
Sagara ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ರೈತ ಸಾವು
Team Udayavani, Sep 19, 2023, 5:00 PM IST

ಸಾಗರ: ತಾಲೂಕಿನ ಆನಂದಪುರ ತಾವರೆಹಳ್ಳಿಯ ಕೆರೆಯಲ್ಲಿ ರೈತ ಸತೀಶ್ ಗೌಡ (51) ಎಂಬುವವರು ಕಾಲುಜಾರಿ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಜೇಡಿಸರ ರೈತ ಸತೀಶ್ ಗೌಡ ಬಿನ್ ಸ್ವಾಮಿಗೌಡ ಎಂಬುವವರು ತಮ್ಮ ಮಗ ಚೇತನ್ ಜೊತೆ ಎಮ್ಮೆಯನ್ನು ಹುಡುಕಿಕೊಂಡು ಕೆರೆ ದಂಡೆಯ ಮೇಲೆ ಬರುತ್ತಿದ್ದಾಗ ಆಕಸ್ಮಿಕವಾಗಿ ಕಾಲುಜಾರಿ ನೀರಿಗೆ ಬಿದ್ದಿದ್ದಾರೆ ಎನ್ನಲಾಗಿದೆ.
ತಕ್ಷಣ ಚೇತನ್ ಅಕ್ಕಪಕ್ಕದವರನ್ನು ಕರೆದು ಕೆರೆಯಲ್ಲಿ ಮುಳುಗಿದ್ದ ಸತೀಶ್ ಗೌಡ ಅವರನ್ನು ಮೇಲೆತ್ತಿ ಆನಂದಪುರ ಸರ್ಕಾರಿ ಆಸ್ಪತ್ರೆಗೆ ಕರೆದು ಕೊಂಡು ಬರಲಾಗಿತ್ತು. ಅವರನ್ನು ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಅವರು ಮೃತಪಟ್ಟಿದ್ದರು.
ಈ ಸಂಬಂಧ ಚೇತನ್ ನೀಡಿದ ದೂರನ್ನು ದಾಖಲಿಸಿಕೊಂಡ ಆನಂದಪುರ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Thirthahalli ಮೀನು ಹಿಡಿಯಲು ಹೋದ ಯುವಕ ತುಂಗಾ ನದಿಗೆ ಬಿದ್ದು ಸಾವು !

Shivamogga: VISL ಫ್ಯಾಕ್ಟರಿ ಬಳಿ ಬೋನಿಗೆ ಬಿದ್ದ ಚಿರತೆ ಮರಿ… ತಾಯಿ ಚಿರತೆ ಇರುವ ಶಂಕೆ

Road Mishap; ಗಾಜನೂರು: ಖಾಸಗಿ ಬಸ್ – ಕಾರು ನಡುವೆ ಅಪಘಾತ!

Sagara: ಹೊಸ ಕಲ್ಲುಕ್ವಾರೆಗೆ ಅವಕಾಶ ಬೇಡ; ಎಸಿಗೆ ಮನವಿ

GP ಅಧ್ಯಕ್ಷರ ಅಧಿಕಾರ ಮೊಟಕು ಪ್ರಯತ್ನ -15 ನೇ ಹಣಕಾಸು ಕ್ರೀಯಾಯೋಜನೆ ಮಂಜೂರಾತಿಗೆ ಅಡ್ಡಿ