ್ ನಂಟು ಸಾಬೀತಿಗೆ ಯತ್ನಾಳ್ ಗೆ ತನ್ವೀರ ಹಾಶ್ಮಿ ಸವಾಲು

pinarayi

Dowry ಬೇಡಿಕೆ ಪ್ರಸ್ತಾಪಗಳನ್ನು ತಿರಸ್ಕರಿಸಲು ಯುವತಿಯರಿಗೆ ಪ್ರೋತ್ಸಾಹ ನೀಡಬೇಕು:ಕೇರಳ ಸಿಎಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

aeroplane

Shimoga: ಶಿವಮೊಗ್ಗದಲ್ಲಿ ದಟ್ಟ ಮಂಜು: ವಿಮಾನ ರದ್ದು

1-sada-sdas

Sagara; ಮನೆ ಅಂಗಳದಲ್ಲಿದ್ದ ಗಂಧದ ಮರಗಳ ಕಳವು!

CM ಸಿದ್ದರಾಮಯ್ಯ ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ: ಯಡಿಯೂರಪ್ಪ

CM ಸಿದ್ದರಾಮಯ್ಯ ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ: ಯಡಿಯೂರಪ್ಪ

BSY: ಅಲ್ಪಸಂಖ್ಯಾತರ ಓಲೈಕೆಯಿಂದ ಗೆಲ್ಲಬಹುದೆಂಬ ಕಾಂಗ್ರೆಸ್ ಲೆಕ್ಕಾಚಾರ ಕೈಗೂಡದು: ಬಿಎಸ್ ವೈ

BSY: ಅಲ್ಪಸಂಖ್ಯಾತರ ಓಲೈಕೆಯಿಂದ ಗೆಲ್ಲಬಹುದೆಂಬ ಕಾಂಗ್ರೆಸ್ ಲೆಕ್ಕಾಚಾರ ಕೈಗೂಡದು: ಬಿಎಸ್ ವೈ

1-sdsaasdsa

Journalists ಹಿಯಾಳಿಸಿದ ಸಚಿವ ಮಧು ಬಂಗಾರಪ್ಪ; ಪ್ರತಿಭಟನೆ

MUST WATCH

udayavani youtube

ಬಿಜೆಪಿ ಕೈ ಹಿಡಿದ ಉತ್ತರ ಭಾರತದ ಮತದಾರರು

udayavani youtube

ಕರಾವಳಿಯಲ್ಲಿ ಕಂಡುಕೇಳರಿಯದ ಮತ್ಸ್ಯ ಕ್ಷಾಮ

udayavani youtube

ಉತ್ತರಪ್ರದೇಶ ಹಲಾಲ್ ಬ್ಯಾನ್ ಮಾಡಿದ್ದೇಕೆ?

udayavani youtube

ವೈಜ್ಞಾನಿಕ ಲೋಕಕ್ಕೆ ಸವಾಲಾದ ಅಲುಗಾಡುವ ಹುತ್ತ ..ಸಂಭ್ರಮಾಚರಣೆಯ ಉಣ್ಣಕ್ಕಿ ಉತ್ಸವಕ್ಕೆ ತೆರೆ

udayavani youtube

ಕಾಂತರದ ರಿಷಬ್ ಶೆಟ್ರಿಗೆ ಕೋಣ ಓಡಿಸೋಕೆ ಕಲಿಸಿದ್ದು ಇವರೇ ನೋಡಿ

ಹೊಸ ಸೇರ್ಪಡೆ

cen

Politics: ಶೋಭಾ ಕರಂದ್ಲಾಜೆ, ರಾಜೀವ್‌ ಚಂದ್ರಶೇಖರ್‌,ಅರ್ಜುನ್‌ ಮುಂಡಾಗೆ ಹೆಚ್ಚುವರಿ ಖಾತೆ

vijayendra R Ashok

ಬೆಳಗಾವಿ ಕಲಾಪದಲ್ಲಿ BJP ಗಲಿಬಿಲಿ!- ಅಶೋಕ್‌, ವಿಜಯೇಂದ್ರ ನಡುವೆ ಧರಣಿ, ಸಭಾತ್ಯಾಗ ಗೊಂದಲ

china pnuemonia

China: ದೇಶಕ್ಕೆ ಚೀನ ಸೋಂಕು?- ದಿಲ್ಲಿ ಏಮ್ಸ್‌ನಲ್ಲಿ ಏಳು ಮಾದರಿ ಪಾಸಿಟಿವ್‌

kempanna

ಕೆಂಪಣ್ಣ ಹೊಸ ಕಮಿಷನ್‌ ಬಾಂಬ್‌ -ಆಗ ರಾಜಕಾರಣಿಗಳು; ಈಗ ಅಧಿಕಾರಿಗಳ ದರಬಾರು ನಡೆಯುತ್ತಿದೆ

pro

Mangaluru: ಅತಿಥಿ ಉಪನ್ಯಾಸಕರ ಖಾಯಮಾತಿ ಆಗ್ರಹಿಸಿ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.